Basavannanavara Vachana in Kannada Notes | ಬಸವಣ್ಣನವರ ವಚನಗಳು ನೋಟ್ಸ್‌

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ | 2nd PUC Kannada basavannanavara Vachanagalu Notes Free For 2nd PUC Students

2nd PUC Kannada basavannanavara Vachanagalu Notes , 2nd puc kannada vachanagalu question answer , ಬಸವಣ್ಣನವರ ವಚನಗಳು notes , 2 chapter Question Answer Notes pdf Download

2nd PUC Kannada basavannanavara Vachanagalu Notes

ಬಸವಣ್ಣನವರ ವಚನಗಳು ದ್ವಿತೀಯ ಪಿಯುಸಿ ಪಾಠದ ಪ್ರಶ್ನೋತ್ತರಗಳನ್ನು ಈ ಕೆಳಗೆ ನೀಡಲಾಗಿದೆ . ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ .

basavannanavara vachanagalu in kannada

2nd PUC Kannada basavannanavara Vachanagalu Notes

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್  | 2nd PUC Kannada basavannanavara Vachanagalu Notes Free For 2nd PUC Students
ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ | 2nd PUC Kannada basavannanavara Vachanagalu Notes Free For 2nd PUC Students

ಒಂದು ವಾಕ್ಯದಲ್ಲಿ ಉತ್ತರಿಸಿ : 2nd PUC Kannada basavannanavara Vachanagalu Notes

ತನು ಯಾವಾಗ ಕರಗಬೇಕು ?

ತನು ಮನಮನ ಬೆರೆತಲ್ಲಿ ಕರಗಬೇಕು .

ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ ?

ಕುರುಡನ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ .

ಶಿವಪಥವನ್ನು ಅರಿಯದಿದ್ದರೆ ಏನಾಗುವುದು ?

ಶಿವ ಪಥವನ್ನು ಅರಿಯದಿದ್ದರೆ ಲಿಂಗವಿದ್ದರೂ ಫಲವಿಲ್ಲದಂತಾಗುತ್ತದೆ

ಬಸವಣ್ಣನವರ ವಚನಗಳ ಅಂಕಿತ ಯಾವುದು ?

ಬಸವಣ್ಣನವರ ವಚನಗಳ ಅಂಕಿತ ಕೂಡಲ ಸಂಗಮದೇವ .

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : 2nd PUC Kannada basavannanavara Vachanagalu Notes pdf

ಯಾವ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ ?

ಮನ ಮನ ಬೆರಸಿದಲ್ಲಿ ತನುಕರಗಬೇಕು . ಸ್ಪರ್ಶದಿಂದ ರೋಮಾಂಚನ ಹೊರಹೊಮ್ಮಬೇಕು , ದು:ಖಕ್ಕೆ ಕಣ್ಣೀರನ್ನು ಸುರಿಸಬೇಕು . ಮಾತನಾಡುವಾಗ ಗಂಟಲು ತೇವವಾಗಿ ಶಬ್ದ ಹೊರಹೊಮ್ಮಬೇಕು . ಇವೆಲ್ಲಾ ಕೂಡಲ ಸಂಗಮದೇವರ ಭಕ್ತಿಗೆ ಚಿಹ್ನೆಯಾಗಿದೆ . ಈ ಗುಣಗಳಿಲ್ಲದವನನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ . ಇಂತಹ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ .

ಶಿವಪಥವನ್ನರಿಯದವನನ್ನು ಹೇಗೆ ವಿಡಂಬಿಸಲಾಗಿದೆ ?

ಕೈಯಲ್ಲಿ ಹಣದರೇಖೆಯೊಂದಿದ್ದರೆ ಸಾಲದು , ಆಯುಷ್ಯ ರೇಖೆಯೂ ಇರಬೇಕು . ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೆ ಫಲವೇನು ? ಕುರುಡನ ಕೈಯಲ್ಲಿ ಕನ್ನಡಿಯಿದ್ದು ಫಲವೇನು ? ಮಂಗನ ಕೈಯಲ್ಲಿ ಮಾಣ ಕ್ಯವಿದ್ದು ಫಲವೇನು ? ಏನೂ ಪ್ರಯೋಜನವಿಲ್ಲ . ಅದೇ ರೀತಿ ಶಿವಪಥವನ್ನು ಅರಿಯದವನ ಕೈಯಲ್ಲಿ ಲಿಂಗವಿದ್ದರೂ ಉಪಯೋಗವಿಲ್ಲ ಎಂದು ವಿಡಂಬಿಸಲಾಗಿದೆ .

ಯಾವಾಗ ನಿಲಬಹುದು ? ಯಾವಾಗ ನಿಲಲಾಗದು ?

ಒಲೆ ಹತ್ತಿ ಉರಿದಾಗ ನಿಲ್ಲಬಹುದು , ಆದರೆ ಧರೆಯೇ ಹತ್ತಿ ಉರಿಯುವಾಗ ಅಲ್ಲಿ ನಿಲ್ಲಲು ಸಾಧ್ಯವಿಲ್ಲ ಒಲೆಯ ತಾಪ ಕಡಿಮೆ . ಧರೆ ಹತ್ತಿ ಉರಿದಾಗ ತಾಪ ಹೆಚ್ಚು . ಅಂದರೆ ನಮ್ಮನ್ನು ರಕ್ಷಿಸಬೇಕಾದವರೇ ಕೊಲ್ಲುವ ಸಂಚು ಹೂಡಿದಾಗ ಯಾರನ್ನೂ ದೂರಲು ಸಾಧ್ಯವಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ .

basavannanavara vachana in kannada

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್  | 2nd PUC Kannada basavannanavara Vachanagalu Notes Free For 2nd PUC Students
ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ | 2nd PUC Kannada basavannanavara Vachanagalu Notes Free For 2nd PUC Students

ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ : 2nd PUC Kannada basavannanavara Vachanagalu Notes summary

ಬಸವಣ್ಣನವರ ಪ್ರಕಾರ ನೈಜಭಕ್ತಿಯ ಲಕ್ಷಣಗಳಾವುವು ?

ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ . ಬಸವಣ್ಣನವರು ಭಕ್ತನಾದವನಿಗೆ ಸಹಜೀವಿಗಳನ್ನು ತನ್ನಂತೆ ಕಾಣುವ ಹೃದಯ ವೈಶಾಲ್ಯತೆ ಇರುವುದು ಮುಖ್ಯವೆಂದಿದ್ದಾರೆ . ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ , ಹೃದಯ ಗೈರು ಹಾಜರಾದಾಗ ನಮ್ಮ ಭಕ್ತಿಗೆ ಅರ್ಥವಿರುವುದಿಲ್ಲ .ಮನುಷ್ಯ – ಮನುಷ್ಯರು ಒಂದೆಡೆ ಕಲೆತಾಗ ಅಹಂಕಾರ ತಗ್ಗಿ ಪರಸ್ಪರ ಮನ ಬೆರೆತು , ತನುಕರಗಬೇಕು .

ಪರಸ್ಪರ ಸೋಂಕಿದಾಗ ಪುಳಕ ಇಬ್ಬರಲ್ಲೂ ಹೊರ ಹೊಮ್ಮಬೇಕು . ಸ್ಪರ್ಶಕ್ಕೆ ಸ್ಪಂದಿಸುವ ಗುಣವಿರಬೇಕು . ದುಃಖವನ್ನು ಕಂಡಾಗ ಕಣ್ಣೀರು ಸುರಿಸಬೇಕು . ಅವರ ದುಃಖಕ್ಕೆ ಭಾಗಿಯಾಗಿ ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು . ನೋವಿಗೆ ಸ್ಪಂದಿಸಬೇಕು , ಮಾತನಾಡುವಾಗ ” ಅಂತ:ಕರಣ ತುಂಬಿ ಧ್ವನಿ ಆರ್ದಗೊಳ್ಳಬೇಕು . ಮತ್ತೊಬ್ಬರ ದುಃಖಕ್ಕೆ ಸ್ಪಂದಿಸದೇ ಸಂತೋಷ ವ್ಯಕ್ತಪಡಿಸಬಾರದು .

ಅಂತಹ ಚಿಹ್ನೆ ಇರುವವರನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ . ಆದ್ದರಿಂದ ಸಹಜೀವಿಗಳಲ್ಲಿ ಮಾನವೀಯತೆಯಿಂದ ವರ್ತಿಸುವುದು ನಿಜಭಕ್ತನ ಆದ್ಯಗುಣವೆಂದು ಬಸವಣ್ಣನವರು ನಿರೂಪಿಸಿದ್ದಾರೆ .

ಶಿವ ಪಥವನ್ನರಿಯದವನ ಭಕ್ತಿ ನಿರರ್ಥಕ ವೆಂಬುದನ್ನು ಬಸವಣ್ಣ ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ ?

ಸಮಾಜದಲ್ಲಿ ಬದುಕುವ ಜೀವಿಯು ನಡೆ – ನುಡಿಯಲ್ಲಿ ಹೊಂದಬೇಕಾಗಿರುವ ಸತ್ವವನ್ನು ,
ಅ೦ತರ೦ಗದ ಪರಿಶುದ್ಧತೆಯನ್ನು ವಚನಕಾರರು , ಬಲವಾಗಿ ಪ್ರತಿಪಾದಿಸಿದ್ದಾರೆ . ಶಿವಪಥವನ್ನು ಅರಿಯುವ ಸಂಕಲ್ಪ ಬಲ ನಿಜಭಕ್ತನ ಮೂಲ ಗುಣವಾಗ ಬೇಕು ಎಂಬುದನ್ನು ಪ್ರತಿಪಾದಿಸುವಲ್ಲಿಯೂ ಎದ್ದು ಕಾಣುವ ಕಾವ್ಯಾತ್ಮಕ ಗುಣ ಬಸವಣ್ಣನವರ ಕವಿ ಹೃದಯವ ಬಿಂಬಿಸಿದೆ .ಶಿವಪಥವನ್ನೇ ಅರಿಯದವನ ಕೈಯಲ್ಲಿ ಲಿಂಗವಿದ್ದರೂ ಉಪಯೋಗವಿಲ್ಲ ಅಂತಹವನ ಭಕ್ತಿಡಾಂಭಿಕ ಭಕ್ತಿಯಾಗುತ್ತದೆ .

ಅಂತವನ ಭಕ್ತಿಯು ನಿರರ್ಥಕ ಎನಿಸಿಕೊಳ್ಳುತ್ತದೆ . ಕೈಯಲ್ಲಿ ಹಣದ ರೇಖೆಯಿದ್ದರೆ ಉಪಯೋಗಕ್ಕೆ ಬಾರದು . ಆಯುಷ್ಯ ರೇಖೆಯೂ ಇರಬೇಕು . ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೆ ಫಲವೇನು ? ಕುರುಡನಿಗೆ ಕಣ್ಣು ಕಾಣುವುದಿಲ್ಲ . ಅವನಿಗೆ ಕನ್ನಡಿಯನ್ನು ಕೊಟ್ಟರೆ ಏನು ಫಲ ? ಮಂಗನಿಗೆ ಮಾಣ ಕ್ಯದ ಬೆಲೆಯೇ ತಿಳಿದಿಲ್ಲ .

ಮಂಗನ ಕೈಗೆ ಮಾಣ ಕೈಕೊಟ್ಟರೆ ಫಲವೇನು ! ಅದೇ ರೀತಿ ಶಿವಪಥವನ್ನರಿಯದವನ ಕೈಯಲ್ಲಿ ಲಿಂಗವಿದ್ದರೆ ಆ ಭಕ್ತಿ ನಿರರ್ಥಕವೆನಿಸಿ ಕೊಳ್ಳುತ್ತದೆ .

ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ ?

ಸಮಾಜದಲ್ಲಿ ಬದುಕುವ ಜೀವಿ ನಡೆ – ನುಡಿಯಲ್ಲಿ ಹೊಂದ ಬೇಕಾಗಿರುವ ಸತ್ವವನ್ನು , ಅಂತರಂಗದ ಪರಿಶುದ್ಧತೆಯನ್ನು ಬಸವಣ್ಣನವರು ಬಲವಾಗಿ ಪ್ರತಿಪಾದಿಸಿದ್ದಾರೆ . ‘ ರಕ್ಷಕರೇ ಭಕ್ಷಕರಾದಾಗ ‘ , ‘ ಬೇಲಿಯೇಎದ್ದು ಹೊಲ ಮೇಲ್ದಂತೆ ‘ , ಎಂಬ ಒಂದೇ ಅರ್ಥದ ಗಾದೆ ಮಾತುಗಳು ನಮ್ಮಲ್ಲಿ ಬಳಕೆಯಲ್ಲಿವೆ . ಕಾಯುವವರೇ ಕೊಲ್ಲಲು ತೀರ್ಮಾನಿಸಿದ್ದಾಗ ನಮ್ಮನ್ನು ಇನ್ಯಾರಿಂದಲೂ ರಕ್ಷಿಸಲಾಗುವುದಿಲ್ಲ . ರಕ್ಷಣೆ ಪಡೆಯುವುದು ಅನಿವಾರ್ಯ , ಆದರೆ ರಕ್ಷಣೆ ಕೊಡಬೇಕಾದವರು ರಕ್ಷಣೆಯ ಕಾರ್ಯವನ್ನು ಮರೆತು ನಡೆದರೆ ರಕ್ಷಣೆ ಪಡೆದುಕೊಳ್ಳು ವವನು ಅಸಹಾಯಕತೆಯ ಪರಿಸ್ಥಿತಿಯನ್ನು ತಲುಪುತ್ತಾನೆ . ಇವನ್ನು ಬಸವಣ್ಣ ಹಲವು ನಿದರ್ಶನಗಳೊಂದಿಗೆ ಸೊಗಸಾಗಿ ಚಿತ್ರಿಸಿದ್ದಾರೆ .

ಅಡುಗೆ ಮನೆಯಲ್ಲಿ ಒಲೆ ಉರಿಯುವುದು ಅಗತ್ಯ . ಆಗ ಒಲೆಯೆದುರು ನಿಲ್ಲುವ ಶಕ್ತಿ ನಮಗಿದೆ . ಆದರೆ ನಾವು ವಾಸಿಸುವ ಈ ಧರೆ ಹತ್ತಿ ಉರಿದರೆ ನಾವು ನಿಲ್ಲುವುದಾದರೂ ಎಲ್ಲಿ ? ನೀರನ್ನು ತಡೆಯಲು ( ಏರಿ ) ದಿಣ್ಣೆಯನ್ನು ಕಟ್ಟಿರುತ್ತಾರೆ . ಏರಿಯೇ ನೀರನ್ನು ಹರಿಯಲು ಬಿಟ್ಟರೆ ಬೇಲಿ ಇರುವುದು ಬೆಳೆಯನ್ನು ರಕ್ಷಿಸಲು , ಅದೇ ಬೇಲಿ ಬೆಳೆಯನ್ನು ಮೇಯ್ದು – ಹಾಕಿದರೆ ರಕ್ಷಣೆ ಹೇಗೆ ? ಮನೆಯನ್ನು ಕಾಯಬೇಕಾದ ನಾರಿಯೇ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ತಾಯಿಯ ಮೊಲೆ ಹಾಲು ಮಗುವಿಗೆ ಅಮೃತ , ತಾಯಿಯ ಮೊಲೆಹಾಲೇ ಎಷವಾಗಿ ಕೊಂದರೆ ಯಾರಿಗೂ ದೂರಲು ಸಾಧ್ಯವಿಲ್ಲ ಈ ವಿಘಟನೆಗಳೂ ಕೂಡ ಕಾಯುವ ದೈವದ ಕೊಲ್ಲುವ ಬುದ್ಧಿಯ ಸ೦ಕೇತವಾಗಿದೆ .

ಹೀಗಾದಲ್ಲಿ ರಕ್ಷಿಸಲು ಇನ್ನಾರಿಗೂ ಸಾಧ್ಯವಿಲ್ಲ ಎಂಬುದನ್ನು ಬಸವಣ್ಣ ವಿವರಿಸಿದ್ದಾರೆ .ಮನುಷ್ಯ – ಮನುಷ್ಯರು ಒಂದೆಡೆ ಕಲೆತಾಗ ಅಹಂಕಾರ ತಗ್ಗಿ ಪರಸ್ಪರ ಮನ ಬೆರೆತು , ತನುಕರಗಬೇಕು . ಪರಸ್ಪರ ಸೋಂಕಿದಾಗ ಪುಳಕ ಇಬ್ಬರಲ್ಲೂ ಹೊರ ಹೊಮ್ಮಬೇಕು . ಸ್ಪರ್ಶಕ್ಕೆ ಸ್ಪಂದಿಸುವ ಗುಣವಿರಬೇಕು . ದುಃಖವನ್ನು ಕಂಡಾಗ ಕಣ್ಣೀರು ಸುರಿಸಬೇಕು . ಅವರ ದುಃಖಕ್ಕೆ ಭಾಗಿಯಾಗಿ ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು .

ನೋವಿಗೆ ಸ್ಪಂದಿಸಬೇಕು , ಮಾತನಾಡುವಾಗ ” ಅಂತ:ಕರಣ ತುಂಬಿ ಧ್ವನಿ ಆರ್ದಗೊಳ್ಳಬೇಕು . ಮತ್ತೊಬ್ಬರ ದುಃಖಕ್ಕೆ ಸ್ಪಂದಿಸದೇ ಸಂತೋಷ ವ್ಯಕ್ತಪಡಿಸಬಾರದು . ಅಂತಹ ಚಿಹ್ನೆ ಇರುವವರನ್ನು ಕೂಡಲ ಸಂಗಮ ದೇವ ಮೆಚ್ಚುವುದಿಲ್ಲ . ಆದ್ದರಿಂದ ಸಹಜೀವಿಗಳಲ್ಲಿ ಮಾನವೀಯತೆಯಿಂದ ವರ್ತಿಸುವುದು ನಿಜಭಕ್ತನ ಆದ್ಯಗುಣವೆಂದು ಬಸವಣ್ಣನವರು ನಿರೂಪಿಸಿದ್ದಾರೆ .

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್  | 2nd PUC Kannada basavannanavara Vachanagalu Notes Free For 2nd PUC Students
ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ | 2nd PUC Kannada basavannanavara Vachanagalu Notes Free For 2nd PUC Students

ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು : 2nd PUC Kannada basavannanavara Vachanagalu Notes FAQ

ಅರ್ಥರೇಖೆಯಿದ್ದಲ್ಲಿ ಫಲವೇನು , ಆಯುಷ್ಯರೇಖೆ ಇಲ್ಲದನ್ನಕ್ಕರ ”

ಆಯ್ಕೆ : ಈ ಮೇಲಿನ ವಚನದ ಸಾಲನ್ನು , ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ದೇವರನ್ನು ಆರಾಧಿಸಲು ಡಾಂಭಿಕ ಭಕ್ತಿ ಸಾಲದು , ನಿಜವಾದ ಭಕ್ತಿಯನ್ನು ತೋರಬೇಕು ಎನ್ನುವ ಸಂದರ್ಭವಿದು .
ವಿವರಣೆ : ದೇವರನ್ನು ಆರಾಧಿಸಲು ಡಾಂಭಿಕ ಭಕ್ತಿ ಸಾಲದು . ನಿಜವಾದ ಭಕ್ತಿಯನ್ನು ತೋರಬೇಕು , ಲಿಂಗವನ್ನು ಮೈಮೇಲೆ ಧರಿಸಿ , ಶಿವಭಕ್ತನೆಂದು ತೋರಿಕೆಯ ಭಕ್ತಿ ಆಚರಿಸುವುದಕ್ಕಿಂತ ಶಿವ ಪಥದಲ್ಲಿ ನಡೆಯುವುದು ಮುಖ್ಯವೆಂಬುದೆ ಬಸವಣ್ಣನವರ ಅಭಿಪ್ರಾಯವಾಗಿದೆ . ಕೈಯಲ್ಲಿ ಸಂಪತ್ತಿನ ರೇಖೆಯೊಂದಿದ್ದರೆ ಮಾತ್ರ ಸಾಲದು . ಅದನ್ನು ಅನುಭವಿಸಲು ಆಯುಷ್ಯ ರೇಖೆಯೂ ಇರಬೇಕು , ಅದೇ ರೀತಿ ಕೈಯಲ್ಲಿ ಲಿಂಗವಿದ್ದರೆ ಸಾಲದು ಅದನ್ನು ಅರಿತು ನಿಜಭಕ್ತಿಯಿಂದ ಪೂಜಿಸಬೇಕು .

ಮರ್ಕಟನ ಕೈಯಲ್ಲಿ ಮಾಣ ಕ್ಯವಿದ್ದು ಫಲವೇನು ?

ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಬಸವಣ್ಣನವರು ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯ ಕುರಿತಂತೆ ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .
ವಿವರಣೆ : ಬಸವಣ್ಣನವರು ಭಕ್ತಿಯ ಕುರಿತಾದ ವಿಚಾರಗಳನ್ನು ಮಾತನಾಡುವಾಗ , ಭಕ್ತಿಯು ಯಾವಾಗಲೂ ದೃಢತೆಯಿಂದ ಕೂಡಿರಬೇಕು , ಸರಳವಾಗಿರಬೇಕು , ಸತ್ವಯುತವಾಗಿರಬೇಕು ಹಾಗಾದಾಗ ಮಾತ್ರ ಶಿವಪಥದತ್ತ ಸಾಗಲು ಸಾಧ್ಯ ಎನ್ನುವ ಅಭಿಪ್ರಾಯ ಮುಂದಿಡುತ್ತಾರೆ . ಮೂಲದಲ್ಲಿ ಭಕ್ತಿಯು ಸತ್ವಯುತವಾಗಿರದೇ ಇದ್ದರೆ ಅಂತಹ ಭಕ್ತಿಯು ಆಯುಷ್ಯರೇಖೆ ಇಲ್ಲದವನಲ್ಲಿ ಅರ್ಥರೇಖೆ ಇದ್ದ ಹಾಗೆ , ಹಂದೆಯ ಕೈಯಲ್ಲಿ ಚಂದ್ರಾಯುಧ ಇದ್ದ ಹಾಗೆ , ಕುರುಡನ ಕೈಯಲ್ಲಿ ಕನ್ನಡಿ ಇದ್ದ ಹಾಗೆ ನಿಷ್ಟ್ರಯೋಜಕ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ .

ಧರೆ ಹತ್ತಿ ಉರಿದಡೆ ನಿಲ್ಲಲುಬಾರದು .

ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ .

ಸಂದರ್ಭ : ನಮ್ಮನ್ನು ಕಾಯಬೇಕಾದವರೇ ಕೊಲ್ಲಲು ಮುಂದಾದರೆ ಇನ್ಯಾರು ಕಾಯಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ವಿವರಣೆ : ಬಸವಣ್ಣನವರ ಪ್ರಕಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಸಲಹುವವನು ದೇವರು . ನಮ್ಮ ಕಷ್ಟದ ಕಾಲದಲ್ಲಿ ನಾವು ದೇವರ ನೆರವನ್ನು ಬಯಸುತ್ತೇವೆ . ಕಷ್ಟದಲ್ಲಿರುವ ನಮ್ಮನ್ನು ದೇವರು ಸಲಹುತ್ತಾನೆ ಎಂಬುದು ನಮ್ಮ ನಂಬಿಕೆ , ಆದರೆ ಕಾಯಬೇಕಾದವರೇ ಕೊಲ್ಲಲು ಮುಂದಾದರೆ ಕೆಟ್ಟ ಪರಿಣಾಮ ಎದುರಾಗುತ್ತದೆ ಎನ್ನುವುದನ್ನು ಹೀಗೆ ವಿವರಿಸುತ್ತಾರೆ .

ಒಲೆಯಿಂದ ಉಂಟಾದ ಉರಿಯನ್ನು ಸ್ವಲ್ಪದೂರದಲ್ಲಿ ನಿಲ್ಲುವುದರಿಂದ ತಾಳಿಕೊಳ್ಳಬಹುದು . ಆದರೆ ಇಡೀ ಭೂಮಿಯೇ ಹೊತ್ತಿ ಉರಿದರೆ ನಿಲ್ಲಲು ಸಾಧ್ಯವಿಲ್ಲ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ .

ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಆಯ್ಕೆ : ಈ ಮೇಲಿನ ವಚನದ ಸಾಲನ್ನು ಬಸವಣ್ಣನವರ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಬಸವಣ್ಣನವರು ತಮಗಾದ ವಿಶಿಷ್ಟ ಅನುಭವದ ಅಭಿವ್ಯಕ್ತಿಯನ್ನು ವಿವರಿಸುವ ಸಂದರ್ಭದಲ್ಲಿ ಈ ಮೇಲಿನಂತೆ ಹೇಳುತ್ತಾರೆ .
ವಿವರಣೆ : ಮಗುವಿಗೆ ತಾಯಿಯ ಎದೆ ಹಾಲು ಇತರ ಎಲ್ಲಾ ಔಷಧಿಗಳಿಗಿಂತ ಶ್ರೇಷ್ಠವಾದುದು . ಅದು ಮಗುವಿಗೆ ಸಂಜೀವಿನಿ ಇದ್ದ ಹಾಗೆ , ಆದರೆ ಅಂತಹ ಎದೆ ಹಾಲೇ ವಿಷವಾದರೆ ಮಗುವಿನ ಉಳಿವು ಅಸಾಧ್ಯ .

ಅದನ್ನೇ ಬಸವಣ್ಣನವರು ತಾಯಿಯಂತೆ ಪೊರೆವ ದೇವರೇ ನಮ್ಮನ್ನು ಶಿಕ್ಷಿಸಲು ಮುಂದಾದರೆ ನಮ್ಮ ಉಳಿವು ಸಾಧ್ಯವಿಲ್ಲ ಎನ್ನುವುದನ್ನು ಈ ಮೇಲಿನ ಮಾತಿನ ಮೂಲಕ ವಿವರಿಸುತ್ತಾರೆ .

FAQ

ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ ?

ಕುರುಡನ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ .

ಬಸವಣ್ಣನವರ ವಚನಗಳ ಅಂಕಿತ ಯಾವುದು ?

ಬಸವಣ್ಣನವರ ವಚನಗಳ ಅಂಕಿತ ಕೂಡಲ ಸಂಗಮದೇವ .

ದ್ವಿತೀಯ ಪಿಯುಸಿ ಕನ್ನಡ ಇತರೆ ವಿಷಯದ ನೋಟ್ಸ್

Leave a Reply

Your email address will not be published. Required fields are marked *