ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು | 10th Class Bhagya Shilpigalu Kannada Notes

ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free

ಭಾಗ್ಯಶಿಲ್ಪಿಗಳು ನಾಲ್ವಡಿ ಕೃಷ್ಣರಾಜ ಒಡೆಯರು ಸರ್ ಎಂ ವಿಶ್ವೇಶ್ವರಯ್ಯ, Kannada Lesson 4 Bhagya Shilpigalu Questions and Answers, Summary, Notes Pdf, Siri Kannada Text Book Class 10

Bhagya Shilpigalu Notes ಭಾಗ್ಯಶಿಲ್ಪಿಗಳು ನಾಲ್ವಡಿ ಕೃಷ್ಣರಾಜ ಒಡೆಯರು ಸರ್ ಎಂ ವಿಶ್ವೇಶ್ವರಯ್ಯ

ಈ ಲೇಖನದಲ್ಲಿ ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

Bhagya Shilpigalu Notes mcq Questions

ಕವಿ ಪರಿಚಯ

ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು

Bhagya Shilpigalu Notes 10th class question answer For Free
Bhagya Shilpigalu Notes 10th class question answer For Free
ಲೇಖಕರು :- ಡಿ . ಎಸ್ . ಜಯಪ್ಪಗೌಡ

ಪೂರ್ಣಹೆಸರು :- ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
ಕಾಲ :- ಕ್ರಿ.ಶ. 1947
ಸ್ಥಳ :- ಚಿಕ್ಕಮಗಳೂರು ಜಿಲ್ಲೆ , ದಾರದಹಳ್ಳಿ
ಕೃತಿಗಳು :- ಕರ್ನಾಟಕ ಗ್ರಾಮೀಣ ಸಂಸ್ಥೆಗಳು , ಮೈಸೂರು ಒಡೆಯರು , ಕರ್ನಾಟಕದ ಕಡಲಾಚೆಯ ಸಂಪರ್ಕಗಳು , ಜನಪದ ಆಟಗಳು , ದಿವಾನ್ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ – ಸಾಧನೆಗಳು .

ವೃತ್ತಿ:- ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ .

ವಿಶೇಷ : ಇತಿಹಾಸ ಮತ್ತು ಭಾಷಾಂತರ ವಿಷಯದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ .

ಪ್ರಶಸ್ತಿ :- ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ( ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ) ಸಂಶೋಧನಾ ಬಹುಮಾನ ( ಧಾರವಾಡ ಕರ್ನಾಟಕ ಸಂಘದಿಂದ )

ಆಕರಗ್ರಂಥ:- ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ( ಸಂಶೋಧನಾ ಗ್ರಂಥ )

Bhagya Shilpigalu Notes 10th class notes

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು ?

ನಾಲ್ವಡಿ ಕೃಷ್ಣರಾಜ ಒಡೆಯರು 1895 ರಲ್ಲಿ ಪಟ್ಟಾಭಿಷಿಕ್ತರಾದರು

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು ?

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾದರು .

ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು ?

1900 ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕಾರ್ಯದ ಕೇಂದ್ರ ಪ್ರಾರಂಭವಾಯಿತು . ಇದು ಏಷ್ಯಾಖಂಡದಲ್ಲಿಯೇ ಮೊದಲನೆಯದು .

10th Class Bhagya Shilpigalu Kannada Notes

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು .

ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ‘ ಸರ್ ‘ ಪದವಿಯನ್ನು ನೀಡಿ ಗೌರವಿಸಿತು .

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು ?

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು .

ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ ?

ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ ಎಂಜಿನಿಯರ್‌ ದಿನಾಚರಣೆ’ಯನ್ನು ಮಾಡಲಾಗುತ್ತಿದೆ .

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು ?

ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು . ನಗರ ಪಾಲಿಕೆಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದವು . ಅವರ ಕಾಲದಲ್ಲಿ ಗ್ರಾಮ ನಿರ್ಮಲೀಕರಣ , ವೈದ್ಯ ಸಹಾಯ , ವಿದ್ಯಾ ಪ್ರಚಾರ , ನೀರಾವರಿ ಸೌಕರ್ಯ , ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು .

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು : ಕಾರ್ಯರೂಪಕ್ಕೆ ಬಂದವು ?

1900 ರಲ್ಲಿಯೇ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು . ಇದು ಭಾರತ ಮಾತ್ರವಲ್ಲ , ಏಷ್ಯಾಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆ , 1907 ರಲ್ಲಿ ವಾಣಿವಿಲಾಸ ಮುಂಗಾಣ್ನೆಯ ಕೊಡುಗೆಯಾಯಿತು . ಸಾಗರ ( ಮಾರಿಕಣಿವೆ ) ಕಟ್ಟಲ್ಪಟ್ಟಿತು . 1911 ರಲ್ಲಿ ಕೃಷ್ಣರಾಜಸಾಗರ ಇವರ ಬೃಹತ್
ಮುಂಗಾಣ್ಕೆಯ ಕೊಡುಗೆಯಾಗಿದೆ.

ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ ?

“ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಹಕ್ಕಾಗಬೇಕು ” ಎಂಬುದನ್ನು ಮನಗಂಡ ಇವರು ತಾಂತ್ರಿ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು . ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತಿ ಸಂಸ್ಥೆಗಳನ್ನು ಪ್ರಾರಂಭಿಸದರು . ಮಹಿಳಾ ಶಿಕ್ಷಣದ ಬಗ್ಗೆ ಸಹಾನುಭೂತಿ ಹೊಂದಿದ್ದ ಇವರು ಗೃಹಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು . ವಿದ್ಯಾರ್ಥಿ ವೇತನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು .

ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ನೆಹರೂ ಅವರು ಸರ್ ಎಂ . ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ ?

ಪಂಡಿತ್ ಜವಹರಲಾಲ್ ನೆಹರು ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ , “ ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ . ತಾವು ಈ ಮಾತಿಗೆ ಬಹು ದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ , ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ . ಅದನ್ನು ನಾವು ತಮ್ಮಿಂದ ಕಲಿಯೋಣ ” ಎಂದು ವಿಶ್ವೇಶ್ವರಯ್ಯ ಬಗ್ಗೆ ಈ ರೀತಿ ನುಡಿದರು . ಅವರ ಒಂದೊಂದು ಮಾತುಗಳು ಸರ್ ಎಂ . ವಿ . ಅವರಿಗೆ ಅಕ್ಷರಶಃ ಸಲ್ಲುತ್ತಿದ್ದವು .

ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು ?

ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು . ಇದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು . ಅನಂತರ ಉಳಿತಾಯ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು . ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್‌ ಬ್ಯಾಂಕ್‌ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು . ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು .

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

Bhagya Shilpigalu Notes kavi parichaya

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ ಮಾದರಿ ಮೈಸೂರು ರಾಜ್ಯ ‘ ಹೇಗಾಯಿತು ?

1902 ರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು . ಆಗ ದಿವಾನರಾಗಿದ್ದ ಸರ್ ಕೆ . ಶೇಷಾದ್ರಿ ಅಯ್ಯರ್ ಅವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ಧರಾದರು .

ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡದ್ದರಿಂದ ಮೈಸೂರು ಸಂಸ್ಥಾನಕ್ಕೆ ‘ ಮಾದರಿ ಮೈಸೂರು ” ಎಂಬ ಕೀರ್ತಿ ಪ್ರಾಪ್ತವಾಯಿತು . ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು .

ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ .

ವಿಶ್ವೇಶ್ವರಯ್ಯ ಅವರ ಆಡಳಿತಾವಧಿಯಲ್ಲಿ ಮೈಸೂರು ರಾಜಧಾನಿಯಾಗಿ ಮತ್ತು ರಾಜ್ಯದ ಎರಡನೆಯ ದೊಡ್ಡ ನಗರವಾಗಿ ಪ್ರಸಿದ್ಧಿ ಹೊಸ ಅರಮನೆ , ರಂಗಾಚಾರ್ಲು ಕೃಷ್ಣರಾಜೇಂದ್ರ ಆಸತ್ರೆ , ಲಲಿತಮಹಲ್ ಅರಮನೆಯ ಕಚೇರಿ ಸಮುಚ್ಚಯಗಳು ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದರು . ಮೈಸೂರಿನ ಪಡೆಯಿತು . ಸ್ಮಾರಕ ಮರಭವನ , ಅರಮನೆ ವಿಸ್ತರಣೆ , ಅರಮನೆಯ ತಳಹದಿ ಮತ್ತು ಪ್ರಧಾನ ಇವರ ಕಾಲದಲ್ಲಿಯೇ ನಿರ್ಮಾಣಗೊಂಡವು ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯನ್ನು ಸಮಗ್ರವಾಗಿ ಅಭಿರುದ್ದೀಪಡಿಸಿದರು
ಇವುಗಳಲ್ಲದೆ ಜನಾರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಆಸ್ಪತ್ರೆಗಳನ್ನು ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಹಲವಾರು ಪ್ರಾರಂಭಿಸಿದರು . ಕಾರ್ಯಕ್ರಮಗಳನ್ನು ಜಾರಿಗೆ ತಂದರು . ಹೀಗೆ ವಿಶ್ವೇಶ್ವರಯ್ಯ ಅವರು ಹೊಸಯುಗದ ಹರಿಕಾರರಾಗಿ ಮೈಸೂರು ಸಂಸ್ಥಾನಕ್ಕೆ ನವಚೈತನ್ಯವನ್ನು ತುಂಬಿದರು . ಹೀಗೆ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯು ಅನುಪಮವಾಗಿದೆ .

ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ .

ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು . ಶಿಕ್ಷಣವು ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು . ಅದಕ್ಕಾಗಿ 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು , ಪ್ರೌಢಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು .

ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು . ಮೈಸೂರು ಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ , “ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . ಅದು ಕೆಲವೇ ಜನರ ಸೊತ್ತಾಗದ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ” ಎಂಬುದನ್ನು ಮನಗಂಡ ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು . ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು .

ಸಂದರ್ಭಾನುಸಾರ ಸ್ವಾರಸ್ಯವನ್ನು ವಿವರಿಸಿ .

“ ಸಾಮಾಜಿಕ ಕಾನೂನುಗಳ ಹರಿಕಾರ ”

ಈ ವಾಕ್ಯವನ್ನು ಡಿ.ಎಸ್ . ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಹಲವು ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು .

ಆ ಕಾರಣಕ್ಕಾಗಿ ‘ ಸಾಮಾಜಿಕ ಕಾನೂನುಗಳ ಹರಿಕಾರ ‘ ಎಂಬ ಬಿರುದಿಗೆ ಪಾತ್ರರಾದರು . ಮಹಾರಾಜರಾಗಿ , ರಾಜ ಪದವಿಯನ್ನು ಹೊಂದಿದ್ದರೂ ಸಹ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದರು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ .

“ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು “

ಈ ವಾಕ್ಯವನ್ನು ಡಿ . ಎಸ್ . ಜಯಪ್ಪಗೌಡ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ – ಸಾಧನೆಗಳು ವಿರಚಿತ ದಿವಾನ್ ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ಈ ಮಾತನ್ನು ಲೇಖಕರು ಹೇಳಿದ್ದಾರೆ . ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹರ್ಸ್ಟ್ ಅವರು ಇವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು .

ಪೂನಾದ ಮುಫಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು . ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು . ಇದನ್ನೇ ಮುಂದೆ ಗ್ವಾಲಿಯರ್‌ನ ತಿಗ್ರ ಜಲಾಶಯಕ್ಕೂ ಮೈಸೂರಿನ ಕೃಷ್ಣರಾಜಸಾಗರ ( ಈಗಿನ ಮಂಡ್ಯಜಿಲ್ಲೆಯ ) ಜಲಾಶಯಕ್ಕೂ ಅಳವಡಿಸಲಾಯಿತು .

“ ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ .

ಈ ವಾಕ್ಯವನ್ನು ಡಿ.ಎಸ್ . ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ – ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ಈ ಮಾತನ್ನು ಜನರು ಹೇಳಿದ್ದಾರೆ . ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ಯ ನೀಡಿದರು .

ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು . ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ ಎಂದು ಗಾಂಧೀಜಿ ಅವರು ಮೈಸೂರಿನ ಆಡಳಿತ ಇದರಿಂದ ‘ ಮೈಸೂರು ಮಾದರಿ ‘ ಜನರು ಹಾಡಿ ಹೊಗಳಿದರು . ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು . ಎಂಬ ಹೊಸ ಆಡಳಿತ ಮಾದರಿ ಜನ್ಮತಾಳಿತು .

Bhagya Shilpigalu Notes summary

“ ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ”

ಈ ವಾಕ್ಯವನ್ನು ಡಿ.ಎಸ್ . ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ – ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ನಾಲ್ವಡಿ ಕೃಷ್ಣರಾಜ ಒಡೆಯರು ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದರು .

1927 ರಲ್ಲಿ ಮೊಟ್ಟ ಮೊದಲಿಗೆ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಒದಗಿಸಿ ಕೊಡಲಾಗಿದೆ ಎಂದು ಹೇಳಲಾಗಿದೆ . ಸ್ತ್ರೀಯರಿಗೂ ಸಮಾನವಾದ ಹಕ್ಕು ನೀಡಬೇಕು ಎಂಬ ಆಶಯದ ಸ್ವಾರಸ್ಯ ಇಲ್ಲಿ ವ್ಯಕ್ತವಾಗಿದೆ .

ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ .

Bhagya Shilpigalu Notes kannada pata

ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಗೆ ರೀಚೆಂಟರಾಗಿ ಕಾರ್ಯನಿರ್ವಹಿಸಿದವು “__

ಮಹಾರಾಣಿ ವಾಣಿವಿಲಾಸ

1914 ರಲ್ಲಿ ಶಾಲಾ ಪ್ರವೇಶಕ್ಕೆ_ ನಿಷೇಧವಾಯಿತು

ಜಾತಿ ಪರಿಗಣನೆ

ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ__ ಪ್ರಾರಂಭಿಸಿದರು

ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್

Bhagya Shilpigalu Notes kannada lesson pdf

ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ__ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು .

ಲಾರ್ಡ್ ಸಂಡ್ : ಹರ್ಸ್ಟ್

ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ_ಎಂಬ ಪ್ರಶಸ್ತಿ ಗೌರವಿಸಿತು . ನಿಷೇಧವಾಯಿತು . ಅವರು ವಿಶ್ವೇಶ್ವರಯ್ಯ ನೀಡಿ

ಭಾರತರತ್ನ

ಭಾಷಾ ಚಟುವಟಿಕೆ

Bhagya Shilpigalu Notes KSEEB Solutions for Class 10 Kannada Chapter 4

ಕೊಟ್ಟಿರುವ ಪದಗಳ ತತ್ಸಮ – ತದ್ಭವ ಬರೆಯಿರಿ .

ವಂಶ ~ ಬಂಚ ಸ್ಥಾನ – ತಾಣ
ಯಶ- ಜಸ ಪಟ್ಟಣ ಪತ್ತನ
ಕಾರ್ಯ – ಕಜ್ಜ

ನೀಡಿರುವ ಪದಗಳಲ್ಲಿ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ

ಡಿಪ್ಲೊಮಾ , ಅಜಮಾಯಿಷಿ , ದಿವಾನ , ಪ್ರೌಢ , ಶಿಕ್ಷಣ , ನಡೆಸು , ಸೋಪು , ಕಾರ್ಖಾನೆ , ಕಾಗದ , ಕಚೇರಿ

ಅನ್ಯದೇಶ್ಯ ಪದಗಳು : ಡಿಪ್ಲೊಮಾ , ಅಜಮಾಯಿಷಿ ದಿವಾನ , ಸೋಮ , ಕಾರ್ಖಾನೆ ಕಾಗದ , ಕಚೇರಿ .

Bhagya Shilpigalu Notes kannada 10th class notes

ಕೊಟ್ಟಿರುವ ಗಾದೆಗಳನ್ನು ವಿಸ್ತರಿಸಿ ಬರೆಯಿರಿ .

ಕೂಡಿ ಬಾಳಿದರೆ ಸ್ವರ್ಗ ಸುಖ

ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ ವೇದ ಸುಳ್ಳಾದರೂ ಗಾ ಸುಳ್ಳಲ್ಲ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ . ಕೂಡಿ ಬಾಳುವುದು ಎಂದರೆ ಒಟ್ಟಾಗಿ ಜೀವನ ನಡೆಸುವುದು ಎಂದು ಅಥ ಅವಿಭಕ್ತ ಕುಟುಂಬಗಳಲ್ಲಿ ಅಜ್ಜಿ ತಾತ , ಮಕ್ಕಳು , ಮೊಮ್ಮಕ್ಕಳು ಒಟ್ಟಾಗಿ ಜೀವ ನಡೆಸುತ್ತಿದ್ದರು .

ಪ್ರತಿಯೊಬ್ಬರೂ ತಮ್ಮ ಕಷ್ಟ ಸುಖಗಳಲ್ಲಿ ಪರಸ್ಪರ ಹೊಂದಿಕೊಂಡ ಹೋಗುತ್ತಿದ್ದರು . ಹಬ್ಬ ಹರಿದಿನಗಳಲ್ಲಿ ಮನೆತುಂಬ ಬಂಧುಬಳಗ ಮಕ್ಕಳು ಇದ್ದು
ಸಂತೋಷಕ್ಕೆ ಕಾರಣವಾಗುತ್ತಿತ್ತು , ಆದರೆ ಇಂದು ವಿಭಕ್ತ ಕುಟುಂಬಗಳಲ್ಲಿ ಆ ಆನಂದ ಇಲ್ಲವಾಗಿದೆ . ಆದ್ದರಿಂದ ಎಲ್ಲರೂ ಒಟ್ಟಾಗಿ ಕಲೆತು , ಬೆರೆತು ಜೀವನ ಸಾಗಿಸುವುದರಿಂದ ಸ್ವರ್ಗದಂತ ಸುಖವನ್ನು ಕಾಣಬಹುದಾಗಿದೆ .

ಕೈ ಕೆಸರಾದರೆ ಬಾಯಿ ಮೊಸರು

ಗಾದೆಗಳು ವೇದಗಳಿಗೆ ಸಮಾನ ಜನಪದರ ಜೀವನದ ಅನುಭವದ ನುಡಿಮುತ್ತುಗಳು . ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ . ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಅರ್ಥಪೂರ್ಣವಾಗಿದೆ . ಪ್ರಸ್ತುತ ಗಾದೆಯು ‘ ಕೈ ಕೆಸರಾದರೆ ಬಾಯಿ ಮೊಸರು ‘ ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ .

ಕೈ ಕೆಸರಾಗುವುದು ಎಂದರೆ ಕಷ್ಟ ಪಟ್ಟು ದುಡಿಯುವುದು ಎಂದು ಅರ್ಥ , ಬಾಯಿ ಮೊಸರು ಎಂದರೆ ದುಡಿಮೆಯ ಪ್ರತಿಫಲ ಎಂಬುದಾಗಿದೆ . ಶ್ರಮ ಪಡದಿದ್ದರೆ , ಸುಖವಾಗಿ ಇರಲು ಸಾಧ್ಯವಿಲ್ಲ ಕಷ್ಟಪಟ್ಟರೆ ಫಲವುಂಟು ಎಂಬುದು ಇದರ ಅರ್ಥವಾಗಿದೆ .

ಹೆಚ್ಚುವರಿ ಪ್ರಶೋತ್ತರಗಳು

Bhagya Shilpigalu Notes prashn uttar

ಬಿಟ್ಟ ಸ್ಥಳ ತುಂಬಿರಿ

ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ……. ಪ್ರಶಸ್ತಿ ಲಭಿಸಿದೆ

ಕರ್ನಾಟಕ

ದಿವಾನ ಎಂಬುದು…… ಭಾಷೆಯ ಪದ

ಪರ್ಷಿಯನ್

ಸರ್ ಎಂ . ವಿಶ್ವೇಶ್ವರಯ್ಯ ಅವರದು…… ಪ್ರತಿಭೆಯ ವ್ಯಕ್ತಿತ್ವ .

ಬಹುಮುಖ

ಪಂಡಿತ್ ಜವಹರಲಾಲ್ ನೆಹರು ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ…… ಸಮಾರಂಭದಲ್ಲಿ ಮಾತನಾಡಿದರು .

ಶತಮಾನೋತ್ಸವ

ವಿಶ್ವೇಶ್ವರಯ್ಯ ಅವರ ಮನೆತನಕ್ಕೆ…… ಎಂಬ ಹೆಸರು ಸೇರಿಕೊಂಡಿತ್ತು

ಮೋಕ್ಷಗುಂಡಂ

ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ಶಿಕ್ಷಣ…… ದಲ್ಲಿ ನಡೆಯಿತು . ರವರು

ಚಿಕ್ಕಬಳ್ಳಾಪುರ

ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ಭಾಗ್ಯಶಿಲ್ಪಿಗಳು ನೋಟ್ಸ್ | Bhagya Shilpigalu Notes 10th class question answer For Free
ವಿಶ್ವೇಶ್ವರಯ್ಯ ಅವರು ಅಂದಿನ ಮೈಸೂರು ದಿವಾನರಾಗಿದ್ದ…….ರವರು ನೀಡಿದ ವಿದ್ಯಾರ್ಥಿವೇತನ ಸೌಲಭ್ಯವನ್ನು ಬಳಸಿಕೊಂಡು ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲ್.ಸಿ.ಇ. ಡಿಪ್ಲೋಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದರು .

ಸಿ . ರಂಗಾಚಾರ್ಲು

. ……… ಸರ್ಕಾರದ ಸೂಚನೆಯ ಮೇರೆಗೆ ಸಿಂದ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ವಿಶ್ವೇಶ್ವರಯ್ಯ ಅವರು ಯಶಸ್ವಿಯಾಗಿ ಪೂರೈಸಿದರು .

ಮುಂಬೈ

ಅಜಮಾಯಿಷಿ ಎಂಬುದು …….ಭಾಷೆಯಿಂದ ಬಂದ ಪದ.

ಪಾರ್ಸಿ

ಡಿ . ಎಸ್ . ಜಯಪ್ಪಗೌಡ.
….. ಅವರು ಮತ್ತು ಪಠ್ಯಪುಸ್ತಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ .

ಮುಂಬೈ

ವಿಶ್ವೇಶ್ವರಯ್ಯ ಅವರು ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಮುಖ್ಯ……… ಆಗಿ ಕಾರ್ಯ ನಿರ್ವಹಿಸಿದರು .

ಎಂಜಿನಿಯರ್

ಕಾವೇರಿ ನದಿಗೆ …….. ಜಲಾಶಯ ನಿರ್ಮಾಣ ಯೋಜನೆ ಜಾರಂಭ ಮಾಡಿದರು .

ಕನ್ನಂಬಾಡಿ

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ……. ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ ಹಾಕಿದರು . ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಮತ್ತೊಂದು

ನಾಲ್ವಡಿ ಕೃಷ್ಣರಾಜ ಒಡೆಯರು

. ……. ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು .

ಗಾಂಧೀಜಿ

ವಿಶ್ವೇಶ್ವರಯ್ಯ ಅವರು……ಶಿಕ್ಷಣವೇ ಇಲ್ಲ ಸಮಸ್ಯೆಗೆ ಪರಿಹಾರವೆಂದು ನಂಬಿದ್ದರು .

ಆಧುನಿಕ

Bhagya Shilpigalu Notes Notes Question Answer Pdf Download

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ……
ಫಲಶ್ರುತಿ

ದೂರದೃಷ್ಟಿಯ

“ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . …..ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ” .

ಪ್ರಗತಿಪರ

ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ….ಗಳ ವ್ಯವಸ್ತೆಗೆ ಆಸ್ತಿಭಾರ ಹಾಕಿದರು .

ಗ್ರಂಥಾಲಯ

ವಿಶ್ವೇಶ್ವರಯ್ಯ ಅವರು ………ಅಗ್ರ ಪ್ರಾಶಸ್ತ್ರ ನೀಡಿದ್ದರು .

ಕೈಗಾರಿಕೆಗೆ ಗಳ ವ್ಯವಸ್ಥೆಗೆ ಅಸ್ತಿಭಾರ

ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ …….ನೀತಿಯಲ್ಲಿ ಮಾರ್ಪಾಡು ಮಾಡಿದರು .

ಹಣಕಾಸು

FAQ

ನಾಲ್ವಡಿ ಕೃಷ್ಣರಾಜ ಒಡೆಯರ್ ಮರಣ?

3 August 1940, Bangalore Palace, Bengaluru

ವಿಶ್ವೇಶ್ವರಯ್ಯನವರ ಜನ್ಮದಿನ?

ಸೆಪ್ಟೆಂಬರ್ 15. 1860

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

ಶಬರಿ ಪಾಠದ ಕವಿ ಪರಿಚಯ

ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ

ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು

Leave a Reply

Your email address will not be published. Required fields are marked *