ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | 10th Kannada Kouravendrana Konde Neenu Notes

ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free

10th Kannada Poem 4 Kouravendrana Konde Neenu Questions and Answers, Summary, Notes Pdf, Siri Kannada Text Book Class 10, 10th Class, ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು

Kouravendrana Konde Neenu Notes

ಈ ಲೇಖನದಲ್ಲಿ 10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

Kouravendrana Konde Neenu Notes

ಲೇಖಕರ ಪರಿಚಯ

ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free
ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free
ಕವಿ: : ಕುಮಾರವ್ಯಾಸ
 • ನಿಜನಾಮ:ಗದುಗಿನ ನಾರಣಪ್ಪ
 • ಕಾಲ:ಕ್ರಿ.ಶ .1430
 • ಸ್ಥಳ :ಗದಗ ಪ್ರಾಂತದ ಕೋಳಿವಾಡ
 • ಕೃತಿಗಳು :ಕರ್ಣಾಟ ಭಾರತ ಕಥಾಮಂಜರಿ ( ಕನ್ನಡ ಭಾರತ , ಗದುಗಿನ ಭಾರತ , ಕುಮಾರವ್ಯಾಸ ಭಾರತ ) ಐರಾವತ .


ವಿಶೇಷ:

 • ವ್ಯಾಸಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ .
 • ಪಂಡಿತರಿಗೂ , ಪಾಮರರಿಗೂ , ‘ ಕಾಮಧೇನು ‘ ಎನಿಸಿದ್ದಾರೆ .
 • ನಾರಾಯಣನ ಪರಮಭಕ್ತ .
 • ಭಾಗವತ ಸಂಪ್ರದಾಯವನ್ನು ಸರಳ , ಸುಂದರ , ರಂಜನೀಯವಾಗಿ ಪರಿಚಯಿಸಿ ಜನಪ್ರಿಯಗೊಳಿಸಿದ್ದಾರೆ .
 • ನಡುಗನ್ನಡ ಕಾವ್ಯ ಪರಂಪರೆಯಲ್ಲಿ ಗದುಗಿನ ಭಾರತ ಅತ್ಯಂತ ಜನಪ್ರಿಯವಾದ ಮಹಾಕಾವ್ಯ
  ವಾದ ಮಹಾಕಾವ್ಯ .

ಬಿರುದು :

ರೂಪಕ ಸಾಮ್ರಾಜ್ಯ ಚಕ್ರವರ್ತಿ.

ಆಕರಗ್ರಂಥ :

‘ ಕರ್ಣಾಟ ಭಾರತ ಕಥಾಮಂಜರಿ ‘ ಕಾವ್ಯದ ಉದ್ಯೋಗ ಪರ್ವ .

Kouravendrana Konde Neenu Notes mcq

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ

ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು ?

ಕರ್ಣ ! ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನಿನ್ನಾಣೆ ! ನೀನು ವಾಸ್ತವವಾಗಿ ಭೂಮಿಯ ಒಡೆಯ ! ಆದರೆ ನಿನಗೆ ಅದಿನ್ನೂ ತಿಳಿದಿಲ್ಲ . ಎಂದು ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಹೇಳಿ ಕರೆದನು .

ಕುಮಾರವ್ಯಾಸನ ಆರಾಧ್ಯದೈವ ಯಾರು ?

ಕುಮಾರವ್ಯಾಸನ ಆರಾಧ್ಯದೈವ ಗದಗಿನ ವೀರನಾರಾಯಣ .

ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು ?

ಅಶ್ವಿನೀದೇವತೆಗಳ ವರಬಲದಿಂದ ನಕುಲ , ಸಹದೇವರು ಜನಿಸಿದರು .

Kouravendrana Konde Neenu Notes free

ಕುಮಾರವ್ಯಾಸನಿಗಿರುವ ಬಿರುದು ಯಾವುದು ?

ಕುಮಾರವ್ಯಾಸನು ರೂಪಕಾಲಂಕಾರವನ್ನು ವಿಶಿಷ್ಟವಾಗಿ ಪ್ರಯೋಗಿಸಿ “ ರೂಪಕಸಾಮ್ರಾಜ್ಯ ಚಕ್ರವರ್ತಿ ” ಎಂಬ ಬಿರುದನ್ನು ಪಡೆದನು .

ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು ?

ಗದಗಿನ ನಾರಣಪ್ಪನು ಆದಿಕವಿ ಪಂಪನ ಅನಂತರ ವ್ಯಾಸರ ಮಹಾಭಾರತವನ್ನು ಕನ್ನಡದಲ್ಲಿ ( ಮೊದಲ ಹತ್ತು ಪರ್ವಗಳು ) ರಚಿಸಿ ಪಂಡಿತರಿಗೆ ಮಾತ್ರವಲ್ಲ , ಪಾಮರರಿಗೂ ಕಾಮಧೇನು ಎಂಬ ಗೌರವಕ್ಕೆ ಪಾತ್ರನಾಗಿ ಕುಮಾರವ್ಯಾಸ ಎಂಬ ಅಭಿಧಾನವನ್ನು ಹೊಂದಿದ ಕವಿ ,

Kouravendrana Konde Neenu Notes ಹತ್ತನೇ ತರಗತಿ

ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು ?

ಶ್ರೀಕೃಷ್ಣನು ಎಲ್ಲರನ್ನೂ ಬೀಳ್ಕೊಂಡು ರಥದಲ್ಲಿ ಜೊತೆಗೆ ಬರುವಂತೆ ಕರ್ಣನನ್ನು ಕರೆದನು . ಕರ್ಣನು ರಥದಲ್ಲಿ ಕುಳಿತ ಮೇಲೆ ಶ್ರೀಕೃಷ್ಣನ ವರ್ತನೆ ಸಂಪೂರ್ಣವಾಗಿ ಬದಲಾಗಿತ್ತು . ಮೈದುನನನ್ನು ಕಾಣುವಷ್ಟೇ ಪ್ರೀತಿಯಿಂದ ಕರ್ಣನನ್ನು ಬರಸೆಳೆದು ತನ್ನ ಪಕ್ಕದಲ್ಲಿಯೇ ಕೂಡಿಸಿಕೊಂಡನು .

ಅವರಿಬ್ಬರ ನಡುವೆ ಮಾತುಕತೆ ಪ್ರಾರಂಭವಾಯಿತು , ಕರ್ಣನಿಗೆ ತಾನು ಹೀನ ಜಾತಿಯವನೆಂಬ ಸಂಕೋಚವೂ , ಅಳುಕೂ ಇತ್ತು . ಕೃಷ್ಣನ ಪಕ್ಕದಲ್ಲಿ ಕುಳಿತಿದ್ದ ಕರ್ಣನು ಹೆದರಿಕೆಯಿಂದ ” ದೇವ ನಿಮ್ಮಡಿಗಳಲ್ಲಿ ನನಗೆ ಸಮಸೇವನೆಯೇ ? ಛೇ ! ಛೇ ! ಬೇಡ | ದೇವ ! ಮುರಾರಿ ! ನನಗೇಕೋ ಹೆದರಿಕೆಯಾಗುತ್ತಿದೆ ಎಂದನು .

“ ಹಾಗೇನಿಲ್ಲ ಕರ್ಣ ! ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನಿನ್ನಾಣೆ ! ನೀನು ವಾಸ್ತವವಾಗಿ ಭೂಮಿಯ ಒಡೆಯ ! ಆದರೆ ನಿನಗೆ ಅದಿನ್ನೂ ತಿಳಿದಿಲ್ಲ ” . ಈ ಮಾತುಗಳನ್ನು ಹೇಳಿ ಕೃಷ್ಣನು ರವಿಸುತ ( ಕರ್ಣ ) ನ ಕಿವಿಯಲ್ಲಿ ‘ ಉಭಯ’ವನ್ನು ಅಂದರೆ ದ್ವಂದ್ವನಿಲುವನ್ನು ಬಿತ್ತಿದನು . ಕರ್ಣನಿಗೆ ಇದರಿಂದ ಬೆರಗು , ಅಳುಕು ಇನ್ನೂ ಹೋಗಿರಲಿಲ್ಲ .

ಕುಂತಿ , ಮಾದ್ರಿಯರು ಯಾರಾದ ಅನುಗ್ರಹದಿಂದ ಮಕ್ಕಳನ್ನು ಪಡೆದರು ?

ಕುಂತೀ ದೇವಿಯು ದೂರ್ವಾಸರಿಂದ ಐದು ಮಂತ್ರಗಳನ್ನು ವರರೂಪದಲ್ಲಿ ಪಡೆದಿದ್ದಳು . ಅವುಗಳಲ್ಲಿ ಮೊದಲನೆಯ ಮಂತ್ರದಲ್ಲಿ ಹುಟ್ಟಿದವನು ಕರ್ಣ ಆನಂತರ ಧರ್ಮರಾಯ ( ಯುದ್ಧಿಷ್ಠಿರ ) ಮೂರನೆಯವನು ಭೀಮ , ನಾಲ್ಕನೆಯವನು ಅರ್ಜುನ , ಅನಂತರ ಮಾದ್ರಿಯು ಕುಂತಿಯಿಂದ ಮಂತ್ರವನ್ನು ಪಡೆದು ನಕುಲ ಸಹದೇವರನ್ನು ಹೆತ್ತಳು . ಹೀಗೆ ಕುಂತಿ , ಮಾದ್ರಿಯರು ಮಕ್ಕಳನ್ನು ಪಡೆದರು

ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ?

ತನ್ನ ಅಸ್ತಿತ್ವವನ್ನೇ ಅಲ್ಲಾಡಿಸುವಂಥ ಈ ಮಾತು ಕೇಳುತ್ತಾ ಕರ್ಣನ ಕೊರಳ ಸರ ಹಿಗ್ಗಿದವು . ಕಣ್ಣೀರು ಧಾರಾಕಾರವಾಗಿ ಸುರಿಯಲಾರಂಭಿಸಿತು . ಮನಸ್ಸಿಗೆ ತುಂಬಾ ನೋವಾಯಿತು “ ಅಯ್ಯೋ ! ಕುರುಪತಿಗೆ ಕೇಡಾಯಿತಲ್ಲ ” ಎಂಬ ವ್ಯಥೆಯೊಂದೇ ಅವನನ್ನು ಕಾಡಿದ್ದು , ಹಾಗೆಯೇ ಕೃಷ್ಣನ ಬಗೆಗೂ ಚಿಂತಿಸಿದ .

“ ಈ ಕೃಷ್ಣನ ಜೊತೆ ಹಗೆತನ ಮಾಡಿದರೆ ಹಗೆದೋರಿ ಸುಟ್ಟುಹಾಕುತ್ತದಲ್ಲವೆ ? ಈ ಕೃಷ್ಣ ಸುಮ್ಮನಿರದೆ ನನ್ನ ವಂಶದ ಬಗೆಗೆ ಹೇಳಿ ಕೊಂದನಲ್ಲ ” ಎಂದುಕೊಂಡ ಕರ್ಣನಲ್ಲಿ ಧರ್ಮಸಂಕಟ , ಇಬ್ಬಂದಿತನ ಶುರುವಾಯಿತು .

Kouravendrana Konde Neenu Notes 10th standard

ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು ?

ಕರ್ಣನು “ ಅಯ್ಯೋ ಓ ಮರುಳು ಮಾಧವ ! ನನಗೆ ಈ ಭೂಮಿಯ ಸಾಮ್ರಾಜ್ಯ ಪದವಿಯ ವೈಭವ ಸೇರುವುದಿಲ್ಲ . ಈ ಕಡೆ ಕೌರವರು ಆ ಕಡೆ ಪಾಂಡವರು ನನ್ನ ಸೇವೆ ಮಾಡುವುದು ನನ್ನ ಮನಸ್ಸಿಗೆ ಒಪ್ಪದ ಸಂಗತಿ .

ನನ್ನ ಮನಸ್ಸಿನಲ್ಲಿ ಉದ್ದಕ್ಕೂ ಇರುವುದು ಒಂದೇ ವಿಚಾರ . ಏನೆಂದರೆ ನನ್ನನ್ನು ಕಾಪಾಡಿದ ಕೌರವ ಇದ್ದಾನಲ್ಲ ! ಅವನೆದುರಿಗೆ ಶತ್ರುಗಳ ತಲೆಗಳನ್ನು ಕತ್ತರಿಸಿ ಮುಂದಿಡುವ ಯೋಚನೆಯೊಂದೇ ನನ್ನ ತಲೆಯಲ್ಲಿ ಇತ್ತು . ಆದರೆ ನೀನು ಇದೀಗ ಕೌರವನನ್ನು ಕೊಂದೆ ” ಎಂದು ಕರ್ಣ ಹೇಳಿದನು .

ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು ?

“ ಶ್ರೀಕೃಷ್ಣ ಈ ಯುದ್ಧವೂ ಒಂದು ಬಗೆಯ ಯಜ್ಞ ಎಂದೇ ತಿಳಿದಿದ್ದೇನೆ . ನಾನು ಈ ಯಜ್ಞಕ್ಕೆ ದೀಕ್ಷಿತನಾಗುತ್ತೇನೆ . ಯೋಧರ ಶರೀರಗಳ ರಕ್ತವೇ ತುಪ್ಪ , ಶತ್ರುಗಳ ಕರುಳೇ ಚರು ( ಹವಿಸ್ಸು ) ಎಲುಬುಗಳ ರಾಶಿಯೇ ಸಮಿತ್ತು ಮಾಂಸವೇ ಅಖಿಲಾಹುತಿ , ನರ ಕಪಾಲಗಳೇ ಪಾತ್ರಗಳು ತಲೆಯ ಕೂದಲುಗಳೇ ದರ್ಬೆ ಎಂಬುದು ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವಾಗಿತ್ತು .

ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free
ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free

Kouravendrana Konde Neenu Notes in kannada

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು ?

ಐದು ಜನ ಪಾಂಡವರಲ್ಲಿ ನೀನೆ ಮೊದಲಿಗನು . ಎಲ್ಲರಿಗಿಂತ ನೀನೇ ದೊಡ್ಡವನಾಗಿರುವಾಗ ಕೌರವರಾಗಲಿ , ಪಾಂಡವರಾಗಲಿ ರಾಜ್ಯವನ್ನು ಬಯಸಿ ಯುದ್ಧ ಮಾಡುವುದು ತಪ್ಪಾಗುತ್ತದೆ , ನಿನಗೆ ಈ ವಿಚಾರವನ್ನು ತಿಳಿಸುವುದಕ್ಕಾಗಿ ನಿನ್ನನು ಕರೆತಂದೆ . ನನಗೆ ನಿನ್ನ ಏಳಿಗೆಯೊಂದೇ ಬೇಕಾಗಿರುವುದು . ಈಗ ನನ್ನ ಜೊತೆಗೆ ಬಂದುಬಿಡು . ವಿಷಯವನ್ನೆಲ್ಲ ತಿಳಿಸಿ ಪಾಂಡವರೈವರನ್ನೂ ನಿನ್ನ ಪಾದಗಳ ಮೇಲೆ ಕೆಡವುತ್ತೇನೆ .

“ ಅಷ್ಟೇ ಅಲ್ಲ , ನಿನಗೆ ಹಸ್ತಿನಾಪುರದ ರಾಜ್ಯವನ್ನೇ ಒಪ್ಪಿಸಿಕೊಡುತ್ತೇನೆ . ಪಾಂಡವರು ಕೌರವರು ಇಬ್ಬರೂ ಸಂತೋಷದಿಂದ ನಿನ್ನನ್ನು ಓಲೈಸುತ್ತಾರೆ . ಸಿಂಹಾಸನದಲ್ಲಿ ಕೂರಿಸುತ್ತಾರೆ . ಎರಡು ಸಂತತಿಯವರೂ ನಿನ್ನ ಸೇವಕರು ! ಈ ಸ್ಥಾನ ಪಡೆದುಕೋ ” ಎಂದು ಕರ್ಣನಿಗೆ ಶ್ರೀಕೃಷ್ಣನು ಆಮಿಷಗಳನ್ನು ಒಡ್ಡಿದನು .

ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಃಸ್ಥಿತಿಯನ್ನು ತಿಳಿಸಿ .

ತನ್ನ ಅಸ್ತಿತ್ವವನ್ನೇ ಅಲ್ಲಾಡಿಸುವಂಥ ಈ ಮಾತು ಕೇಳುತ್ತಾ ಕರ್ಣನ ಕೊರಳ ಸೆರೆ ಹಿಗ್ಗಿದವು . ಕಣ್ಣೀರು ಧಾರಾಕಾರವಾಗಿ ಸುರಿಯಲಾರಂಭಿಸಿತು . ಮನಸ್ಸಿಗೆ ತುಂಬಾ ನೋವಾಯಿತು “ ಅಯ್ಯೋ ! ಕುರುಪತಿಗೆ ಕೇಡಾಯಿತಲ್ಲ ” ಎಂಬ ವ್ಯಥೆಯೊಂದೇ ಅವನನ್ನು ಕಾಡಿದ್ದು . ಹಾಗೆಯೇ ಕೃಷ್ಣನ ಬಗೆಗೂ ಚಿಂತಿಸಿದ , “ ಈ ಕೃಷ್ಣನ ಜೊತೆ ಹಗೆತನ ಮಾಡಿದರೆ ಹಗೆದೋರಿ ಸುಟ್ಟುಹಾಕುತ್ತದಲ್ಲವೆ ? ಈ ಕೃಷ್ಣ ಸುಮ್ಮನಿರದೆ ನನ್ನ ವಂಶದ ಬಗೆಗೆ ಹೇಳಿ ಕೊಂದನಲ್ಲ ” ಎಂದುಕೊಂಡ ಕರ್ಣನಲ್ಲಿ ಧರ್ಮಸಂಕಟ , ಇಬ್ಬಂದಿತನ ಶುರುವಾಯಿತು .

ಕರ್ಣನ ನಿರ್ಧಾರ ಸರಿ ಎನ್ನುವಿರಾ ? ಏಕೆ ?

ಹೌದು , ಕರ್ಣನ ನಿರ್ಧಾರ ಸರಿ . ಕರ್ಣನ ಮಾತುಗಳಲ್ಲೇ ಹೇಳುವುದಾದರೆ , “ ಶ್ರೀಕೃಷ್ಣ , ವೀರ , ಕೌರವರಾಯನೇ ನನ್ನ ಪ್ರಭು ! ಅವನಿಗೆ ಯಾರು ಶತ್ರುಗಳು ಅವರೆಲ್ಲ ನನಗೂ ಶತ್ರುಗಳೇ , ದುರ್ಯೋಧನನ ಚಿಂತನೆಗಳೇ ನನ್ನ ಚಿಂತನೆಗಳು , ಅವನಿಗೆ ಏನಾಗುತ್ತದೋ ನನಗೂ ಅದೇ ಆಗಲಿ , ಕೃಷ್ಣ ಹೇಳು , ನಾಳೆ ಯುದ್ಧದಲ್ಲಿ ಪಾಂಡವರಿಗೆ ನನ್ನ ಭುಜ ಶೌರ್ಯದ ಸಂಪತ್ತನ್ನು ತೋರಿಸುತ್ತೇನೆ ” . ” ಶ್ರೀಕೃಷ್ಣ , ಈ ಯುದ್ಧವನ್ನು ಒಂದು ಬಗೆಯ ಯಜ್ಞ ಎಂದೇ ತಿಳಿದಿದ್ದೇನೆ .

ನಾನು ಈ ಯಜ್ಞಕ್ಕೆ ದೀಕ್ಷಿತನಾಗುತ್ತೇನೆ . ಯೋಧರ ಶರೀರಗಳ ರಕ್ತವೇ ತುಪ್ಪ , ಶತ್ರುಗಳ ಕರುಳೇ ಚರು ( ಹವಿಸ್ಸು ) ಎಲುಬುಗಳ ರಾಶಿಯೇ ಸಮಿತ್ತು . ಮಾಂಸವೇ ಅಖಿಲಾಹುತಿ , ನರ , ಕಪಾಲಗಳೇ ಪಾತ್ರಗಳು ತಲೆಯ ಕೂದಲುಗಳೇ ದರ್ಬೆ . ಹೀಗೆ ಯಜ್ಞದೀಕ್ಷಿತನಾಗಿ ಕೌರವನ ಋಣ ತೀರಿಸುತ್ತೇನೆ . ನಾಳಿನ ಭಾರತ ಯುದ್ಧವು ಮಾರಿಗೆ ಔತಣವಾಗಲಿದೆ .

ಒಡೆಯನಿಗಾಗಿ ಹೋರಾಡಿ ಸಾಯುತ್ತೇನೆ . ನೀನು ನನ್ನ ಪೂರ್ವವನ್ನೆಲ್ಲಾ ಹೇಳಿದ್ದೀಯ . ಆದ್ದರಿಂದ ಸೂರ್ಯನ ಆಣೆಗೂ ಹೇಳುತ್ತೇನೆ , ನಿಮ್ಮ ಪಾಂಡವರೈವರನ್ನು ನೋಯಿಸುವುದಿಲ್ಲ ” ಎಂದು ಕರ್ಣನು ಕೃಷ್ಣನಿಗೆ ಹೇಳುತ್ತಾನೆ . ಆದ್ದರಿಂದ ಕರ್ಣನ ನಿರ್ಧಾರ ಸರಿ . ಕರ್ಣನ ಕರ್ತವ್ಯನಿಷ್ಠೆ ಅನ್ನದಾತನಿಗೆ ಇರುವ ನಿಯತ್ತು ಇಲ್ಲಿ ಕಾಣಬಹುದು . ಇಂತಹ ನಿಯತ್ತಿಗೆ ರಕ್ತಸಂಬಂಧಕ್ಕೆ ಬೆಲೆ ನೀಡುವುದಿಲ್ಲವೆಂಬ ಅಚಲ ನಿರ್ಧಾರವನ್ನೂ ಕಾಣಬಹುದು .

Kouravendrana Konde Neenu Notes pdf

ಈ ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ .

“ ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ . ”

ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಕುಮಾರವ್ಯಾಸವಿರಚಿತ ಕರ್ಣಾಟಭಾರತ ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ ಕೌರವೇಂದ್ರನ ಕೊಂದೆ ನೀನು ‘ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .


ಈ ಮಾತನ್ನು ಕುಮಾರವ್ಯಾಸನು ಹೇಳಿದ್ದಾನೆ . ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನಿನ್ನಾಣೆ ನೀನು ವಾಸ್ತವವಾಗಿ ಭೂಮಿಯ ಒಡೆಯ ! ಆದರೆ ನಿನಗೆ ಅದಿನ್ನೂ ತಿಳಿದಿಲ್ಲ . ಈ ಮಾತುಗಳನ್ನು ಹೇಳಿ ಕೃಷ್ಣನು ರವಿಸುತ ( ಕರ್ಣನ ಕಿವಿಯಲ್ಲಿ ( ಭಯವನ್ನು ) ‘ ಉಭಯ’ವನ್ನು ಅಂದರೆ ದ್ವಂದ್ವ ನಿಲುವನ್ನು ಬಿತ್ತಿದನು

“ ಬಾಯ್ಲೆಂಬುಲಕೆ ಕೈಯಾನುವರೆ . ”

ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಕುಮಾರವ್ಯಾಸ ವಿರಚಿತ ಕರ್ಣಾಟಭಾರತ – ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ ಕೌರವೇಂದ್ರನ ಕೊಂದೆ ನೀನು ‘ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದ್ದಾನೆ . ನಿನಗೆ ಹಸ್ತಿನಾಪುರದ ರಾಜ್ಯವನ್ನೇ ಒಪ್ಪಿಸಿಕೊಡುತ್ತೇನೆ . ಪಾಂಡವರು ಕೌರವರು ಇಬ್ಬರೂ ಸಂತೋಷದಿಂದ ನಿನ್ನನ್ನು ಓಲೈಸುತ್ತಾರೆ . ಸಿಂಹಾಸನದಲ್ಲಿ ಕೂರಿಸುತ್ತಾರೆ . ಎರಡೂ ಸಂತತಿಯವರು ನಿನ್ನ ಸೇವಕರು ಈ ಸ್ಥಾನ ಪಡೆಯುವುದನ್ನು ಬಿಟ್ಟು ನೀನು ಆ ದುರ್ಯೋಧನನ ಎಂಜಲು ತಾಂಬೂಲಕ್ಕೆ ಕೈಯೊಡ್ಡುವುದು ಸರಿಯ ಎಂದು ಕೃಷ್ಣನು ಪ್ರಶ್ನಿಸುತ್ತಾನೆ .

“ ಜೀಯ ಹಸಾದವೆಂಬುದು ಕಷ್ಟ ”

ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಕುಮಾರವ್ಯಾಸವಿರಚಿತ ಕರ್ಣಾಟಭಾರತ – ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ ಕೌರವೇಂದ್ರನ ಕೊಂದೆ ನೀನು ‘ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದ್ದಾನೆ . “ ಎಲೈ ಕರ್ಣನೇ ಈ ಚಿತ್ರವನ್ನು ಊಹಿಸಿಕೋ . ನಿನ್ನ ಎಡಗಡೆಗೆ ಕೌರವರ ಸಮೂಹ ! ಬಲಗಡೆಗೆ ಪಾಂಡವರ ಸಮೂಹ ಎದುರಿಗೆ ಮಾದರು , ಮಾಗಧರು . ಯಾದವರು ಮೊದಲಾದವರು ! ಮಧ್ಯದಲ್ಲಿ ಚಕ್ರವರ್ತಿಯಾಗಿ ಶೋಭಿಸುವ ನೀನು ! ಇಂಥ ಉನ್ನತ ಸ್ಥಾನವನ್ನು ಬಿಟ್ಟು ಆ ಕೌರವನ ಬಳಿಗೆ ಹೋಗಿ ಜೀಯ ! ಹಸಾದ ಎಂದು ಹೇಳುವುದು ನಿನ್ನ ಘನತೆಗೆ ತಕ್ಕದೇನು ? ” ಎಂದು ಕೃಷ್ಣನು ಪ್ರಶ್ನಿಸುತ್ತಾನೆ

“ ನಿನ್ನಪದೆಸೆಯ ಬಯಸುವನಲ್ಲ ”

ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಕುಮಾರವ್ಯಾಸವಿರಚಿತ ಕರ್ಣಾಟಭಾರತ ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ ಕೌರವೇಂದ್ರನ ಕೊಂದೆ ನೀನು ‘ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದ್ದಾನೆ . ಕೃಷ್ಣನು ಕರ್ಣನನ್ನು ತನ್ನ ಕಡೆ ಸೆಳೆಯಲು ಭೇದ ತಂತ್ರ ಬಳಸಿ , ಅವನ ಜನ್ಮ ವೃತ್ತಾಂತವನ್ನು ತಿಳಿಸಿ ಆತನ ಮನ ಧೈರ್ಯ ಕೆಡಿಸುತ್ತಾನೆ . ಪಾಂಡವರಿಗೆ ಏನೂ ಮಾಡೆನು ಎಂದು ಭಾಷೆ ದ್ವಂದ್ವವನ್ನು ಬಿತ್ತುತ್ತಾನೆ ತೆಗೆದುಕೊಳ್ಳುತ್ತಾನೆ . ಅವನಿಂದ ಹಾಗೆಯೇ ನೀಡುತ್ತಾನೆ . ಕರ್ಣನ ಅಪದೆಸೆಯನ್ನು ಬಯಸುವುದಿಲ್ಲವೆಂದು ಕರ್ಣನಿಗೆ ಭರವಸೆ ನೀಡುತ್ತಾನೆ.

“ ಮಾರಿಗೌತಣವಾಯ್ತು ನಾಳಿನ ಭಾರತವು .

ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಕುಮಾರವ್ಯಾಸವಿರಚಿತ ಕರ್ಣಾಟಭಾರತ – ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ ಕೌರವೇಂದ್ರನ ಕೊಂದೆ ನೀನು ‘ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳಿದ್ದಾನೆ . ಕೃಷ್ಣ : ಈ ಯುದ್ಧವು ಒಂದು ಬಗೆಯ ಯಜ್ಞ ಎಂದೇ ತಿಳಿದಿದ್ದೇನೆ . ನಾನು ಈ ಯಜ್ಞಕ್ಕೆ ದೀಕ್ಷಿತನಾಗುತ್ತೇನೆ , ಯೋಧರ ಶರೀರಗಳ ರಕ್ತವೇ ತುಪ್ಪ , ಶತ್ರುಗಳ ಕರುಳೇ ಚರು ( ಹವಿಸ್ಸು ) ಎಲುಬುಗಳ ರಾಶಿಯೇ ಸಮಿತ್ತು . ಮಾಂಸವೇ ಅಖಿಲಾಹುತಿ , ನರ ಕಪಾಲಗಳೇ ಪಾತ್ರಗಳು ತಲೆಯ ಕೂದಲುಗಳೇ ದರ್ಬೆ .

ಹೀಗೆ ಯಜ್ಞದೀಕ್ಷಿತನಾಗಿ ಕೌರವನ ಋಣ ತೀರಿಸುತ್ತೇನೆ . ನಾಳಿನ ಭಾರತ ಯುದ್ಧವು ಮಾರಿಗೆ ಔತಣವಾಗಲಿದೆ . ಒಡೆಯನಿಗಾಗಿ ಹೋರಾಡಿ ಸಾಯುತ್ತೇನೆ . ನೀನು ನನ್ನ ಪೂರ್ವವನ್ನೆಲ್ಲಾ ಹೇಳಿದ್ದೀಯ . ಆದ್ದರಿಂದ ಸೂರ್ಯನ ಆಣೆಗೂ ಹೇಳುತ್ತೇನೆ , ನಿಮ್ಮ ಪಾಂಡವರೈವರನ್ನು ನೋಯಿಸುವುದಿಲ್ಲ ” ಎಂದು ಕರ್ಣನು ಕೃಷ್ಣನಿಗೆ ಹೇಳುತ್ತಾನೆ .

ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free
ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು | Kouravendrana Konde Neenu Notes 10th Class Kannada Free

Kouravendrana Konde Neenu Notes faq

ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ

 • ರಾಜೀವಸಖ ‘ ಎಂದರೆ …ಎಂದು ಅರ್ಥ .
 • ಗದುಗಿನ ಭಾರತವು …….ಷಟ್ಟದಿಯಲ್ಲಿ ರಚಿತವಾಗಿದೆ .
 • ಅಶ್ವಿನೀದೇವತೆಗಳ ವರಬಲದಿಂದ ….ಜನಿಸಿದರು .
 • ಕರ್ಣನ….ಅನುಗ್ರಹದಿಂದ ಜನಿಸಿದನು .
 • ಗದುಗಿನ ಸಮೀಪದ ……ಕುಮಾರವ್ಯಾಸನು ಹುಟ್ಟಿದ ಸ್ಥಳ.

ಉತ್ತರಗಳು:

1.ಸೂರ್ಯ

 1. ಭಾಮಿನಿ
 2. ನಕುಲ
 3. ಸೂರ್ಯ.
 4. ಕೋಳಿವಾಡವು

Kouravendrana Konde Neenu Notes question answer

ಭಾಷಾ ಚಟುವಟಿಕೆ

ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ .

Kouravendrana Konde Neenu Notes karnataka

“ ಮಾರಿಗೌತಣವಾಯ್ತು ನಾಳಿನ ಭಾರತವು ”

ಉ .

ಉಪಮೇಯ : ನಾಳಿನ ಭಾರತವು
ಉಪಮಾನ : ಮಾದಿಗೌತಣವಾಯ್ತು
ಅಲಂಕಾರ : ರೂಪಕಾಲಂಕಾರ

ಸಮನ್ವಯ : ನಾಳೆ ( ಮುಂದೆ ) ನಡೆಯಲಿರುವ ಮಹಾಭಾರತ ಯುದ್ಧವನ್ನು ಮಾರಿಗೌತಣವಾಯ್ತು ಎಂಬ ಉಪಮಾನದೊಂದಿಗೆ ಅಭೇದವಾಗಿ ಕಲ್ಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ .

ವಿಗ್ರಹ ಸಮಾಸವನ್ನು ಹೆಸರಿಸಿ .
 1. ಇನತನೂಜ ( ಕರ್ಣ ) – ಬಹುವೀಹಿ ಸಮಾಸ
 2. ದನುಜರಿಪು – ದನುಜರ ( ರಾಕ್ಷಸರ ) ರಿಪು ( ವೈರಿ ) ಯಾರೋ ಅವರು ( ಕೃಷ್ಣ ) ಬಹುವೀಹಿ ಸಮಾಸ
 3. ಮುರಾರಿ ಇನ ( ಸೂರ್ಯನ ಮಗನು ) ತನೂಜನು ಯಾರೋ ಅವರು”-(ಕೃಷ್ಣ) -ಬಹುವೀಹಿ ಸಮಾಸ
 4. ಮೇದಿನೀಪತಿ ಬಹುವೀಹಿ ಸಮಾಸ ಮುರನ ( ರಾಕ್ಷಸರ ) ಅರಿ ( ವೈರಿ ) ಯಾರೋ ಅವರು ( ಕೃಷ್ಣ ) – ದ್ವಂದ್ವಸಮಾಸ
 5. .ಕೈಯಾನು – ಕೈಯನ್ನು + ಆನು ( ಚಾಚು ) -ಕ್ರಿಯಾಸಮಾಸ
 6. ಮಾದ್ರಮಾಗಧಯಾದವರು – ಮಾದರೂ + ಮಾಗಧರೂ + ಯಾದವರು ಹೊಗೆ + ತೋರು ಕ್ರಿಯಾಸಮಾಸ
 7. ಹೊಗೆದೋರು ಮೇದಿನಿಗೆ ( ಭೂಮಿ ) ಪತಿ ( ಒಡೆಯ ) ಯಾರೋ ಅವರು ( ಕರ್ಣ ) – ಬಹುವೀಹಿ ಸಮಾಸ 8 , ರಾಜೀವಸಖ – ರಾಜೀವದ ( ತಾವರೆ ) ಸಖನು ಯಾರೋ ಅವರು ( ಸೂರ್ಯ ) ಬಹುವೀಹಿ ಸಮಾಸ
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕನೇ ಪದ ಬರೆಯಿರಿ
 1. ತನುಜ : ಮಗ :: ಸಖ : ಸ್ನೇಹಿತ
 2. ಯುದ್ಧ : ಜುದ್ಧ : ಪ್ರಸಾದ : ಹಸಾದ
 3. ಭೇದವಿಲ್ಲ : ಆಗಮಸಂಧಿ : ನಮ್ಮಿಡಿಗಳಲಿ : ಲೋಪಸಂಧಿ
 4. ಕಂದ : ನಾಲ್ಕು ಸಾಲು :: ಷಟ್ಟದಿ : ಆರುಸಾಲು

Kouravendrana Konde Neenu Notes sslc notes

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ

ಭೇದವಿಲ್ಲೆಲೆ ಕರ್ಣ ನಿಮ್ಮೊಳು…… ಮೊದಲೆರಡಿಲ್ಲ ನಿನ್ನಾಣೆ .

ಯಾದವರು

ಕೃಷ್ಣಸಂಧಾನವು ದುರ್ಯೋಧನನ…… ದಿಂದ ತಿರಸ್ಕೃತವಾಗುತ್ತದೆ .

ಹಠ

ದಾಯಾದಿಗಳೊಳಗಿನ ದ್ವೇಷಾಸೂಯೆಗಳು ನಮ್ಮ ಮನವನ್ನೂ ಮನೆಯನ್ನೂ ನಾಶಪಡಿಸುತ್ತವೆ ಎಂಬುದಕ್ಕೆ… ಒಂದು ನಿದರ್ಶನ .

ಮಹಾಭಾರತ

ಮಾರಿಗೌತಣವಾಯ್ತು ನಾಳಿನ ಭಾರತವು…….. ಋಣ ಹಿಂಗ ರಣದಲಿ ಸುಭಟಕೋಟಿಯನು .

ಚತುರಂಗ

ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ ಭರದೊಳಿರ್ದೆನು …….ನ ಕೊಂದೆ ನೀನೆಂದ

ಕೌರವೇಂದ್ರ

ನಡುವೆ ನೀನೋಲಗದೊಳೊಪ್ಪುವ ಕಡು ವಿಲಾಸವ ಬಿಸುಟು……. ಜೀಯ ಹಸಾದವೆಂಬುದು ಕಷ್ಟ ನಿನಗೆಂದ

ಕುರುಪತಿ

Kouravendrana Konde Neenu Notes Karnataka state board

ವಿಗ್ರಹಿಸಿ ಸಮಾಸವನ್ನು ಹೆಸರಿಸಿ .

ನಲ್ಲುದುರೆ – ನಲ್ + ಕುದುರೆ -ಕ್ರಿಯಾಸಮಾಸ
ಬಿಲ್ಗೊಂಡು ಬಿಲ್ + ಕೊಂಡು -ಕರ್ಮಧಾರಯ
ಬಿಟ್ಟಿರುವನೇರಿಸಿ – ಬಿಲ್ಲಿರುವನ್ + ಏರಿಸಿ – ಸಮಾಸ ಕ್ರಿಯಾಸಮಾಸ
ಪೂದೋಟ – ಪೂವಿನ ( ಹೂವಿನ ) + ತೋಟ – ತತ್ಪುರುಷ ಸಮಾಸ
ಇನತನೂಜ – ಇನ ( ಸೂರ್ಯನ ಮಗನು ) ತನೂಜನು ಯಾರೋ ಅ ( ಕರ್ಣ ) – ಬಹುವೀಹಿ ಸಮಾಸ
ದನುಜರಿಪು – ದನುಜರ ( ರಾಕ್ಷಸರ ) ರಿಪು ( ವೈರಿ ) ಯಾರೋ ಅವರು ( ಬಹುವೀಹಿ ಸಮಾಸ )
ಮುರಾರಿ – ಮುರನ ( ರಾಕ್ಷಸರ ) ಅರಿ ( ವೈರಿ ) ಯಾರೋ ಅವರು ( ಕೃಷ್ಣ) ಬಹುವೀಹಿ ಸಮಾಸ
ಮೇದಿನೀಪತಿ ಮೇದಿನಿಗೆ ( ಭೂಮಿ ) ಪತಿ ( ಒಡೆಯ ) ಯಾರೋ ಅವ ( ಕರ್ಣ ) – ಬಹುವೀಹಿ ಸಮಾಸ
ಕೈಯಾನು – ಕೈಯನ್ನು + ಆನು ( ಚಾಚು ) ಕ್ರಿಯಾ ಸಮಾಸ

ಮಾಗಧಯಾದವರು+ ಮಾದ್ರರೂ + ಮಾಗಧರೂ + ಯಾದವರು =ದ್ವಂದ್ವಸಮಾಸ
ಹೊಗೆದೋರು ಹೊಗೆ + ತೋರು= ಕ್ರಿಯಾಸಮಾಸ

ರಾಜೀವಸಖ – ರಾಜೀವದ ( ತಾವರೆ ) ಸಖನು ಯಾರೋ ಅವರು ( ಸೂಯ ಬಹುವೀಹಿ ಸಮಾಸ

ಮುಂಗೈ – ಕೈಯ + ಮುಂದು = ಅಂಶಿ ಸಮಾಸ ನಡುರಾತ್ರಿ – ರಾತ್ರಿಯ + ನಡು = ಅಂಶಿ ಸಮಾಸ

ಹನುಮಭೀಮರಾಮ ಹನುಮನೂ + ಭೀಮನೂ + ರಾಮನೂ ಸಮಾಸ
ಮೋಸಮಾಡು ಮೋಸವನ್ನು + ಮಾಡು = ಕ್ರಿಯಾ ಸಮಾಸ ಪೆ
ರ್ಮಗ ಪಿರಿಯ ( ಹಿರಿಯ ) + ಮಗ = ಕರ್ಮಧಾರಯ ಸಮಾಸ
ಘಟಸಂಭೂತ – ಯಾರು ಘಟದಲ್ಲಿ ಸಂಭೂತ ( ಜನಿಸಿರುವನೋ ) ನಾಗಿರುವನೋ ಅವನು ( ದ್ರೋಣ ) ಬಹುವೀಹಿ ಸಮಾಸ

ಗಾಂಡೀವಿ ಯಾರು ಗಾಂಡೀವ ಎಂಬ ಬಿಲ್ಲನ್ನು ಹೊಂದಿರುವನೋ ಅವನು ( ಅರ್ಜುನ ) ಬಹುವೀಹಿಸಮಾಸ
ಪವನನಂದನ ಯಾರು ಪವನನ ( ವಾಯುವಿನ ) ನಂದನನೋ ( ಮಗ ) ಅವನು – ಬಹುವೀಹಿ ಸಮಾಸ

ಮದಾಂಧ ಪರ್ಮರ -ಮದದಿಂದ + ಅಂಧ = ತತ್ಪುರುಷ ಸಮಾಸ :
ಅತಿಕುಟಿಲ = ಅತಿಯಾದ + ಕುಟಿಲ ಧನಹರಣ ಸಮಾಸ
ಪಿರಿದು ( ಹಿರಿದಾದ ) + ಮರ = ಕರ್ಮಧಾರಯ ಸಮಾಸ
ಕೈಕೊಳ್ಳುದು – ಕೈ + ಕೊಳ್ಳುದು – ಕ್ರಿಯಾ ಸಮಾಸ
ಕಟ್ಟೇಕಾಂತ = ಕಟು + ಏಕಾಂತ ತತ್ಪುರುಷ ಸಮಾಸ

ಸ್ವಾಮಿದ್ರೋಹ = ಸ್ವಾಮಿಗೆ ದ್ರೋಹ – ತತ್ಪುರುಷ ಸಮಾಸ ತತ್ಪುರುಷ ಸಮಾಸ
ಪರಧನ = ಪರರ + ಧನ = ಕರ್ಮಧಾರಯ ಸಮಾಸ ದ್ವಂದ್ವ
ಧನವನ್ನು + ಹರಣ ( ಕದಿಯುವುದು ) ಮಾಡಿ – ಕ್ರಿಯಾ

ಸಾಕ್ಷಿಮಾಡಿ ಸಾಕ್ಷಿಯನ್ನು + ಮಾಡಿ – ಕ್ರಿಯಾ ಸಮಾಸ

ಬಲವಂದು = ಬಲಭಾಗದಿಂದ ( ಪ್ರದಕ್ಷಿಣೆ ) + ಬಂದು – ಕ್ರಿಯಾಸಮಾಸ

Kouravendrana Konde Neenu Notes download

ಪದ – ಅರ್ಥ

ಇನ – ಸೂರ್ಯ
ರಿಪು – ಶತ್ರು
ಭೇದ – ವ್ಯತ್ಯಾಸ
ರವಿಸುತ – ಕರ್ಣ
ಲಲನೆ – ತರುಣಿ
ಕಿಂಕರ – ಸೇವಕ
ಗಡಣ – ಸಮೂಹ
ದೃಗುಜಲ – ಕಣ್ಣನೀರು
ಹಗೆ – ಶತ್ರು
ಚಿತ್ತ – ಮನಸ್ಸು
ಶೌರಿಯ – ಶೌರ್ಯ
ತನೂಜ – ಮಗ
ಅಡಿ – ಪಾದ
ಅನ್ವಯ – ವಂಶ
ರವಿ – ಸೂರ್ಯ
ಬಳಿ – ಅನಂತರ
ಸಂತತಿ – ವಂಶ
ಕಡು – ಅತಿ
ಉರವಣಿಸು – ಹೆಚ್ಚಾಗು
ಅರುಹು – ಹೇಳು
ಸೂನುಗಳು – ಮಕ್ಕಳು
ಋಣ – ಹಂಗು
ಅವಸರ – ಅಗತ್ಯದ
ಸಮಯ ರಾಜೀವ
ಸಖ – ಸೂರ್ಯ ( ಮುರ + ಅರಿ )
ಶೌರಿ – ಕೃಷ್ಣ
ದನುಜ – ರಾಕ್ಷಸ
ಮುರಾರಿ – ಕೃಷ್ಣ
ಮೇದಿನಿ – ಭೂಮಿ
ಸುತ – ಮಗ
ಗದ್ದುಗೆ – ಪೀಠ
ಕೈಯಾನು – ಕೈಚಾಚು
ಹಸಾದ ( ದ ) -ಪ್ರಸಾದ ( ತ )
ಕಡು – ಅತಿ
ಗ್ಲಾನಿ – ತಲ್ಲಣ
ಕೈವಾರ – ಹೊಗಳಿಕೆ
ರಣ – ಯುದ್ಧ

FAQ

ಕೌರವೇಂದ್ರನ ಕೊಂದೆ ನೀನು ಪಾಠದ ಲೇಖಕರು ಯಾರು?

ಕುಮಾರವ್ಯಾಸ

ಕುಮಾರವ್ಯಾಸನ ಆರಾಧ್ಯದೈವ ಯಾರು ?

ಕುಮಾರವ್ಯಾಸನ ಆರಾಧ್ಯದೈವ ಗದಗಿನ ವೀರನಾರಾಯಣ .

Kouravendrana Konde Neenu Notes best notes in kannada

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *