ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

1st Puc Kannada Vachanagalu Notes , vachanagalu kannada notes class 11, 1 puc kannada vachanagalu notes pdf, 1st puc kannada vachanagalu questions and answers, 1st puc kannada allama prabhu notes, ಪ್ರಥಮ ಪಿ ಯು ಸಿ ಕನ್ನಡ ವಚನಗಳು ನೋಟ್ಸ್, ಪ್ರಥಮ ಪಿಯುಸಿ ವಚನಗಳು

1st Puc Kannada Vachanagalu Notes

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes
ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

ಒಂದು ವಾಕ್ಯದಲ್ಲಿ ಉತ್ತರಿಸಿ .

ದೇಹವೆಂಬುದೇನು ?

ದೇಹವೆಂಬುದು ಬಂಡಿ

ಇಟ್ಟ ಕಲ್ಲು ಎಲ್ಲಿ ಸಿಕ್ಕರೆ ಲಿಂಗವೆಂದು ಕೇಳುತ್ತಾನೆ ?

ಇಟ್ಟ ಕಲ್ಲು ಮಳೆಯಲ್ಲಿ ಸಿಕ್ಕರೆ ಅದು ಲಿಂಗವೆಂದು ಕೇಳುತ್ತಾರೆ .

ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಕಾಲುಗಳನ್ನು ಗಾಲಿಗಳಿಗೆ ಹೋಲಿಸಲಾಗಿದೆ .

ಅಲ್ಲಮಪ್ರಭುವಿನ ಅಂಕಿತ ಯಾವುದು ?

“ ಅಲ್ಲಮ ಪ್ರಭುವಿನ ಅಂಕಿತ , “ ಗುಹೇಶ್ವರಾ.

ಕಟ್ಟೋಗರದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ ?

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯನ್ನು ಕಟ್ಟಲಾಗಿದೆ .

ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?

ಹಸಿದಾಗ ಒಂದು ತುತ್ತಾದರೂ ಅನ್ನ ನೀಡಬೇಕೆಂದು ಅಲ್ಲಮ ಹೇಳುತ್ತಾನೆ .

ಹೆಚ್ಚುವರಿ ಪ್ರಶ್ನೋತ್ತರಗಳು

ಬಂಡಿಯನ್ನು ಹೊಡೆವವರು ಯಾರು?
ಬಂಡಿಯನ್ನು ಹೊಡೆವವರು ಪಂಚೇಂದ್ರಿಯಗಳೆಂಬ ಐವರು ಮಾನಿಸರು.

ಎಂತಹವರನ್ನು ಕಂಡು ನಾಚುವುದಾಗಿ ಪ್ರಭು ಹೇಳಿದ್ದಾರೆ?
ತೋರಿಕೆಯ ಭಕ್ತಿಗೆ ಲಿಂಗ ಧರಿಸಿ ಓಡಾಡುವರರನ್ನು ಕಂಡು ನಾಚುವುದಾಗಿ ಪ್ರಭುವು ಹೇಳಿದ್ದಾರೆ.

ದೇವನಾಗಿದ್ದರೆ ಏನು ಮಾಡಬೇಕೆಂದು ಪ್ರಭುಗಳ ಅಪೇಕ್ಷೆ?
ದೇವನಾಗಿದ್ದರೆ ಅವನು ಎಲ್ಲರನ್ನು ಸಲಹಬೇಕು ಎಂಬುದು ಪ್ರಭುಗಳ ಅಪೇಕ್ಷೆ,

ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ?
ದೇಹ ನೀರಡಿಕೆಗೆ ಒಳಗಾದಾಗ ಅರೆದು ಕುಡಿತ ಉದಕವನ್ನೆರೆವುದರಿಂದ, ಬಂದುರುತು ಅನ್ನ (ಓಗರ)ವನ್ನು ನೀಡಿ ಆರೈಕೆ ಮಾಡುವುದರಿಂದಾಗಿ ಹಸಿದಾಗ ಒಂದು ತುತ್ತು ಅನ್ನ (ಓಗರ)ವನ್ನು ನೀಡಿ ಆರೈಕೆ ಮಾಡುವುದರಿಂದಾಗಿ ‘ನಾ ದೇವ’ ದೇವರಿಗೆ ಹೇಳಿದ್ದಾನೆ.

ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು?
ಆಡಂಬರ ಮತ್ತು ಯಾಂತ್ರಿಕ ಭಕ್ತರನ್ನು ಅಲ್ಲಮಪ್ರಭುವು ಅಂಗದ ಮೇಲೆ ಲಿಂಗವ ಧರಿಸಿ, ಅಂತರಂಗ ಭಕ್ತಿಯಿಲ್ಲದೆ ಮೆರೆವವರನ್ನು ಕಂಡರೆ ತಾವು ನಾಚುವುದಾಗಿ ಅಲ್ಲಮಪ್ರಭುವು ಹೇಳುವನು.

ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?
ದೇಹವನ್ನು ತುಂಬಿದ ಬಂಡಿಗೆ ಹೋಲಿಸಲಾಗಿದೆ ಮತ್ತು ಕಾಲುಗಳನ್ನು ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ.

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes
ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

ಐದಾರು ವಾಕ್ಯಗಳಲ್ಲಿ ಉತ್ತರಿಸಿ:

ಅಲ್ಲಮಪ್ರಭುವಿನ ವಚನಗಳ ಆಶಯವೇನು?

ಹನ್ನೆರಡನೆಯ ಶತಮಾನದ ಮುಖ್ಯ ವಚನಕಾರರೆನಿಸಿರುವ ಅಲ್ಲಮಪ್ರಭುಗಳ ವಚನಗಳಲ್ಲಿ ತಾನು ಪಡೆದ ಲೋಕ ಶುಭವವನ್ನು ಇತರರಿಗೆ ಹಂಚುವ ಆಶಯಗಳಿವೆ. ಅವರು ತಮ್ಮ ಮೊದಲ ವಚನದಲ್ಲಿ ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ.

ಅಲ್ಲದೆ ದೇಹವೆಂಬ ಬಂಡಿಯನ್ನು ಸವಾರಿ ಮಾಡುವ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಮನುಷ್ಯ ವಿನಾಶದಂಚಿಗೆ ಸಾಗುತ್ತಾನೆಂದಿದ್ದಾರೆ. ತಮ್ಮ ಮತ್ತೊಂದು ವಚನದಲ್ಲಿ ಪ್ರಭುಗಳು ಆಡಂಬರದ ತೋರಿಕೆಯ ಭಕ್ತಿಯನ್ನು ಖಂಡಿಸಿರುವರಲ್ಲದೆ ಅಂತರಂಗದ ಭಕ್ತಿಯ ಅಗತ್ಯವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. ನಮ್ಮನ್ನು ಸಲಹುವ ದೈವದ ಬಗ್ಗೆ ಮಾರ್ಮಿಕವಾಗಿ ಹೇಳಿ, ದುಡಿದು ತಿನ್ನುವ,, ಅನ್ನವನ್ನು ಸಂಪಾದಿಸುವ ಕಾಯಕದ ದಾರಿಯನ್ನು ದೇವರೆಂದು ಸಾರಿದ್ದಾರೆ. ಹೀಗೆ ಪ್ರಭುವು ಸಮಾಜದ ಸ್ವಾಸ್ಥವನ್ನು ಕೊಂಡಾಡಿದ್ದಾನೆ

ಆಡಂಬರದ ಭಕ್ತಿಯನ್ನು ಅಲ್ಲಮ ಹೇಗೆ ಖಂಡಿಸುತ್ತಾರೆ?

ಆಡಂಬರದ ಭಕ್ತಿಯನ್ನು ಅಲ್ಲಮಪ್ರಭುವು ‘ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿ’ ಎಂಬ ವಚನದಲ್ಲಿ ತೀಕ್ಷ್ಮವಾಗಿ ವಿಡಂಬಿಸಿದ್ದಾರೆ. ಹಸಿವಾದವನಿಗೆ ಹೊಟ್ಟೆಯ ಒಳಭಾಗಕ್ಕೆ ಆಹಾರವನ್ನು ಪೂರೈಸಬೇಕೇ ಹೊರತು, ಹಸಿದವನ ಹೊಟ್ಟೆಗೆ ರುಚಿಯಾದ ಭಕ್ಷದ ಪೊಟ್ಟಣವನ್ನು ಕಟ್ಟಿದರೆ ಅವನ ಹಸಿವೆ ನೀಗುವುದಿಲ್ಲ. ಇದರಂತೆಯೇ ನಿಜವಾದ ಭಕ್ತಿ ಎಂಬುದು

ಮನುಷ್ಯನ ಮನಸ್ಸಿನೊಳಗಿರಬೇಕು. ಅಂತರಂಗದ ಭಕ್ತಿಮುಖ್ಯವೇ ಹೊರತು, ತೋರಿಕೆಗೆ ಲಿಂಗವನ್ನು ಅಂಗದಲ್ಲಿ ಧರಿಸಿಕೊಂಡು ತಿರುಗುವವನನ್ನು ನಿಜಭಕ್ತ ಎನ್ನಲಾಗದು. ಅವನ ಅಂಗದ ಮೇಲೆ ಇರುವ ಲಿಂಗ ಮೆಳೆಯ ಮೇಲಿನ ಕಲ್ಲಿದ್ದಂತೆ. ಇಟ್ಟ ಕಲ್ಲು ಮೆಳೆಯನ್ನು ಭಕ್ತನನ್ನಾಗಿಸುವುದಿಲ್ಲ. ಹೀಗೆಯೇ ಆಡಂಬರದ ಭಕ್ತನೂ ನಿಜಭಕ್ತನೆನಿಸುವುದಿಲ್ಲ ಎಂದು ಅಲ್ಲಮಪ್ರಭುಗಳು ತೋರಿಕೆಯ ಆಡಂಬರದ ಭಕ್ತನನ್ನು ಭಕ್ತಿಯನ್ನು ಖಂಡಿಸಿರುವರು.

ದೇಹವೆಂಬ ಬಂಡಿಯನ್ನು ಹೇಗೆ ನಡೆಸಬೇಕೆಂದು ತಿಳಿಸಲಾಗಿದೆ?

ಅಲ್ಲಮಪ್ರಭು ವಿಶಿಷ್ಟ ವಚನಕಾರನೆನಿಸಿದವರು. ಅವರು ತಮ್ಮ ಒಂದು ವಚನದಲ್ಲಿ ದೇಹವನ್ನು ತುಂಬಿದ ಬಂಡಿಗೂ, ಕಾಲುಗಳನ್ನು ಬಂಡಿಯ ಗಾಲಿಗಳಿಗೂ ಹೋಲಿಸಿದ್ದಾರೆ. ತುಂಬಿದ ಬಂಡಿಗೆ ಗಾಲಿಗಳಿರಬೇಕು, ಅದಕ್ಕೆ ಸವಾರನೂ ಬೇಕಲ್ಲವೆ? ಮನುಷ್ಯನ ಪಂಚೇಂದ್ರಿಯಗಳೇ ದೇಹವೆಂಬ ಗಾಡಿಯ ಸವಾರರು. ಅವು ಒಂದಕ್ಕೊಂದು ಅಸಮಾನವಾದವು. ಮನುಷ್ಯನಾದವನು ಪಂಚೇಂದ್ರಿಯಗಳ ದಾಸನಾಗಿ ಐಹಿಕ ಸುಖದಲ್ಲಿ ಮುಳುಗಬಾರದು. ಹೀಗೆ ಮಾಡಿದರೆ ಅವನ ವ್ಯಕ್ತಿತ್ವ ಅಧಃಪತನಗೊಳ್ಳುತ್ತದೆ. ಪಂಚೇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಸಂಯಮದಿಂದ ಬಾಳುವೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರವೇ ದೇಹವೆಂಬ ಬಂಡಿ ಮುಂ ಚಲಿಸಿ, ಗುರಿ ತಲುಪುತ್ತದೆ. ಇಲ್ಲವಾದರೆ ನಾಶವಾಗುತ್ತ ಂಬ ಅಭಿಪ್ರಾಯವನ್ನು ಅಲ್ಲಮಪ್ರಭು ಗಳು ನಿರೂಪಿಸಿದ್ದಾರೆ.

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes
ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

ಸಂದರ್ಭ ಸೂಚಿಸಿ, ಸ್ವಾರಸ್ಯವನ್ನು ವಿವರಿಸಿ:

“ಮಳೆ ಭಕ್ತನೆ? ಇಟ್ಟಾತ ಗುರುವೆ?”
ಅಲ್ಲಮಪ್ರಭುವು ಬರೆದಿರುವ ‘ಹೊಟ್ಟೆಯ ಮೇಲೆ ಕಟ್ಟೋರಗದ…’ ಎಂಬ ಸುಪ್ರಸಿದ್ಧ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಅಲ್ಲಮಪ್ರಭುವು ಈ ವಚನದಲ್ಲಿ ಆಡಂಬರದ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿದ್ದಾರೆ. ಅಂಗದ ಮೇಲೆ ಲಿಂಗವನ್ನು ಧರಿಸಿದ ಮಾತ್ರಕ್ಕೆ ಅವನು ಭಕ್ತನೆನಿಸುವುದಿಲ್‌ಲ.

ಮೆಳೆಯ ಮೇಲೆ ಕಲ್ಲು ಬಿದ್ದ ಮಾತ್ರಕ್ಕೆ ಆ ಬೆಳೆಯನ್ನು ಭಕ್ತನೆನ್ನುವುದಿಲ್ಲ, ಅಂತೆಯೇ ಕಲ್ಲನ್ನು ಮೆಳೆಗೆ ಎಸೆದವನು ಗುರುವಾಗಿ ಬಿಡುವುದಿಲ್ಲ. ಅಂತರಂಗದಲ್ಲಿ ಭಕ್ತಿಯ ಒರತೆಯಿಲ್ಲದೆ ಲಿಂಗಕಟ್ಟಿಕೊಂಡು ತಿರುಗುವ ಡಾಂಭಿಕ ಭಕ್ತನಿಗೂ ಮೆಳೆಯ ಮೇಲಿನ ಕಲ್ಲಿಗೂ ಯಾವ ವ್ಯತ್ಯಾಸವೂ ಇಲ್ಲ ಎಂದು ಪ್ರಭುವು ತೋರಿಕೆಯ ಭಕ್ತಿಯನ್ನು ಖಂಡಿಸಿದ್ದಾರೆ. ಮಾತ್ರವಲ್ಲ ಅಂತರಂಗದ ನಿಜಭಕ್ತಿಯ ಅಗತ್ಯವನ್ನು ಒತ್ತಿ ಹೇಳಿರುವರು.

“ಬಂಡಿಯ ಹೊಡೆವವವರೂ ಮಾನಿಸರು.”

೧೨ನೇ ಶತಮಾನದ ಶ್ರೇಷ್ಠ ಅನುಭಾವಿ ವಚನಕಾರರೆನಿಸಿರುವ ಅಲ್ಲಮಪ್ರಭುವು ಬರೆದಿರುವ ವಚನವೊಂದರಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಅಲ್ಲಮಪ್ರಭುವು ಈವಚನದಲ್ಲಿ ದೇಹವನ್ನು ಬಂಡಿಗೆ ಹೋಲಿಸಿದ್ದಾನೆ. ಅಂತೆಯೇ ಬಂಡಿಯನ್ನು ಹೊಡೆಯುವವರು, ಸವಾರಿ ಮಾಡುವವರೆಂದರೆ ಮನ ಪಂಚೇಂದ್ರಿಯಗಳೆಂಬುದು ಅವರ ಅಭಿಪ್ರಾಯವಾಗಿದೆ ಮೂಲಕ ಸಿಗುವ ಐಹಿಕ ಸುಖಕ್ಕೆ ಮನುಷ್ಯ ಇ ಬಲಿಯಾದರೆ ಅನಾಹುತಕ್ಕೆ ಎಡೆಮಾಡಿಕೊಟ್ಟಂತೆ. ಅವುಗಳನ್ನು ಕೊಂಡರಷ್ಟೇ ನಾವು ಇಹವನ್ನು ಗೆಲ್ಲಬಹು ಪ್ರಭುವು ಈ ಮೇಲಿನ ವಾಕ್ಯವನ್ನು ಹೇ ವಿವರಿಸುವ ಸಂದರ್ಭದಲ್ಲಿ

“ನೀ ದೇವನಾದಡೆ ಎನ್ನನೇಕೆ ಸಲಹೆ?”

ಅಲ್ಲಮಪ್ರಭುಗಳು ಬರೆದಿರುವ ‘ನಾ ದೇವನಲ್ಲದೆ ನೀ ದೇವನೆ?’ ಎಂಬ ವಚನದಿಂದ ಈ ಮೇಲಿನ ವಾಕ್ಯವನ್ನು ಆಯ್ದು ಕೊಳ್ಳಲಾಗಿದೆ. ಪ್ರಶ್ನಿಸುವ, ನಾನೇ ದೇವರೆನ್ನುವ ಧೈರ್ಯವನ್ನು ಈ ವಚನರ ಅಲ್ಲಮಪ್ರಭುಗಳು ತೋರಿರುವರು.
ದೇವರ ಕೆಲಸ ಎಲ್ಲರನ್ನೂ ಸಲಹಬೇಕಾದು ಸಲಹಲಿಲ್ಲ. ನಾನೇ ಹಸಿವೆ-ನೀರಡಿ ನಾನೇ ದೇವರು. ನೀನು ದೇವರನ್ನು ಅಲ್ಲಮಪ್ರ ಆದರೆ ದೇವರು ನನ್ನನ್ನು ಗಳನ್ನು ಪೂರೈಸಿಕೊಳ್ಳುತ್ತಿರುವುದರಿಂದ ದೇವರಾಗಿದಿದ್ದರೆ ನನ್ನನ್ನು ಸಲಹುತ್ತಿಲ್ಲವೇಕೆ? ಎಂದು ಗಳು ಪ್ರಶ್ನಿಸಿರುವ ಸಂದರ್ಭವಿದಾಗಿದೆ.

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ । 1st Puc Kannada Vachanagalu Notes

ಕವಿ ಪರಿಚಯ

ಘಟ್ಟಿವಾಳಯ್ಯ’ಚಿಕ್ಕಯ್ಯಪ್ರಿಯ ಸಿದ್ದಲಿಂಗ’ ಎಂಬ ಅಂಕಿತದಿಂದ ವಚನಗಳನ್ನು ರಚಿಸಿರುವ ಘಟ್ಟಿವಾಳಯ್ಯನವರ ಮೂಲ ಹೆಸರು ಮುದ್ದಣ್ಣ ಎಂಬುದು. ಇವರು ಮಹಾಶಿವಭಕ್ತರು. ತಮ್ಮ ಸದಾಚಾರದ ವರ್ತನೆಯಿಂದ ಅನೇಕ ಕಪಟಿಗಳ ಮನಸ್ಸನ್ನು ಪರಿವರ್ತಿಸಿ ಅವರನ್ನು ನಿಜವಾದ ಜಂಗಮರನ್ನಾಗಿಸಿದ ಕೀರ್ತಿ

ಘಟ್ಟಿವಾಳಯ್ಯನವರಿಗೆ ಸಲ್ಲುತ್ತದೆ. ಶಿವನ ವಿಚಾರಗಳನ್ನು ನರ್ತನದ ಮೂಲಕ ಪ್ರಚಾರ ಮಾಡುತ್ತಿದ್ದ ಇವರು ನರ್ತಿಸುತ್ತಿರುವಾಗಲೇ ಕೊನೆಯುಸಿರೆಳೆದರೆಂಬ ಪ್ರತೀತಿಯಿದೆ. ತಮ್ಮ ವಚನಗಳಲ್ಲಿ ಭಕ್ತರಂತೆ ನಟಿಸುವ ಡಾಂಭಿಕರ ನಡೆವಳಿಕೆಯನ್ನು ಇವರು ಖಂಡಿಸಿದ್ದಾರೆ. ಇವರು ಬರೆದಿರುವ ವಚನಗಳಲ್ಲಿ ಕೆಲವು ಮಾತ್ರ ಉಪಲಬ್ದವಿದೆ.

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *