ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

Duryodhana Vilapa 1st Puc Kannada Notes , ದುರ್ಯೋಧನ ವಿಲಾಪ ನೋಟ್ಸ್‌, ಪ್ರಥಮ ಪಿ.ಯು.ಸಿ ದುರ್ಯೋಧನ ವಿಲಾಪ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st Puc Duryodhana Vilapa Kannada Notes Question Answer Summary Mcq Pdf Download in Kannada Medium Karnataka State Syllabus 2023 Kseeb Solutions For Class 1 Kannada Chapter 1 Notes Duryodhana Vilapa Notes Duryodhana Vilapa Summary in Kannada pdf Duryodhana Vilapa question and answer 1st Puc Kannada Chapter 1 Question Answer, 1st puc kannada duryodhana vilapa bhavartha

Duryodhana Vilapa 1st Puc Kannada Notes

ದುರ್ಯೋಧನ ವಿಲಾಪ ಪಾಠದ ಪ್ರಶ್ಣೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes
ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ಒಂದು ವಾಕ್ಯದಲ್ಲಿ ಉತ್ತರಿಸಿ .

ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?

ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ .

ಹರಿಯು ಕರ್ಣನಿಂದ ಬೇಡಿದೇನು ?

ಹರಿಯು ಕರ್ಣನಿಂದ ಬೇಡಿದ್ದು ‘ ಕವಚವನ್ನು

ಅಂಗಾಧಿಪತಿ ಯಾರು ?

ಅಂಗಾಧಿಪತಿ ಕರ್ಣ

ಪಿನಾಕ ಪಾಣಿ ಎಂದರೆ ಯಾರು ?

ಪಿನಾಕ ಎಂಬ ದನಸ್ಸನ್ನು ಹಿಡಿದಿರುವ “ ಶಿವ ”

ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?

ತಂದೆಗೆ ಜಲಾಂಜಲಿಯನ್ನು ಮಗನು ಕೊಡಬೇಕು .

ಚಕ್ರವ್ಯೂಹವನ್ನು ರಚಿಸಿದವರು ಯಾರು ?

ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು .

ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು ?

ರಣರಂಗದಲ್ಲಿ ಸಾಗುವಾಗ ದುರ್ಯೋಧನನು ಸಂಜಯನ ನೆರವನ್ನು ಅವಲಂಬಿಸಿದ್ದನು .

ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?

ಕುರುಪತಿ ರಣರಂಗದಲ್ಲಿ ( ಬಾರಿಗಾತ್ರದ ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು .

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes
ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ. Duryodhana Vilapa 1st Puc Kannada Notes

ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು ?

ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರವು “ ಅರ್ಧ ಮುಚ್ಚಿದ ಕಣ್ಣು , ಉತ್ಸಾಹದಿಂದ ಅರಳಿದ ಮುಖ , ಕತ್ತರಿಸಿ ಹೋದ ಕೈಗಳು , ಬಭೀಕರವಾಗಿ ಕಚ್ಚಿದ ಅವುಡು ಸಹಿತವಾಗಿ ಶತ್ರು ಬಾಣ ಪ್ರಹಾರದಿಂದ ಮೈಯೆಲ್ಲ ಕಡಲಲ್ಲಿ ಮುಳುಗಿ ಬಿದ್ದು ಬೀಭತ್ಯಕರವಾಗಿ ಕಾಣುತ್ತಿತ್ತು . ” ಜರ್ಜರಿತವಾಗಿ ಬಿಸಿರಕ್ತದ ಕಡಲಲ್ಲಿ ಮುಳುಗಿ ಬಿದ್ದು ಭೀಭತ್ಯಕರವಾಗಿ ಕಾಣುತ್ತಿತ್ತು.

ದುರ್ಯೋಧನನು ಕರ್ಣನ ದಾನ ಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ . ?

Ans: ಅಂಗರಾಜಾ , ಇಂದ್ರನು ಬಂದು ಬೇಡಿದಾಗ ನಿನ್ನ ಸ್ವಾಬಿಕವಾದ ತನ್ನ ಕವಚನ್ನು ಕೊಟ್ಟೆ ಕುಂತಿ ಬಂದು ಬೇಡಿದಾಗ ಅನುಮಾನಕ್ಕೆ ಆಸ್ಪರದಕೊಡದೆ ಸ್ವಲ್ಪವೂ ಯೋಚಿಸದೆ ಮಂತ್ರಾಸ್ತ್ರಗಳನ್ನು ನೀಡಿದೆ ಎಂಬುದಾಗಿ ದುರ್ಯೋಧನನು ಕರ್ಣನ ದಾನ ಗುಣವನ್ನು ಹೊಗಳಿದ್ದಾನೆ .

ದುರ್ಯೋಧನನನು ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆ ಪಡುತ್ತಾನೆ ?

ದುರ್ಯೋಧನನು ತನ್ನ ಮಗನ ಶವವನ್ನು ಕಂಡಾಗ ಅವನ ಕೈಯಲ್ಲಿದ್ದ ಆಯುಧ ಬಿದ್ದು ಹೋಯಿತು . ಹೃದಯದಲ್ಲಿದ್ದ ಯುದ್ಯೋತ್ಸಾಹ ಜರನೆ ಇಳಿದು ಹೋಯಿತು. ಕಣ್ಣಿನಿಂದ ನೀರು ( ಕಣ್ಣೀರು ) ಸುರಿಯತೊಡಗಿತು . ತಂದೆಗೆ ಎಳ್ಳು ನೀರು ತರ್ಪಣ ಬಿಡಬೇಕಾದುದು ರೂಡಿ , ಅದಕ್ಕೆ ವ್ಯತಿರಿಕ್ತವಾಗಿ ನಾನು ನಿನಗೆ ತರ್ಪಣ ಬಿಡುವಂತಾಯಿತೆ . ನೀನು ಹೀಗೆ ಕ್ರಮ ವ್ಯತ್ಯಾಸಗೊಳಿಸಬೇಕೆ ? ಎಂದು ದುರ್ಯೋಧನನು ಮಗನ ಶವವನ್ನು ಕಂಡು ಮರುಗಿದನು .

ಕರ್ಣನ ಜನ್ಮ ರಹಸ್ಯವನ್ನು ಯಾರು ಯಾರು ಅರಿತಿದ್ದರು ?

ಕರ್ಣನ ಜನ್ಮರಹಸ್ಯವನ್ನು ಕುಂತಿ , ಕೃಷ್ಣ , ಸೂರ್ಯದೇವ ಹಾಗೂ ದಿವ್ಯಜ್ಞಾನಿಯಾದ ಸಹದೇವನು ತಿಳಿದಿದ್ದನು .

ದುಶ್ಯಾಸನನು ಅಣ್ಣನಿಗೆ ತೋರಿದ ವಿನಯ ಶೀಲತೆ ಯಾವುದು ?

ಚಿಕ್ಕಂದಿನಿಂದ ಸಯುವವರೆಗೂ ದುಶ್ಯಾಸನನು ಅಣ್ಣನಿಗೆ ಎಲ್ಲೆಲ್ಲಿಯೂ ವಿನಯವನ್ನು ತೋರಿದ್ದನು ತಾಯಿಯ ಎದೆ ಹಾಲು ಕುಡಿಯುವದರಲ್ಲಿ , ಸೋಮರಸವನ್ನು, ಉತ್ತಮವಾದ ಭೋಜನವನ್ನು ಸೇವಿಸುವುದರಲ್ಲಿ ಅಣ್ಣನ ಬಳಿಕವೇ ದುಶ್ಯಾಸನನು ಸೇವಿಸುತ್ತಿದ್ದನು . ಹೀಗೆ ದುಶ್ಯಾಸನು , ಅಣ್ಣನಿಗೆ ಬಹಳ ವಿಧೇಯನಾಗಿ , ವಿನಯಶೀಲತೆಯನ್ನು ತೋರಿದನು .

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes
ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ. Duryodhana Vilapa 1st Puc Kannada Notes

ಕರ್ಣನ ಉದ್ದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?

ಕರ್ಣನು ಉದಾತ್ತ ಗುಣಗಳನ್ನು ಹೊಂದಿದವನು , ಅದನ್ನು ಕಂಡು ಆತನ ಆಪ್ತ ಮಿತ್ರನಾದ ದುರ್ಯೋಧನನು ಮನಸಾರೆ ಕೊಂಡಾಡಿದ್ದಾನೆ . “ ನಾನು ದುಶ್ಯಾಸನ ಹಾಗೂ ನೀನು ಮೂವರು ಒಂದು ಜೀವವಾಗಿ ಇದ್ದವರು ಆತನು ಹೋದ ಬಳಿಕ ನಾನು , ನೀನು ಇಬ್ಬರೆ ಆಗಿದ್ದೆವು . ಅಂಗರಾಜಾ ಈಗ ನೀನು ಕೂಡ ಬಿಟ್ಟು ಎಲ್ಲಿಗೆ ಹೋದೆ ? -ನಿನ್ನ ಗೆಳೆಯ ‘ ಈ ಸುಯೋಧನನನ್ನು ನೋಡದೆ , ಮಾತನಾಡಿದೆ , ಅಪ್ಪಿಕೊಳ್ಳದೆ , ಅಪ್ಪಣೆಯೇನೆಂದು ಕೇಳದೆ , ಜೀಯಾ ಎನ್ನದೆ , ದೇವಾ ಎನ್ನದೆ , ಏಕೆ ಮಾತನಾಡದಿರುವೆ ಕರ್ಣ . ನೀನಿರುವ ದೇಶದಲ್ಲಿ ಸುಳ್ಳು , ಲೋಭ , ಭಯ ಎಂಬುದು ಇರಲಿಲ್ಲ . ಸತ್ಯ ತ್ಯಾಗ , ಪರಾಕ್ರಮ ಎಂಬುದಕ್ಕೆ ನೀನೆ ಅಗ್ರಗಣ್ಯ , ಅಂಗರಾಜಾ , ಇಂದ್ರನು ಬೇಡಿದಾಗ ನಿನ್ನ ಸಹಜ ಕವಚವನ್ನು ಕೊಟ್ಟೆ , ಕುಂತಿ ಬೇಡಿ ಬಂದಾಗ ಅನುಮಾನಿಸದೆ ಮಂತ್ರಾಸ್ತ್ರಗಳನ್ನೇ ಕೊಟ್ಟು ನೀನು ಸಹಜ ಶೂರನೂ ಹೌದು , ಮಹಾವೀರನೂ ಹೌದು , ಎಂಬುದಾಗಿ ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನನು ಕೊಂಡಾಡಿದ್ದಾನೆ .

ದುರ್ಯೋಧನನು ದುಶ್ಯಾಸನನ್ನು ಕಂಡು ವ್ಯಕ್ತ ಪಡಿಸಿದ ಭಾವನೆಗಳು ಯಾವುವು ?

ದುರ್ಯೋಧನನು ದುರ್ಯೋಧನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳೆಂದರೆ “ ನಿನ್ನನ್ನು ಕೊಂದವನು ಇನ್ನೂ ಬದುಕಿದ್ದಾನೆ , ಕೊಂದವನನ್ನೇ ಹೊಡೆದು ಕೊಲ್ಲದೆ ಬಿಟ್ಟ ನಾನು ಕೂಡ ಇನ್ನೂ ಜೀವಂತವಾಗಿ ಉಳಿದಿದ್ದೆನೆ , ನಿನ್ನ ಪ್ರೀತಿಗೂ , ನನ್ನ ಕುಟುಂಬ ವಾತ್ಸಲ್ಯಕ್ಕೂ ಇದು ಯೋಗ್ಯವೇ ? ” ತಾಯಿ ಎದೆ ಹಾಲನ್ನು ನಾನು ಮೊದಲುಂಡ ಬಳಿಕ , ನೀನು ಉಂಡೆ , ಸೋಮರಸವನ್ನು ಉತ್ತಮವಾದ ಬೋಜನವನ್ನು ನಾನು ಸೇವಿಸಿದ ಬಳಿಕವೇ ನೀನು ಸವಿದೆ . ಬಾಲ್ಯದಿಂದ ಇಂದಿನವರೆವಿಗೆ ಎಲ್ಲೆಲ್ಲಿಯೂ ನೀನು ವಿನಯವನ್ನು ಮೀರಿ ನಡೆದವನಲ್ಲ . ದುಶ್ಯಾಸನಾ , ಮರಣದ ವಿಷಯದಲ್ಲಿ ಮಾತ್ರ ನನಗಿಂತ ಮುಂದೆ ನೀನೆ ಹೋದೆಯಲ್ಲ . ಇದೊಂದರಲ್ಲಿ ಕ್ರಮ ತಪ್ಪಿತು , ಎಂಬುದಾಗಿ ತನ್ನ ಭಾಗವನೆಗಳನ್ನು ವ್ಯಕ್ತಪಡಿಸಿದನು .

ದುರ್ಯೋಧನನು ರಣರಂಗದಲ್ಲಿ ನಡೆದುಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾರೆ ?

ದುರ್ಯೋದನನು ರಣರಂಗದಲ್ಲಿ ನಡೆದು ಬರುತ್ತಿರಲು , ಕಾಲಿಡಲು ಕೂಡ ಆತನಿಗೆ ಸ್ಥಳವಿರಲಿಲ್ಲ . ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದ ಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳಿಗೆ ಚುಚ್ಚುತ್ತಿದ್ದವು , ಕಾಲಿಡುವುದನ್ನು ನೆಲಕಾಣದ ಬಾರಿಹೆಣಗಳ ರಾಶಿಯ ಮೇಲೆಯೇ ಕಾಲಿಟ್ಟು ನಡೆಯುತ್ತಿದ್ದನು . ಆನೆ ಹೆಣಗಳ ಬೆಟ್ಟವನ್ನೇರಿ , ರಕ್ತದನದಿಗಳನ್ನು ದಾಟಿ , ಆನೆ ಸೊಂಡಿಲೆಂಬ ಕರಿ ಬಳ್ಳಿಗಳ ಕಾಡಿನಲ್ಲಿ ಸಿಲುಕಿ , ಸಂಜಯನ ಹೆಗಲನ್ನು ಆದರಿಸಿಕೊಂಡು ರಣರಂಗದಲ್ಲಿ ನಡೆಯುತ್ತಿದ್ದನು ಎಂಬುದಾಗಿ ಕವಿ ರಣರಂಗದ ಬೀಭತ್ಯಕರ ದೃಶ್ಯವನ್ನು ವರ್ಣಿಸಿದ್ದಾನೆ .

ದ್ರೋಣನ ಕಳೆಬರವನ್ನು ಕಂಡು ದುರ್ಯೋಧನ ಹೇಗೆ ದು : ಖಿಸುತ್ತಾನೆ ?

ದ್ರೋಣನ ದೇಹವು ಬಾಣ ಸಮೂಹಗಳಿಂದ ನಜ್ಜು ಗುಜ್ಜಾಗಿತ್ತು ದ್ರೋಣಾಚಾರ್ಯ ನನ್ನು ಕಾಣುತ್ತಲೆ , – ಆಚಾರ್ಯ ನಿಮ್ಮ ಧರ್ನು ವಿದ್ಯಾ ಕೌಶಲ್ಯವನ್ನು ಎಲ್ಲರು ಬಲ್ಲರು , ಅರ್ಜುನನ ಏನು , ಸ್ವತ : ಪಿನಾಕ ಎಂಬ ಧನಸ್ಸನ್ನು ಹಿಡಿದು ಬಂದ ಶಿವನು ಕೂಡ ನಿಮ್ಮೊಡನೆ ಯುದ್ಧ ಮಾಡಿ ಗೆಲ್ಲಲಾರನು ಅಂಥಹುದರಲ್ಲಿ ನಿಮಗೆ ಇಂತಹ ಮರಣ ವೇ ? ಇದಕ್ಕೆ ತಮ್ಮ ಉದಾಸೀನತೆ ಕಾರಣವೋ ಅಥವಾ ಆ ತನ್ನ ಕರ್ಮವೋ ಅದಕ್ಕೆ ನಿಮಗೆ ನಿಷ್ಕಾರಣಾವಾಗಿ ಸಾವು ಒದಗಿಬಂತೋ ಎಂಬುದಾಗಿ ದುಃಖಿಸುತ್ತಾನೆ .

ಅಭಿಮನ್ಯುವಿನ ಶೌರ್ಯ ಸಹಸವನ್ನು ದುರ್ಯೋಧನನು ಹೇಗೆ ಹೊಗಳುತ್ತಾನೆ . ?

ಅಭಿಮನ್ಯುವಿನ ಶೌರ್ಯ ಸಾಹಸವನ್ನು ದುರ್ಯೋಧನನನ್ನು ಬಹಳವಾಗಿ ಹೊಗಳಿದ್ದಾನೆ . ಗುರು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವುದು ಬೇರೆ ಯಾರಿಗೂ ಸಾಧ್ಯವಾಗಿರಲಿಲ್ಲ . ಅದನ್ನು ಭೇದಿಸಿ ಹೊಕ್ಕು , ರಣರಂಗದಲ್ಲಿ ಶತ್ರು ರಾಜರನ್ನು ಹೊಡೆದು ಕೊಂದ ಅರ್ಜುನನ ಪುತ್ರನೇ , ನಿನಗೆ ಸರಿಸಾಟಿ ಯಾರು ಇಲ್ಲ . ಅದ್ವಿತೀಯ ಬಲಶಾಲಿಯಾದ ಅಭಿಮನ್ಯು ಕುಮಾರನೇ ನಿನ್ನ ಪರಾಕ್ರಮ , ಇತರರಿಗೆ ಅಸಾಧ್ಯ . ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ ನಿನ್ನ ಸಹವಾಸದಲ್ಲಿ ಒಂದಂಶವಾದರು ನಮ್ಮಲ್ಲಿದ್ದರೆ ಅದಕ್ಕೆ ಅನುಗುಣವಾದ ವೀರ ಮರಣ ನಮಗೆ ಒದಗಿ ಬರಲಿ ಎಂದು ದುರ್ಯೋಧನನು ಹೇಳಿದನು .

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes
ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ಸಂದರ್ಭ ಸೂಚಿಸಿ, ಸ್ವಾರಸ್ಯವನ್ನು ವಿವರಿಸಿ Duryodhana Vilapa 1st Puc Kannada Notes

“ಆನರಿವೆಂ ಪೃಥೆಯರಿವಳ್.”
ವಿಜಯಂ’ದಿಂದಾ ಕವಿ ರನ್ನನ ಮೇರು ಕಾವ್ಯವಾದ ‘ಸಾಹಸ ಭೀಮ ವಿಜಯಂ’ದಿಂ ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಕರ್ಣನ ಶವದ ಮುಂದೆ ದುರ್ಯೊಧನ ಆಡುತ್ತಾನೆ.
ಕರ್ಣನಿಗೆ ತಾನು ಕುಂತಿಯ ಮಗನೆಂಬ ವಿರಲಿಲ್ಲ. ಆದರೆ ದುರ್ಯೋಧನನಿಗೆ ಅದರ ಅರಿವಿತ್ತು. ಕರ್ಣನ ಮರಣದ ನಂತರ ದುರ್ಯೋಧನ ಈಗ ಆ ಸಂಗತಿಯನ್ನು ಸ್ಮರಿಸಿಕೊಂಡು “ನೀನು ಯಾರ ಮಗನೆಂಬ ಅರಿವು ಕುಂತಿಗಿತ್ತು. ನನಗೂ ಈ ಸಂಗತಿ ತಿಳಿದಿತ್ತು. ನಿನ್ನ ತಂದೆಯಾದ ಸೂರ್ಯ, ಶ್ರೀಕೃಷ್ಣ ಮತ್ತು ದಿವ್ಯಜ್ಞಾನಿಯಾದ ಸಹದೇವನಿಗೂ ಈ ಸಂಗತಿ ತಿಳಿದಿತ್ತೆಂದು” ಈ
ದುರ್ಯೊಧನನುಡಿಯುವ ಸಂದರ್ಭವಿದಾಗಿದೆ. ಕರ್ಣನಿಗೆ ಈ ಸಂಗತಿ ತಿಳಿದಿರಲಿಲ್ಲ. ತಿಳಿದಿದ್ದವರಾರೂ ಅವನು ಬದುಕಿದ್ದಾಗ ಇದನ್ನು ತಿಳಿಸಲಿಲ್ಲ.

“ನೀಂ ಕ್ರಮವಿಪರ್ಯಯಂ ಮಾಡುವುದೇ.

” ಮೇರುಕವಿ ರನ್ನನು ರಚಿಸಿರುವ ‘ಗದಾಯುದ್ಧ’ದಿಂದ ಆಯ್ದುಕೊಳ್ಳಲಾಗಿರುವ `ದುರ್ಯೊಧನ ವಿಲಾಪ’ವೆಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ತನ್ನ ಮಗನಾದ ಲಕ್ಷಣಕುಮಾರನ ಶವವನ್ನು ಕಂಡ ಸಂದರ್ಭದಲ್ಲಿ ದುರ್ಯೋಧನನಾಡುವ ಮಾತುಗಳಿವು.


ರಣರಂಗದಲ್ಲಿ ಬರುತ್ತಿರುವ ದುರ್ಯೊಧನ ತನ್ನ ಮಗನಾದ ಶವವನ್ನು ಕಂಡ ಸಂದರ್ಭವಿದು. ಬಾಳಿ ಬದುಕಬೇಕಾಗಿದ್ದ ತನ್‌ನ ಕರುಳಿನ ಕುಡಿ ಕಮರಿ ಹೋಗಿರುವುದನ್ನು ಕಂಡು ದುರ್ಯೊಧನನ ಕರುಳು ಕತ್ತರಿಸಿದಂತಾಗುತ್ತದೆ. ಅವನು ಮಗನ ಶವದ ಮುಂದೆ ನಿಂತು ತಂದೆಯಾದವನಿಗೆ ಮಗನು ಎಳ್ಳು- ತರ್ಪಣ ಕೊಡುವುದು ಸರಿಯಾದ ಕ್ರಮ. ಆದರೆ ಇಲ್ಲಿ ತಂದೆಯಾದ ನಾನೇ ನಿನಗೆ ತರ್ಪಣವನ್ನು ಕೊಡುವ ಸಂದರ್ಭವೊದಗಿದೆ. ನನಗಿಂತ ಮೊದಲು ಸಾವನ್ನಪ್ಪಿ ಕ್ರಮ ವ್ಯತ್ಯಯ ಮಾಡಿದೆಯೇಕೆ?” ಎಂದು ದುರ್ಯೋಧನ ಪ್ರಲಾಪಿಸುವ ಸಂದರ್ಭವಿದಾಗಿದೆ.

“ನಿನ್ನೊರೆಗೆ ದೊರೆಗೆ ಗಂಡರುಮೊಳರೇ”
ರನ್ನ ಕವಿಯು ರಚಿಸಿರುವ ‘ಸಾಹಸ ಭೀಮ ವಿಜಯಂ’ ಎಂಬ ಮಹಾಕಾವ್ಯದಿಂದ ಆಯ್ದ ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಸ್ವೀಕರಿಸಿದೆ. ದುರ್ಯೋಧನನು ಅಭಿಮನ್ಯುವಿನ ಶವದ ಮುಂದೆ ಮಾತನ್ನಾಡುವನು. – ದುರ್ಯೊಧನ ಸಂಜಯನ ಜೊತೆಗೂಡಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಬರುವಾಗ ಅರ್ಜುನನ ಮಗ ಅಭಿಮನ್ಯುವಿನ ಶವ ಎದಿರಾಗುತ್ತದೆ.

ದ್ರೋಣರು ರಚಿಸಿದ ಚಕ್ರವ್ಯೂ ಭೇದಿಸಿ, ಹಲವಾರು ರಾಜರನ್ನು ಮಣಿಸಿದ ಮಹಾಪರಾಕ್ರಮಿ ಯಾದ ಅಭಿಮನ್ಯುವಿನ ಪರಮಸಾಹಸದ ಬಗ್ಗೆ ದುರ್ಯೋ ನನಿಗೆ ಹೃದಯ ತುಂಬಿ ಬರುತ್ತದೆ. ಅಭಿಮನ್ಯುವಿನ ಶೌಯ ಸ್ಮರಿಸುತ್ತಾದುರ್ಯೋಧನನು “ನಿನಗೆ ಸರಿ ಸಮಾನರಾದ ಕಲಿಗಳು ಬೇರೆ ಯಾರಿದ್ದಾರೆ?” ಎಂಬ ಈ ಮೇಲಿನ ಮಾತನ್ನಾಡುತ್ತಾನೆ. ಅಭಿಮನ್ಯು ಶತ್ರುಪಕ್ಷದವನಾದರೂ ಅವನ ಸಾಹಸವನ್ನು ಮನಃಪೂರ್ವಕವಾಗಿ ಮೆಚ್ಚುವ ದುರ್ಯೋಧನನ ದೊಡ್ಡತನವನ್ನು ಕವಿ ಈ ಸಂದರ್ಭದಲ್ಲಿ ಸುಂದರವಾಗಿ ಚಿತ್ರಿಸಿದ್ದಾನೆ.

“ಜನನೀಸನ್ಯಮನುಂಡೆನಾಂ ಬಳಿಕೆ ನೀಂ.

” ರನ್ನನ ‘ಗದಾಯುದ್ಧ’ ಅಥವಾ ‘ಸಾಹಸ ಭೀಮ ವಿಜಯಂ’ ಎಂಬ ಮಹಾಕಾವ್ಯದಿಂದ ಆಯ್ದ ದುರ್ಯೊಧನ ವಿಲಾಪ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದ್ದು ದುರ್ಯೋಧನನು ದುಶ್ಯಾಸನನ ಶವದ ಮುಂದೆ ನಿಂತು ಈ ಮಾತುಗಳನ್ನಾಡುತ್ತಾನೆ.

ದುಶ್ಯಾಸನನಿಗೆ ದುರ್ಯೊಧನನೆಂದರೆ ಅಪರಿಮಿತ ಪ್ರೀತಿ. ಜಗತ್ತಿನ ಎಲ್‌ಲ ಸುಖಗಳೂ ತನ್ನಣ್ಣನಾದ ದುರ್ಯೋಧನನಿಗಾಗಿ ಇರಲೆಂಬ ಆಶಯವುಳ್ಳವನು. ಅಣ್ಣನ ಮಾತನ್ನು ಮರುಮಾತಾಡದೆ ಪಾಲಿಸಿದವನು. ಇಂತಹ ಪ್ರೀತಿಯ ತಮ್ಮನ ಶವವನ್ನು ಕಂಡಾಗ ದುರ್ಯೋಧನನಿಗೆ ಭ್ರಾತೃವಾತ್ಸಲ್ಯ ಉಕ್ಕಿ ಹರಿಯುತ್ತದೆ.

ತನಗಿಂತ ಮೊದಲೇ ಸತ್ತಿರುವ ದುಶ್ಯಾಸನನನ್ನು ಕುರಿತು ಅವನು “ತಾಯ ಹಾಲನ್ನು ನಾನು ಮೊದಲು ಕುಡಿದೆ, ಆಮೇಲೆ ನೀನು ಕುಡಿದ ಅಂತೆಯೇ ಸೋಮಾಮೃತವಿರಲಿ ಭಕ್ಷ್ಯ, ಭೋಜನಗಳಿರಲಿ ನಾನು ಸೇವಿಸಿದ ಬಳಿಕವೇ ನೀನು ಸೇವಿಸುವ ಕ್ರಮ ಚಿಕ್ಕಂದಿನಿಂದಲೂ ನಡೆದು ಬಂದಿತ್ತು. ಸಾವಿನಲ್ಲೂ ನಾನು ಮೊದಲಿಗನಾಗಬೇಕಿತ್ತಲ್ಲ ನೀನೇಕೆ ಸರದಿ ತಪ್ಪಿ ಮೊದಲು ಸಾವನ್ನಪ್ಪಿದೆ?” ಎಂದು ಶೋಕಿಸುವ ಸಂದರ್ಭ ಇದಾಗಿದೆ.

“ಈಗ ನೀನುಮಗಲೆತವೋದಯಂಗಾಧಿಪತೀ.”

ಕವಿ ರನ್ನನು ರಚಿಸಿರುವ ‘ಸಾಹಸ ಭೀಮ ವಿಜಯಂ’ ಎಂಬ ಮಹಾಕಾವ್ಯದಿಂದ ಆಯ್ದುಕೊಂಡಿರುವ ‘ದುರ್ಯೊಧನ ವಿಲಾಪ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ದುರ್ಯೋಧನನು ಕರ್ಣನ ಶವದ ಮುಂದೆ ನಿಂತು ಈ ಮಾತುಗಳನ್ನಾಡುವನು.
ಕರ್ಣ ಮತ್ತು ದುರ್ಯೊಧನರದು ‘ಒಂದೇ ಪ್ರಾಣ, ಎರಡು ಜೀವ’ ಎನ್ನುವಂತಹ ಸ್ನೇಹ. ಕರ್ಣನ ಶವವನ್ನು ಕಂಡ ದುರ್ಯೋಧನನು “ನಾನು, ದುಶ್ಯಾಸನ ಮತ್ತು ನೀನು ಮೂವರು ಅಗಾಧ ಮೈತ್ರಿಯಿಂದ ಇದ್ದೆವು. ದುಶ್ಯಾಸನ ನಮ್ಮನ್ನು ಅಗಲಿ ದೂರಾದ ನಂತರ ನಾವಿಬ್ಬರೇ ಉಳಿದೆವು. ಈಗ ನೀನೂ ನನ್ನನ್ನು ಅಗಲಿ ಎಲ್ಲಿಗೆ ಹೋದೆ ಕರ್ಣನೇ?” ಎಂದು ಶೋಕಿಸುವ ಸಂದರ್ಭವಿದಾಗಿದೆ. ಪ್ರಾಣಸ್ನೇಹಿತನಾದ ಕರ್ಣನ ಸಾವನ್ನು ಸಹಿಸಲು ದುರ್ಯೋಧನನಿಗೆ ತುಂಬಾ ಕಷ್ಟವೆನಿಸಿತು.

“ಗಾಂಡೀವಿಯಲ್ಕು ಪಿನಾಕಪಾಣಿಯುಂ ನೆರೆಯನ್.”

ಕನ್ನಡದ ಅಪೂರ್ವ ಶಕ್ತಿಕವಿ ರನ್ನನು ರಚಿಸಿರುವ ‘ಸಾಹಸ ಭೀಮ ವಿಜಯಂ’ದಿಂದಾಯ್ದುಕೊಂಡಿರುವ ‘ದುರ್ಯೊಧನ ವಿಲಾಪ’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಿದೆ. ದ್ರೋಣರ ಶವದ ಮುಂದೆ ನಿಂತು ದುರ್ಯೊಧನ ಈ ಮಾತನ್ನಾಡುತ್ತಾನೆ.
ಭೀಷ್ಯರನ್ನು ಭೇಟಿಮಾಡಲು ರಣಾಂಗಣವನ್ನು ಹಾದುಬರುತ್ತಿದ್ದ ಸಂದರ್ಭದಲ್ಲಿ ದುರ್ಯೋಧನನಿಗೆ ದ್ರೋಣರಮೃತಶರೀರ ಸಿಗುತ್ತದೆ. ಗುರುದ್ರೋಣರಿಗೆ ಒದಗಿದ ಸಾವನ್ನು ನೆನೆದು ರೋದಿಸುವ ದುರ್ಯೋಧನನು ದ್ರೋಣರ ಬಿಲ್ವಿದ್ಯಾ ಪರಿಣತಿಯನ್ನು ಸ್ಮರಿಸುತ್ತಾ “ಬಿಲ್ಲು ವಿದ್ಯೆಯ ನಿಮ್ಮಪರಿಣತಿ ಲೋಕಕ್ಕೆ ತಿಳಿದಿದೆ. ನಿಮ್ಮನ್ನು ಅರ್ಜುನ ಮಾತ್ರವಲ್ಲ, ಸ್ವತಃ ಪರಶಿವನೂ ಎದುರಿಸಲುಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳುವನು. ತನ್ನ ಹಣೆಬರಹದ ಕಾರಣದಿಂದಾಗಿ ದ್ರೋಣರು ಜಯಿಸಲಾಗಲಿಲ್ಲವೆಂದು ದುರ್ಯೊಧನ ಚಿಂತಿಸಿದನು.

ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes
ದುರ್ಯೋಧನ ವಿಲಾಪ ನೋಟ್ಸ್‌ | Duryodhana Vilapa 1st Puc Kannada Notes

ದುರ್ಯೋಧನ ವಿಲಾಪ ಕವಿ ಪರಿಚಯ Duryodhana Vilapa 1st Puc Kannada Notes

‘ದುರ್ಯೊಧನ ವಿಲಾಪ’ವು ರನ್ನ ಮಹಾಕವಿ ರಚಿಸಿರುವ ‘ಗದಾಯುದ್ಧ’ ಅಥವಾ ‘ಸಾಹಸ ಭೀಮ ವಿಜಯಂ’ ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಿರುವ ಕೃತಿಯಾಗಿದೆ. ರನ್ನಕವಿಯು ಕ್ರಿ.ಶ. -ಹನ್ನೊಂದನೆಯ ಶತಮಾನದಲ್ಲಿ ಜೀವಿಸಿದ್ದ ಜೈನಧರ್ಮಕ್ಕೆ ಸೇರಿದ ಕವಿ. ಚಾಲುಕ್ಯರ ಸತ್ಯಾಶ್ರಯ ಚಕ್ರವರ್ತಿಯ ಆಸ್ಥಾನದಲ್ಲಿ ಕವಿಚಕ್ರವರ್ತಿಯಾಗಿ ಮೆರೆದವನು. ರನ್ನಕವಿಯು ಬರೆದಿರುವ ‘ಸಾಹಸ ಭೀಮ ವಿಜಯಂ’ ಹಾಗೂ ‘ಅಜಿತ ಪುರಾಣ’ಗಳು ನಮಗೆ ದೊರೆತಿವೆ. ಈ ಎರಡೂ ಗ್ರಂಥಗಳು ಚಂಪೂ ಶೈಲಿಯಲ್ಲಿವೆ.


ಹೇಗೆ ಪಂಪಕವಿಯು ಲೌಕಿಕ ಮತ್ತು ಧಾರ್ಮಿಕ ಎಂಬುದಾಗಿ ಎರಡು ಕಾವ್ಯಗಳನ್ನು ಬರೆದನೋ ಹಾಗೇ ಇವನೂ ಲೌಕಿಕ ಹಾಗೂ ಧಾರ್ಮಿಕ ಗ್ರಂಥಗಳನ್ನು ಬರೆದನು. ಇವನು ಬರೆದಿರುವನೆನ್ನಲಾದ ‘ಪರಶುರಾಮ ಚರಿತೆ’, ‘ಚಕ್ರೇಶ್ವರ ಚರಿತೆ’, ‘ರನ್ನಕಂದ’ ಎಂಬ ಕೃತಿಗಳು ಪೂರ್ಣವಾಗಿ ನಮಗೆ ದೊರೆತಿಲ್ಲ. ರನ್ನ ಕವಿಯ ‘ಗದಾಯುದ್ಧ’ ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟ ವೆನಿಸಿದೆ. ನಾಟಕೀಯತೆ ಹಾಗೂ ಸಿಂಹಾವಲೋಕನ ಕ್ರಮ ಇಲ್ಲಿನ ವೈಶಿಷ್ಟ್ಯತೆಯಾಗಿದೆ. ರನ್ನ ಕವಿಯ ಈ ಕಾವ್ಯದ ಮೇಲೆ ಸಂಸ್ಕೃತದ ಭಾಸನ ‘ಊರುಭಂಗ’ ಹಾಗೂ ಭಟ್ಟನಾರಾಯಣನ ‘ವೇಣೀಸಂಹಾರ’ ಎಂಬ ನಾಟಕಗಳ ಪ್ರಭಾವ ಉಂಟು.

ಭಾಷಾಭ್ಯಾಸ:

ಬರ್ದುಕು-ಇದು ಶಿಥಿಲದ್ವಿತ್ವ, ಇಲ್ಲಿ ವಿಜಾತೀಯ ಒತ್ತಕ್ಷರವನ್ನು ಶಿಥಿಲವಾಗಿ, ತೇಲಿಸಿ ಉಚ್ಚರಿಸುತ್ತಾರೆ. ಇದು ಗನ್ನಡದ ಒಂದು ಲಕ್ಷಣ. ಅಮರ್ದು, ಎರ್ಲೆ….ಮೊದಲಾದ ಶಿಥಿಲದ್ವಿತ್ವಗಳನ್ನು ಗಮನಿಸಿ, ಪದ್ಯಭಾಗದಲ್ಲಿರುವ ಶಿಥಿಲದ್ವಿತ್ವಗಳು:

 • ಉರ್ಚು
 • ಜರ್ಜರಿತ
 • ಇದಿರ್ಚು
 • ಸಂಭವಿಸಿರ್ದುದೊ
 • ಮುಗಿದಿರ್ದ
 • ಅಲರ್ದಮೊಗಂ
 • ಕರ್ಚಿದವುಡುಂ
 • ಗತನಾಗಿರ್ದ
 • ಇರ್ಕುಮೆ ಪ>ಹ ಬದಲಾವಣೆ: ಹಳಗನ್ನಡದ ಕೆಲವು ‘ಪ’ ಕಾರ ನಡುಗನ್ನಡದಲ್ಲಿ ‘ಹ’ ಕಾರಗಳಾಗಿವೆ. ಇದೊಂದು ಪ್ರಮುಖ ಧ್ವನಿ ವ್ಯತ್ಯಾಸ, ಉದಾ: ಪಾರು>ಹಾರು, ಪೆಸರ್>ಹೆಸರ್ ಇತ್ಯಾದಿ. ಇಂತಹ ಐದು ಪದಗಳನ್ನು ಸಂಗ್ರಹಿಸಿ.
 • ಪಲವು > ಹಲವು
 • ಪಾಲು > ಹಾಲು
  ಪಳ್ಳಿ > ಹಳ್ಳಿ
 • ಪೋಗು > ಹೋಗು

ಕಳ ಪ್ರಯೋಗ-ಸಂಸ್ಕೃತದ ‘ಅ’ ಕಾರಕ್ಕೆ ಬದಲಾಗಿ ಕನ್ನಡದಲ್ಲಿ ಬಳಸುವ ‘ಳ’ ಕಾರವನ್ನು ‘ಕಳ’ ಎನ್ನುವರು. ಉದಾ: ಜಲ > ಜಳ, ಅನಲ > ಅನಳ, ಇಂತಹ ಪದಗಳನ್ನು ಪಟ್ಟಿಮಾಡಿ.

 • ಚಂಚಲ > ಚಂಚಳ
 • ಸಂಚಲ > ಸಂಚಳ
 • ಅಚಲ > ಅಚಳ
 • ತಲ > ತಳ
 • ಅಂಜಲಿ > ಅಂಜಳಿ • ಪ್ರಲಾಪ > ಪ್ರಳಾಪ
 • ಪನಿ > ಹನಿ
 • ಪಲ್ಲಿ > ಹಲ್ಲಿ
 • ಪಂಜರ > ಹಂದರ
 • ಪೀರು > ಹೀರು
 • ಪಿರಿದು > ಹಿರಿದು
 • ಪುಲ್ಲು > ಹುಲ್ಲು
 • ಪಸಿದು > ಹಸಿದು …..ಇತ್ಯಾದಿ.

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *