8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada

8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada

Maggada Saheba Lesson In Kannada, 8ನೇ ತರಗತಿ ಕನ್ನಡ ಮಗ್ಗದ ಸಾಹೇಬ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 8th Standard Maggada Saheba Kannada Notes Question Answer

Maggada Saheba Lesson In Kannada

8ನೇ ತರಗತಿ ಮಗ್ಗದ ಸಾಹೇಬ ಪಾಠದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದು.

ಮಗ್ಗದ ಸಾಹೇಬ ಪಾಠದ ಕನ್ನಡ ನೋಟ್ಸ್

8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada
8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada

ಕೊಟ್ಟಿರುವ ಪ್ರಶ್ನೆಗಳಿಗೆ 1 ವಾಕ್ಯದಲ್ಲಿ ಉತ್ತರಿಸಿ

 1. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?

ಉತ್ತರ : ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿತ್ತು.

 1. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?

ಉತ್ತರ :ರಥೋತ್ಸವ ಸಮಯದಲ್ಲಿ ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿ ಎಲ್ಲರಿಗಿಂತ
ಮುಂದಾಗಿ ಪ್ರಸಾದ ಪಡೆಯುವ ಹಕ್ಕಿತ್ತು.

 1. ಅಬ್ದುಲ್ ರಹೀಮನ ಹಠವೇನು?

ಉತ್ತರ : ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಬ್ಯಾಸ ಕೊಡಿಸಿ ಸರ್ಕಾರಿ ನೌಕರರನ್ನಾಗಿ
ಮಾಡಬೇಕೆಂಬುದು ಅಬ್ದುಲ್ ರಹೀಮನ ಹಠವಾಗಿತ್ತು.

 1. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ?

ಉತ್ತರ : ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ಒಬ್ಬ ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ,
ಮತ್ತೊಬ್ಬ ಪೋಸ್ಟ್ಮಾಸ್ಟ್ರ್ ಆಗಿ ನೆರವೇರಿಸಿದರು.

 1. ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?

ಉತ್ತರ : ರಹೀಮ ಮಗ್ಗದ ಹುಚ್ಚನ್ನು ಬಿಡಿಸಲು ಮಗನನ್ನು ಶಾಲೆಯಿಂದ ಬಿಡಿಸಿದನು.

ಕೊಟ್ಟಿರುವ ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿ. Maggada Saheba Lesson In Kannada

 1. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ.

ಉತ್ತರ : ಹುಸೇನ್ ಸಾಹೇಬರು ಅಬ್ದುಲ್ ರಹೀಮ್ ಸಾಹೇಬರ ಪೂರ್ವಜರಾಗಿದ್ದು ಜನಪ್ರಿಯ ಹಾಗೂ
ಧನವಂತ ವ್ಯಕ್ತಿಯಾಗಿದ್ದರು. ಇವರು ಮಸೀದಿ ಮಾತ್ರವಲ್ಲ, ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ
ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ
ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕನ್ನು ಪಡೆದಿದ್ದಾರೆ.

 1. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?

ಉತ್ತರ : ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇತ್ತು. ಅದರೊಳಗೆ ಒಂದು ಪವಿತ್ರ
ಸ್ಥಾನವಿದೆ. ಅಲ್ಲಿ ‘ಉರ್ಸ್’ ಎಂಬ ಮುಸಲ್ಮಾನಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನದ ಒಬ್ಬ
ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು.

 1. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?

ಉತ್ತರ : ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ ತಂದೆಯವರು ಅಂಗಡಿಯಿAದ ಲಡ್ಡುಗಳನ್ನು ಕೊಂಡು
ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು. ‘ರಾಯರೆ, ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ
ಹಣವಿಲ್ಲವೆ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೋ ಕಲ್ಲುಸಕ್ಕರೆ ಹರಳನ್ನೋ ಕೊಡಿ.
ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ
ಸಂಪ್ರದಾಯ. ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ?’ ಎಂದು ಆಕ್ಷೇಪ
ಮಾಡಿದರು.

 1. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೊಜನವೇನು?

ಉತ್ತರ : ಕರೀಮನು ಶಾಲೆಯಲ್ಲಿ ಮಗ್ಗವನ್ನು ಬಹುಬೇಗನೇ ಕಲಿತು ಮಗ್ಗದಲ್ಲಿ ಒಂದು ಪರಿವರ್ತನೆಯನ್ನು
ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ. ಅದನ್ನು ಶಂಕರಪ್ಪ ಅವರು ಸ್ವಾಭಾವಿಕವಾಗಿಯೇ
ಪ್ರಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಅದರ ಫಲಸ್ವರೂಪವಾಗಿ ಸರಕಾರದಿಂದ ಹುಡುಗ
ಕರೀಮ್‌ನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದುಬಿಟ್ಟವು.
ಇದರಿAದ ಕರೀಮನ ಉತ್ಸಾಹ ಆಕಾಶಕ್ಕೇರಿತು. ಅಲ್ಲದೆ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದನು.

 1. ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?

ಉತ್ತರ : ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು
ನಾಟಕವಿತ್ತು. ಅದರಲ್ಲಿ ಕರೀಮನು ಸ್ತ್ರೀ ಪಾತ್ರವನ್ನು ಮಾಡಿರುತ್ತಾನೆ. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ
ಹಳೆಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡು ಹೋಗಿದ್ದನು. ನಾಟಕ ಮುಗಿಸಿದ
ಮೇಲೆ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ ಹೋದನು .

8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada
8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada

ಕೊಟ್ಟಿರುವ ಪ್ರಶ್ನೆಗಳಿಗೆ 4-5 ವಾಕ್ಯಗಳಲ್ಲಿ ಉತ್ತರಿಸಿ.

 1. ನವೀನ ಶಿಕ್ಷಣದ ವೈಶಿಷ್ಟ್ಯತೆ ?

ಉತ್ತರ : ನವೀನ ಶಿಕ್ಷಣವು ಮಹಾತ್ಮಾಗಾಂಧೀಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ
ಪ್ರಾರಂಭವಾಯಿತು. ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು
ಕೊಡುವುದು, ಅವರಲ್ಲಿ ಹಸ್ತಕೌಶಲ್ಯವನ್ನು, ದೇಹಶ್ರಮದಲ್ಲಿ ಗೌರವ ಭಾವವನ್ನು ಉಂಟು ಮಾಡುವುದು
ಒಂದು ಭಾಗವಾಗಿತ್ತು. ಕೆಲವರಿಗೆ ಬಡಗಿಯ ಕೆಲಸ, ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ
ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ, ಕೆಲವರಿಗೆ ಮಗ್ಗದ ಕೆಲಸವನ್ನುಕಲಿಸಲಾಗುತ್ತಿತ್ತು .

 1. ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕೆ ಬಂಡ ಪ್ರಸಂಗ ತಿಳಿಸಿ .

ಉತ್ತರ : ಕರೀಮನು ವಾರ್ಷಿಕೋತ್ಸದ ನಂತರ ಮನೆಗೆ ಬರದೇ ಹೊರಟು ಹೋಗಿದ್ದನು. ಇದಾದ ಕೆಲವು
ವರ್ಷಗಳ ನಂತರ ಬೆಳೆದು ಯುವಕನಾಗಿದ್ದ ಕರೀಮನು ಅಮ್ಮನ ಸರವನ್ನು ಅದರೊಡನೆ ಹತ್ತು ಸಾವಿರ
ರೂಪಾಯಿಗಳನ್ನು ತಂದಿದ್ದನು. ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ಅಬ್ದುಲ್ ರಹೀಮನು
ಬಾಗಿಲು ತೆರೆದು ನೋಡಿ, ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ಅಬ್ದುಲ್
ರಹೀಮನ ಮನಸ್ಸು ಕರಗಲಿಲ್ಲ . ಆಗ ನಿವೃತ್ತರಾಗಿದ್ದ ಶಂಕರಪ್ಪ ಗುರುಗಳು ಮನೆಗೆ ಹೋಗಿ, ‘ಸಂಧಾನ
ಮಾಡಿಸಿರಿ’ ಎಂದು ನಿವೇದಿಸಿದನು. ಶಂಕರಪ್ಪನವರು ಬಾಗಿಲು ಬಡಿದು ಒಂದು ಗೋಗರೆದನು ,
ನಿವೇದಿಸಿದರು,ತರ್ಕಿಸಿದರು , ಚರ್ಚಿಸಿದರು, ಆದರೆ ಎಲ್ಲವೂ ನಿಷ್ಪಲವಾಯಿತು .

ಕೊಟ್ಟಿರುವ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ. Maggada Saheba Lesson In Kannada

 1. ಕರೀಮ ಧನವಂತನಾದ ಬಗೆ ಹೇಗೆ? ವಿವರಿಸಿ.

ಉತ್ತರ : ಕರೀಮನು ಶಾಲಾ ವಾರ್ಷಿಕೋತ್ಸವದ ದಿನ ತನ್ನ ತಾಯಿಯ ಚಿನ್ನದ ಸರದೊಂದಿಗೆ ಮನೆ ಬಿಟ್ಟು
ಎಲ್ಲೋ ಹೋದವನು. ಧನವಂತ ವ್ಯಕ್ತಿಯಾಗಿದ್ದನು. ಕರೀಮ ಸಣ್ಣ ಪ್ರಾಯದಲ್ಲೇ ಮಗ್ಗದ ಸಹಕಾರಿ
ಸಂಘವೊಂದನ್ನು ಸ್ಥಾಪಿಸಿ, ಅದರ ಅಧ್ಯಕ್ಷನಾಗಿದ್ದನು. ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸಹೊಸ
ಸುಧಾರಣೆ ಪರಿವರ್ತನೆಗಳನ್ನು ತಂದು ಹೆಸರು ಮಾಡಿದ್ದನು. ಇದರಿಂದಾಗಿ ಆತನು ಸಾಕಷ್ಟು ಧನವಂತನೂ,
ಯಶಸ್ವಿಯೂ ಆಗಿ ಪ್ರಖ್ಯಾತನಾಗಿದ್ದನು. ಕೊನೆಗೆ ಸಣ್ಣ ಪ್ರಯತ್ನದಲ್ಲಿ ಭಾರತ ಸರ್ಕಾರದಿಂದ
“ಪದ್ಮಭೂಷಣ” ಪ್ರಶಸ್ತಿಗೂ ಪಾತ್ರನಾದನು.

 1. ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?

ಉತ್ತರ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ
ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ
ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು. “ಅನಿಷ್ಟ ಮಗ್ಗದ ಅಜ್ಜನ
ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು
ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುವುವು. ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ
ಎರಡೇ ತಿಂಗಳಲ್ಲಿ ಮಾಯವಾಗುವುದು. ಆದರೇನು? ಬಹು ಅಗ್ಗ. ಜನರಿಗೆ ಬೇಕಾದುದು ಅಗ್ಗದ ವಸ್ತು.
ಗುಣವನ್ನು ಯಾರು ಕೇಳುತ್ತಾರೆ? ಅಗ್ಗದ ಮಾಲಿನದೇ ಆಧಿಪತ್ಯವಾಯಿತು. ಮಗ್ಗದವರು ಭಿಕಾರಿಗಳಾದರು.
ಅವರ ಅನ್ನಕ್ಕೆ ಸಂಚಕಾರವಾಯಿತು. ಅದರಿಂದ ದ್ವೇಷ ಉಂಟಾಯಿತು

ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. Maggada Saheba Lesson In Kannada

 1. “ಮಗ್ಗವಲ್ಲ ಕೊರಳಿಗೆ ಹಗ್ಗ!”

ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ
ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ
ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು. ಆ ಸಂದರ್ಭದಲ್ಲಿ “ಅನಿಷ್ಟ
ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಎಂದು ಲೇಖಕರು ಹೇಳಿದ್ದಾರೆ
ಸ್ವಾರಸ್ಯ : ಮಗ್ಗದ ಕೆಲಸ ನಿಂತು ಹೋಗಿ, ಸಂಪಾದನೆಯಾಗದೆ ಊಟಕ್ಕೂ ಕಷ್ಟ ಪಡಬೇಕಾದ ಸ್ಥಿತಿ ಬಂದು,
ಅನ್ನ ಸಂಪಾದಿಸಿ ಕೊಡುತ್ತಿದ್ದ ಮಗ್ಗ ಈಗ ಸಾಯುವ ಸ್ಥಿತಿಯನ್ನು ತಂದಿರುವುದು ಸ್ವಾರಸ್ಯಕರವಾಗಿದೆ .

 1. “ಕಳ್ಳನಾದವನು, ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ”

ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕರೀಮನು ನಾಟಕದ ಸ್ತ್ರೀ ಪಾತ್ರಕ್ಕಾಗಿ ತನ್ನ ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ
ಸರವನ್ನು ಅಲಂಕಾರಕ್ಕೆAದು ಎರವಲು ತೆಗೆದುಕೊಂಡು ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ
ಮಾಯವಾಗಿ ಹೋದನು. ಈ ವಿಷಯ ಅಬ್ದುಲ್ ರಹೀಮ್‌ನಿಗೆ ಗೊತ್ತಾಯಿತು. ಆ ಸಂದರ್ಭದಲ್ಲಿ “ಹಾಳಾಗಿ
ಹೋಗಲಿ! ಹಠಮಾರಿ. ತಂದೆಯ ಮಾತನ್ನು ಕೇಳದವನೂ ಅಂತ ತಿಳಿದಿದ್ದೆ, ಈಗ ಕಳ್ಳನೆಂದೂ ತಿಳಿಯಿತು. ನನಗೆ
ಇಬ್ಬರೇ ಗಂಡು ಮಕ್ಕಳು ; ಕಳ್ಳನಾದವನು, ಮನೆಬಿಟ್ಟು ಓಡಿಹೋದವನು ಮಗನೇ ಅಲ್ಲ” ಎಂದು ಆಣೆ
ಹಾಕಿದನು.
ಸ್ವಾರಸ್ಯ : ಕರೀಮ್‌ನು ತನ್ನ ತಾಯಿಯ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿ, ನಮ್ಮ
ಮನೆತನಕ್ಕೆ ಕೆಟ್ಟ ಹೆಸರು ತಂದಿದ್ದಾನೆ ಇಂತವನು ಮಗನೇ ಅಲ್ಲ ಎಂದು ಹೇಳುವ ಮಾತು ಸ್ವಾರಸ್ಯಕರವಾಗಿ
ಮೂಡಿ ಬಂದಿದೆ.

 1. “ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ”

ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ಅಬ್ದುಲ್ ರಹೀಮನು ಬಾಗಿಲು ತೆರೆದು
ನೋಡಿ, ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ಅಬ್ದುಲ್ ರಹೀಮನ ಮನಸ್ಸು
ಕರಗಲಿಲ್ಲ. ಕರೀಮನು ವಿಧಿಯಿಲ್ಲದೇ ತನ್ನ ಗುರುಗಳಾದ ಶಂಕಪ್ಪನವರು ಮನೆಗೆ ಹೋಗಿ ವಿಷಯ
ತಿಳಿಸಿದನು. ಆ ಸಂದರ್ಭದಲ್ಲಿ ಕರೀಮ್‌ನು ಈ ಮಾತನ್ನು ಹೇಳಿದ್ದಾನೆ.
ಸ್ವಾರಸ್ಯ : ಕರೀಮ್‌ನು ಶಂಕರಪ್ಪನವರಲ್ಲಿ ಬಹಳ ಭಕ್ತಿ ಹಾಗೂ ಗೌರವ, ಮಗ್ಗದ ಬಗ್ಗೆ ಅಪಾರವಾದ ಆಸಕ್ತಿ
ಇದ್ದ ಇವನಿಗೆ ಉತ್ತೇಜಿಸಿ ಪ್ರೋತ್ಸಾಹಿಸಿದ್ದರು. ಆದ್ದರಿಂದ ಶಂಕರಪ್ಪ ಮೇಷ್ಟು ಬಗ್ಗೆ ಬಹಳ ವಿಶ್ವಾಸವಿರುವದು ¸ ಸ್ವಾರಸ್ಯಕರವಾಗಿದೆ .

4 :“ದೇವರು ದೊಡ್ಡವನು ದೇವರು ದಯಾಳು”

ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ‘ಪದ್ಮಭೂಷಣ’ ಅಂದರೆ ಸಾಹೇಬ್ ಬಹಾದ್ದೂರ್‌ಗಿಂತಲೂ ಮೇಲಿನ ಬಿರುದು. ಖಾನ್
ಸಾಹೇಬ್, ಖಾನ್ ಬಹಾದ್ದೂರ್, ದಿವಾನ್ ಬಹಾದ್ದೂರ್ ಇವೆಲ್ಲದರಿಂದಲೂ ಮೇಲೆ, ದೊಡ್ಡ ಬಿರುದು!”
ಎಂದು ಅಬ್ದುಲ್ ರಹೀಮನಿಗೆ ತಿಳಿದ ಮೇಲೆ ಕರೀಮ್ ನನ್ನ ಕರೀಮ್! ಸಾಹೇಬ್ ಬಹಾದ್ದೂರ್‌ಗಿಂತಲೂ
ಮೇಲಾದನೇ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ದೇವರ ಬಗ್ಗೆ ಇದ್ದ ನಂಬಿಕೆ, ತಂದೆಗೆ ಮಗನ ಬಗಗಿದ್ದ ಪ್ರೀತಿ – ವಾತ್ಸಲ್ಯವು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.

8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada
8ನೇ ತರಗತಿ ಮಗ್ಗದ ಸಾಹೇಬ ನೋಟ್ಸ್ । Maggada Saheba Lesson In Kannada

ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ. Maggada Saheba Lesson In Kannada

 1. ಅಬ್ದುಲ್ ರಹೀಮನಿಗೆ __ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು.
 2. ಮನೆಯಲ್ಲಿ __ ಇದೆಯೋ ಇಲ್ಲವೋ ಎಂಬಂತಾಗಿದೆ
 3. ಹುಡುಗನ __ ಆಕಾಶಕ್ಕೇರಿತು.
 4. ಶಂಕರಪ್ಪ ಅವರು __ ಹಿಂತೆರಳಿದರು.
 5. ನನಗೆ ಎರಡೇ ಮಕ್ಕಳು, __ ಪರಿಚಯ ನನಗಿಲ್ಲ.

ಸರಿ ಉತ್ತರಗಳು.

 1. ಮಗ್ಗದ ಸಾಹೇಬ
 2. ಊಟಕ್ಕೆ
 3. ಉತ್ಸಾಹ
 4. ಮುಖಬಾಡಿಸಿಕೊಂಡು
 5. ಕಳ್ಳರ

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

 1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ? ಅವುಗಳನ್ನು ಹೇಗೆ ವರ್ಗೀಕರಿಸುವಿರಿ? ವಿವರಿಸಿ.

ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳೆಂದರೆ ೪೯. ಅವುಗಳನ್ನು ಈಕೆಳಕಂಡಂತೆ
ವರ್ಗೀಕರಿಸಬಹುದು.
ಪ್ರಧಾನವಾಗಿ – ‘ಸ್ವರ, ವ್ಯಂಜನ ಮತ್ತು ಯೋಗವಾಹಕ’ ಎಂಬ ಮೂರು ಭಾಗಳಾಗಿ ವರ್ಗೀಕರಿಸಬಹುದು.

 1. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.

ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳೆಂದರೆ – ಅ, ಇ, ಉ, ಋ, ಎ, ಒ
ಧೀರ್ಘಸ್ವರಗಳೆಂದರೆ: ಆ, ಈ, ಊ, ಏ, ಐ, ಓ, ಔ

 1. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.

ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳೆಂದರೆ – ಖ್, ಘ, ಛ, ಝ, ಠ, ಢ, ಥ,
ಧ, ಫ, ಭ

 1. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ಅಕ್ಷರಗಳನ್ನು ತಿಳಿಸಿ.

ಉತ್ತರ : ‘ಕ’ ವರ್ಗ – ಕ, ಖ, ಗ, ಘ, ಙ
‘ಚ’ ವರ್ಗ – ಚ, ಛ , ಜ, ಝ , ಞ
‘ಟ’ ವರ್ಗ – ಟ, ಠ, ಡ, ಢ, ಣ
‘ತ’ ವರ್ಗ – ತ, ಥ, ದ, ಧ, ನ
‘ಪ’ ವರ್ಗ – ಪ, ಫ, ಬ, ಭ, ಮ

 1. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ.

ಉತ್ತರ : ಙ, ಞ, ಣ್ , ನ್, ಮ್

ಆ. ಕೊಟ್ಟಿರುವ ಪದಗಳಲ್ಲಿರುವ ಸ್ವರಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಅಬ್ದುಲ್ ( ಅ ) ಅವನು ( ಅ ) ಇಪ್ಪತ್ತು ( ಇ )
ಆದರೂ ಆ ) ಅವನನ್ನು ( ಅ ) ಇತ್ಯಾದಿ ( ಇ )
ಇರಲಿ ( ಇ ) ಏಕೆಂದರೆ ( ಏ ) ಓಡಿಹೋದ ( ಓ)
ಈಗ ( ಈ ) ಏನೂ ( ಏ )

ಇ. ಕೊಟ್ಟಿರುವ ಪದಗಳಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.

ಧನವಂತ ( ಧ ) ರಥ ( ಥ ) ಘನತೆ ( ಘ )
ಧರ್ಮ ( ಧ ) ಮುಖ್ಯ ( ಖ್ಯ ) ಭಕ್ಶ್ಯ ( ಭ )
ಹಠ ( ಠ ) ಪಾಠ ( ಠ ) ಹಸನ್ಮುಖ ( ಖ )
ಫಲ ( ಫ )

ಈ. ಕೊಟ್ಟಿರುವ ಪದಗಳಲ್ಲಿರುವ ಅವರ್ಗೀಯ ವ್ಯಂಜನಗಳನ್ನು ಬರೆಯಿರಿ.

ಅವನ ( ವ ) ಇಂತಹ ( ಹ )
ಅದರ ( ರ ) ಒಳಗೆ ( ಳ )
ಕುಶಲ ( ಶ ) ಹಬ್ಬ ( ಹ )
ಬಹಳ ( ಳ ) ತಲ ( ಲ )
ಸಮಯ ( ಸ, ಯ) ಕಾಲ ( ಲ )

ಇತರೆ ವಿಷಯಗಳು

8ನೇ ತರಗತಿ ಕನ್ನಡ ಫುಲ್ ನೋಟ್ಸ್

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *