ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada Notes

Innu Huttadeyirali Nariyarennavolu Kannada Notes 2nd Puc Free Notes | ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes

Innu Huttadeyirali Nariyarennavolu Kannada Notes , Chapter 3 Innu Huttadeyirali Nariyarennavolu Questions and Answers Pdf, Notes, Summary, 2nd PUC Kannada Textbook Answers , ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes

Innu Huttadeyirali Nariyarennavolu Kannada Notes

ಈ ಲೇಖನದಲ್ಲಿ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

Innu Huttadeyirali Nariyarennavolu Kannada Notes 2nd Puc Free Notes | ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes
Innu Huttadeyirali Nariyarennavolu Kannada Notes 2nd Puc Free Notes | ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes

2nd Puc Kannada ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಒಂದು ವಾಕ್ಯದಲ್ಲಿ ಉತ್ತರಿಸಿ .

ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?

ಧರ್ಮರಾಯನಿಗೆ ಧರ್ಮ ಕ್ಷಮೆಯ ಗರ ಹೊಡೆದಿದೆ .

ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು ?

ಅಣ್ಣನಾಜ್ಞೆಯಲಿ : ಭ್ರಮಿತನಾದವನು ಪಾರ್ಥ .

ಪಾಂಚಾಲನಂದನೆ ಯಾರು ?

ಪಾಂಚಾಲನಂದನೆ ಎಂದರೆ ದ್ರೌಪದಿ ,

ರಾಜಸಭೆಯೊಳಗೆ ದ್ರೌೌಪದಿಯನ್ನು ಒದೆದವರು ಯಾರು ?

ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವನು ಕೀಚಕ .

ಯಾರನ್ನು ಯಮಲೋಕಕ್ಕೆ ಕಳಿಸಲು ದೌಪದಿ ಭೀಮನಿಗೆ ಹೇಳುತ್ತಾಳೆ ?

ಕೀಚಕನನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ .

ಗಂಡರೋ ನೀವ್ ಭಂಡರೊ ‘ ಎಂದು ಕೇಳಿದವರಾರು ?

ಗಂಡರೋ ನೀವ್ ಭಂಡರೊ ‘ ಎಂದು ದ್ರೌಪದಿ ಭೀಮನಲ್ಲಿ ಕೇಳುತ್ತಾಳೆ .

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು ?

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವಳು ದೌಪದಿ

ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವರಾರು ?

ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವನು ಸೈಂಧವ .

ಮನದೊಳಗೆ ಹಗೆಗಳನ್ನು ಹಿಂಡಿದವರಾರು ?

ಮನದೊಳಗೆ ಹಗೆಗಳನ್ನು ಹಿಂಡಿದವನು ಭೀಮ ,

ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ ?

ಕೀಚಕನ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ .

ಎರಡು ಅಂಕಗಳ ಪ್ರಶ್ನೆಗಳು :

ಕೊಲಲಕ್ಷಮರೆಂದು ದೌಪದಿ ಯಾರನ್ನು ಕುರಿತು ಹೇಳಿದ್ದಾಳೆ ?

ದ್ರೌಪದಿ ತನಗೆ ಒದಗಿ ಬಂದ ಸಂಕಷ್ಟವನ್ನು ಇರುವ ಐವರು ಗಂಡದಿರಲ್ಲಿ ಯಾರ ಬಳಿಯಲ್ಲಿ ಹೇಳಿಕೊಳ್ಳುವುದು ಎಂದು ಚಿಂತಿಸುತ್ತಾಳೆ . ಧರ್ಮರಾಯನಲ್ಲಿ ಹೇಳೋಣವೆಂದರೆ ಆತ ಧರ್ಮವನ್ನು ಮೀರಿ ನಡೆಯುವವನಲ್ಲ . ಅರ್ಜುನನಲ್ಲಿ ಹೇಳೋಣ ವೆಂದರೆ , ಆತ ಅಣ್ಣನ ಮಾತನ್ನು ಮೀರಿ ನಡೆಯು ವವನಲ್ಲ . ಇನ್ನು ನಕುಲ – ಸಹದೇವರಿಗೆ ಹೇಳೋಣವೆಂದರೆ ಅವರಿಬ್ಬರು ಕೀಚಕನೆನ್ನುವ ನಾಯಿಯನ್ನು ಕೊಲ್ಲಲು ಅಕ್ಷಮರು ಎನ್ನುತ್ತಾ , ಭೀಮನಲ್ಲಿ ಹೇಳುವ ನಿರ್ಧಾರ ಮಾಡುತ್ತಾಳೆ .

ಮಲಗಿರುವ ಭೀಮನನ್ನು ದೌಪದಿ ಹೇಗೆ ಎಬ್ಬಿಸಿದಳು ?

ದ್ರೌಪದಿಯು ಭೀಮನಲ್ಲಿ ತನಗೆ ಒದಗಿ ಬಂದ ಕಷ್ಟವನ್ನು ಹೇಳಿಕೊಳ್ಳಲು ನಿರ್ಧರಿಸಿ , ನೋಡಿದವರು ಏನು ಅಂದು ಕೊಂಡರೂ ಪರವಾಗಿಲ್ಲ ಎಂದು ಭೀಮನನ್ನು ನೋಡಲು ಬರುತ್ತಾಳೆ , ಆದರೆ ಆತ ಆ ವೇಳೆಯಲ್ಲಿ ಗಾಢವಾದ ನಿದ್ರೆಯಲ್ಲಿ ತೊಡಗಿರುತ್ತಾನೆ . ಆಕೆ ಮೆಲ್ಲಮೆಲ್ಲನೆ ಆತನ ಮುಸುಕನ್ನು ಸಡಿಲಿಸುತ್ತಾಳೆ . ಗಲ್ಲವನ್ನು ಹಿಡಿದು ಅಲುಗಾಡಿಸುತ್ತಾಳೆ . ಆಗ ಭೀಮ ಎಚ್ಚರಗೊಳ್ಳುತ್ತಾನೆ .

ತಾನು ಘೋರತರ ವಿಷ ಕುಡಿಯುವುದಾಗಿ ದೌಪದಿ ಏಕೆ ಹೇಳುತ್ತಾಳೆ ?

ದ್ರೌಪದಿಯು ಇರುವ ಐವರು ಗಂಡಂದಿರಲ್ಲಿ ಭೀಮನು ತನಗೆ ಬಂದಿರುವ ಕಷ್ಟವನ್ನು ಪರಿಹರಿಸುವವನು ಅಂದು ಕೊಳ್ಳುತ್ತಾಳೆ . ಆತ ಪರಾಕ್ರಮಿ , ಅಲ್ಲದೆ ಸ್ವಾಭಿಮಾನಿ ಕೂಡ . ಅವನೊಬ್ಬನೆ ಕೀಚಕನಿಗೆ ಸರಿಯಾದ ಬುದ್ಧಿ ಕಲಿಸಬಲ್ಲವನು . ಒಂದು ವೇಳೆ ಆತನಲ್ಲಿಯೂ ಕೀಚಕನನ್ನು ಎದುರಿಸುವ ಸಾಮರ್ಥ್ಯ ಇಲ್ಲದಿದ್ದರೆ ತಾನು ಘೋರತರ ವಿಷ ಕುಡಿಯುವುದಾಗಿ ದೌಪದಿ ಹೇಳುತ್ತಾಳೆ .

ಉಳಿದ ನಾಲ್ವರು ಪಾಂಡವರ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು ?

ದೌಪದಿಯು ಭೀಮನಲ್ಲಿ ತನ್ನ ಕಷ್ಟಕ್ಕೆ ಕಿವಿಗೊಡುವವನು ನೀನೊಬ್ಬನೆ . ಉಳಿದ ನಾಲ್ವರು ಪತಿಗಳು ಸುಖಕ್ಕಾಗಿ ನನ್ನ ಬಳಿ ಬರುತ್ತಾರೆ . ಆದರೆ ಮರ್ಯಾದೆ ಪ್ರತಿಷ್ಠೆಗಳ ಪ್ರಶ್ನೆ ಬಂದಾಗ ಅವರೆಲ್ಲ ಅಲ್ಲಿ ನಿಲ್ಲದೆ ಹೊರಟು ಹೋಗುತ್ತಾರೆ . ಆದುದರಿಂದ ನೀನು ನನ್ನನ್ನು ಕರುಣೆಯಿಂದ ನೋಡು ಎಂದು ಕೈಮುಗಿದು ಬೇಡುತ್ತಾಳೆ .

ಗಂಡರೈವರು ಮೂರು ಲೋಕದ ಗಂಡರಾರು ? ಹೆಸರಿಸಿ .

ದ್ರೌೌಪದಿಗೆ ಐದು ಜನ ಗಂಡಂದಿರು ಧರ್ಮರಾಯ , ಭೀಮ , ಅರ್ಜುನ , ನಕುಲ ಮತ್ತು ಸಹದೇವ . ಇವರಲ್ಲಿ ಎಲ್ಲರೂ ಮೂರು ಲೋಕದ ಗಂಡರೆ , ಆದರೆ ದೌಪದಿಯ ಕಷ್ಟದ ಪರಿಹಾರದ ವಿಷಯದಲ್ಲಿ ಇವರೆಲ್ಲರೂ ವೀರರಾಗಿದ್ದು ಪ್ರಯೋಜನವಿಲ್ಲದಂತಾಗಿದೆ .

ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ ?

ಹೆಂಡತಿಯ ಹರಿಬ ( ಸಂಕಷ್ಟಕ್ಕಾಗಿ ಗಂಡುಗೂಸು ಒಬ್ಬನೇ ಇದ್ದರೂ ಆತ ವೈರಿಯನ್ನು ಕಡಿದು ತುಂಡರಿಸಿ ಬಿಡುತ್ತಾನೆ ಅಥವಾ ತನ್ನೊಡಲನ್ನೇ ಕೊಟ್ಟಾದರೂ ಪತ್ನಿಯ ಮಾನವನ್ನು ಉಳಿಸುತ್ತಾನೆ .

ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು :
ಎನ್ನವೊಲು ಮುನ್ನಾರು ನವೆದವರುಂಟು

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸ’ನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದ್ರೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ .
ಸ್ವಾರಸ್ಯ : ಪಾಂಡವರ ಅಜ್ಞಾತವಾಸದ ಅವಧಿಯಲ್ಲಿ , ಸೈರಂಧಿ ವೃತ್ತಿಯಲ್ಲಿದ್ದ ದ್ರೌೌಪದಿಯನ್ನು ಕಂಡ ಕಾಮುಕನಾದ ಕೀಚಕನು , ದೌಪದಿಯ ಬೆನ್ನು ಹತ್ತಿರುತ್ತಾನೆ . ಅವನ ಉಪಟಳದ ಕುರಿತಂತೆ ದೂರಿಕೊಂಡರೂ ರಾಜ – ರಾಣ ‘ ಯರಾಗಿದ್ದ ವಿರಾಟರಾಜ ಮತ್ತು ಸುದೇಷ್ಟೆಯರು ಸರಿಯಾಗಿ ಸ್ಪಂದಿಸಲಿಲ್ಲ . ಹೀಗಿರುವಾಗ ತನ್ನ ಅಸಹಾಯಕ ಸ್ಥಿತಿಗಾಗಿ ವ್ಯಥಿಸುತ್ತ ದ್ರೌಪದಿಯು ತನ್ನೊಳಗೆ ಈ ಮಾತನಾಡಿಕೊಳ್ಳುತ್ತಾಳೆ , ದ್ರೌಪದಿಯಂತಹ ಸಂಕಷ್ಟಕ್ಕೊಳಗಾದವರು ಇನ್ನೊಬ್ಬರಿಲ್ಲ ಎಂಬುದನ್ನು ಆಕೆಯ ಮಾತಿನಲ್ಲೇ ವ್ಯಕ್ತಪಡಿಸಿದ್ದು ಇಲ್ಲಿ ಕಾಣಿಸುತ್ತದೆ .

ಯಮಸುತಂಗರುಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ .
ಸ್ವಾರಸ್ಯ : ವಿವಾಹಿತಳಾದ ನಾರಿಯೊಬ್ಬಳನ್ನು ಆಕೆಯ ಗಂಡ ರಕ್ಷಿಸಬೇಕಾದುದು ಸಹಜ . ಆದರೆ ಅಜ್ಞಾತವಾಸದ ಅವಧಿಯಲ್ಲಿ ದೌಪದಿಯ ದಯನೀಯ ಸ್ಥಿತಿ ಹೇಗಿತ್ತೆಂದರೆ ಐದು ಮಂದಿ ಗಂಡಂದಿರಿದ್ದರೂ ಅವರಲ್ಲಿ ಯಾರೂ ಆಕೆಯನ್ನು ಕೀಚಕನಿಂದ ರಕ್ಷಿಸಲು ಮುಂದಾಗುವುದಿಲ್ಲ . ಹೀಗಿರುವಾಗ ದ್ರೌಪದಿಯ ತನ್ನ ಸಂಕಟವನ್ನು ಯಾರಲ್ಲಿ ಹೇಳಿಕೊಳ್ಳಲ್ಲಿ ? ಎಂದು ಆಲೋಚಿಸುತ್ತಾಳೆ .

ಗಂಡಂದಿರಲ್ಲಿ ಹಿರಿಯನಾದ ಧರ್ಮರಾಜನಿಗೆ ಹೇಳೋಣ ಎಂದು ಅಂದುಕೊಂಡರೆ , ಆತನಿಗೆ ಧರ್ಮಕ್ಷಮೆಯೆಂಬ ( ನವಗ್ರಹಗಳಲ್ಲಿ ಸೇರದ ) ಹತ್ತನೆಯ ಗ್ರಹ ಬಡಿದಿದೆ ಎಂದು ತನ್ನೊಳಗೆ ಅಂದುಕೊಳ್ಳುತ್ತಾಳೆ . ತನ್ನ ಮಾನಕ್ಕೆ ಕುಂದು ಬರುವ ಪ್ರಸಂಗವೊದಗಿದಾಗ , ಹೆಣ್ಣೂಬ್ಬಳಿಗೆ ಉಂಟಾಗುವ ಸಾತ್ವಿಕ ಕ್ರೋಧ ಇಲ್ಲಿ ಕಾಣಿಸುತ್ತದೆ .

ಕಲಿಭೀಮನೇ ಮಿಡುಕುಳ್ಳ ಗಂಡನು .

ಆಯ್ಕೆ : ಈ ಮಾತನ್ನು ಕುಮಾರವ್ಯಾಸ’ನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂಬ ಪದ್ಯಭಾಗದಿಂದ ಆರಿಸಲಾಗಿದೆ .ಯಾನ ವೂಲು . ಸಂದರ್ಭ : ಈ ಮಾತನ್ನು ದ್ರೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ .
ಸ್ವಾರಸ್ಯ : ಕೀಚಕನಿಂದ ಸಂತಸ್ತಳಾದ ದೌಪದಿ ತನ್ನ ಸಂಕಷ್ಟವನ್ನು ಪರಿಹರಿಸಬಲ್ಲ ವೀರರಾರೆಂದು ಯೋಚಿಸುತ್ತಾಳೆ . ಪರರಿಂದ ತೊಂದರೆಯಾದಾಗ ಮೊದಲು ತನ್ನ ಗಂಡನಲ್ಲಿ ದೂರಿಕೊಳ್ಳಬೇಕು . ಈಕೆಗೆ ಐವರು ಪತಿಯರಿರುವುದರಿಂದ ಅವರಲ್ಲಿ ಯಾರು ತನ್ನ ಕಷ್ಟವನ್ನು ನಿವಾರಿಸುವ ಸಾಮಾರ್ಥಯವುಳ್ಳವರೆಂದು ಯೋಚಿಸುತ್ತಾಳೆ .

ಧರ್ಮರಾಜ ನಾಗಲಿ ಅರ್ಜುನನಾಗಲಿ ನಕುಲಸಹದೇವ ರಾಗಲಿ ಕೀಚಕನನ್ನು ಕೊಂದು ತನ್ನ ಕಷ್ಟವನ್ನು ನಿವಾರಿಸಲಾರರೆಂದು ಯೋಚಿಸಿ , ಕೊನೆಗೆ ಭೀಮನೇ ತಕ್ಕವನೆಂದು ನಿರ್ಣಯಿಸುತ್ತಾಳೆ . ಭೀಮದೇವನು ಎಲ್ಲರಿಗಿಂತ ಶಕ್ತಿಶಾಲಿ ಮಾತ್ರವಲ್ಲ ತನ್ನ ಕಷ್ಟಕ್ಕೆ ಮಿಡಿಯುತ್ತಾನೆ ಎಂಬುದನ್ನು ದೌಪದಿ ಈ ರೀತಿ ಹೇಳಿಕೊಳ್ಳುತ್ತಾಳೆ .

ಹುರುಳಿಲ್ಲದೊಡೆ ಕುಡಿವನು ಘೋರತರ ವಿಷವ .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸ’ನು ರಚಿಸಿರುವ ‘ ಇನ್ನೂ ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದೌಪದಿಯು ತನ್ನಲ್ಲಿ ಹೇಳಿಕೊಳ್ಳುತ್ತಾಳೆ .
ಸ್ವಾರಸ್ಯ : ದ್ರೌಪದಿಯನ್ನು ಕೀಚಕನು ಬೆಂಬತ್ತಿರಲು , ಆತನಿಂದ ಬಿಡುಗಡೆಗೊಳಿಸಲು ಯಾರಲ್ಲಿ ವಿನಂತಿಸಿಕೊಳ್ಳಲಿ ? ಎಂದು ಚಿಂತಿತಳಾಗಿ , ತನ್ನ ಪತಿಯರಲ್ಲಿ ಎರಡನೆಯವನಾದ ಭೀಮಸೇನನೇ ಯೋಗ್ಯನೆಂದುಕೊಳ್ಳುತ್ತಾಳೆ . ಒಂದೊಮ್ಮೆ ಆತನು ತನ್ನನ್ನು ಸಂರಕ್ಷಿಸದೆ ಹೋದಲ್ಲಿ , ತಾನು ಫೋರ ವಿಷವನ್ನು ಕುಡಿಯುತ್ತೇನೆ ಎಂದು ಹೇಳುತ್ತಾಳೆ . ಪ್ರಾಣಕ್ಕಿಂತಲೂ ಮಾನವೇ ಮುಖ್ಯವೆಂದು ಬಲವಾಗಿ ನಂಬಿದ್ದ ದೌಪದಿಯ ಮಾನಸಿಕ ದಾರ್ಢ ಇಲ್ಲಿ ಕಾಣ ಸುತ್ತದೆ .

ನೀನಲ್ಲದುಳಿದವರುಚಿತ ಬಾಹಿರರು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸ’ನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದ್ರೌಪದಿಯು ಭೀಮನಲ್ಲಿ ಹೇಳುತ್ತಾಳೆ .
ಸ್ವಾರಸ್ಯ : ದ್ರೌಪದಿಯು : ಕೀಚಕನಿಂದ ತನ್ನ ಮಾನವನ್ನು ಕಾಯಬೇಕೆಂದು ವಿರಾಟರಾಜ – ಸುದೇಷ್ಟೆಯರಲ್ಲಿ ಕೇಳಿಕೊಂಡು ಪ್ರಯೋಜನವಾಗದಿರಲು , ಕೊನೆಯಲ್ಲಿ ತನ್ನ ಗಂಡ ಭೀಮಸೇನನಲ್ಲಿ ಅಂತರಂಗದಲ್ಲಿ ಕೇಳಿಕೊಳ್ಳುತ್ತಾಳೆ . ವಿರಾಟರಾಜ ಮತ್ತು ಆತನ ಪತ್ನಿ ಸುದೇಷ್ಟೆಯರಲ್ಲಿ ಅಧಿಕಾರವಿದ್ದರೂ ಧೈರ್ಯ – ಸಾಮರ್ಥಗಳಿರಲಿಲ್ಲ . ಧರ್ಮರಾಜನಿಗೆ , ಕ್ಷಮಾಶೀಲತೆಯೇ ಗುಣವಾಗಿತ್ತಲ್ಲದೆ ಕೀಚಕನನ್ನು ಎದುರಿಸುವ ಧೈರ್ಯ – ಸಾಮರ್ಥಗಳು ಇರಲಿಲ್ಲ . ಧೈರ್ಯ – ಸಾಮರ್ಥ ಇವೆರಡೂ ಮೇಲೈಸಿದ್ದುದು ಭೀಮನಲ್ಲಿ ಮಾತ್ರ . ಆದ್ದರಿಂದ ದ್ರೌಪದಿಯು , ತನ್ನ ಮಾನವನ್ನು ಉಳಿಸಲು ಭೀಮನಲ್ಲದೆ ಅನ್ಯರು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾಳೆ .

ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ಭೀಮನು ದೌಪದಿಯಲ್ಲಿ ಹೇಳುತ್ತಾನೆ .
ಸ್ವಾರಸ್ಯ : ರೂಢಿಯಲ್ಲಿರುವ ಗಾದೆಯಮಾತಿದು . ಕೂಡುಕುಟುಂಬದ ಮನೆಗಳಲ್ಲಿ ದುಡಿಯುವವರು ಬೇರೆ , ಕುಳಿತು ಉಣ್ಣುವವರು ಬೇರೆ . ಕೆಲವರು ಶ್ರಮಪಟ್ಟು ದುಡಿಯುತ್ತಾರೆ , ಇನ್ನು ಕೆಲವರು ಚೆನ್ನಾಗಿ ತಿಂದುಂಡು ಸುಖವಾಗಿದ್ದು ಅಗತ್ಯದ ಕೆಲಸಗಳಿಂದ , ಕರ್ತವ್ಯದಿಂದ ಜಾರಿಕೊಳ್ಳುತ್ತಾರೆ , ದ್ರೌಪದಿಯು ಭೀಮನಲ್ಲಿ , ನೀನಲ್ಲದೆ ಅನ್ಯರು ನನ್ನ ಮಾನವನ್ನು ಉಳಿಸಲು ಅಸಮರ್ಥರು ; ಸುಖಕ್ಕಷ್ಟೇ ನನ್ನ ಬಳಿಗೆ ಬರುತ್ತಾರೆ . ಕಷ್ಟಕ್ಕೆ ಒದಗಲಾರರು ಎಂದು ಹೇಳಿದುದಕ್ಕೆ ಪ್ರತಿಯಾಗಿ ಭೀಮ ಹೇಳುವ ಯುಕ್ತಿಯುತ ಮಾತು ಇದಾಗಿದೆ .ಅಣ್ಣನ ಆಜ್ಞೆಯು ತನ್ನ ಸ್ವಾತಂತ್ರ್ಯವನ್ನು ಕಸಿಯಿತೆಂಬ ಭೀಮನ ಅಸಹನೆ , ದುಡಿಯುವಾತನಿಗೇ ಮೇಲಿಂದ ಮೇಲೆ ಒದಗುವ ಒತ್ತಡಗಳು ಇಲ್ಲಿ ಪ್ರಕಟಗೊಂಡಿದೆ .

ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ?

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ .
ಸ್ವಾರಸ್ಯ : ಸಮಾಜ ವ್ಯವಸ್ಥೆಯಲ್ಲಿ ಒಬ್ಬಳು ಹೆಣ್ಣಿಗೆ ಒಬ್ಬ ಗಂಡನಿರುತ್ತಾನೆ . ಒಬ್ಬನೇ ಗಂಡನಾದರೂ ಆತ ತನ್ನ ಹೆಂಡತಿಯ ಮಾನವನ್ನು ಸಂರಕ್ಷಿಸಿಕೊಳ್ಳಲು ಪ್ರಾಣವನ್ನು ಕೊಡುವುದಕ್ಕೂ ಸಿದ್ಧನಿರುತ್ತಾನೆ . ಆದರೆ ದ್ರೌಪದಿಗೆ ಐವರು ಗಂಡಂದಿರಿದ್ದರೂ ಒಬ್ಬರೂ ಆಕೆಯ ಮಾನವನ್ನು ಕಾಯುವುದಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ದೌಪದಿ ಆರೋಪಿಸುತ್ತಾಳೆ . ತಟಸ್ಥನಾಗಿದ್ದ ಭೀಮನನ್ನು ಕಾರ್ಯೋನ್ಮುಖನನ್ನಾಗಿ ಮಾಡಲು ದ್ರೌಪದಿ ಛೇಡಿಸುವ ಮಾತಿದಾಗಿದೆ .

ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನಮೊಲು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದೌಪದಿಯು ಭೀಮನಲ್ಲಿ ಹೇಳುತ್ತಾಳೆ .
ಸ್ವಾರಸ್ಯ : ಕೀಚಕನು ದ್ರೌಪದಿಯ ಸೌಂದರ್ಯದಿಂದ ಮನಸೋತು ಆಕೆಯನ್ನು ಹೊಂದಬೇಕೆಂದು ನಾನಾ ತೆರನಾಗಿ ತಂತ್ರವನ್ನು ರೂಪಿಸುತ್ತಾನೆ . ಈ ಬಾಧೆಯಿಂದ ಬೇಸತ್ತ ದ್ರೌಪದಿಯು , ಭೀಮನಲ್ಲಿಗೆ ಬಂದು ಅಂತರಂಗದಲ್ಲಿ ತನ್ನ ಅಳಲನ್ನು ತೋಡಿಕೊಂಡು , ತಾನು ಪಟ್ಟ ಪಾಡನ್ನು ಈ ರೀತಿ ಹೇಳಿಕೊಳ್ಳುತ್ತಾಳೆ . ದ್ರೌಪದಿಯ ದಯನೀಯ ಅವಸ್ಥೆ ಇಲ್ಲಿ ಅನಾವರಣಗೊಂಡಿದೆ

ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ಭೀಮನು ದೌಪದಿಯಲ್ಲಿ ಹೇಳುತ್ತಾನೆ .
ಸ್ವಾರಸ್ಯ : ರೂಢಿಯಲ್ಲಿರುವ ಗಾದೆಯಮಾತಿದು . ಕೂಡುಕುಟುಂಬದ ಮನೆಗಳಲ್ಲಿ ದುಡಿಯುವವರು ಬೇರೆ , ಕುಳಿತು ಉಣ್ಣುವವರು ಬೇರೆ . ಕೆಲವರು ಶ್ರಮಪಟ್ಟು ದುಡಿಯುತ್ತಾರೆ , ಇನ್ನು ಕೆಲವರು ಚೆನ್ನಾಗಿ ತಿಂದುಂಡು ಸುಖವಾಗಿದ್ದು ಅಗತ್ಯದ ಕೆಲಸಗಳಿಂದ , ಕರ್ತವ್ಯದಿಂದ ಜಾರಿಕೊಳ್ಳುತ್ತಾರೆ .

ದ್ರೌಪದಿಯು ಭೀಮನಲ್ಲಿ , ನೀನಲ್ಲದೆ ಅನ್ಯರು ನನ್ನ ಮಾನವನ್ನು ಉಳಿಸಲು ಅಸಮರ್ಥರು ; ಸುಖಕ್ಕಷ್ಟೇ ನನ್ನ ಬಳಿಗೆ ಬರುತ್ತಾರೆ . ಕಷ್ಟಕ್ಕೆ ಒದಗಲಾರರು ಎಂದು ಹೇಳಿದುದಕ್ಕೆ ಪ್ರತಿಯಾಗಿ ಭೀಮ ಹೇಳುವ ಯುಕ್ತಿಯುತ ಮಾತು ಇದಾಗಿದೆ . ಅಣ್ಣನ ಆಜ್ಞೆಯು ತನ್ನ ಸ್ವಾತಂತ್ರ್ಯವನ್ನು ಕಸಿಯಿತೆಂಬ ಭೀಮನ ಅಸಹನೆ , ದುಡಿಯುವಾತನಿಗೇ ಮೇಲಿಂದ ಮೇಲೆ ಒದಗುವ ಒತ್ತಡಗಳು ಇಲ್ಲಿ ಪ್ರಕಟಗೊಂಡಿದೆ .

ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ?

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದ್ರೌಪದಿಯು ಭೀಮನಲ್ಲಿ ಹೇಳುತ್ತಾಳೆ .
ಸ್ವಾರಸ್ಯ : ಸಮಾಜ ವ್ಯವಸ್ಥೆಯಲ್ಲಿ ಒಬ್ಬಳು ಹೆಣ್ಣಿಗೆ ಒಬ್ಬ ಗಂಡನಿರುತ್ತಾನೆ . ಒಬ್ಬನೇ ಗಂಡನಾದರೂ ಆತ ತನ್ನ ಹೆಂಡತಿಯ ಮಾನವನ್ನು ಸಂರಕ್ಷಿಸಿಕೊಳ್ಳಲು ಪ್ರಾಣವನ್ನು ಕೊಡುವುದಕ್ಕೂ ಸಿದ್ಧನಿರುತ್ತಾನೆ . ಆದರೆ ದ್ರೌಪದಿಗೆ ಐವರು ಗಂಡಂದಿರಿದ್ದರೂ ಒಬ್ಬರೂ ಆಕೆಯ ಮಾನವನ್ನು ಕಾಯುವುದಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ದೌಪದಿ ಆರೋಪಿಸುತ್ತಾಳೆ . ತಟಸ್ಥನಾಗಿದ್ದ ಭೀಮನನ್ನು ಕಾರ್ಯೋನ್ಮುಖನನ್ನಾಗಿ ಮಾಡಲು ದ್ರೌಪದಿ ಛೇಡಿಸುವ ಮಾತಿದಾಗಿದೆ .

ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನಮೊಲು .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದ್ರೌಪದಿಯು ಭೀಮನಲ್ಲಿ ಹೇಳುತ್ತಾಳೆ .

ಸ್ವಾರಸ್ಯ : ಕೀಚಕನು ದ್ರೌಪದಿಯ ಸೌಂದರ್ಯದಿಂದ ಮನಸೋತು ಆಕೆಯನ್ನು ಹೊಂದಬೇಕೆಂದು ನಾನಾ ತೆರನಾಗಿ ತಂತ್ರವನ್ನು ರೂಪಿಸುತ್ತಾನೆ . ಈ ಬಾಧೆಯಿಂದ ಬೇಸತ್ತ ದ್ರೌಪದಿಯು , ಭೀಮನಲ್ಲಿಗೆ ಬಂದು ಅಂತರಂಗದಲ್ಲಿ ತನ್ನ ಅಳಲನ್ನು ತೋಡಿಕೊಂಡು , ತಾನು ಪಟ್ಟ ಪಾಡನ್ನು ಈ ರೀತಿ ಹೇಳಿಕೊಳ್ಳುತ್ತಾಳೆ . ದ್ರೌಪದಿಯ ದಯನೀಯ ಅವಸ್ಥೆ ಇಲ್ಲಿ ಅನಾವರಣಗೊಂಡಿದೆ.

ಕೂಳುಗೇಡಿಂಗೊಡಲ ಹೊರುವಿರಿ .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸ’ನು ರಚಿಸಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ದ್ರೌಪದಿಯು ಭೀಮನಲ್ಲಿ ಹೇಳುತ್ತಾಳೆ .
ಸ್ವಾರಸ್ಯ : ಕೀಚಕನಿಂದ ಉಪಟಳಕ್ಕೊಳಗಾದ ದೌಪದಿಯು ತನ್ನ ದೌರ್ಭಾಗ್ಯವನ್ನು ಭೀಮನಲ್ಲಿ ಹೇಳಿಕೊಳ್ಳುತ್ತ , ತಾನು ಪಾಂಚಾಲ ದೇಶದ ಅರಸನ ಮನೆಯಲ್ಲಿ ಹುಟ್ಟಿ , ಮನುಷ್ಯ , ಗಂಧರ್ವ , ದೇವತಾ ವರ್ಗಕ್ಕೂ ಮೀರಿದ ಶೌರ್ಯಗಳ ಪಾಂಡವರ ಕೈಹಿಡಿದರೂ ಇನ್ನೊಬ್ಬರ ದಾಸ್ಯವನ್ನನುಭವಿಸುವ ಪ್ರಾರಬ್ಧ ತನ್ನದಾಯಿತೆಂದೂ ಪಾಂಡವರ ಶಕ್ತಿ ಸಾಮರ್ಥ ವ್ಯರ್ಥವೆಂದು ಹೇಳುತ್ತ ಅಣಕಿಸಿ ಭೀಮನು ಕೆರಳುವಂತೆ ಮಾಡುತ್ತಾಳೆ .

ಈ ಸಂದರ್ಭ , ಬಲಿಷ್ಠವಾದ ತೋಳುಗಳಿದ್ದರೂ ಅದರಿಂದ ಶತ್ರುನಾಶ ಮಾಡಲಾಗದಿದ್ದಲ್ಲಿ ಅದು ವ್ಯರ್ಥ , ಸುಮ್ಮನೆ ಹೊರೆ : ಶರೀರವನ್ನು ಪೋಷಿಸುತ್ತಿರುವುದೂ ಅನ್ನ ದಂಡಕ್ಕೆ ಎಂದು ಅಣಕಿಸುತ್ತಾಳೆ , ದ್ರೌಪದಿಯು ಕಾರ್ಯ ಸಾಧನೆಗೆ ಪ್ರಚೋದಿಸಲು ಭೀಮನನ್ನು ಕೆರಳಿಸಬೇಕೆಂದೇ ಆಡುವ ಚುಚ್ಚುಮಾತು ಇದಾಗಿದೆ .

ಹಗೆಗಳನ್ನು ಹಿಂಡಿದನು ಮನದೊಳಗೆ .

ಆಯ್ಕೆ : ಈ ಮಾತನ್ನು ‘ ಕುಮಾರವ್ಯಾಸ’ನು ರಚಿಸಿರುವ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿ ಭೀಮನ ಆಕ್ರೋಶವನ್ನು ಗಮನಿಸುತ್ತಾ ಹೇಳುತ್ತಾನೆ .
ಸ್ವಾರಸ್ಯ : ದ್ರೌಪದಿಯು , ತನ್ನ ಮಾನವನ್ನು ರಕ್ಷಿಸಬೇಕೆಂದು ಭೀಮನ ಬಳಿಗೆ ರಾತ್ರಿ ವೇಳೆಯಲ್ಲಿ ಬಂದು , ಅಂತರಂಗದಲ್ಲಿ ತನ್ನ ಅವಸ್ಥೆಯನ್ನು ಹೇಳಿಕೊಂಡು ಭೀಮನು ಕೋಪಗೊಳ್ಳುವಂತೆ ಕೆಣಕಿ ಮಾತನಾಡುತ್ತಾಳೆ . ಇದರಿಂದ ಕೆರಳಿಕೋಪಾವಿಷ್ಟನಾದ ಭೀಮನು , ತನ್ನ ಅಂತರಂಗದಲ್ಲಿ ಶತ್ರುಗಳನ್ನು ಹಿಂಡಿ ಹಿಪ್ಪೆಮಾಡುತ್ತೇನೆಂದು ಬಗೆಯುತ್ತಾನೆ . ತಟಸ್ಥನಾಗಿದ್ದ ಭೀಮನು , ದ್ರೌಪದಿಯ ದಯನೀಯ ಸ್ಥಿತಿಯನ್ನು ಕಂಡು ಕನಿಕರಿಸಿ , ಶತ್ರುಗಳ ಬಗೆಗೆ ತಳೆದ ಭಾವ ಇದಾಗಿದೆ . ಭೀಮನ ಕೆಚ್ಚು ಇಲ್ಲಿ ಕಾಣಸಿಕೊಂಡಿದೆ .

FAQ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು ?

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವಳು ದೌಪದಿ

ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವರಾರು ?

ಅರಣ್ಯವಾಸದಲ್ಲಿದ್ದಾಗ ದೌಪದಿಯನ್ನು ಎಳೆದೊಯ್ದದವನು ಸೈಂಧವ .

2nd Puc Kannada Notes Chapter 1 ಕೆಳಗೆ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *