ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ | 2 PUC Urilingapeddiya Vachanagalu Kannada Notes

ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes

Urilingapeddi Vachanagalu in Kannada Notes , ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ . 2 PUC Urilingapeddiya Vachanagalu Kannada 2 Poem Notes Question Answer Pdf Download

Urilingapeddi Vachanagalu in Kannada Notes

ಈ ಲೇಖನದಲ್ಲಿ ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌

ಒಂದು ವಾಕ್ಯದಲ್ಲಿ ಉತ್ತರಿಸಿ :

ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು ?

ಉರಿಲಿಂಗಪೆದ್ದಿಯ ವಚನಗಳ ಅಂಕಿತ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ .

ಯಾವುದರಿಂದ ಪರಿಮಳವನ್ನು ಅರಿಯಬಹುದು ?

ಪುಷ್ಪದಿಂದ ಪರಿಮಳವನ್ನು ಅರಿಯಬಹುದು .

ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ ?

ಮಂಗಳ ಲಿಂಗವನ್ನು ಅಂಗದ ಮೇಲೆ ಧರಿಸಿದವನು ಅನ್ಯಲಿಂಗವನ್ನು ನೆನೆಯಲಾರ .

ಗುರು ಹೇಗೆ ವರ್ತಿಸಬಾರದು ?

ಗುರು ಲಘುವಾಗಿ ವರ್ತಿಸಬಾರದು .

Urilingapeddi Vachanagalu in Kannada Notes 2nd PUC

ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes
ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes

ಎರಡು ಮೂರುವಾಕ್ಯಗಳಲ್ಲಿ ಉತ್ತರಿಸಿ :

ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು ?

ಸೂರ್ಯನಿಂದ ಹಗಲು ಉಂಟಾಗುತ್ತದೆ . ಹಗಲಿನಿಂದ ಸಕಲ ಪ್ರಾಣಿ ಪಕ್ಷಿಗಳಿಗೂ ಚಟುವಟಿಕೆಯಿಂದ ಇರಲು ಸಾಧ್ಯ . ದೀಪ ಇಲ್ಲದೇ ರಾತ್ರಿಯಲ್ಲಿ ಬೆಳಕುಂಟಾಗದು . ದೀಪದ ಬೆಳಕೇ ಕತ್ತಲಲ್ಲಿ ಮಾರ್ಗದರ್ಶಕವಾಗಿರುತ್ತದೆ . ಇಲ್ಲೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ . ದೀಪ ಹಾಗೂ ಸೂರ್ಯನನ್ನು ಬಿಟ್ಟು ಬೆಳಕಿನ ಬಗ್ಗೆ ಯೋಚಿಸಲು ಸಾಧ್ಯವೇ ಇಲ್ಲ .

ಯಾರು ಮನೆಮನೆಯನ್ನು ತಿರಿಯನು ? ಕೆರೆಯುದಕವನ್ನರಸ ದವನು ಯಾರು ?

ಪರುಷದ ಮನೆಯಲ್ಲಿ ವಾಸಿಸುವವನು ಭಿಕ್ಷೆಗಾಗಿ ಮನೆಮನೆಯನ್ನು ತಿರುಗುವುದಿಲ್ಲ . ನದಿಯಲ್ಲಿರುವವನು ಬಾಯಾರಿಕೆಯಾದ ಕೂಡಲೇ ಕೆರೆಯ ನೀರನ್ನು ಅರಸಿಕೊಂಡು ಹೋಗುವುದಿಲ್ಲ .

ಗುರುವಿನ ಲಕ್ಷಣಗಳೇನು ?

ಗುರುವು ಯಾವಾಗಲೂ ಲಘುವಾಗಿ ವರ್ತಿಸಬಾರದು . ಗುರು ಯಾವಾಗಲೂ ಶಿಷ್ಯನ ಮೋಕ್ಷದ ಹಾದಿಗೆ ದಾರಿದೀಪವಾಗಿರ ಬೇಕು . ಗುರು ಲಿಂಗ ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಭಾವಿಸದೇ ಆಚರಿಸುವುದು ಗುರುವಿನ ಲಕ್ಷಣ , ಗುರು ಲಿಂಗ ಜಂಗಮವನ್ನು ಲಘುವಾಗಿ ಕಂಡ ವ್ಯಕ್ತಿ ತಾನೇ ಲಘುವಾಗುವನು ಎಂದು ಇಲ್ಲಿ ಹೇಳುತ್ತಾನೆ . ಗುರುವು ಲಿಂಗಪೂಜೆಯಲ್ಲಿ ಪ್ರಸಾದದಲ್ಲಿ ಕಡಿಮೆ ಮಾಡದೇ ಭಕ್ತಿಯನ್ನು ತೋರಿಸಬೇಕು . ಹಿರಿಯರು ತಮ್ಮ ಹಿರಿತನ ಬಿಟ್ಟು ಸಣ್ಣತನ ತೋರಿದಾಗ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ .

Urilingapeddi Vachanagalu in Kannada Notes KSEEB

ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes
ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes

urilingapeddi vachanagalu in kannada question answer

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ :

ಮಂಗಳ ಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ ?

ಮಂಗಳ ಲಿಂಗದ ಮಹತ್ವವನ್ನು ಉರಿಲಿಂಗ ಪೆದ್ದಿಯು ಕೆಲವು ದೃಷ್ಟಾಂತಗಳ ಮೂಲಕ ವಿವರಿಸಿದ್ದಾನೆ.ಪರುಷದ ಗೃಹದೊಳಗೆ ವಾಸವಾಗಿರುವವನಿಗೆ ಸಂಪತ್ತಿನ ಕೊರತೆ ಇರುವುದಿಲ್ಲ . ಅವನು ಭಿಕ್ಷೆಗಾಗಿ ಮನೆ ಮನೆಯನ್ನು ತಿರುಗುವುದಿಲ್ಲ . ನದಿಯೊಳಗೆ ಇಳಿದವನಿಗೆ ಒಂದು ವೇಳೆ ಬಾಯಾರಿಕೆಯಾದರೆ , ನೀರಿಗಾಗಿ ಕೆರೆಯನ್ನು ಹುಡುಕುತ್ತಾ ಹೋಗುವುದಿಲ್ಲ . ಅದೇ ರೀತಿ ಶರೀರದ ಮೇಲೆ ಮಂಗಳ ಲಿಂಗವನ್ನು ಧರಿಸಿದವನಿಗೆ ಅನ್ಯಲಿಂಗವನ್ನು ನೆನೆಯುವ ಅಗತ್ಯ ಬರುವುದಿಲ್ಲ .

ಅನ್ಯಲಿಂಗಗಳನ್ನು ನೆನೆಯುವುದೂ ಇಲ್ಲ . ಶರೀರದ ಮೇಲಿನ ಮಂಗಳಲಿಂಗವು ಅತ್ಯಂತ ಪವಿತ್ರವಾದದ್ದು . ಅಂತಹ ಪವಿತ್ರವಾದ ಮಂಗಳಲಿಂಗವನ್ನು ಧರಿಸಿದವನಿಗೆ ಅನ್ಯದೇವರ ಅವಶ್ಯಕತೆಯಿರುವುದಿಲ್ಲ ಎಂಬುದಾಗಿ ವಚನಕಾರರು ಮಂಗಳಲಿಂಗದ ಮಹತ್ವವನ್ನು ಸಾರಿದ್ದಾರೆ .

ಚಿಂತೆಯಿಲ್ಲದ ಅತಿಶ್ರೇಷ್ಠವಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸಬಹುದೆಂಬುದನ್ನು ಇಲ್ಲಿ ತಿಳಿಸಲಾಗಿದೆ . ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನು ಬೇರೆಯವರ ಬಗ್ಗೆ , ಬೇರೆಯದರ ಬಗ್ಗೆ ಚಿಂತಿಸನೆಂಬುದನ್ನು ಇಲ್ಲಿನ ವಚನಗಳು ನಿರೂಪಿಸುತ್ತವೆ .

ಗುರು ಲಘುವರ್ತನದಲ್ಲಿ ವರ್ತಿಸಬಾರದೇಕೆ ?

ಗುರುವಿನ ನಡತೆಯು ಘನತೆಯುಳ್ಳದ್ದಾಗಿರಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ . ಗುರು ಒಬ್ಬ ಶ್ರೇಷ್ಠ ವ್ಯಕ್ತಿ . ಅನ್ಯರಿಗೆ ದಾರಿಯನ್ನು ತೋರುವವನು ಭಕ್ತಿಗೆ ತಾನೇ ಮಾದರಿಯಾಗಬೇಕಾದವನು . ಅಂತಹ ಗುರುವಿನಿಂದ ಕೆಳಮಟ್ಟದ ನಡತೆ ಸರಿಹೊಂದುವುದಿಲ್ಲ . ಗುರುವು ಲಘುವರ್ತನದಲ್ಲಿ ವರ್ತಿಸಿದರೆ ಅದು ಆಚಾರ ಎನಿಸಿಕೊಳ್ಳುವುದಿಲ್ಲ .

ಗುರುವು ಆಚಾರವಂತನಾಗಬೇಕಾದರೆ ಆತನ ನಡತೆಯೂ ಶ್ರೇಷ್ಠವಾಗಿರಬೇಕು . ! ಲಘುವಿಗೆ ಗುರುವಿನ ವರ್ತನೆ ಅಸಾಧ್ಯ ಹಾಗಾಗಿ ಲಘು , ಎಂದಿಗೂ ಲಘುವಾಗಿಯೇ ವರ್ತಿಸುತ್ತಾನೆ . ಆದರೆ ಎಂದಿಗೂ ಗುರುವಾದವನು ಲಘುವಾಗಿ ವರ್ತಿಸಬಾರದು.ಇದು ಸಲ್ಲದ ಆಚಾರವಾಗುವುದು . ಸದಾ ಗುರುವರ್ತನೆಯಲ್ಲೇ ಮುನ್ನಡೆಯಬೇಕು .

ಗುರು – ಲಿಂಗ – ಜಂಗಮವೆಂಬ ತ್ರಿವಿಧವನ್ನು ಲಘುವಾಗಿ ಭಾವಿಸದೆ ಆಚರಿಸುವುದು ಗುರುವಿನ ಲಕ್ಷಣ . ಗುರುವು ಲಿಂಗ ಪೂಜೆಯಲ್ಲಿ , ಪ್ರಸಾದದಲ್ಲಿ ಕಡಿಮೆಯನ್ನು ಮಾಡದೇ ನಿಜ ಭಕ್ತಿಯನ್ನು ತೋರಿಸಬೇಕು . ಎಂದಿಗೂ ಲಘುವರ್ತನದಲ್ಲಿ ನಡೆದುಕೊಂಡು ತನ್ನ ಘನತೆಯನ್ನು ಹಾಳು ಮಾಡಿ ಕೊಳ್ಳಬಾರದು .

ಘನತೆಯನ್ನು ಹಾಳುಮಾಡಿಕೊಂಡಲ್ಲಿ ಗುರುವೇ ಸಮಾಜಕ್ಕೆ ಲಘುವಾದಂತೆ ತೋರುತ್ತಾನೆ . ಹಾಗಾಗಿ ಗುರು ಲಘುವರ್ತನದಲ್ಲಿ ವರ್ತಿಸಬಾರದು .

ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವೇನು ?

ಉರಿಲಿಂಗ ಪೆದ್ದಿಯು ಒಬ್ಬ ಚಿಂತಕನೆಂಬುದು ಆತನ ವಚನಗಳ ಆಶಯದಿಂದ ಅರಿವಾಗುತ್ತದೆ . ಈತ ಶಿವ ಮತ್ತು ಲಿಂಗವನ್ನು ಅಭೇದ್ಯವಾಗಿ ಪ್ರತಿಪಾದಿಸಿದ್ದಾನೆ . ಸೂರ್ಯನಿಲ್ಲದೇ ಹಗಲು ಸಾಧ್ಯವಿಲ್ಲ . ದೀಪವಿಲ್ಲದೇ ಬೆಳಕು ಇರಲು ಸಾಧ್ಯವಿಲ್ಲ , ಪುಷ್ಪವಿಲ್ಲದೆ ಪರಿಮಳವಿಲ್ಲ . ಅದೇ ರೀತಿ ಸಕಲವೂ ಇಲ್ಲದೆ ಪರಿಶುದ್ಧತೆಯನ್ನು ಕಾಣಲು ಸಾಧ್ಯವಿಲ್ಲ .

ಅದೇ ರೀತಿ ಪರಿಶುದ್ಧನಾದ ಅತ್ಯಂತ ಶ್ರೇಷ್ಠವಾದ ಪರಶಿವನ ಮೂಲಕ ಲಿಂಗವು ಕಾಣುತ್ತದೆ . ಶಿವನಿಂದಲೇ ಲಿಂಗವು ಅನುಭವಕ್ಕೆ ಬರುತ್ತದೆ . ಹೂವು – ಪರಿಮಳ ಹೇಗೆ ಅಭಿನ್ನವೋ ಅದೇ ರೀತಿ ಪರಶಿವ – ಲಿಂಗಗಳೂ ಭಿನ್ನವಲ್ಲ ಎಂಬುದನ್ನು ಹೇಳಲಾಗಿದೆ . ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಮಣಿಯ ಮನೆ ಯೊಳಗಿದ್ದವನು ಭಿಕ್ಷೆಗಾಗಿ ಮನೆ ಮನೆ ತಿರುಗುವುದಿಲ್ಲ . ಸಂಪತ್ತಿನ ಕೊರತೆ ಆತನಿಗೆ ಇರುವುದಿಲ್ಲ . ನದಿಯಲ್ಲಿರುವವನಿಗೆ ಬಾಯಾರಿಕೆಯಾದರೆ ನೀರಿಗಾಗಿ ಕೆರೆಯನ್ನು ಹುಡುಕುತ್ತಾ ಹೋಗುವುದಿಲ್ಲ .

ಅದೇ ರೀತಿ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗವನ್ನು ನೆನೆಯುವುದಿಲ್ಲ . ಗುರು ಒಬ್ಬ ಶ್ರೇಷ್ಠ ವ್ಯಕ್ತಿ , ಅನ್ಯರಿಗೆ ದಾರಿಯನ್ನು ತೋರುವವನು , ಭಕ್ತಿಗೆ ಮಾದರಿಯಾಗಿರುವವನು . ಭಕ್ತಿಯನ್ನು ಮೂಡಿಸುವ ಗುರುವು ಘನತೆಯುಳ್ಳವನಾಗಿರಬೇಕು , ( ಆಚಾರವಂತನಾಗಿರಬೇಕು , ಗುರುವು ಲಘುವಾಗಿ ವರ್ತಿಸಬಾರದು .

ಗುರುವು ಲಿಂಗಪೂಜೆಯಲ್ಲಿ , ಪ್ರಸಾದದಲ್ಲಿ ಕಡಿಮೆಯನ್ನು ಮಾಡದೇ ನಿಜಭಕ್ತಿಯನ್ನು ತೋರಿಸಬೇಕು ಎಂದಿದ್ದಾನೆ . ನಿಜಭಕ್ತಿಯಿಂದ ಜೀವನ ಸಾಗಿಸಬೇಕು , ನಿರ್ಮಲ ಮತ್ತು ಶುದ್ಧವಾದ ಮನಸ್ಸನ್ನು ಹೊಂದಲು ಶಿವಪೂಜೆಯ ಅಗತ್ಯವಿದೆ ಎನ್ನುವುದರ ಮೂಲಕ ಒಟ್ಟಾರೆಯಾಗಿ ಈತನ ವಚನಗಳಲ್ಲಿ ಲಿಂಗದ ಮಹತ್ವವನ್ನು ಪ್ರತಿಪಾದಿಸುವ ಆಶಯವಿದೆ ಎನ್ನಬಹುದು .

ಉರಿಲಿಂಗಪೆದ್ದಿ ವಚನಗಳು notes

ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes
ಉರಿಲಿಂಗಪೆದ್ದಿ ವಚನಗಳು ನೋಟ್ಸ್ | Urilingapeddi Vachanagalu in Kannada Notes Best No1 Notes

FAQ

ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು ?

ಉರಿಲಿಂಗಪೆದ್ದಿಯ ವಚನಗಳ ಅಂಕಿತ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ .

ಗುರು ಹೇಗೆ ವರ್ತಿಸಬಾರದು ?

ಗುರು ಲಘುವಾಗಿ ವರ್ತಿಸಬಾರದು .

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *