ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು । 10th Kannada Edege Bidda Akshara Notes

10ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ notes | Edege Bidda Akshara 10th Class Kannada Notes Free

10th kannada edege bidda akshara notes , 10th kannada edege bidda akshara question answer , edege bidda akshara kannada lesson , ಎದೆಗೆ ಬಿದ್ದ ಅಕ್ಷರ notes

Edege Bidda Akshara Kannada 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್

ಈ ಲೇಖನದಲ್ಲಿ 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಲೇಖಕರ ಪರಿಚಯ

devanuru mahadeva information in kannada
devanuru mahadeva information in kannada
ಲೇಖಕರು : ದೇವನೂರ ಮಹಾದೇವ

ಕಾಲ :ಕ್ರಿ.ಶ .1949

ಸ್ಥಳ : ಮೈಸೂರು ಜಿಲ್ಲೆ , ನಂಜನಗೂಡು ತಾಲ್ಲೂಕು , ದೇವನೂರು .

ಕೃತಿಗಳು: ದ್ಯಾವನೂರು , ಒಡಲಾಳ , ಗಾಂಧಿ ಮತ್ತು ಮಾವೋ , ನಂಬಿಕೆಯನೆಂಟ , ನೋಡು ಮತ್ತು ಕೂಡು , ಎದೆಗೆ ಬಿದ್ದ ಅಕ್ಷರ , ಕುಸುಮ ಬಾಲೆ .

ವಿಶೇಷ:* ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ .

 • ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು .
 • ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದ ಶಿಲ್ಪಿ .

ಪ್ರಶಸ್ತಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಕುಸುಮಬಾಲೆ ಕಾದಂಬರಿಗೆ )

ಆಕರಗ್ರಂಥ: ‘ ಎದೆಗೆ ಬಿದ್ದ ಅಕ್ಷರ ‘ ( ವೈಚಾರಿಕ ಬಿಡಿ ಲೇಖನಗಳ ಸಂಕಲನ ) .

Edege Bidda Akshara 10th Class Kannada Notes Free

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

10ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ notes | Edege Bidda Akshara 10th Class Kannada Notes Free
10ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ notes | Edege Bidda Akshara 10th Class Kannada Notes Free
ಇಂದಲ್ಲ – ನಾಳೆ ಫಲ ಕೊಡುವ ಅಂಶಗಳಾವುವು ?

ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವ ಅಂಶಗಳಾಗಿವೆ .

ಮನೆ ಮಂಚಮ್ಮ ಯಾರು ?

ಮನೆ ಮಂಚಮ್ಮ ಊರಿನ ಗ್ರಾಮದೇವತೆ .

ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು ?

ಕವಿ ಸಿದ್ಧಲಿಂಗಯ್ಯ ಅವರು ಮನೆ ಮಂಚಮ್ಮ ಎಂಬ ಗ್ರಾಮದೇವತೆಯ ಕತೆ ಹೇಳಿದ್ದಾರೆ .

ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು

ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು ?

ಹಳಕಟ್ಟಿಯವರು ‘ ಶಿವಾನುಭವ ಶಬ್ದಕೋಶ ‘ ಎಂಬ ಪುಸ್ತಕವನ್ನು ಬರೆದಿದ್ದಾರೆ .

ವಚನಕಾರರಿಗೆ ಯಾವುದು ದೇವರಾಗಿತ್ತು ?

ವಚನಕಾರರಿಗೆ ಅವರ ಪ್ರಜ್ಞೆಯೇ ದೇವರಾಗಿತ್ತು .

ಅಶೋಕ ಪೈ ಅವರ ವೃತ್ತಿ ಯಾವುದು ?

ಶಿವಮೊಗ್ಗದ ಡಾ . ಅಶೋಕ ಪೈ ಅವರು ಒಬ್ಬ ಮನೋವೈದ್ಯರು .

Edege Bidda Akshara 10th Class Kannada Notes Free

ದೇವನೂರರ ‘ ನನ್ನ ದೇವರು ‘ ಯಾರೆಂಬುದನ್ನು ಸ್ಪಷ್ಟಿಕರಿಸಿ .

ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ದೇವನೂರರು ನನ್ನ ದೇವರು ಎಂದಿದ್ದಾರೆ .

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು ?

ಶಿವಮೊಗ್ಗದ ಡಾ . ಅಶೋಕ ಪೈ ( ಮನೋವೈದ್ಯರು ) ಅವರು ಮೈಸೂರಿಗೆ ಬಂದಿದ್ದರು . ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು . ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ . ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ .

ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ . ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ .

ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ? ವಿವರಿಸಿ .

ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ , ಜ್ಞಾನಮಾತ್ರ ಅಲ್ಲ ಅದು ಕ್ರಿಯೆಯ ಅನುಭವದಿಂದ ಒಡ ಮಾಡುವುದು . ಅದು ಕೇಳಿ ತಿಳಿದಿದ್ದಲ್ಲ , ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ . ಅದು ತರ್ಕವಲ್ಲ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು .

edege bidda akshara in kannada

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ

ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ . ಹೀಗೆ ಕಟ್ಕಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು “ ನಿ ನನ್ ಮಕ್ಕಳಾ ” ಎಂದು ಅಬ್ಬರ ಮಾಡುತ್ತಾಳೆ .

ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಲಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ . ‘ ಏನಯ್ಯಾ ಏನ್ ಮಾಡ್ತಾ ಇದ್ದೀರಿ ? ‘ “ ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ “ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ? ‘ ‘ ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ . ‘ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ‘ -ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ !

ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ .

10ನೇ ತರಗತಿ ಕನ್ನಡ ಎದೆಗೆ ಬಿದ್ದಅಕ್ಷರ ನೋಟ್ಸ್‌

“ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ . ”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ಮಾತನ್ನು ದೇವತೆ ಮಂಚಮ್ಮ ಹೇಳುತ್ತಾಳೆ .

ದೇವತೆ ಮಂಚಮ್ಮ ‘ ಏನಯ್ಯಾ ಏನ್ ಮಾಡ್ತಾ ಇದ್ದೀರಿ ? ‘ ಎನ್ನುತ್ತಾಳೆ . “ ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ‘ ತಾಯಿ ‘ “ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ? ‘ ‘ ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ . ‘ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ‘ ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ !

“ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ .ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ . ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ .

ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕ ೦ ಪನ ಉಂಟು ಮಾಡುತ್ತಿರುತ್ತದೇನೊ . ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ .

“ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ಮಾತನ್ನು ಲೇಖಕರು ಹೇಳಿದ್ದಾರೆ . ವಚನಕಾರರ ದೃಷ್ಟಿಯಲ್ಲಿ ಅರಿವು ಎಂಬ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ .

edege bidda akshara kannada lesson

“ ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ . ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ . ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ . ಆಗ ಮಾತ್ರವೇ ಅದು ಜಾಗತೀಕರಣ .

ಭಾಷಾ ಚಟುವಟಿಕೆ

ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ

ಕಕ್ಕಾಬಿಕ್ಕಿ

ಪೋಲೀಸರನ್ನು ಕಂಡ ಕಳ್ಳರು ಕಕ್ಕಾಬಿಕ್ಕಿಯಾದರು .

ಆರಂಭಿಸು

ಉತ್ತಮ ಕೆಲಸಗಳನ್ನು ಆದಷ್ಟು ಬೇಗನೆ ಆರಂಭಿಸಬೇಕು .

ಪ್ರಯತ್ನಿಸು

ಶ್ರದ್ಧೆಯಿಂದ ಪ್ರಯತ್ನಿಸಿದರೆ ಎಲ್ಲವೂ ಸಿದ್ಧಿಸುತ್ತದೆ .

10ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ notes | Edege Bidda Akshara 10th Class Kannada Notes Free
10ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ notes | Edege Bidda Akshara 10th Class Kannada Notes Free
ಘಾಸಿಗೊಳಿಸು

ನಮ್ಮ ನಡೆ ನುಡಿಯಿಂದ ಯಾರ ಮನಸನ ಘಾಸಿಗೊಳಿಸಬಾರದು .

ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ
 • ಒಳಿತು ×ಕೆಡುಕು
 • ಪುಣ್ಯ ×ಪಾಪ
 • ಧರ್ಮ ×ಅಧರ್ಮ
 • ಸಮಷ್ಟಿ×ವ್ಯಷ್ಟಿ
 • ಬೆಳಕು×ಕತ್ತಲೆ

ಕೊಟ್ಟಿರುವ ವಿಷಯವನ್ನು ಕುರಿತು ಪ್ರಬಂಧ ರಚಿಸಿರಿ .

ಗ್ರಾಮ ಸ್ವರಾಜ್ಯ

ಭಾರತ ಹಳ್ಳಿಗಳ ದೇಶ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರು . 1929 ರಲ್ಲಿ ಗಾಂಧೀಜಿಯವರು ರಾಮರಾಜ್ಯದ ಕಲ್ಪನೆಯನ್ನು ಬಳಸಿದರು . ಗ್ರಾಮಸ್ವರಾಜ್ಯ ಅಥವಾ ರಾಮರಾಜ್ಯದಲ್ಲಿ ನಾಯಿಗೂ ನ್ಯಾಯ ದೊರೆಯುತ್ತಿತ್ತಂತೆ . ಗ್ರಾಮ ಸ್ವರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿಯಾಗಬೇಕು .

ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕು . ಅಧಿಕಾರ ವಿಕೇಂದ್ರಿಕರಣ ಆಗಬೇಕು . ಆದರೆ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ . ಉತ್ತರ ಕರ್ನಾಟಕದಲ್ಲಿ ಇಂದಿಗೂ ಕೆಲವು ಹಳ್ಳಿಯ ಮನೆಗಳಲ್ಲಿ ಶೌಚಾಲಯಗಳಲ್ಲಿ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯ ಮೂಲಕ ಹಳ್ಳಿಗಳಿಗೆ ಹೆಚ್ಚಿನ ಅನುದಾನ ಹಾಗೂ ಸ್ವಾತಂತ್ರ್ಯ ನೀಡಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ . ಗ್ರಾಮ ಸ್ವರಾಜ್ಯವೇ ಜನತಂತ್ರ – ಗಣರಾಜ್ಯವನ್ನು ರಕ್ಷಿಸುವ ಏಕೈಕ ದಾರಿಯಾಗಿದೆ .

ತ್ಯಾಜ್ಯವನ್ನು ನಿರ್ವಹಣೆ

ಸೌರಮಂಡಲದಲ್ಲಿ ಜೀವಿಗಳಿರುವ ಏಕೈಕ ಗ್ರಹ ಎಂದರೆ ಅದು ಭೂಮಿ . 21 ನೇ ಶತಮಾನದಲ್ಲಿ ಈ ಭೂಮಂಡಲವನ್ನು ಕಾಡುತ್ತಿರುವ ಸಮಸ್ಯೆ ಒಂದು ಅದು ತ್ಯಾಜ್ಯ ವಸ್ತು ನಿರ್ವಹಣೆ ಜನರು ಬಳಸಿ ಬಿಸಾಡುವ ಜೈವಿಕ , ಅಜೈವಿಕ , ರಾಸಾಯನಿಕ ವಸ್ತುಗಳು ತ್ಯಾಜ್ಯವಸ್ತುಗಳೆನಿಸುತ್ತವೆ . ಉದಾಹರಣೆಗೆ ಪ್ಲಾಸ್ಟಿಕ್ ಡಬ್ಬ , ಬಾಟಲಿಗಳು , ಪ್ಲಾಸ್ಟಿಕ್ ಬ್ಯಾಗ್ , ಪೇಪರ್ ಸಾಮಾಗ್ರಿ , ಆಹಾರದ ಪೊಟ್ಟಣಗಳು , ತರಕಾರಿ ಸಿಪ್ಪೆ , ಅಡುಗೆ ಮನೆಯ ಕಸ , ಹಳೆಯ ಟಿವಿ , ಟೇಪ್‌ರೆಕಾರ್ಡರ್ , ಕಂಪ್ಯೂಟರ್ , ಕೈಗಾರಿಕೆಗಳಿಂದ ಬರುವ ತ್ಯಾಜ್ಯಗಳು , ತ್ಯಾಜ್ಯವಸ್ತುಗಳಾಗಿವೆ . ನಗರಗಳಲ್ಲಿ ಈ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ .

ಪಾಲಿಕೆಗಳು ಇದಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿವೆ . ಹಸಿಕಸ ಮತ್ತು ಒಣಕಸ ಎಂದು ಬೇರ್ಪಡಿಸಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದೆ . ಇದಕ್ಕೆ ಸಾರ್ವಜನಿಕರೂ ಸಹಕರಿಸಬೇಕಾಗುತ್ತದೆ . ಕೆಲವು ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತದೆ . ಗಾಜು , ಪ್ಲಾಸ್ಟಿಕ್ , ಪೇಪರ್ , ಲೋಹ , ಇತ್ಯಾದಿಗಳನ್ನು ಬೇರ್ಪಡಿಸಿ ಮರು ಬಳಕೆ ಮಾಡುತ್ತಾರೆ .

ಕೊಳೆಯುವ ವಸ್ತುಗಳನ್ನು ಗೊಬ್ಬರವಾಗಿ ಪರಿವರ್ತಿಸುತ್ತಾರೆ ಕೆಲವನ್ನು ಸುಟ್ಟು ಬೂದಿ ಮಾಡಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ . ಇಂದು ತ್ಯಾಜ್ಯದಿಂದ ವಿದ್ಯುತ್ತನ್ನು ಉತ್ಪಾದನೆ ಮಾಡಬಹುದು . ಎಂದು ಸಂಶೋಧನೆ ಮಾಡಲಾಗಿದೆ . ಸ್ವೀಡನ್ , ನಾರ್ವೆ , ಡೆನ್ಮಾರ್ಕ್ , ಫ್ರಾನ್ಸ್‌ಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ . ಒಟ್ಟಿನಲ್ಲಿ ಸಾರ್ವಜನಿಕರೂ ಸಹ ಜಾಗೃತವಾಗಿದ್ದು ತ್ಯಾಜ್ಯವನ್ನು ವಿಲೇವಾರಿ ಹಾಗೂ ನಿರ್ವಹಣೆಯಲ್ಲಿ ಸಹಕರಿಸುವುದು ಅತ್ಯವಶ್ಯಕವಾಗಿದೆ .

edege bidda akshara kannada notes pdf

ಲಲಿತ ಕಲೆಗಳು

ಲಲಿತ ಕಲೆಗಳನ್ನು ಜನಪದ ಕಲೆಗಳು ಮತ್ತು ಅಷ್ಟಕಲೆಗಳೆಂದು ವರ್ಗೀಕರಿಸಬಹುದು . ಒಟ್ಟು ಲಲಿತ ಕಲೆಗಳನ್ನು ಪಂಚಕಲೆಗಳೆಂದು ಕರೆಯುತ್ತೇವೆ . ಸಂಗೀತ , ನೃತ್ಯ , ಶಿಲ್ಪಚಿತ್ರ , ಮತ್ತು ಸಾಹಿತ್ಯ ಕಲೆಗಳೆಂದು ಅವುಗಳನ್ನು ವರ್ಗೀಕರಿಸಲಾಗಿದೆ . ಸ್ವಯಂ ಪ್ರತಿಭೆ ಹಾಗೂ ಸತತ ಅಭ್ಯಾಸಗಳಿಂದ ಇವು ಅರಳಲು ಸಾಧ್ಯವಿದೆ .

ಈ ಕಲೆಗಳು ಪರಂಪರೆಯಿಂದ ನಮ್ಮ ದೇಶದಲ್ಲಿ ಬೆಳೆದು ಬಂದಿದೆ . ಭಾರತವು ಬಹು ಸಂಸ್ಕೃತಿಯ ಬಹು ಭಾಷೆಯ ನೆಲೆಯಾಗಿದೆ . ಪ್ರತಿಯೊಂದು ಹಳ್ಳಿಯೂ ಸಂಸ್ಕೃತಿಯ ತವರೂರಾಗಿತ್ತು . ಆದರೆ ಇಂದಿನ ಜಾಗತೀಕರಣ , ಆಧುನೀಕರಣದಿಂದ ಅವುಗಳು ಮೂಲೆ ಗುಂಪಾಗುತ್ತಿವೆ . ಕೆಲವು ಲಲಿತ ಕಲೆಗಳು ಆಗಲೇ ವಿನಾಶದ ಅಂಚಿನಲ್ಲಿವೆ . ಅವುಗಳ ಬಗ್ಗೆ ಅಭಿಮಾನ ಹೊಂದಿ ಅವುಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ .

ಹೆಚ್ಚುವರಿ ಪ್ರಶೋತ್ತರಗಳು

ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ…. ತಾಲೂಕಿನ ದೇವನೂರಿನವರು .

ನಂಜನಗೂಡು

ಕುಸುಮಬಾಲೆ ಕಾದಂಬರಿಗೆ……ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ .

ಕೇಂದ್ರ

ಪರಾಶರನ ಮಗನಾದ ಕೃಷ್ಣಪಾಯನರ ಮತ್ತೊಂದು ಹೆಸರು …….

ವ್ಯಾಸ

ಶುದ್ಧೋದನನ ಮಗನ ಹೆಸರು……

ಸಿದ್ಧಾರ್ಥ

ಹ್ಯಾಬ್ಲೆಟ್ , ಮ್ಯಾಕ್‌ಬೆತ್ , ಜೂಲಿಯಸ್ ಸೀಸರ್ , ಒಥೆಲೊ ಮುಂತಾದ ದುರಂತ ನಾಟಕಗಳ ಕರ್ತೃ……..

ಷೇಕ್ಸ್‌ಪಿಯರ್

ಟಾಲ್‌ಸ್ಟಾಯ್ ಕಳೆದ ಶತಮಾನದ……… ದೇಶದ ಮಹಾನ್ ಮೇಧಾವಿ

ರಷ್ಯಾ

edege bidda akshara kannada

ಸಾಪೇಕ್ಷ ಸಿದ್ಧಾಂತ ‘ ಎನ್ನುವ ತತ್ತ್ವವನ್ನು ಜಗತ್ತಿನ ಮುಂದಿಟ್ಟ ಪ್ರಸಿದ್ಧ ವಿಜ್ಞಾನಿ……..

ಐನ್‌ಸ್ಟೈನ್

ಭಾರತದಂಥ ರಾಷ್ಟ್ರದಲ್ಲಿ ಜಾತೀಯತೆ , ಗ್ರಾಮೀಣ ಜೀವನ , ಬಡತನ , ಮೌಡ್ಯದಿಂದಾಗಿ…….. ಭಾವನೆ ಪ್ರಾಚೀನಕಾಲದಿಂದಲೂ ಬೆಳೆದು ಬಂದಿದೆ .

ಮೇಲು – ಕೀಳು

ಕವಿ ಸಿದ್ಧಲಿಂಗಯ್ಯ ಒಮ್ಮೆ ದೇವನೂರ ಮಹಾದೇವ ಅವರಿಗೆ …….ಎಂಬ ಗ್ರಾಮದೇವತೆಯ ಕತೆ ಹೇಳಿದರು .

ಮನೆಮಂಚಮ್ಮ

“ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ……ಉಂಟಾ ನನ್ನ ಮಕ್ಕಳಾ ? ‘

ಮನೆ

ಬುದ್ಧನಂತೂ ಎಲ್ಲ …….ವನ್ನೂ ಮೀರಿದವನು .

ಸಹಸ್ರಮಾನ

ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಆದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ…..

ಪರಮಹಂಸ

Edege bidda akshara writer

‘ ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯ ಕರ್ತೃ……..

ಕುವೆಂಪು

ಶಿವಮೊಗ್ಗದ ಮನೋವೈದ್ಯರಾದ …….ಅವರು ಮೈಸೂರಿಗೆ ಬಂದಿದ್ದರು . ವನ್ನು ‘

ಡಾ . ಅಶೋಕ ಪೈ

ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ……ವನ್ನು ಎಚ್ಚರಗೊಳಿಸಬೇಕಾಗಿದೆ .

ಕಾರುಣ್ಯ

Edege Bidda Akshara 10th notes

‘ ವಚನಧರ್ಮ’ದ ಬಗೆಗೆ ದೇವನೂರರ ಅಭಿಪ್ರಾಯ ಏನು ?

ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು . ಹುಡುಕಿದರೂ ಜಗತ್ತಿನಲ್ಲೇ ಕರ್ನಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ , ಇದು ಜಾತಿಯಾದರೆ ಕೆಟ್ಟ ಜಾತಿ ; ಧರ್ಮವಾದರೆ ಮಹೋನ್ನತ ಧರ್ಮ ,

ಪರಮಹಂಸರ ವ್ಯಕ್ತಿತ್ವದ ವೈಶಿಷ್ಟ್ಯ ಎಂಥದ್ದು ?

ಪರಮಹಂಸರು , ಒಂದು ದೇಹ , ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಉದಾಹರಣೆ ಹೊಂದಿದ್ದಾರೆ . ಪರಮಹಂಸರು ಯಾವುದನ್ನೂ ಕೊಲ್ಲದೆ , ಒಳಿತುಗಳನ್ನೆ ಕೂಡಿಸುತ್ತ ಕೂಡಿಸುತ್ತಾ ಹೋದರು . ಇದು ಪರಮಹಂಸರ ವ್ಯಕ್ತಿತ್ವದ ವೈಶಿಷ್ಟ್ಯ .

ಇಂದಲ್ಲ – ನಾಳೆ ಫಲ ಕೊಡುವ ಅಂಶಗಳಾವುವು ?

ಬುದ್ಧನ ಕಾರುಣ್ಯ ದ್ವೇಷ ಅಸೂಯೆಗಳಿಂದ ಕೋಭೆಗೊಂಡು ನರಳುತ್ತಿರುವ ಜಗತ್ತು ಅದು ಘಾಸಿಗೊಳಿಸುವುದು – ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ . ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ .

ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ . ಈ ಎಳೆ ಹಿಡಿದು ಜಾಗತೀಕರಣನ್ನೂ ರೂಪಿಸಬೇಕಾಗಿದೆ . ಆಗ ಮಾತ್ರವೇ ಅದು ಜಾಗತೀಕರಣ ಎಂಬುದು ದೇವನೂರ ಮಹಾದೇವ ಅವರ ಅಭಿಪ್ರಾಯವಾಗಿದೆ . ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ .

ಪದಗಳ ಅರ್ಥ
 • ಅಂದಾಜಿಸು – ಊಹೆ ಮಾಡು
 • ಒಡಮೂಡು – ಹುಟ್ಟು
 • ಗುಡಿಮನೆ – ಚಿಕ್ಕ ದೇವಸ್ಥಾನ
 • ಕೋಭೆ – ತಳಮಳ
 • ಆರ್ತತೆ – ಬಯಕೆ
 • ಆವಾಹಿಸು -ಮೈಮೇಲೆ ಬರುವಂತೆ ಮಾಡಿಕೊ
 • ಚಿಂತಕ – ಹೊಸ ರೀತಿಯ ವಿಚಾರಗಳನ್ನು ಪ್ರತಿಪಾದಿಸುವವನು .

FAQ

ಎದೆಗೆ ಬಿದ್ದ ಅಕ್ಷರ ಪಾಠದ ಲೇಖಕರು ಯಾರು?

ದೇವನೂರ ಮಹಾದೇವ

ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ…. ತಾಲೂಕಿನ ದೇವನೂರಿನವರು?

ನಂಜನಗೂಡು

Edege Bidda Akshara Summary in Kannada

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *