ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ | International Relations and Politics in Kannada

ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ | International Relations and Politics in Kannada

ದ್ವಿತೀಯ ಪಿ.ಯು.ಸಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ರಾಜ್ಯಶಾಸ್ತ್ರ ನೋಟ್ಸ್ , Political Science Chapter 8 International Relations and Politics Questions and Answers, Notes Pdf, 2nd PUC Political

Antarrashtriya Sambandhagalu Mattu Vyavasthe

ಈ ಲೇಖನದಲ್ಲಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ರಾಜ್ಯಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳನ್ನು ನೀಡಲಾಗಿದೆ , ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು .

ಒಂದು ಅಂಕದ ಪ್ರಶ್ನೆಗಳು

ಅಂತರಾಷ್ಟ್ರೀಯ ಸಂಬಂಧ ಎಂದರೇನು ?

ರಾಷ್ಟ್ರಗಳ ನಡುವಿನ ಶಕ್ತಿ ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನಗಳನ್ನು ಅಂತಾರಾಷ್ಟ್ರೀಯ ಸಂಬಂಧ ಎನ್ನುವರು .

ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರಾರು ?

ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಜೆರ್ಮಿ ಬೆಂಥಾಮ್‌ರವರು ಮೊದಲು ಬಳಸಿದರು .

ಜೀನ್‌ಬೋಡಿನ್‌ರವರ ಕೃತಿಯನ್ನು ಹೆಸರಿಸಿ .

ಜೀನ್‌ಬೋಡಿನ್‌ರವರ ಕೃತಿ ‘ ದ ರಿಪಬ್ಲಿಕಾ ‘ .

International Relations and Politics Questions and Answers

ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes
ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes
ರಾಷ್ಟ್ರೀಯ ಶಕ್ತಿ ಎಂದರೇನು ?

ರಾಜ್ಯದ ಒಟ್ಟು ಮೊತ್ತದ ಸಾಮರ್ಥ್ಯ ಮತ್ತು ಬಲವನ್ನು ರಾಷ್ಟ್ರೀಯ ಶಕ್ತಿ ಎನ್ನುವರು .

ಶಕ್ತಿಬಣ ಎಂದರೇನು ?

ಶೀತಲ ಸಮರದೊಂದಿಗೆ ಪ್ರಪಂಚದಲ್ಲಿ ಕಮ್ಯುನಿಸ್ಟ್ ಮತ್ತು ಬಂಡವಾಳಶಾಹಿ ತತ್ವಗಳನ್ನಾಧರಿಸಿ ಹುಟ್ಟಿಕೊಂಡ ಗುಂಪುಗಳೇ ಶಕ್ತಿ ಬಣಗಳು ,
ಉದಾ: U.S.A and U.S.S.R

ರಾಷ್ಟ್ರಾಧಿಪತ್ಯ ಎಂದರೇನು ?

ಅಂತಾರಾಷ್ಟ್ರೀಯ ಸಂಬಂಧದಲ್ಲಿ ಒಂದು ವ್ಯವಸ್ಥೆಯ ಶಕ್ತಿಪ್ರದರ್ಶನವನ್ನು ರಾಷ್ಟ್ರಾಧಿಪತ್ಯ ಎನ್ನುವರು .

Antarrashtriya Sambandhagalu Mattu Vyavasthe Questions and Answers

ವೆಸ್ಟ್ ಫಾಲಿಯಾ ಒಪ್ಪಂದ ಯಾವಾಗ ನಡೆಯಿತು ?

ವೆಸ್ಟ್ ಫಾಲಿಯಾ ಒಪ್ಪಂದ ಕ್ರಿ.ಶ .1648 ರಲ್ಲಿ ನಡೆಯಿತು .

ರಾಷ್ಟ್ರಗಳ ಸಂಘ ಯಾವಾಗ ಅಸ್ತಿತ್ವಕ್ಕೆ ಬಂತು ?

ರಾಷ್ಟ್ರಗಳ ಸಂಘ 1920 ರಲ್ಲಿ ಅಸ್ತಿತ್ವಕ್ಕೆ ಬಂತು .

ರಾಷ್ಟ್ರಗಳ ಸಂಘ ಯಾವಾಗ ಕೊನೆಗೊಂಡಿತು ?

1939 ರಲ್ಲಿ 2 ನೇ ಮಹಾಯುದ್ಧ ಸ್ಫೋಟಗೊಂಡ ನಂತರ ರಾಷ್ಟ್ರಗಳ ಸಂಘ ಕೊನೆಗೊಂಡಿತು .

Antarrashtriya Sambandhagalu Mattu Vyavasthe pdf notes

ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂತು ?

1945 , ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು .

ವಿಶ್ವಸಂಸ್ಥೆಯ ಸನ್ನಿಧಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳು ಎಷ್ಟು ?

ವಿಶ್ವಸಂಸ್ಥೆಯ ಸನ್ನಿಧಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳು , 51 .

ವಿಶ್ವಸಂಸ್ಥೆಯ ಮೂಲತತ್ವಗಳನ್ನು ಯಾವ ವಿಧಿ ತಿಳಿಸುತ್ತದೆ ?

ವಿಶ್ವಸಂಸ್ಥೆಯ ಮೂಲತತ್ವಗಳನ್ನು ಪ್ರಣಾಳಿಕೆಯ 2 ನೇ ವಿಧಿಯಲ್ಲಿ ತಿಳಿಸುತ್ತದೆ .

International Relations and Politics Questions and Answers

ವಿಶ್ವಸಂಸ್ಥೆಯ ಯಾವುದಾದರೊಂದು ಮೂಲತತ್ವವನ್ನು ತಿಳಿಸಿ .

ಎಲ್ಲಾ ಸದಸ್ಯ ರಾಷ್ಟ್ರಗಳ ಸಾರ್ವಭೌಮ ಸಮಾನತೆ ತತ್ವದ ಮೇಲೆ ವಿಶ್ವಸಂಸ್ಥೆ ನಿಂತಿದೆ . ಇದು ಮೂಲತತ್ವಗಳ ಲ್ಲೊಂದಾಗಿದೆ .

ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು ?

ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ -193 .

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ರಾಷ್ಟ್ರದಿಂದ ಎಷ್ಟು ಸದಸ್ಯರು ಭಾಗವಹಿಸುವರು ?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ರಾಷ್ಟ್ರದಿಂದ 5 ಮಂದಿ ಸದಸ್ಯರು ಭಾಗವಹಿಸುವರು .

Antarrashtriya Sambandhagalu Mattu Vyavasthe 2nd puc

ವಿಶ್ವಸಂಸ್ಥೆಯ ಶಕ್ತಿಯುತ ಅಂಗ ಯಾವುದು ?

ವಿಶ್ವಸಂಸ್ಥೆಯ ಶಕ್ತಿಯುತ ಅಂಗ ಭದ್ರತಾ ಮಂಡಲಿ ,

ಭದ್ರತಾ ಮಂಡಲಿಯ ಖಾಯಂ ಸದಸ್ಯರು ಎಷ್ಟು ?

ಭದ್ರತಾ ಮಂಡಲಿಯ ಖಾಯಂ ಸದಸ್ಯರು 5 ರಾಷ್ಟ್ರಗಳು ,

ಅಂತಾರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ ?

ಅಂತಾರಾಷ್ಟ್ರೀಯ ನ್ಯಾಯಾಲಯ ಹೇಗ್‌ನಲ್ಲಿದೆ .

ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?

ವಿಶ್ವಸಂಸ್ಥೆಯ ಪ್ರಧಾನ ಕಛೇರಿ ನ್ಯೂಯಾರ್ಕ್ ನಗರದಲ್ಲಿದೆ .

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಎಷ್ಟು ನ್ಯಾಯಾಧೀಶರಿರುತ್ತಾರೆ ?

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಒಟ್ಟು 15 ನ್ಯಾಯಾಧೀಶರಿರುತ್ತಾರೆ .

ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಹೆಸರಿಸಿ .

ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾರೈದರ್ಶಿ ಬಾನ್ ಕಿ – ಮೂನ್ .

Antarrashtriya Sambandhagalu Mattu Vyavasthe Political Science Notes

ರಾಷ್ಟ್ರಾಧಿಪತ್ಯ ಎಂದರೇನು ?

ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ಅಧಿಕಾರ ಹಂಚಿಕೆಯಾಗಿರುವ ಸ್ಥಿತಿಗತಿಯನ್ನು ರಾಷ್ಟ್ರಾಧಿಪತ್ಯ ಎನ್ನುವರು .

ಏಕಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?

ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳಲ್ಲಿ ಒಂದೇ ರಾಷ್ಟ್ರ ತಮ್ಮ ಅಧಿಕಾರ ಸ್ಥಾನಮಾನಗಳನ್ನು ಹೊಂದಿದ್ದರೆ ಹಾಗೆಯೇ ತನ್ನ ಸಂಸ್ಕೃತಿ , ಆರ್ಥಿಕ ಸದೃಢತೆ ಮತ್ತು ಮಿಲಿಟರಿ ಪ್ರಭಾವವನ್ನು ಪ್ರದರ್ಶಿಸುವ ಸಾಮರ್ಥ್ಯ ವನ್ನು ಹೊಂದಿರುವುದನ್ನು ಏಕಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು .

ದ್ವಿಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ರಾಷ್ಟ್ರಗಳು ತಮ್ಮ ಬಲ ಪ್ರದರ್ಶನದಲ್ಲಿ ಪೈಪೋಟಿಯನ್ನು ಹೊಂದಿರುವ
ರಾಜಕೀಯ ಸಾಮರ್ಥ್ಯಗಳ ಸ್ಥಿತಿಗತಿಗಳನ್ನು ದ್ವಿಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು .

Antarrashtriya Sambandhagalu Mattu Vyavasthe

ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?

ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳಲ್ಲಿ ದೇಶಗಳು ತಮ್ಮ ಪ್ರಾಬಲ್ಯ ತೋರಿಸಲು ಪೈಪೋಟಿಯನ್ನು ಹೊಂದಿರುವ ರಾಜಕೀಯ ಸಾಮರ್ಥ್ಯಗಳ ಸ್ಥಿತಿಗತಿಗಳನ್ನು ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು .

ಸಂಯುಕ್ತ ರಾಷ್ಟ್ರ ಸಂಘ ಎಂದರೇನು ?

2 ನೇ ಜಾಗತಿಕ ಯುದ್ಧದ ನಂತರ ವಿಶ್ವದ ಪ್ರಬಲ ರಾಷ್ಟ್ರಗಳ ನಾಯಕರು ಯುದ್ಧವನ್ನು ತಡೆಗಟ್ಟಿ , ಶಾಂತಿ ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಸ್ಥಾಪನೆಗೊಂಡ ಸಂಸ್ಥೆಯನ್ನು ಅಂತರಾಷ್ಟ್ರೀಯ ಸಂಘ ಎನ್ನುವರು .

ಅಮ್ಫೀಟೋನಿಕ್ ಸಂಘ ಎಂದು ಯಾವುದನ್ನು ಕರೆಯಲಾಗಿದೆ ?

ಗ್ರೀಕ್ ದೇಶದಲ್ಲಿ ಕ್ರಿ.ಶ .6 ನೇ ಶತಮಾನದಲ್ಲಿ ಯುದ್ಧಗಳನ್ನು ತಡೆಗಟ್ಟಲು ಮತ್ತು ರಾಜ್ಯಗಳ ನಡುವೆ ಉತ್ತಮ ಮೈತ್ರಿ ಪ್ರೋತ್ಸಾಹಿಸಲು ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಘಟನೆಯನ್ನು ಅಮ್ ಫೀಟೂನಿಕ್ ( Ampeietyonic ) ಎನ್ನುವರು .

ಪ್ರಾದೇಶಿಕ ಸಂಘ ಎಂದರೇನು ?

ಒಂದು ಪ್ರದೇಶದಲ್ಲಿರುವ ಸಾರ್ವಭೌಮ ಸ್ವತಂತ್ರ ರಾಷ್ಟ್ರಗಳು ತಮ್ಮ ಸಾಮಾನ್ಯ ಆಸಕ್ತಿಗಳಿಂದ ಪ್ರಾದೇಶಿಕವಾಗಿ ಸ್ವ ಇಚ್ಛೆಯಿಂದ ಸ್ಥಾಪಿಸಿಕೊಂಡ ಸಂಘಟನೆಯನ್ನು ಪ್ರಾದೇಶಿಕ ಸಂಘ ಎನ್ನುವರು .

ಯಾವುದಾದರೊಂದು ಒಂದು ಪ್ರಾದೇಶಿಕ ಸಂಘವನ್ನು ಹೆಸರಿಸಿ .

ಸಾರ್ಕ್ ಒಂದು ಪ್ರಾದೇಶಿಕ ಸಂಘವಾಗಿದೆ .

ವಿಶ್ವಸಂಸ್ಥೆಯ ಯಾವುದಾದರೊಂದು ಅಂಗಸಂಸ್ಥೆ ಯನ್ನು ಹೆಸರಿಸಿ .

WHO – ವಿಶ್ವ ಆರೋಗ್ಯ ಸಂಘ , ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿದೆ .

ಆಸಿಯಾನ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂತು ?

ಆಸಿಯಾನ್ ಸಂಘಟನೆಯು ಅಗಸ್ಟ್ 8 , 1967 ರಲ್ಲಿ ಬ್ಯಾಂಕಾಕ್‌ನಲ್ಲಿ ಅಸ್ತಿತ್ವಕ್ಕೆ ಬಂತು .

ಆಸಿಯಾನ್ ಸಂಘಟನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ?

ಆಸಿಯಾನ್ ಸಂಘಟನೆಯಲ್ಲಿ 10 ಸದಸ್ಯ ರಾಷ್ಟ್ರಗಳಿವೆ .

ಭಾರತವು ಯಾವಾಗ ಆಸಿಯಾನ್‌ ಸಂಪೂರ್ಣವಾಗಿ ಅತಿಥಿ ರಾಷ್ಟ್ರವಾಯಿತು ?

ಭಾರತವು 1996 ರಲ್ಲಿ ಆಸಿಯಾನದ ಸಂಪೂರ್ಣ ಅತಿಥಿ ರಾಷ್ಟ್ರವಾಯಿತು .

ಭಾರತ ಮತ್ತು ಆಸಿಯಾನ್ ನಡುವಿನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು ?

ಭಾರತ ಮತ್ತು ಆಸಿಯಾನ್ ನಡುವಿನ ಪ್ರಥಮ ಸಮ್ಮೇಳನ 2002 ರಲ್ಲಿ ನಡೆಯಿತು .

ಸಾರ್ಕ್ ಯಾವಾಗ ಅಸ್ತಿತ್ವಕ್ಕೆ ಬಂದಿತು ?

ಸಾರ್ಕ್ 1985 ರಲ್ಲಿ ಅಸ್ತಿತ್ವಕ್ಕೆ ಬಂದಿತು

ಸಾರ್ಕ್‌ನ ಪಿತಾಮಹ ಯಾರು ?

ಸಾರ್ಕ್‌ನ ಪಿತಾಮಹ ಬಾಂಗ್ಲಾದೇಶದ ಅಧ್ಯಕ್ಷ ಜಿಯಾ ಉರ್ ರೆಹಮಾನ್ .

ಸಾರ್ಕ್‌ನ ಕೇಂದ್ರ ಕಛೇರಿ ಎಲ್ಲಿದೆ ?

ಸಾರ್ಕ್‌ನ ಕೇಂದ್ರ ಕಛೇರಿ ನೇಪಾಳದ ರಾಜಧಾನಿ ಕಣ್ಮಂಡುವಿನಲ್ಲಿದೆ .

ಸಾರ್ಕ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?

ಸಾರ್ಕ್‌ನ ಸದಸ್ಯ ರಾಷ್ಟ್ರಗಳು 8 .

ಅಫ್ಘಾನಿಸ್ತಾನ ಯಾವಾಗ ಸಾರ್ಕ್‌ನ ಸದಸ್ಯ ರಾಷ್ಟ್ರವಾಯಿತು ?

ಅಫ್ಘಾನಿಸ್ತಾನ 2010 ರಲ್ಲಿ ಸಾರ್ಕ್‌ನ ಸದಸ್ಯ ರಾಷ್ಟ್ರವಾಯಿತು .

ಸಾರ್ಕ್‌ನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು ?

ಸಾರ್ಕ್‌ನ ಪ್ರಥಮ ಸಮ್ಮೇಳನ ಡಿಸೆಂಬರ್ 7 ಮತ್ತು 8 ರಂದು 1985 ರಲ್ಲಿ ನಡೆಯಿತು .

ಯಾವಾಗ ಸಾರ್ಕ್ ಚಾರ್ಟರ್ ದಿನಾಚರಣೆ ಆಚರಿಸಲಾಗುತ್ತದೆ ?

ಡಿಸೆಂಬರ್ 8 ನ್ನು ಸಾರ್ಕ್ ಚಾರ್ಟರ್ ದಿನವನ್ನಾಗಿ ಆಚರಿಸಲಾಗುತ್ತದೆ .

SAARC ವಿಸ್ತರಿಸಿ .

South Aisan Association For Regional Co operation .
ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಘಟನೆ .

SAFTA ವಿಸ್ತರಿಸಿ ಬರೆಯಿರಿ .

SAFTA- South Asian Freen Trade Area .

SAEU ವಿಸ್ತರಿಸಿ .

SAEU – South Asian Economic Union .

ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?

ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು 5 .

ಯಾವಾಗ ದಕ್ಷಿಣ ಆಫ್ರಿಕಾ ಬ್ರಿಕ್ಸ್ ಸದಸ್ಯ ರಾಷ್ಟ್ರವಾಯಿತು ?

ಡಿಸೆಂಬರ್ 24 , 2010 ರಲ್ಲಿ ಬ್ರಿಕ್ಸ್‌ನ ಸದಸ್ಯ ರಾಷ್ಟ್ರವಾಗಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು .

ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes
ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes

ಎರಡು ಅಂಕದ ಪ್ರಶ್ನೆಗಳು –

ಅಂತಾರಾಷ್ಟ್ರೀಯ ಸಂಬಂಧಗಳ ಒಂದು ವ್ಯಾಖ್ಯೆ ನೀಡಿ .

ಓಲಾ ಜೊಸಫ್‌ರವರ ಪ್ರಕಾರ “ ಅಂತಾರಾಷ್ಟ್ರೀಯ ಸಂಬಂಧ ಎಂಬುದು ರಾಷ್ಟ್ರಗಳ ನಡುವೆ ಅಥವಾ ವಿವಿಧ ಸಂಘಟನೆಗಳ ಸದಸ್ಯರ ನಡುವೆ ಉಂಟಾಗುವ ಪ್ರತಿಕ್ರಿಯೆಗಳು ಅಂತಾರಾಷ್ಟ್ರೀಯ ವ್ಯವಸ್ಥೆಯೊಳಗೆ ನಡೆಯುವ ಅಧ್ಯಯನವಾಗಿರುತ್ತದೆ ” .

ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಪಾಮರ್ ಮತ್ತು ವ್ಯಾಖ್ಯಾನ ತಿಳಿಸಿ .

ಪರ್ಕಿನ್‌ರವರ ಪಾಮರ್ ಮತ್ತು ಪರ್ಕಿನ್‌ರವರ ಪ್ರಕಾರ “ ಅಂತರಾಷ್ಟ್ರೀಯ ಸಂಬಂಧಗಳ ಅಧ್ಯಯನ ಎಂಬುದು ಸಮಸ್ಯೆಯನ್ನು ಸುಧಾರಿಸಬಲ್ಲ ಒಂದು ವಿಜ್ಞಾನವಲ್ಲ , ಇದೊಂದು ಉತ್ತಮವಾದಂತಹ ಸಮಸ್ಯೆಗಳ ಪರಿಹಾರ ಹುಡುಕಬಲ್ಲ ಉದ್ದೇಶ ಮತ್ತು ಕ್ರಮಬದ್ಧ ಸಿದ್ಧಾಂತವಾಗಿದೆ .

ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿ ಪ್ರಧಾನವಾದದ್ದು ಎಂದು ತಿಳಿಸಿದವರು ಯಾರು ?

ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿ ಪ್ರಧಾನ ವಾದದ್ದು ಎಂದು ಪ್ರೊ.ಹೆನ್ಸ್ ಮಾರ್ಗಂಥೋರವರು ತಿಳಿಸಿದ್ದಾರೆ .

ರಾಷ್ಟ್ರೀಯ ಶಕ್ತಿ ಎಂದರೇನು ?

ರಾಷ್ಟ್ರೀಯ ಶಕ್ತಿ ಎಂದರೆ ರಾಜ್ಯದ ಒಟ್ಟು ಮೊತ್ತದ ಸಾಮರ್ಥ್ಯ ಮತ್ತು ಬಲ ಎಂಬುದಾಗಿದೆ . ಇವುಗಳನ್ನು ರಾಜ್ಯದ ಸ್ವರೂಪ ಮತ್ತು ಸಂಪನ್ಮೂಲನಕ್ಕೆ ಅನುಗುಣವಾಗಿ ಸೇರಿಸಲಾಗುತ್ತದೆ .

ರಾಷ್ಟ್ರೀಯ ಹಿತಾಸಕ್ತಿ ಎಂದರೇನು ?

ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಮೇಲಿನ ಕಾರಾಚರಣೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿ ಎನ್ನಲಾಗುತ್ತದೆ .

ಶಕ್ತಿ ಬಣಗಳು ಎಂದರೇನು ?

ಉದಾಹರಣೆ ಕೊಡಿ .
ಶೀತಲ ಸಮರದೊಂದಿಗೆ ಎರಡು ಶಕ್ತಿಬಣಗಳು ಹುಟ್ಟಿಕೊಂಡವು . ಅಮೆರಿಕಾ ಮತ್ತು ರಷ್ಯಾಗಳು ಬಂಡವಾಳಶಾಹಿ ಮತ್ತು ಕಮ್ಯುನಿಸಂ ಸಿದ್ಧಾಂತಗಳನ್ನು ಇತರ ರಾಷ್ಟ್ರಗಳ ಮೇಲೆ ಹೇರಲು ರಚಿಸಿಕೊಂಡ ಸೆಂಟೋ , ಸಿಟೋ ಮತ್ತು ಮಾಸ್ಕೊ ಸೇನಾಪಡೆಗಳೇ ಶಕ್ತಿಬಣಗಳು ,

ಯಾವಾಗ ವೆಸ್ಟ್‌ಫಾಲಿಯಾ ಮತ್ತು ಯುಟ್ರೆಚ್ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು ?

1648 ರಲ್ಲಿ ವೆಸ್ಟ್‌ಫಾಲಿಯಾ ಮತ್ತು 1713 ರಲ್ಲಿ ಯುಟ್ರೆಚ್ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು .

ರಾಷ್ಟ್ರಗಳ ಸಂಘದ ಎರಡು ಉದ್ದೇಶಗಳನ್ನು ತಿಳಿಸಿ . ರಾಷ್ಟ್ರಗಳ ಸಂಘದ ಎರಡು ಉದ್ದೇಶಗಳು :

1 ) ಅಂತಾರಾಷ್ಟ್ರೀಯ ಸಹಕಾರ ಸಮಸ್ಯೆ ಮತ್ತು ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸುವುದು .
2 ) ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದು .
3 ) ಆರೋಗ್ಯ ಸುಧಾರಣೆ , ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸುವುದು .

ವಿಶ್ವಸಂಸ್ಥೆಯ ಪ್ರಣಾಳಿಕೆ ಕುರಿತು ಬರೆಯಿರಿ .

ವಿಶ್ವಸಂಸ್ಥೆಯ ಪ್ರಣಾಳಿಕೆಯಲ್ಲಿ 51 ರಾಷ್ಟ್ರಗಳು ಸಹಿ ಮಾಡಿದ್ದವು . ಈ ಪ್ರಣಾಳಿಕೆಯಲ್ಲಿ 19 ಭಾಗಗಳು , 111 ವಿಧಿಗಳನ್ನು ಒಳಗೊಂಡಿದೆ . ಪ್ರಣಾಳಿಕೆಯ 1 ನೇ ವಿಧಿಯಲ್ಲಿ ಉದ್ದೇಶಗಳು , 2 ನೇ ವಿಧಿಯಲ್ಲಿ ಮೂಲತತ್ವಗಳ ಕುರಿತು ತಿಳಿಸಲಾಗಿದೆ .

ವಿಶ್ವಸಂಸ್ಥೆಯ ಎರಡು ಉದ್ದೇಶಗಳನ್ನು ತಿಳಿಸಿ . ವಿಶ್ವಸಂಸ್ಥೆಯ ಎರಡು ಉದ್ದೇಶಗಳು

1 ) ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಸ್ಥಾಪಿಸುವುದು , ಯುದ್ಧ ಹಾಗೂ ಅವರ ಭೀತಿಯಿಂದ ಜನರನ್ನು ಮುಕ್ತ ಗೊಳಿಸುವುದು .
2 ) ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸಿ ಆಕ್ರಮಣಕಾರಿ ರಾಷ್ಟ್ರದ ವಿರುದ್ಧ ಸಾಮೂಹಿಕ ಕ್ರಮ ತೆಗೆದುಕೊಳ್ಳುವುದು .

ವಿಶ್ವಸಂಸ್ಥೆಯ ಎರಡು ತತ್ವಗಳನ್ನು ತಿಳಿಸಿ .

1) ಎಲ್ಲಾ ಸದಸ್ಯ ರಾಷ್ಟ್ರಗಳ ಸಾರ್ವಭೌಮ ಸಮಾನತೆಯ ತತ್ವದ ಮೇಲೆ ನಿಂತಿದೆ.
2) ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಸದಸ್ಯ ರಾಷ್ಟ್ರ ಗಳು ಶಾಂತಿಯುತ ಮಾರ್ಗಗಳಿಂದ ಬಗೆಹರಿಸಿಕೊಳ್ಳುವುದು .

ವಿಶ್ವಸಂಸ್ಥೆಯ ಎರಡು ಅಂಗಗಳನ್ನು ಹೆಸರಿಸಿ , ವಿಶ್ವಸಂಸ್ಥೆಯ ಎರಡು ಅಂಗಗಳು

1 ) ಸಾಮಾನ್ಯ ಸಭೆ
2 ) ವಿಶ್ವಸಂಸ್ಥೆಯ ಎರಡು ತತ್ವಗಳು ಭದ್ರತಾ ಮಂಡಳಿ

ಸಾಮಾನ್ಯ ಸಭೆಯ ಎರಡು ಕಾವ್ಯಗಳನ್ನು ತಿಳಿಸಿ . ಸಾಮಾನ್ಯ ಸಭೆಯ ಎರಡು ಕಾರ್ಯಗಳು

1 ) ಸಾಮಾನ್ಯ ಸಭೆಯು ಚರ್ಚಿಸುವ , ಮೇಲ್ವಿಚಾರಣೆ ಮಾಡುವ ಹಣಕಾಸಿನ ಚುನಾವಣೆಯ ಮತ್ತು ಸಂವಿಧಾನಿಕ ಕಾರನಿರ್ವಹಿಸುತ್ತದೆ .
2 ) .ಸಭೆಯಲ್ಲಿ ಚರ್ಚಿಸಿದ ಹಾಗೂ ಭದ್ರತಾ ಮಂಡಲಿ
ಶಿಫಾರಸ್ಸು ಮಾಡಿದ ಮಸೂದೆಗಳನ್ನು ಅಂಗೀಕರಿಸುವ , ಪ್ರಶೋತ್ತರಗಳಿಗೆ ಅವಕಾಶ ನೀಡುವ ಮತ್ತು ಆದೇಶಿಸುವ ಶಾಸನೀಯ ಕಾರ್ಯ ನಿರ್ವಹಿಸುತ್ತದೆ .

ಭದ್ರತಾ ಮಂಡಳಿಯ ಸದಸ್ಯತ್ವ ಕುರಿತು ಬರೆಯಿರಿ .

ಭದ್ರತಾ ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳು ಇದ್ದು , ಇದರಲ್ಲಿ ಖಾಯಂ ರಾಷ್ಟ್ರಗಳು 5 , ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳಿರುತ್ತವೆ . 10 ಖಾಯಂ ಅಲ್ಲದ ರಾಷ್ಟ್ರಗಳನ್ನು ಸಾಮಾನ್ಯ ಸಭೆಯು 2 ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ .

ಭದ್ರತಾ ಮಂಡಳಿಯ ಎರಡು ಖಾಯಂ ಸದಸ್ಯರನ್ನು ಹೆಸರಿಸಿ

ಭದ್ರತಾ ಮಂಡಳಿಯ ಎರಡು ಖಾಯಂ ಸದಸ್ಯ ರಾಷ್ಟ್ರಗಳು ಅಮೇರಿಕಾ , ಚೀನಾ , 16. ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಯಾರು ? ವಿಶ್ವಸಂಸ್ಥೆಯ ಈಗಿನ ಪ್ರಧಾನ ಕಾವ್ಯದರ್ಶಿ ಬಾನ್ ಕಿ – ಮೂನ್ .

ವಿಶ್ವಸಂಸ್ಥೆಯ ಪ್ರಧಾನ ಕಾವ್ಯದರ್ಶಿ ಯಾರು ನೇಮಿಸುತ್ತಾರೆ ?

ವಿಶ್ವಸಂಸ್ಥೆಯ ಪ್ರಧಾನ ಕಾವ್ಯದರ್ಶಿಯನ್ನು ಸಾಮಾನ್ಯ ಸಭೆಯು ನೇಮಿಸುತ್ತದೆ .

ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸದಸ್ಯರು ಎಷ್ಟು ?

ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು 54 ಸದಸ್ಯರನ್ನು ಹೊಂದಿದೆ .

ಅಂತಾರಾಷ್ಟ್ರೀಯ ಸಂಘ ಕುರಿತು ವ್ಯಾಖ್ಯಾನ ನೀಡಿ .

ಪೋಟರ್‌ರವರ ಪ್ರಕಾರ “ ಅಂತರರಾಷ್ಟ್ರೀಯ ಸಂಘಗಳೆಂದರೆ ನೀತಿ ನಿಯಮಗಳ ಕ್ರಮಬದ್ಧತೆ ಮತ್ತು ರಾಷ್ಟ್ರಗಳ ಒಟ್ಟಾರೆ ಒಗ್ಗೂಡುವಿಕೆಯನ್ನು ಪ್ರದರ್ಶಿಸುವ ಅಂಗವಾಗಿರುತ್ತದೆ ” .

ಪ್ರಾದೇಶಿಕ ಸಂಘ ಕುರಿತು ವ್ಯಾಖ್ಯಾನ ನೀಡಿ .

“ ಒಂದು ನಾರ್ಮಲ್ ಹಿಲ್‌ರವರ ಪ್ರಕಾರ ಪ್ರದೇಶದಲ್ಲಿರುವ ಸಾರ್ವಭೌಮ ಸ್ವತಂತ್ರ ರಾಷ್ಟ್ರಗಳು ತಮ್ಮ ಸಾಮಾನ್ಯ ಆಸಕ್ತಿಗಳಿಂದ ಪ್ರಾದೇಶಿಕವಾಗಿ ಯಾರದೋ ಬಲವಂತವಿಲ್ಲದೆ ಸ್ವ ಇಚ್ಛೆಯಿಂದ ಸಂಘಟಿತರಾಗುವುದು

ಭಾರತ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಅಂತಾ ರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ ?

ಭಾರತದ ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿನ 51 ನೇ ವಿಧಿಯು ಅಂತರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ .

ರಾಷ್ಟ್ರಗಳ ಸಂಘ ಯಾವಾಗ ಜಾರಿಗೆ ಬಂದಿತು ? ಯಾವಾಗ ಸದಸ್ಯ ರಾಷ್ಟ್ರಗಳು ಸಹಿ ಮಾಡಿದವು ?

ರಾಷ್ಟ್ರಗಳ ಸಂಘ 10 ನೇ ಜನವರಿ 1920 ರಲ್ಲಿ ಜಾರಿಗೆ ಬಂದಿತು . 1918-19ರಲ್ಲಿ ಸದಸ್ಯ ರಾಷ್ಟ್ರಗಳು 8 ಸಹಿ ಮಾಡಿದ್ದವು .

ವಿಶ್ವಸಂಸ್ಥೆಯು ಯಾವಾಗ ಜಾರಿಗೆ ಬಂದಿತು ಮತ್ತು ಯಾವಾಗ ಸದಸ್ಯ ರಾಷ್ಟ್ರಗಳು ಸಹಿ ಮಾಡಿದವು ?

ವಿಶ್ವಸಂಸ್ಥೆಯು ಅಕ್ಟೋಬರ್ 24 , 1945 ಜಾರಿಗೆ ಬಂದಿತು . ಜನವರಿ 1 , 1942 ರಲ್ಲಿ ಸದಸ್ಯ ರಾಷ್ಟ್ರಗಳು ಸಹಿ ಮಾಡಿದವು .

ಜೋಸೆಫ್ ನೇ ರವರ ಪ್ರಾದೇಶಿಕ ಸಂಘಟನೆ ಕುರಿತು ವ್ಯಾಖ್ಯಾನ ನೀಡಿ .

ಜೋಸೆಫ್ ನೇ ರವರ ಪ್ರಕಾರ ” ಪ್ರಾದೇಶಿಕ ಸಂಘಟನೆ ಎಂದರೆ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ರಾಜ್ಯಗಳ ನಡುವೆ ವಿವಿಧ ಗುಂಪುಗಳಾಗಿ ರಚಿಸಿಕೊಳ್ಳುವ ಸಂಘಟನೆ ಗಳಾಗಿರುತ್ತವೆ “

ವಿಶ್ವಸಂಸ್ಥೆಯ ಎರಡು ಅಂಗಸಂಸ್ಥೆಗಳನ್ನು ಹೆಸರಿಸಿ .

ವಿಶ್ವಸಂಸ್ಥೆಯ ಎರಡು ಅಂಗಸಂಸ್ಥೆಗಳು ( 1 ) I LO – ಅಂತಾರಾಷ್ಟ್ರೀಯ ಕಾರ್ಮಿಕ ಸಂಘ 2 ) FAO – ಆಹಾರ ಮತ್ತು ಕೃಷಿ ಸಂಘ

ಯಾವುದಾದರೂ ಎರಡು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಾರಾಚರಣೆ ಹೆಸರಿಸಿ .

ಕೊರಿಯಾ ( 1950-54 ) ಅಫ್ಘಾನಿಸ್ತಾನ ( 1993 ) ದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಕಾರಾಚರಣೆ ನಡೆಸಿದೆ .

ಭಾರತ ಮತ್ತು ಅಸಿಯಾನ್ ಸಹಭಾಗಿತ್ವ ಕುರಿತು ಬರೆಯಿರಿ .

ಆಸಿಯಾನದಲ್ಲಿ 10 : ಅತಿಥಿ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು , 1992 ರಲ್ಲಿ ಭಾರತವು ಆಸಿಯಾನ್ ಮಾತುಕತೆ ಸಹಭಾಗಿತ್ವದಲ್ಲಿ ಪಾತ್ರವಹಿಸಿತು . ನಂತರ ಪೂರ್ತಿ ಸಹಭಾಗಿತ್ವವನ್ನು 1996 ರಲ್ಲಿ ಪಡೆಯಿತು . 2002 ರಿಂದ ಆಸಿಯಾನ್ – ಭಾರತವು ವಾರ್ಷಿಕ ಶೃಂಗಸಭೆಯನ್ನು ನಡೆಸುತ್ತಾ ಬಂದಿದೆ .

ಭಾರತ ಮತ್ತು ಅಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಬರೆಯಿರಿ .

ಭಾರತ ಮತ್ತು ಅಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ AIFTA ಎಂಬುದು ನಡೆದಿದ್ದು ಈ ಒಪ್ಪಂದದ ಪ್ರಕಾರ ಶೇ .90 ರಷ್ಟು ಉತ್ಪಾದನೆಗಳನ್ನು ಸುಂಕ ಮುಕ್ತವಾಗಿ ವ್ಯಾಪಾರ ಮಾಡಬಹುದಾಗಿದೆ . ಇವುಗಳಲ್ಲಿ ಕಾಫಿ , ಬ್ಲಾಕ್ ಟೀ , ಪೆಪ್ಪರ್ ಸುಮಾರು 4,000 ಉತ್ಪಾದನೆ ವಸ್ತುಗಳಿಗೆ ಶುಲ್ಕ ವಿನಾಯಿತಿ ನೀಡಲು 2016 ರವರೆಗೆ ಸಮಯ ನಿಗದಿಗೊಳಿಸಲಾಗಿದೆ .

ಸಾರ್ಕನ ಎರಡು ಸದಸ್ಯರುಗಳನ್ನು ಹೆಸರಿಸಿ ,

ಸಾರ್ಕನ ಎರಡು ಸದಸ್ಯ ರಾಷ್ಟ್ರಗಳು
1 ) ಭಾರತ
2 ) ಭೂತಾನ್

ಭಾರತದಲ್ಲಿ ನಡೆದ ಸಾರ್ಕ್ ಶೃಂಗ ಸಮ್ಮೇಳನಗಳನ್ನು ಹೆಸರಿಸಿ .

1 ) ಭಾರತದಲ್ಲಿ ನಡೆದ ಸಾರ್ಕ್ ಶೃಂಗ ಸಮ್ಮೇಳನಗಳು : ಬೆಂಗಳೂರಿನಲ್ಲಿ ಎರಡನೇ ಸಾರ್ಕ್ ಸಮ್ಮೇಳನ 1986 ರಲ್ಲಿ ನಡೆಯಿತು .
2 ) ನವದೆಹಲಿಯಲ್ಲಿ 8ನೇ ಸಾರ್ಕ್ ಸಮ್ಮೇಳನ 1995ರಲ್ಲಿ ನಡೆಯಿತು.

ಸಾರ್ಕ್ ಯಾವಾಗ ಸ್ಥಾಪನೆಯಾಯಿತು ಮತ್ತು ಅದರ ಕೇಂದ್ರ ಕಛೇರಿ ಎಲ್ಲಿದೆ ?

ಸಾರ್ಕ್ 1985 ರಲ್ಲಿ ಸ್ಥಾಪನೆಯಾಯಿತು ಮತ್ತು ಅದರ ಕೇಂದ್ರ ಕಛೇರಿ ನೇಪಾಳದ ರಾಜಧಾನಿ ಕಠಂಡುವಿನಲ್ಲಿದೆ .

ಸಾರ್ಕ್‌ನ ಎರಡು ಅಪೆಕ್ಸ್ ಸಂಸ್ಥೆಗಳನ್ನು ಹೆಸರಿಸಿ .

ಸಾರ್ಕ್‌ನ ಎರಡು ಅಪೆಕ್ಸ್ ಸಂಸ್ಥೆಗಳು :
1 )SARRALAW ಎಂಬ ಸಾರ್ಕ್ ಸದಸ್ಯ ರಾಷ್ಟ್ರಗಳ ಕಾನೂನು ಪಂಡಿತರ ಸಮುದಾಯದ ವ್ಯಕ್ತಿಗಳ ಸಂಘ ,
2 ) SCCI – ಸಾರ್ಕ್‌ನ ವಾಣಿಜ್ಯ ಮತ್ತು ಕೈಗಾರಿಕೆ .

ಭಾರತದಲ್ಲಿರುವ ಎರಡು ಸಾರ್ಕ್ ಪ್ರಾದೇಶಿಕ ಕೇಂದ್ರ ಗಳನ್ನು ಹೆಸರಿಸಿ .

ನವದೆಹಲಿಯಲ್ಲಿ 8 ನೇ ಸಾರ್ಕ್ ಸಮ್ಮೇಳನ 1995 ರಲ್ಲಿ ನಡೆಯಿತು . ಭಾರತದಲ್ಲಿರುವ ಎರಡು ಸಾರ್ಕ್ ಪ್ರಾದೇಶಿಕ ಕೇಂದ್ರಗಳು :
1 ) ಸಾರ್ಕ್ ದಾಖಲೆಯ ಕೇಂದ್ರ ( ಎಸ್‌ಡಿಸಿ ) , ನವದೆಹಲಿ
2 ) ಸಾರ್ಕ್‌ ಅಭಿವೃದ್ಧಿ ನಿಧಿ ( ಎಸ್‌ಡಿಎಫ್ )

ಬ್ರಿಕ್ಸ್‌ನ ಎರಡು ದೇಶಗಳನ್ನು ಹೆಸರಿಸಿ .

ಬ್ರಿಕ್ಸ್‌ನ ಎರಡು ದೇಶಗಳು :
1 ) ಭಾರತ
2 ) ರಷ್ಯಾ

ಬ್ರಿಕ್ಸ್‌ನ ಪ್ರಥಮ ಸಮ್ಮೇಳನ ಯಾವಾಗ ನಡೆಯಿತು ?

ಬ್ರಿಕ್ಸ್‌ನ ಪ್ರಥಮ ಸಮ್ಮೇಳನ ಜುಲೈ 17 , 2006 ರಂದು ನಡೆಯಿತು .

ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes
ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ Notes | Antarrashtriya Sambandhagalu Mattu Vyavasthe Best No1 Notes

ಐದು ಅಂಕದ ಪ್ರಶ್ನೆಗಳು

ಅಂತರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಯನ್ನು ಕುರಿತು ಬರೆಯಿರಿ.
  • ರಾಷ್ಟ್ರೀಯ ಪರಮಾಧಿಕಾರ
  • ರಾಷ್ಟ್ರೀಯ ಹಿತಾಸಕ್ತಿ
  • ರಾಷ್ಟ್ರೀಯ ಶಕ್ತಿ
  • ಶಕ್ತಿ ಬಣಗಳು
  • ರಾಷ್ಟ್ರಾಧಿಪತ್ಯ ಅಥವಾ ದೃವೀಕರಣ
  • ಶಕ್ತಿ ಸಮತೋಲನ
ವಿಶ್ವಸಂಸ್ಥೆಯ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ.
  • 1945 ಅಕ್ಟೋಬರ್ 24 ರಂದು ಸ್ಥಾಪನೆ.
  • ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ.
  • ರಾಷ್ಟ್ರ ರಾಷ್ಟ್ರಗಳ ನಡುವೆ ಸಹಕಾರ.
  • ಸಾರ್ವಭೌಮತ್ವಕ್ಕೆ ಋಣಾತ್ಮಕ ಕೊಡುಗೆ.
  • ಸಹಾಯಕ ಅಂಗ ಸಂಸ್ಥೆಗಳಾದ ILO, WHO, FAO
  • ಮತ್ತು UNICEF ಮೂಲಕ ಕಾರ್ಯ ನಿರ್ವಹಿಸುತ್ತದೆ.
  • ತನ್ನ ಆರು (6) ಅಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ.
  • ಸದಸ್ಯ ರಾಷ್ಟ್ರಗಳ ಸಮಸ್ಯೆಗಳಿಗೆ ಸಹಕಾರ ನೀಡುತ್ತದೆ.
  • ಎಲ್ಲ ರಾಷ್ಟ್ರಗಳ ಸೂಕ್ತ ಸಮಾನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತದೆ.
ವಿಶ್ವಸಂಸ್ಥೆಯ ಸ್ಥಾಪನೆ ಮತ್ತು ಪ್ರಗತಿಯಲ್ಲಿ ಭಾರತದ ಪಾತ್ರವನ್ನು ವಿವರಿಸಿ.
  • ಭಾರತ ಮತ್ತು ವಿಶ್ವಸಂಸ್ಥೆ
  • ಮೂಲ ಸದಸ್ಯ ರಾಷ್ಟ್ರ
  • ಸಾಮಾನ್ಯ ಸಭೆಯಲ್ಲಿ ಭಾರತದ ಪಾತ್ರ
  • ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳ ಕಾರ್ಯ ಯೋಜನೆಗೆ ಸಹಕಾರ.
  • ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಸಹಾಯ.
  • ಪರಿಸರ ರಕ್ಷಣೆಯಲ್ಲಿ ಪಾತ್ರ

2nd Puc ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ

ಭಾರತ-ಆಸಿಯಾನ್ ಸಂಘಟನೆಯ ಸಹಕಾರ ಕ್ಷೇತ್ರಗಳನ್ನು ವಿವರಿಸಿ.
  • ಸ್ಥಾಪನೆ
  • ಮೂಲ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ಸಹಕಾರ
  • ಅಭಿವೃದ್ಧಿ ಯೋಜನೆಯಲ್ಲಿ ಭಾರತದೊಂದಿಗಿನ ಸಹಕಾರ ಕ್ಷೇತ್ರಗಳು
  • ಕಾರ್ಯನಿರತ ಸಹಕಾರ
  • ಆರ್ಥಿಕ ಸಹಕಾರ
  • ಶಾಂತಿ ಮತ್ತು ಭದ್ರತೆಯ ಸಹಕಾರ
  • ಪ್ರವಾಸೋದ್ಯಮದಲ್ಲಿ ಸಹಕಾರ
  • ಸಮ್ಮೇಳನ ಮಟ್ಟದಲ್ಲಿ ಸಹಕಾರ. (ವಿವರಣೆ)
ಸಾರ್ಕ್ (SAARC) ನ ಸ್ಥಾಪನೆ ಮತ್ತು ಸಹಕಾರ ಕ್ಷೇತ್ರಗಳನ್ನು ಕುರಿತು ವಿವರಿಸಿ.
  • ಸ್ಥಾಪನೆ
  • ಸಂಸ್ಥಾಪಕರು
  • ಭಾರತ ಮತ್ತು ಸಾರ್ಕ್ ನಡುವಿನ ಸಹಕಾರ ಕ್ಷೇತ್ರಗಳು
  • ಸಾರ್ಕ್‌ನ ಪ್ರಾದೇಶಿಕ ಕೇಂದ್ರಗಳು
  • ಆರ್ಥಿಕ ಸಹಕಾರ
  • ಜನ ಸಂಪರ್ಕ
  • ಶೈಕ್ಷಣಿಕ ಸಹಕಾರ
  • ಭಯೋತ್ಪಾದನೆ ನಿರ್ಮೂಲನೆ

2nd PUC Political Science Chapter 8 Notes In Kannada

FAQ

ಅಂತರಾಷ್ಟ್ರೀಯ ಸಂಬಂಧ ಎಂದರೇನು ?

ರಾಷ್ಟ್ರಗಳ ನಡುವಿನ ಶಕ್ತಿ ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನಗಳನ್ನು ಅಂತಾರಾಷ್ಟ್ರೀಯ ಸಂಬಂಧ ಎನ್ನುವರು .

ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರಾರು ?

ಅಂತಾರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಜೆರ್ಮಿ ಬೆಂಥಾಮ್‌ರವರು ಮೊದಲು ಬಳಸಿದರು .

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *