ಹಬ್ಬಲಿ ಅವರ ರಸಬಳ್ಳಿ | Habbali Avara Rasaballi Kannada Notes

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information

Habbali Avara Rasaballi Questions and Answers Pdf, Notes, 2nd puc kannada notes habbali avara rasabali , Summary, 2nd PUC Kannada Textbook Answers, ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌

Habbali Avara Rasaballi Kannada Notes

ಈ ಲೇಖನದಲ್ಲಿ ಹಬ್ಬಲಿ ಅವರ ರಸಬಳ್ಳಿ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

2nd puc kannada notes habbali avara rasabali

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information

ಒಂದು ವಾಕ್ಯದಲ್ಲಿ ಉತ್ತರಿಸಿ :

ಉತ್ತಮರ ಗೆಳೆತನ ಹೇಗೆ ಇರಬೇಕು ?

ಉತ್ತಮರ ಗೆಳೆತನ ಬಂಗಾರದ ಪುತ್ಥಳಿಯಂತೆ ಇರಬೇಕು .

ಮಂದಿ ಮಕ್ಕಳೊಂದಿಗೆ ಹೇಗಿರಬೇಕು ?

ಮಂದಿ ಮಕ್ಕಳೊಂದಿಗೆ ಛಂದದಿಂದ ಹೊಂದಿಕೊಂಡಿರಬೇಕು .

ಎಂತಹ ನೆಲೆಯವರು ಇರಬೇಕು ?

ಬುದ್ಧಿವಂತರಾದ ನೆರೆಯವರು ಇರಬೇಕು .

Habbali Avara Rasaballi Questions and Answers

ಸುಟ್ಟು ಸುಣ್ಣವಾದುದು ಯಾವುದು ?

ಕಷ್ಟವನ್ನು ಅನುಭವಿಸಿದ ದೇಹವು ಸುಟ್ಟು ಸುಣ್ಣವಾಗಿದೆ .

ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು ?

ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪು .

ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?

ತಾಯಿಯನ್ನು ಜ್ಯೋತಿಗೆ ಹೋಲಿಸಲಾಗಿದೆ .

ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು ?

ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಹೆತ್ತ ತಾಯಿ .

ತಾಯಿಯನ್ನು ಯಾವಾಗ ನೆನೆಯಬೇಕು ?

ಊರೆಲ್ಲ ಉಂಡು ಮಲಗುವಾಗ ಬೆಳ್ಳಿಚಿಕ್ಕಿ ಮೂಡುವಾಗ ತಾಯಿಯನ್ನು ನೆನೆಯಬೇಕು .

ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ ?

ತವರಿನ ರಸಬಳ್ಳಿ ಹೊಳೆದಂಡೆಯ ಕರಕಿಯ ಕುಡಿಯ ಹಾಗೆ ಹಬ್ಬಲಿ ಎಂದು ಗರತಿಯು ಹಾಲುಂಡ ತವರನ್ನು ಹರಸುತ್ತಾಳೆ .

Habbali Avara Rasaballi Kannada Notes Question Answer Pdf

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information
ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಬಡತನ ಹೇಗೆ ಬಯಲಾಯಿತು ?

ಬಡತನ ಬಂದಾಗ ಮಕ್ಕಳನ್ನು ಹೊಡೆಯಬಾರದು . ಮಕ್ಕಳಲ್ಲಿ ಬಡತನವನ್ನು ಮರೆಸುವ ಶಕ್ತಿ ಇದೆ . ‘ ಬಡತನವನ್ನು ಮರೆಸುತ್ತಾರೆ . ಮಕ್ಕಳು ಆಡುತ್ತಾ ಬಂದು ತೊಡೆಯ ಮೇಲೆ ಬಡತನವೆಲ್ಲ ಬಯಲಾಗುತ್ತದೆ . ಕುಳಿತುಕೊಂಡರೆ ( ಕಡಿಮೆಯಾಗುತ್ತದೆ )

ಇದ್ದಷ್ಟು ಬುದ್ದಿಯನ್ನು ಹೇಗೆ ಕಳೆದುಕೊಳ್ಳುತ್ತಾರೆ ?

ನೆರೆಮನೆಯವರು ಬುದ್ಧಿವಂತರಾಗಿರಬೇಕು . ಒಳ್ಳೆಯವರಾಗಿರಬೇಕು . ಇದ್ದರೆ ಈ ರೀತಿಯ ಮನೆಯವರು ಇರಬೇಕು . ಅಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ . ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ . ಹೀಗೆ ಇದ್ದಷ್ಟು ಬುದ್ದಿಯನ್ನು ಕಳೆದುಕೊಳ್ಳುತ್ತಾರೆ .

ಹಿತ್ತಾಳೆಗಿಂತ ಬಲುಹೀನ ಯಾವುದು ?

ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ , ಒಳ್ಳೆಯವರ ಗೆಳೆತನ ಅಮೂಲ್ಯವಾದುದು . ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ . ಕೆಟ್ಟವರ ಗೆಳೆತನಕ್ಕೆ ಯಾವ ಬೆಲೆಯೂ ಇರುವುದಿಲ್ಲ . ಆದ್ದರಿಂದ ಒಳ್ಳೆಯವರ ಸಹವಾಸ ಮಾಡಿ ಬಂಗಾರದಂತೆ ಇರಬೇಕು .

Habbali Avara Rasaballi Kannada Notes In Karnataka

ಹಡೆದವ್ವನನ್ನು ಯಾವಾಗ ನೆನೆಯಬೇಕು ?

ಹಡೆದವ್ವನನ್ನು ಯಾವ ವೇಳೆಯಲ್ಲಾದರೂ , ಯಾವ ಹೊತ್ತಿನಲ್ಲಾದರೂ ನೆನೆಯಬಹುದು . ಎಷ್ಟು ಹೊತ್ತಿನಲ್ಲಾದರೂ ನೆನೆಯಬಹುದು . ಊರೆಲ್ಲ ಉಂಡು ಮಲಗಿದಾಗ ರಾತ್ರಿಯಲ್ಲಿ ಬೆಳ್ಳಿಚಿಕ್ಕಿ ಮೂಡಿದಾಗ ತಾಯಿಯನ್ನು ನೆನೆಯಬೇಕು .

ಹಡೆದ ತಂದೆ – ತಾಯಿಯರ ಮಹತ್ವ ತಿಳಿಸಿರಿ .

ಉಂಗುರ ಕಳೆದು ಹೋದರೆ ಮಾಡಿಸಬಹುದು . ಸೊಂಟಕ್ಕೆ ಹಾಕುವ ದಾರ ಮುರಿದರೆ ಮಾಡಿಸಬಹುದು . ಹೆಂಡತಿ ಸತ್ತು ಹೋದರೆ ಮತ್ತೊಂದು ಹೆಂಡತಿಯನ್ನು ತರಲು ಸಾಧ್ಯವಿದೆ . ಆದರೆ ನಮ್ಮನ್ನು ಹಡೆದಂಥ , ಸಾಕಿ ಸಲಹಿದಂಥ ತಂದೆ ತಾಯಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ . ಇದೇ ಹಡೆದ ತಂದೆ – ತಾಯಿಯರ ಮಹತ್ವ .

Habbali Avara Rasaballi Kannada Notes KSEEB

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information
ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | Habbali Avara Rasaballi Kannada Notes Free No1 Information

ಐದಾರು ವಾಕ್ಯಗಳಲ್ಲಿ ಉತ್ತರಿಸಿ :

ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿರಿ .

ಬಡತನ ಸಿರಿತನ ಯಾವುದೂ ಶಾಶ್ವತವಲ್ಲ ಎಂದು ಜನಪದರು ತಿಳಿಸಿದ್ದಾರೆ . ಮನುಷ್ಯ ಬಂಗಾರವನ್ನು ಮೈ ಮೇಲೆ ಹೇರಿಕೊಂಡು ಬಡವರನ್ನು , ಅವರ ಅಸಹಾಯಕತೆಯನ್ನು ಅಣಕಿಸಿ ಬೀಗುತ್ತಾನೆ . ಆದ್ದರಿಂದಲೆ ಜನಪದರು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂದಿದ್ದಾರೆ . ಸಿರಿತನ ಬಂಗಾರ ಇವೆಲ್ಲವೂ ದೊರೆತಷ್ಟೇ ವೇಗವಾಗಿ ನಮ್ಮಿಂದ ದೂರವಾಗುತ್ತದೆ . ಬಡತನ ಬರಲೂಬಹುದು . ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು . ಶ್ರೀಮಂತಿಕೆಯ ಮದ ಇರಬಾರದು .

ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ . ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ . ಮಧ್ಯಾಹ್ನದ ಹೊರಳಿದ ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟು ಹೋಗಬಹುದು . ಶ್ರೀಮಂತಿಕೆಯ ಅಹಂ ಇರಬಾರದು ಎಂದಿದ್ದಾರೆ . ಸಿರಿತನ ಬಂದಾಗ ಬೀಗದೆ ಜಂಭದಿಂದ ವರ್ತಿಸದೆ , ಎಲ್ಲರೊಂದಿಗೆ ಪ್ರೀತಿ – ಸಾಮರಸ್ಯದಿಂದ ಬಾಳುವುದು ಮುಖ್ಯ ಎಂಬುದನ್ನು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಮಾತಿನ ಮೂಲಕ ಹೇಳಿದ್ದಾರೆ .

ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು ? ವಿವರಿಸಿರಿ .

ಜನಪದ ಗೀತ ಪ್ರಕಾರ ತುಂಬಾ ಜನಪ್ರಿಯವಾದುದು . ತ್ರಿಪದಿಯಲ್ಲಿ ನೆರೆಹೊರೆಯ ಸಂಬಂಧದ ಕುರಿತಾಗಿ ಹೇಳಲಾಗಿದೆ . ಮಾನವ ಸಮಾಜ ಜೀವಿ , ಸಮಾಜ ಜೀವಿಯಾದ ಮಾನವ ನೆರೆಹೊರೆಯವ ರೊಂದಿಗೆ ಸೇರಿ ಬದುಕಬೇಕಾಗುತ್ತದೆ . ನೆರೆ ಹೊರೆಯವರಿಂದ ಸಹಾಯ ತೆಗೆದುಕೊಂಡು ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಅನ್ನೋನ್ಯತೆಯಿಂದ ಬದುಕಿದರೆ ಬಾಳು ಹಿತಕರವಾಗಿರುತ್ತದೆ . ನೆರೆಮನೆಯವರು ಬುದ್ಧಿವಂತರಾಗಿರಬೇಕು . ಒಳ್ಳೆಯವರಾಗಿರ ಬೇಕು . ಇದ್ದರೆ ಈ ರೀತಿಯ ಮನೆಯವರು ಇರಬೇಕು . ಅಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ . ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ . ಆದ್ದರಿಂದ ನಾವು ವಾಸಿಸುವ ಪರಿಸರದಲ್ಲಿ ಬುದ್ಧಿವಂತರ ನೆರೆಯಿರುವುದು ಮುಖ್ಯವೆಂದು ಜನಪದರು ಹೇಳಿದ್ದಾರೆ .

ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು ? ಹೇಗೆ ?

ಜನಪದ ಸಾಹಿತ್ಯದಲ್ಲಿ ತ್ರಿಪದಿಯು ಪದ್ಯ ಪ್ರಕಾರಕ್ಕೆ ಸಂಬಂಧಿಸಿ ದುದಾಗಿದೆ . ಜನಪದ ಗೀತ ಪ್ರಕಾರ ತು೦ಬಾ ಜನಪ್ರಿಯವಾದುದು . ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ . ಇದರೊಳಗೆ ತಾಯಿಯ ರೂಪ – ಸ್ವರೂಪ , ತೋರಿದ ಪ್ರೀತಿಯಿದೆ . ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ
ತಾಯಿಗೆ . ಏಕೆಂದರೆ ಆಕೆಯೂ ಒಬ್ಬ ಹೆಣ್ಣು . ತನ್ನ ಮಗಳು ಅನುಭವಿಸುವ ಕಷ್ಟ ನೋವುಗಳನ್ನು ಸ್ವಾನುಭವದಿಂದ ಅರಿಯಬಲ್ಲಳು . ಮತ್ತು ಸಹಾನುಭೂತಿಯಿಂದ ಕಾಣುವ ಕಣ್ಣು ಅವಳದಾಗಿದೆ . ಹೆಣ್ಣಿನ ಬಗ್ಗೆ ಮನೆಯ ಬೇರೆ ಯಾರಿಗೂ ಅರ್ಥವಾಗದೇ ಇರುವುದು ತಾಯಿಗೆ ಅರ್ಥವಾಗುತ್ತದೆ . ಹಡೆದ ತಾಯಿ ಮಾತ್ರ ಮಗಳ ನೋವನ್ನು ತಿಳಿದುಕೊಳ್ಳಬಲ್ಲಳು . ಹುತ್ತದ ಮೇಲಿರುವ ಸರ್ಪದ ಬೇಗೆ ಅರ್ಥವಾಗುವುದು ಅದನ್ನು ಹೊತ್ತಿರುವ ಶಿವನಿಗೆ ಮಾತ್ರ . ಅದರಂತೆಯೇ ಹೆಣ್ಣನ್ನು ಹೆತ್ತ ತಾಯಿಗೆ ಮಾತ್ರ ಹೆಣ್ಣುಮಕ್ಕಳ ದುಃಖದ ಅರಿವಾಗುತ್ತದೆ . ಹೆಣ್ಣುಮಕ್ಕಳ ದುಃಖವನ್ನು , ಅಂತರಂಗವನ್ನು ಗ್ರಹಿಸುವ ಶಕ್ತಿ ತಾಯಿಗೆ ಮಾತ್ರ ಇರುತ್ತದೆ .

Habbali Avara Rasaballi Kannada Notes 2nd Puc Notes

ಗರತಿ ತವರಿಗೆ ಏನೆಂದು ಹರಸುತ್ತಾಳೆ ?

ಜನಪದಗೀತ ಪ್ರಕಾರ ತುಂಬಾ ಜನಪ್ರಿಯವಾದುದು . ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ . ಇದರೊಳಗೆ ತಾಯಿಯ ರೂಪ – ಸ್ವರೂಪ , ತೋರಿದ ಪ್ರೀತಿಯಿದೆ . ಜನಪದ ಲೋಕದ ಸುತ್ತೆಲ್ಲ ಇಂತಹ ಸಂಸ್ಕೃತಿ ಬಿತ್ತರಿಸುವ ಹಾಡು ಪಾಡಿನೊಂದಿಗೆ ತಾಯಿ ಮತ್ತು ತವರಿನ ಬಗೆಗಿನ ಪ್ರೀತಿ ಇಲಿ ಅಭಿವ್ಯಕ್ತಗೊಂಡಿದೆ . ಗರತಿಗೆ ತವರು ಮನೆಯೆಂದರೆ ಅತ್ಯಂತ ಪ್ರೀತಿ . ಆಕೆ ಗಂಡನ ಮನೆಯಲ್ಲಿದ್ದರೂ ಯಾವಾಗಲೂ ತವರು ಮನೆಯನ್ನು ಹರಸುತ್ತಾಳೆ .

ಒಳ್ಳೆಯದನ್ನು ಬಯಸುತ್ತಾಳೆ . ಹಾಲುಂಡ ತವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾಳೆ . ಹಾಲು ಉಂಡು ಬೆಳೆದು ದೊಡ್ಡವಳಾದ ಗರತಿಯು ಹಾಲುಂಡ ತವರನ್ನು ಎಷ್ಟು ಹೊಗಳಿದರೂ ಸಾಲದು . ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿ ಕೊಳ್ಳುತ್ತಾಳೆ . ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು . ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು . ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಗರತಿ ಹಾರೈಸುತ್ತಾಳೆ .

ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು :
ಬಂಗಾರ ನಿನಗೆ ಸ್ಥಿರವಲ್ಲ .

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಶ್ರೀಮಂತಿಕೆ ಅಂದರೆ ಬಂಗಾರ ಶಾಶ್ವತವಾದ ವಸ್ತುವಲ್ಲ ಎನ್ನುವ ಸಂದರ್ಭವಿದು .
ವಿವರಣೆ : ಪ್ರಸ್ತುತ ಪದ್ಯದಲ್ಲಿ ಜನಪದರು ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ . ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು . ಬಂಗಾರ ಸ್ಥಿರವಲ್ಲ.ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ . ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟುಹೋಗಬಹದು . ಶ್ರೀಮಂತಿಕೆಯ ಅಹಂ ಇರಬಾರದು ಎನ್ನುವಾಗ ಈ ಸಾಲು ಬಂದಿದೆ .

ಹಿತ್ತಾಳೆಗಿಂತ ಬಲುಹೀನ

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಹೀನರ ಗೆಳೆತನ ಮಾಡಿದಾಗ ಉಂಟಾಗುವ ಸ್ಥಿತಿಯನ್ನು ಕುರಿತಾಗಿ ಹೇಳುವಾಗ ಈ ಸಾಲು ಬಂದಿದೆ .
ವಿವರಣೆ : ನಾವು ಉತ್ತಮರ ಸ್ನೇಹವನ್ನು ಮಾಡಬೇಕು . ಉತ್ತಮರ ಸ್ನೇಹದಿಂದ ನಮ್ಮ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತಾಗುತ್ತದೆ . ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ . ಕೆಟ್ಟವರ ಗೆಳೆತನಕ್ಕೆ
ಯಾವ ಬೆಲೆಯೂ ಇರುವುದಿಲ್ಲ . ಬಂಗಾರ ಉತ್ತಮ . ಬಂಗಾರಕ್ಕೆ ಹೋಲಿಸಿದರೆ ಹಿತ್ತಾಳೆ ಹೀನ ಎಂಬ ಭಾವನೆ ಇದೆ . ಒಂದು ವೇಳೆ ನಾವು ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ . ಎನ್ನುವ ಸಂದರ್ಭವಿದು .

ನೀ ತಂಪ ನನ್ನ ತವರೀಗೆ

ಆಯ್ಕೆ : ಈ ಸಾಲನ್ನು ಹಬ್ಬಲಿ , ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಹೆತ್ತ ತಾಯಿ ತವರಿನಲ್ಲಿದ್ದಾಗ ಗರತಿಗೆ ಹಿತವಾದ ತಂಪಿನ ಅನುಭವವಾಗುತ್ತದೆ ಎನ್ನುವಾಗಈ ಸಾಲು ಬಂದಿದೆ .
ವಿವರಣೆ : ಗರತಿಗೆ ತವರು ಮನೆಯೇ ಅತ್ಯಂತ ತಂಪಾಗಿರುತ್ತದೆ . ಬೇಸಿಗೆಯಲ್ಲಿ ಬಳಲಿ ಬಂದವರಿಗೆ ಬೇವಿನ ಮರವು ತಂಪನ್ನು ನೀಡುತ್ತದೆ . ಭೀಮಾನದಿಯು ತಂಪನ್ನು ನೀಡುತ್ತದೆ . ಇಲ್ಲಿ ಗರತಿಗೆ ತಾಯಿಯೇ ತಂಪಾಗಿದ್ದಾಳೆ . ತವರಿನಲ್ಲಿ ತಾಯಿಯಿದ್ದರೆ ತವರುಮನೆ ತಂಪಾಗಿರುವುದು ಎಂಬುದು ಇಲ್ಲಿನ ಆಶಯವಾಗಿದೆ .

Habbali Avara Rasaballi Kannada Notes Summary

ಜ್ಯೋತಿ ನಿನ್ನಾರ ಹೋಲಾರ

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ತನ್ನ ತಾಯಿಗೆ ಸರಿಸಮವಾಗಿ ಯಾರನ್ನು ಹೋಲಿಸಲು ಆಗುವುದಿಲ್ಲ . ಆಕೆಯೇ ಶ್ರೇಷ್ಠ ಎನ್ನುವ ಸಂದರ್ಭವಿದು .
ವಿವರಣೆ : ತನ್ನ ಬದುಕಿನಲ್ಲಿ ಎಷ್ಟು ಜನ ಬಂದು ಹೋದರೂ ಸಹ ಹೆತ್ತ ತಾಯಿಗೆ ಸರಿಸಮಾನರಾದವರು ಯಾರು ಸಿಗಲಾರರು.ಸಾವಿರ ಕೊಳ್ಳಿ ಒಲೆಯಲ್ಲಿ ಉರಿಯುತ್ತಿದ್ದರೂ ಜ್ಯೋತಿಯಷ್ಟು ಪ್ರಕಾಶಮಾನವಾದ ಬೆಳಕನ್ನು ನೀಡುವುದಿಲ್ಲ . ಸಾವಿರಾರು ಮಂದಿ ಇದ್ದರೂ ಅವರೊಳಗೆ ಹೆತ್ತತಾಯಿಯೇ ಜ್ಯೋತಿಯಂತೆ , ಅವಳನ್ನು ಯಾರಿಗೂ ಹೋಲಿಸಲು ಆಗುವುದಿಲ್ಲ ಎಂದು ತಾಯಿಯ ಮಹತ್ವವನ್ನು ಹೇಳಲಾಗಿದೆ .

ಭಾಳ ಮರುಗ್ಯಾಳ ಮನದಾಗ

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಮಕ್ಕಳು ತಾಯಿಯನ್ನು ಬೈದರೆ ತಾಯಿಯ ಅಂತಃಕರಣ ನೊಂದುಕೊಳ್ಳುತ್ತದೆ ಎಂದು ಹೆಣ್ಣೂಬ್ಬಳು ತನ್ನ ತಮ್ಮನಿಗೆ ಬುದ್ಧಿ ಹೇಳುವ ಸಂದರ್ಭವಿದು .
ವಿವರಣೆ : ತಾಯಿಯನ್ನು ನಿಂದಿಸುವ ತನ್ನ ತಮ್ಮನಿಗೆ ಹೆದ್ದೂಬ್ಬಳು ಬುದ್ಧಿ ಹೇಳುತ್ತಾಳೆ . ತಿಳಿಗೇಡಿ ನನ್ನ ತಮ್ಮ ಹೆತ್ತ ತಾಯಿಯನ್ನು ನಿಂದಿಸಬೇಡ.ಅವಳು ಬಹಳ ದಿನದವಳು . ಹಿರಿಯವಳು . ಹಡೆದವ್ವನನ್ನು ಬೈದರೆ ಮನಸ್ಸಿನಲ್ಲಿ ಬಹಳ ನೊಂದುಕೊಳ್ಳುತ್ತಾಳೆ . ಮನದೊಳಗೆ ನೋವು ಪಡುತ್ತಾಳೆ . ಹಾಗಾಗಿ ನೀನು ಅವಳನ್ನು ಬೈಬೇಡ ಎಂದು ಹೇಳುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ .

ತಾಯಿ ಇಲ್ಲದ ತವರೀಗೆ ಹೋಗದಿರು ನನಮನವೆ

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
‘ ಸಂದರ್ಭ : ತಾಯಿ ಇಲ್ಲದ ತವರಿಗೆ ಹೋಗಬಾರದು ಎಂದು ಹೆದ್ದೂಬ್ಬಳು ತನ್ನ ಮನಸ್ಸಿಗೆ ಹೇಳುವ ಸಂದರ್ಭವಿದು .
ವಿವರಣೆ : ತಾಯಿ ತವರು ಎರಡೂ ಹೆಣ್ಣು ಮಕ್ಕಳಿಗೆ ಇಷ್ಟ . ತಾಯಿ ಇದ್ದಾಗ ತವರಿಗೆ ಒಂದು ಅರ್ಥ , ತಾಯಿ ಇಲ್ಲದ ತವರಿಗೆ ಹೆಣ್ಣು ಹೋಗಬಾರದು . ಹೋದರೆ ಅಲ್ಲಿ ಅವಳಿಗೆ ಸರಿಯಾದ ಸ್ಥಾನಮಾನ ಸಿಗುವುದಿಲ್ಲ . ಹೇಗೆ ನೀರು ಇಲ್ಲದ ಕೆರೆಗೆ ಕರು ನೀರು ಕುಡಿಯಲು ಬಂದು ದುಃಖಪಡುತ್ತದೆಯೋ ಹಾಗೆ ಆಗುತ್ತದೆ . ಗರತಿಗೆ ತಾಯಿ ಇಲ್ಲದ ತವರು ಮನೆಯು ದುಃಖವನ್ನು ಉಂಟು ಮಾಡುತ್ತದೆ . ಹಾಗಾಗಿ ಹೆಣ್ಣೂಬ್ಬಳು ತನ್ನ ಮನಸ್ಸಿಗೆ ಹೀಗೆ ಹೇಳುತ್ತಾಳೆ .

ಹಬ್ಬಲಿ ಅವರ ರಸಬಳ್ಳಿ

ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಆರಿಸಿಕೊಳ್ಳಲಾಗಿದೆ . ಜನಪದ ಗೀತೆಯಿಂದ
ಸಂದರ್ಭ : ಹೆಣ್ಣು ತನ್ನ ತವರಿಗೆ ಶುಭವನ್ನು ಹಾರೈಸುವ ಸಂದರ್ಭವಿದು .
ವಿವರಣೆ : ಇದು ಪದ್ಯದ ಶೀರ್ಷಿಕೆಯೂ ಕೂಡ ಹೌದು . ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾಳೆ . ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು . ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು . ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಹಾರೈಸುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ .

FAQ

ಮಂದಿ ಮಕ್ಕಳೊಂದಿಗೆ ಹೇಗಿರಬೇಕು ?

ಮಂದಿ ಮಕ್ಕಳೊಂದಿಗೆ ಛಂದದಿಂದ ಹೊಂದಿಕೊಂಡಿರಬೇಕು .

ಸುಟ್ಟು ಸುಣ್ಣವಾದುದು ಯಾವುದು ?

ಬುದ್ಧಿವಂತರಾದ ನೆರೆಯವರು ಇರಬೇಕು .

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *