2nd PUC ಜಾಲಿಯ ಮರದಂತೆ ನೋಟ್ಸ್ | Jaliya Maradante Kannada Notes

ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes No1 Best Information

Jaliya Maradante Kannada Notes , ಜಾಲಿಯ ಮರದಂತೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Kannada Jaliya Maradante Poem Question Answer Notes Pdf Download 5th chapter Notes PUC

Jaliya Maradante Kannada Notes

ಈ ಲೇಖನದಲ್ಲಿ ಜಾಲಿಯ ಮರದಂತೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

2nd Puc Kannada Jaliya Maradante Poem Question Answer

ಒಂದು ವಾಕ್ಯದಲ್ಲಿ ಉತ್ತರಿಸಿ

ಜಾಲಿಯ ಮರದಂತಿರುವವರು ಯಾರು ?

ಜಾಲಿಯ ಮರದಂತಿರುವವರು ದುರ್ಜನರು .

ಯಾರಿಗೆ ನೆರಳು ಸಿಗುವುದಿಲ್ಲ ?

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಸಿಗುವುದಿಲ್ಲ .

ಜಾಲಿಯ ರಸಸ್ವಾದ ಹೇಗಿರುತ್ತದೆ ?

ಜಾಲಿಯ ರಸಸ್ವಾದ ವಿಷದಂತಿರುತ್ತದೆ .

ದುರ್ಗಂಧ ಬಿಡದಿರುವುದು ಯಾವುದು ?

ದುರ್ಗಂಧ ಬಿಡದಿರುವುದು ಊರಹಂದಿ .

ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ ?

ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ

ಜಾಲಿಯ ಮುಳ್ಳು ಹೇಗೆ ಆವರಿಸಿರುತ್ತದೆ ?

ಜಾಲಿಯ ಮುಳ್ಳು ಮೂಲಾಗ್ರ ಪರಿಯಂತ ಆವರಿಸಿರುತ್ತದೆ .

ತತ್ವಜ್ಞಾನವನ್ನು ಕೇಳದವರಾರು ?

ಘೋರಪಾಪಿಗಳು ತತ್ವಜ್ಞಾನವನ್ನು ಕೇಳುವುದಿಲ್ಲ .

ಇದನ್ನು ಓದಿರಿ :- ಪಗೆಯಂ ಬಾಲಕನೆಂಬರೇ ನೋಟ್ಸ್ ದ್ವಿತೀಯ ಪಿ.ಯು.ಸಿ

ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes  New Syllabus No1 Information
ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes New Syllabus No1 Information

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ ?

ಜಾಲಿಯ ಮರವು ಮೂಲಾಗ್ರ ಪರಿಯಂತ ಮುಳ್ಳಿನಿಂದ ಕೂಡಿರುತ್ತದೆ . ಅದು ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನು ನೀಡುವುದಿಲ್ಲ . ಹಸಿದು ಬಂದವರಿಗೆ ಹಣ್ಣನ್ನು ಒದಗಿಸುವುದಿಲ್ಲ . ಹೂವಿನಲ್ಲಿ ಸುವಾಸನೆಯಿಲ್ಲ , ಕುಳಿತುಕೊಳ್ಳಲು ಸ್ಥಳವಿಲ್ಲ . ಅದರ ರಸಸ್ವಾದ ಮಾಡಿದರೆ ವಿಷದಂತಿರುತ್ತದೆ ಎಂದು ಪುರಂದರದಾಸರು ಜಾಲಿಯ ಮರದ ನಿರರ್ಥಕತೆಯನ್ನು ತಿಳಿಸಿದ್ದಾರೆ . ಅದೇ ರೀತಿಯಲ್ಲಿ ದುರ್ಜನರು ಕೂಡ ಜಾಲಿಯ ` ಮರದಂತೆ ನಿಷ್ಟ್ರಯೋಜಕರು ಎಂಬುದು ದಾಸರ ನಿಲುವು .

ಯಾರಿಗೆ ಷಡ್ರಾಸಾನ್ನವನಿಕ್ಕಿ ಉಪಯೋಗವಿಲ್ಲ ? ಏಕೆ ?

ಪುರಂದರದಾಸರು ತಮ್ಮ ಕೀರ್ತನೆಯಲ್ಲಿ , ಊರಹಂದಿಗೆ ಷಡ್ರಾಸಾನವನಿಕ್ಕಿ ಉಪಯೋಗವಿಲ್ಲ ಎಂದಿದ್ದಾರೆ . ಏಕೆಂದರೆ ಊರಹಂದಿಗೆ , ಆರು ರುಚಿ ಅಡಕವಾಗಿರುವ ಷಡ್ರಾಸಾನ್ನವನ್ನು ನೀಡಿದರೂ ಅದು ತನ್ನ ನಾರುವ ದುರ್ಗಂಧವನ್ನು ಎಂದಿಗೂ ಬಿಡುವುದಿಲ್ಲ .

ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ?

ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಘೋರಪಾಪಿಗೆ ( ದುರ್ಜನರಿಗೆ ) ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ಎಂದಿದ್ದಾರೆ . ಏಕೆಂದರೆ , ಘೋರಪಾಪಿಗೆ ತತ್ವಜ್ಞಾನ ಹೇಳಿದರೆ ಆತ ಯಾವತ್ತೂ ತನ್ನ ಕ್ರೂರಕರ್ಮವನ್ನು ಬಿಟ್ಟು ಒಳ್ಳೆಯ ದಾರಿಯಲ್ಲಿ ಸಾಗುವುದಿಲ್ಲ .

ದುರ್ಜನರ ಕಾರ್ಯ ಯಾವ ಬಗೆಯದು ?

ದುರ್ಜನರು ಸದಾಕಾಲ ಒಯ್ಯಾರದ ಮಾತುಗಳನ್ನು ಆಡುತ್ತಿರುತ್ತಾರೆ . ಆದರೆ ಅವರಿಂದ ಸ್ವಲ್ಪ ಮಟ್ಟಿನ ಉಪಕಾರವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ . ದುರ್ಜನರು ಯಾವಾಗಲೂ ಅನ್ನ ತಿನ್ನಲು ಕಚ್ಚಾಡುವ ನಾಯಿಗಳಂತೆ ತಮ್ಮ ಕಾರ್ಯ ಸಾಧಿಸಿಕೊಳ್ಳಲು ಹೋರಾಡುತ್ತಿರುತ್ತಾರೆ .

jaliya maradante kannada poem notes

ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes  New Syllabus No1 Information
ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes New Syllabus No1 Information

ಐದಾರು ವಾಕ್ಯಗಳಲ್ಲಿ ಉತ್ತರಿಸಿ :

ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ ?

ಪುರಂದರದಾಸರು ರಚಿಸಿರುವ ‘ ಜಾಲಿಯ ಮರದಂತೆ ‘ ಎನ್ನುವ ಕೀರ್ತನೆಯು ಸಮಾಜ ವಿಮರ್ಶೆಯ ಹಿನ್ನಲೆಯಲ್ಲಿ ಬಹಳ ಮುಖ್ಯವಾಗಿದೆ . ಕೀರ್ತನೆಯ ಆರಂಭದಲ್ಲಿಯೇ ದುರ್ಜನರ ಬಗ್ಗೆ ನೇರವಾಗಿ ಹೇಳಿರುವುದನ್ನು ಕಾಣಬಹುದು . ದುರ್ಜನರು ಜಾಲಿಯ ಮರವಿದ್ದ ಹಾಗೆ , ಜಾಲಿಯ ಮರವು ಹೇಗೆ ಬುಡದಿಂದ ತುದಿಯವರೆಗೆ ಮುಳ್ಳನ್ನು ಹೊಂದಿರುತ್ತದೆಯೋ ಹಾಗೆ ದುರ್ಜನರು ಕೂಡ ತಮ್ಮ ಇಡೀ ವ್ಯಕ್ತಿತ್ವದಲ್ಲಿ ಕೆಟ್ಟತನವನ್ನು ಹೊಂದಿದವರಾಗಿದ್ದಾರೆ .

\ಕೀರ್ತನೆಯ ಮೊದಲ ಭಾಗದಲ್ಲಿ ಪುರಂದರದಾಸರು , ಜಾಲಿಯ ಮರದ ಒಟ್ಟು ಸ್ವರೂಪದ ಬಗ್ಗೆ ಹೇಳುತ್ತಾ , ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ . ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ . ಅದರ ಹೂವಿನಲ್ಲಿ ಸುವಾಸನೆಯಿಲ್ಲ . ಕುಳಿತುಕೊಳ್ಳಲು ಸ್ಥಳವಿಲ್ಲ . ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು ಎನ್ನುತ್ತಾರೆ .

ಹೀಗೆ ಅದರ ಸ್ವರೂಪವನ್ನು ಹೇಳುವುದರ ಜೊತೆಗೆ ಅದು ನಿರುಪಯುಕ್ತ ಎನ್ನುವ ಅಂಶವನ್ನು ಕೀರ್ತನಕಾರರು ವಿವರಿಸುತ್ತಾರೆ . ಅದೇ ರೀತಿಯಲ್ಲಿ ದುರ್ಜನರೂ ಕೂಡ ಸಮಾಜಕ್ಕೆ ಉಪಯೋಗಾರ್ಹರಲ್ಲ ಎಂಬುದನ್ನು ದಾಸರು ಇಲ್ಲಿ ಹೇಳಲಿಕ್ಕೆ ಮುಂದಾಗಿರುವುದನ್ನು ಇಲ್ಲಿ ಗಮನಿಸಬಹುದು .

ಜಾಲಿ ಮರ ಮತ್ತು ದುರ್ಜನರನ್ನು ಸಮೀಕರಿಸುವುದರ ಔಚಿತ್ಯವನ್ನು ಚರ್ಚಿಸಿ

ಪುರಂದರದಾಸರು ಇಲ್ಲಿ ಜಾಲಿಯ ಮರ ಮತ್ತು ದುರ್ಜನರ ವೃಂದ ಎರಡನ್ನು ಸಮೀಕರಿಸಿ ಕೀರ್ತನೆ ರಚಿಸಿರುವುದನ್ನು ನಾವು ಕಾಣಬಹುದು . ಜಾಲಿಯ ಮರದಿಂದ ನಾವು ಯಾವುದೇ ರೀತಿಯ ಸದುಪಯೋಗವನ್ನು ಪಡೆಯಲು ಸಾಧ್ಯವಿಲ್ಲ . ಅದೇ ರೀತಿಯಲ್ಲಿ ದುರ್ಜನರಿಂದಲೂ ಕೂಡ ಸಮಾಜಕ್ಕೆ ಯಾವುದೇ ಒಳಿತನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ . ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ .

ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ . ಅದರ ಹೂವಿನಲ್ಲಿ ಸುವಾಸನೆಯಿಲ್ಲ . ಕುಳಿತುಕೊಳ್ಳಲು ಸ್ಥಳವಿಲ್ಲ . ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು . ಅದೇ ರೀತಿಯಲ್ಲಿ ದುರ್ಜನರು , ದುರ್ಜನರಿಂದ , ಯಾವುದೇ ಸಣ್ಣ ಉಪಕಾರವನ್ನು ನಿರೀಕ್ಷಿಸುವಂತಿಲ್ಲ .

ಆದರೆ ಅವರ ಬಿನ್ನಾಣದ ಮಾತುಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹೊರಗಡೆ ಬರುತ್ತಿರುತ್ತವೆ . ಅವರ ಒಯ್ಯಾರದ ಮಾತುಗಳನ್ನು ಕೇಳುವಾಗ , ತಾನು ದೊಡ್ಡ ಪರೋಪಕಾರಿ ಎಂಬಂತೆ ವರ್ತಿಸುತ್ತಾರೆ . ಇತರರಿಗೆ ಉಪಕಾರಿಯಾಗದ ಇವರು ತಮ್ಮ ಕಾರ್ಯಸಾಧನೆಗಾಗಿ ಅನ್ನ ತಿನ್ನಲು ಕಚ್ಚಾಡುವ ನಾಯಿಗಳಂತೆ ಮೇಲೆ ಬಿದ್ದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ .

ಸಮಾಜ ಕಂಟಕರ ಬಗೆಗೆಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿರಿ .

ಸಮಾಜಕ್ಕೆ ಕಂಟಕರಾದವರನ್ನು ಏನು ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲವೆನ್ನುತ್ತಾರೆ ಪುರಂದರದಾಸರು . ದುರ್ಜನರ ದುರ್ಗುಣಗಳನ್ನು ವಿವರಿಸುವ ಸಂದರ್ಭದಲ್ಲಿ ಪುರಂದರದಾಸರು ಜಾಲಿಯ ಮರ , ಹಂದಿ , ಕುನ್ನಿಗಳ ಹೋಲಿಕೆಗಳನ್ನು ನೀಡುತ್ತಾರೆ . ಮುಳ್ಳಿನಿಂದ ಕೂಡಿದ ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು , ಬಂದವರಿಗೆ ನೆರಳನ್ನು ನೀಡುವುದಿಲ್ಲ . ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ . ಅದರ ಹೂವಿನಲ್ಲಿ ಸುವಾಸನೆಯಿಲ್ಲ . ಕುಳಿತುಕೊಳ್ಳಲು ಸ್ಥಳವಿಲ್ಲ.
ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು . ಹೀಗೆ ಅದರಿಂದ ಯಾವ ರೀತಿಯ ಉಪಯೋಗವನ್ನು ನಿರೀಕ್ಷಿಸುವಂತಿಲ್ಲ .

ಹಾಗೆಯೇ ದುರ್ಜನರು ಕೂಡ ಬುಡದಿಂದ ತುದಿಯವರೆಗೆ ಕೆಟ್ಟಗುಣಗಳನ್ನು ಹೊಂದಿರುತ್ತಾರೆ . ಅವರಿಂದಲೂ ಕೂಡ ಯಾವ ರೀತಿಯ ಸಣ್ಣ ಒಳಿತನ್ನು ನಿರೀಕ್ಷಿಸುವಂತಿಲ್ಲ . ಊರ ಹಂದಿಗೆ ಒಳ್ಳೆಯ ರಸಭರಿತವಾದ ( ಷಡ್ರಸಾನ್ನವನ್ನು ನೀಡಿದರೆ , ಅದು ತನ್ನ ನಾರುವಕೆಟ್ಟವಾಸನೆಯನ್ನು ಬಿಡುವುದಿಲ್ಲ . ಅದೇ ರೀತಿಯಲ್ಲಿ ಘೋರಪಾಪಿಗೆ ತತ್ವಜ್ಞಾನವನ್ನು ಬೋಧಿಸಿದರೆ ಅದರಿಂದ ಆತನ ಮೂಲ ಗುಣ ಬದಲಾಗುವುದಿಲ್ಲ .

ಬೀದಿ ನಾಯಿಗಳು ಅನ್ನಕ್ಕಾಗಿ ತಾ – ಮುಂದು , ತಾ – ಮುಂದು ಎಂದು ಹೇಗೆ ಕಚ್ಚಾಡುತ್ತವೆಯೋ ಹಾಗೆ ದುರ್ಜನರು ತಮ್ಮ ಕಾರ್ಯ ಸಾಧನೆಗಾಗಿ ಸದಾ ಹಾತೊರೆಯುತ್ತಿರುತ್ತಾರೆ . ತಮ್ಮ ಕಾರ್ಯ ಸಾಧನೆಯ ಹಿನ್ನಲೆಯಲ್ಲಿ ಯಾರಿಗೆ ತೊಂದರೆಯಾದರೂ ಅವರು ಲೆಕ್ಕಿಸುವವರಲ್ಲ ಎಂದು ಸಮಾಜಕಂಟಕರ ಕುರಿತಂತೆ ತನ್ನ ಅಭಿಪ್ರಾಯಗಳನ್ನು ಕೀರ್ತನೆಯ ಮುಖಾಂತರವಾಗಿ ಪುರಂದರದಾಸರು ವಿವರಿಸುತ್ತಾ ಹೋಗುತ್ತಾರೆ .

ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes  New Syllabus No1 Information
ಜಾಲಿಯ ಮರದಂತೆ ಪ್ರಶ್ನೋತ್ತರಗಳು | Jaliya Maradante Kannada Notes New Syllabus No1 Information
ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು .
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಪುರಂದರದಾಸರು ‘ ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಪುರಂದರದಾಸರು ಬುಡದಿಂದ ತುದಿಯವರೆಗೆ ಮುಳ್ಳಿನಿಂದ ಕೂಡಿದ , ಜಾಲಿಯ ಮರದಂತಿರುವ ದುರ್ಜನರ ಕುರಿತು ವಿವರಿಸುವ ಸಂದರ್ಭ ಇದಾಗಿದೆ .

ವಿವರಣೆ : ‘ ಜಾಲಿಯ ಮರದಂತೆ ಧರೆಯೊಳು ದುರ್ಜನರು ಎಂದು , ಕೀರ್ತನೆಯ ಆರಂಭದಲ್ಲಿಯೇ ದಾಸರು ದುರ್ಜನರ ಬಗ್ಗೆ ನೇರವಾಗಿ ಹೇಳಿರುವುದನ್ನು ಕಾಣಬಹುದು.ದುರ್ಜನರು ಜಾಲಿಯ ಮರವಿದ್ದ ಹಾಗೆ , ಜಾಲಿಯ ಮರವು ಹೇಗೆ ಬುಡದಿಂದ ತುದಿಯವರೆಗೆ ಮುಳ್ಳನ್ನು ಹೊಂದಿರುತ್ತದೆಯೋ ಹಾಗೆ ದುರ್ಜನರು ಕೂಡ ತಮ್ಮ ಗುಣದಲ್ಲಿ ಕೆಟ್ಟತನವನ್ನು ಹೊಂದಿದವರಾಗಿದ್ದಾರೆ . ಇವರಿಂದ ಯಾವುದೇ ಉಪಯೋಗ ಇಲ್ಲ ಎನ್ನುವಾಗ ಈ ಮೇಲಿನ ಮಾತು ಬಂದಿದೆ .

ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಪುರಂದರದಾಸರು ‘ ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ . ಸಂದರ್ಭ : ಜಾಲಿಯ ಮರದ ಸ್ವರೂಪವನ್ನು ವಿವರಿಸುವ ಸಂದರ್ಭ ಇದಾಗಿದೆ .
ವಿವರಣೆ : ಪುರಂದರದಾಸರು ಜಾಲಿಯ ಮರದ ಒಟ್ಟು ಸ್ವರೂಪದ ಬಗ್ಗೆ ಹೇಳುತ್ತಾ , ಜಾಲಿಯ ಮರವು ಬಿಸಿಲಲ್ಲಿ ಆಯಾಸಗೊಂಡು ಬಂದವರಿಗೆ ನೆರಳನ್ನು ನೀಡುವುದಿಲ್ಲ . ಹಸಿದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ . ಅದರ ಹೂವಿನಲ್ಲಿ ಸುವಾಸನೆಯಿಲ್ಲ . ಕುಳಿತುಕೊಳ್ಳಲು ಸ್ಥಳವಿಲ್ಲ . ಅದರ ರಸವನ್ನು ಸವಿಯಲು ಮುಂದಾದರೆ ವಿಷದ ರೀತಿಯಲ್ಲಿ ಇರುವುದು ಎನ್ನುವಾಗ ಈ ಮೇಲಿನಂತೆ ಪುರಂದರದಾಸರು ಹೇಳುತ್ತಾರೆ . ಅದೇ ರೀತಿಯಲ್ಲಿ ದುರ್ಜನರು ಉಪಯೋಗಾರ್ಹರಲ್ಲ ಎನ್ನುವ ಭಾವ ಇಲ್ಲಿದೆ .

ನಾರುವ ದುರ್ಗಂಧ ಬಿಡಬಲ್ಲುದೆ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಪುರಂದರದಾಸರು ‘ ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಹಂದಿಯ ಮೂಲ ಗುಣ ಮತ್ತು ದುರ್ಜನರ ಮೂಲ ಗುಣ ಎರಡು ಒಂದೇ , ಎಂದು ವಿವರಿಸುವ ಸಂದರ್ಭ ಇದಾಗಿದೆ .
ವಿವರಣೆ : ಊರಿನ ಹೊಲಸನ್ನು ತಿಂದು ಜೀವಿಸುವ ಹಂದಿಗೆ ಒಳ್ಳೆಯ ರಸಭರಿತವಾದ ( ಷಡ್ರಸಾನ್ನ ) ಅನ್ನವನ್ನು ನೀಡಿದರೆ , ಅದು ತನ್ನ ನಾರುವ ಕೆಟ್ಟವಾಸನೆಯನ್ನು ಬಿಡುವುದಿಲ್ಲ . ಅಂತೆಯೇ ಘೋರ ಪಾಪಿಗೆ ತತ್ವಜ್ಞಾನವನ್ನು ಹೇಳಲು ಆತ ಎಂದಿಗೂ ಅದರ ಬಗ್ಗೆ ಅರ್ಥೈಸಿಕೊಳ್ಳಲಾರ . ದುರ್ಗುಣಗಳನ್ನು ತನ್ನ ಮೂಲ ಸ್ವಭಾವದಲ್ಲಿ ಹೊಂದಿದವನು ಎಂದಿಗೂ ಒಳ್ಳೆಯವನಾಗಲಾರ ಎನ್ನುವ ಭಾವ ಇಲ್ಲಿದೆ .

ಬಿನ್ನಾಣದ ಮಾತಿಗೆ ಕೊನೆಯಿಲ್ಲ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಪುರಂದರದಾಸರು ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ . ಸಂದರ್ಭ : ದುರ್ಜನರ ಗುಣ – ಸ್ವಭಾವದ ಕುರಿತಾಗಿ ವಿವರಿಸುವ ಸಂದರ್ಭ ಇದಾಗಿದೆ .
ವಿವರಣೆ : ಪುರಂದರದಾಸರು ಹೇಳುವಂತೆ , ದುರ್ಜನರಿಂದ ನಾವು ಒಂದು ಸಣ್ಣ ಉಪಕಾರವನ್ನು ನಿರೀಕ್ಷಿಸುವಂತಿಲ್ಲ . ಆದರೆ ಅವರ ಬಿನ್ನಾಣದ ಮಾತುಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹೊರಗಡೆ ಬರುತ್ತಿರುತ್ತವೆ . ಅವರ ಒಯ್ಯಾರದ ಮಾತುಗಳನ್ನು ಕೇಳುವಾಗ , ತಾನು ದೊಡ್ಡ ಪರೋಪಕಾರಿ ಎನ್ನುವ ಭಾವನೆ ಅವರದ್ದಾಗಿರುತ್ತದೆ . ಇತರರಿಗೆ ಉಪಕಾರಿ ಯಾಗದ ಇವರು ತಮ್ಮ ಕಾರ್ಯಸಾಧನೆಗಾಗಿ ಅನ್ನತಿನ್ನಲು ಕಚ್ಚಾಡುವ ನಾಯಿಗಳಂತೆ ಮೇಲೆ ಬಿದ್ದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ , ಎನ್ನುವಾಗ ಈ ಮೇಲಿನ ಮಾತು ಬಂದಿದೆ .

FAQ

ಜಾಲಿಯ ಮರದಂತಿರುವವರು ಯಾರು ?

ಜಾಲಿಯ ಮರದಂತಿರುವವರು ದುರ್ಜನರು .

ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ ?

ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *