ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | 10th Kannada Lesson Vruksha Sakshi Notes

ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students

ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು ನೋಟ್ಸ್ , ವೃಕ್ಷಸಾಕ್ಷಿ ಪಾಠದ ಸಾರಾಂಶ , 10th Standard Vruksha Sakshi Kannada Lesson Notes question answer, text book pdf download , Siri Kannada 10th

Vruksha Sakshi Kannada Notes SSLC Students

Vruksha Sakshi Kannada Notes

ಈ ಲೇಖನದಲ್ಲಿ 10ನೇ ತರಗತಿ ವೃಕ್ಷಸಾಕ್ಷಿ ಪಾಠದ ಕನ್ನಡ ನೋಟ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

Vruksha Sakshi Kannada Notes kannada

ಲೇಖಕರ ಪರಿಚಯ

Vruksha Sakshi Kannada Notes 10th class

ಲೇಖಕರು :ದುರ್ಗಸಿಂಹ
  • ಕಾಲ : ಕ್ರಿ.ಶ.1031
  • ಸ್ಥಳ: ಕಿಸುಗಾಡು ನಾಡಿನ ಸಯ್ಯಡಿ
  • ಕೃತಿ : ಪಂಚತಂತ್ರ ( ಚಂಪೂಕಾವ್ಯ )
  • ಪಂಚತಂತ್ರಗಳು : ಭೇದ , ಪರೀಕ್ಷಾ , ವಿಶ್ವಾಸ , ವಂಚನಾ , ಮಿತ್ರಕಾರ್ಯ ,
  • ಕೃತಿಯ ವಿಶೇಷತೆ : ಪಂಚತಂತ್ರ ಕೃತಿಯಲ್ಲಿ 48 ಉಪಕತೆಗಳಿವೆ . 457 ಪದ್ಯಗಳಿಂದಲೂ , 230 ಶ್ಲೋಕಗಳಿಂದಲೂ ಕೂಡಿದೆ .
  • ಮೂಲ : ಗುಣಾಡ್ಯನು ಪೈಶಾಚಿಕ ಭಾಷೆಯಲ್ಲಿ ಬೃಹತ್ಕಥೆ ಎಂಬ ಗ್ರಂಥವನ್ನು ರಚಿಸಿದನು . ಇದನ್ನು ಆಧಾರವಾಗಿಟ್ಟುಕೊಂಡು ವಸುಭಾಗಭಟ್ಟನು ಸಂಸ್ಕೃತದಲ್ಲಿ ‘ ಪಂಚತಂತ್ರ ‘ ಎಂಬ ಕೃತಿಯನ್ನು ರಚಿಸಿದನು , ಅದನ್ನು ಆಧಾರವನ್ನಾಗಿಟ್ಟುಕೊಂಡು ದುರ್ಗಸಿಂಹನು ಕನ್ನಡ ಪಂಚತಂತ್ರವನ್ನು ರಚಿಸಿದನು .
  • ಆಕರಗ್ರಂಥ : ‘ ಕರ್ನಾಟಕ ಪಂಚತಂತ್ರಂ ‘
  • ಗದ್ಯಾನುವಾದ : ಗುಂಡಿ ಚಂದ್ರಶೇಖರ ಐತಾಳರು
  • ಪ್ರಕಟಣೆ : ಕನ್ನಡ ಸಾಹಿತ್ಯ ಪರಿಷತ್ತು .
ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students
ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

Vruksha Sakshi Kannada Notes 10th standard

‘ ವೃಕ್ಷಸಾಕ್ಷಿ ‘ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರ ಎಂಬ ಕೃತಿಯಿಂದ ‘ ವೃಕ್ಷಸಾಕ್ಷಿ ‘ ಕತೆಯ ಈ ಪಾಠವನ್ನು ಆರಿಸಲಾಗಿದೆ .

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?

ಮರದ ಬುಡದಲ್ಲಿ ಸಂಪತ್ತನ್ನು ಕಾಣದೆ ಎಲ್ಲ ಸಂಪತ್ತನ್ನು ನೀನೇ ತೆಗೆದು ಕೊಂಡಿದ್ದೀಯೆ ಎಂದು ದುಷ್ಪಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಮಾಡುತ್ತಾನೆ .

ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?

ಸಂಪತ್ತನ್ನು ಭೂಮಿಯಲ್ಲಿ ಹುಗಿದಿಡುವಾಗ ಇವನು ಮತ್ತು ನಾನು ಅಲ್ಲದೆ ಮತ್ಯಾವ ಮನುಷ್ಯರೂ ಅಲ್ಲಿರಲಿಲ್ಲ . ಆ ಮಹಾವೃಕ್ಷವೇ ಸಾಕ್ಷಿ ಎಂದು ದುಷ್ಟಬುದ್ಧಿಯು ಹೇಳಿದಾಗ ಧರ್ಮಾಧಿಕರಣದವರು ಆಶ್ಚರ್ಯಪಟ್ಟು ಆ ಅದ್ಭುತವನ್ನು ನೋಡೋಣ ಎಂದು ನಿಶ್ಚಯಿಸಿದರು .

Vruksha Sakshi Kannada Notes

ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?

ಸೂರ್ಯೋದಯವಾದಾಗ ಧರ್ಮಬುದ್ಧಿಯು ದೇವರು , ಗುರುಗಳು , ಬ್ರಾಹ್ಮಣರಿಗೆ ಪೂಜಿಸಿ , ವಂದಿಸಿ ತನ್ನ ಬೆಳಗಿನ ಹೊತ್ತನ್ನು ಹೀಗೆ ಕಳೆದನು .

ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು ?

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯನ್ನು ಕರೆದುಕೊಂಡು ನ್ಯಾಯ ತೀರ್ಮಾನ ಮಾಡಲು ಧರ್ಮಾಧಿಕರಣರು ಆ ದೊಡ್ಡ ಮರದ ಬಳಿಗೆ ಬಂದರು .

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

Vruksha Sakshi Kannada Notes in kannada notes

ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು ?

ತಾವು ಗಳಿಸಿದ್ದ ಸಂಪತ್ತನ್ನು ಹಂಚಿಕೊಳ್ಳೋಣ ಎಂದು ಧರ್ಮಬುದ್ಧಿಯು ದುಷ್ಟಬುದ್ಧಿಗೆ ಹೇಳಿದನು . ಆಗ ದುರ್ಬುದ್ಧಿಯನ್ನು ಹೊಂದಿದ್ದ ದುಷ್ಟಬುದ್ಧಿಯು ಪಾಪ ಬುದ್ಧಿಯಿಂದ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡಿದನು . ದುಷ್ಟಬುದ್ಧಿಯು ಧರ್ಮಬುದ್ಧಿಗೆ ಈ ರೀತಿ ಹೇಳಿದನು ನಾವೂ ಈ ಸಂಪತ್ತನ್ನು ಹಂಚಿಕೊಂಡು ಮನೆಯಲ್ಲಿ ಸ್ವತಂತ್ರವಾಗಿ ಸ್ಟೇಚ್ಛೆಯಿಂದ ಇರಲು ಸಾಧ್ಯವಿಲ್ಲ .

ಇದನ್ನು ನಾವು ಉಳಿಸಬೇಕಾಗಿದೆ . ಆದುದರಿಂದ ನಿನಗೆ ಹಾಗೂ ನನಗೆ ಖರ್ಚು ಮಾಡಲು ಬೇಕಾದಷ್ಟು ಸಂಪತ್ತನ್ನು ತೆಗೆದುಕೊಂಡು ಮಿಕ್ಕ ಸಂಪತ್ತನ್ನು ಇಲ್ಲಿಯೇ ಇಡೋಣ ” ಎಂದು ಸಲಹೆಯನ್ನು ಕೊಟ್ಟನು .

ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು ?

ದುಷ್ಟಬುದ್ಧಿಯು ಮನೆಗೆ ಬಂದು ಏಕಾಂತದಲ್ಲಿ ತನ್ನ ತಂದೆಯ ಕೈಯನ್ನು ಹಿಡಿದು ರಹಸ್ಯವಾಗಿ ಅಲ್ಲಿಯವರೆಗೂ ನಡೆದ ಘಟನೆಗಳನ್ನು ತಿಳಿಸಿ “ ನಿಮ್ಮ ಒಂದು ಮಾತಿನಿಂದ ಮಾತ್ರ ನಾವು ಹಸಿವಿನಿಂದ ಇರದೆ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು ( ಗಳಿಸಲು ) ಉಳಿಸಲು ಸಾಧ್ಯ .

ನೀವು ಆ ಮರದ ಪೊಟರೆಯೊಳಗೆ ಅಡಗಿ ಕುಳಿತುಕೊಳ್ಳಿ . ಎಲ್ಲರೂ ಮರವನ್ನು ಸಾಕ್ಷಿ ಕೇಳಿದಾಗ ನೀವು ಒಳಗಿನಿಂದಲೇ ( ವೃಕ್ಷ ಸಾಕ್ಷಿ ) “ ಧರ್ಮಬುದ್ಧಿಯೇ ಸಂಪತ್ತನ್ನು ಕೊಂಡೊಯ್ದನು ಎಂದು ಹೇಳಿರಿ ” ಎಂದನು .

ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು ?

ಧರ್ಮಾಧಿಕರಣರು ವಟವೃಕ್ಷಕ್ಕೆ ಎಂಟು ರೀತಿಯ ಅರ್ಚನೆಯನ್ನು ಮಾಡಿ ಇಬ್ಬರ ಮಾತುಗಳನ್ನು ಕೇಳಿ ಆ ಮರಕ್ಕೆ ಹೀಗೆಂದರು , “ ಹೇ ವೃಕ್ಷವೇ ಯಕ್ಷಾದಿದೇವತೆಗಳ ಆವಾಸವೆ ಆಗಿರುವೆ ಎಂಬ ಕಾರಣಕ್ಕೆ ನಿನ್ನನ್ನು ಸಾಕ್ಷಿಯನ್ನಾಗಿಸಿ ಕೇಳುತ್ತಿದ್ದೇವೆ . ನೀನು ನಡೆದಿರುವುದನ್ನು ತಿಳಿಸು ” ಎಂದು ನ್ಯಾಯ ತೀರ್ಮಾನ ಮಾಡುವವರು ಪ್ರಾರ್ಥಿಸಿದರು .

Vruksha Sakshi Kannada Notes 10 standard

ಕೊಟ್ಟ ಪ್ರಶ್ನೆಗಳಿಗೆ ಎಂಟು / ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students
ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students
‘ ವೃಕ್ಷಸಾಕ್ಷಿ ‘ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು ? ಏಕೆ ?

‘ ವೃಕ್ಷಸಾಕ್ಷಿ ‘ ಪಾಠದಲ್ಲಿ ನಾವು ಮೆಚ್ಚುವ ಪಾತ್ರ ಧರ್ಮಬುದ್ಧಿಯದ್ದು . ಧರ್ಮಬುದ್ಧಿಯು ನ್ಯಾಯದಿಂದ ನಡೆದುಕೊಳ್ಳುತ್ತಿದ್ದನು . ಅನ್ಯಾಯದ ವಿರುದ್ಧ ಆಲೋಚಿಸಿ ಯುಕ್ತಿಯಿಂದ ಕಾರ್ಯ ಸಾಧಿಸುತ್ತಾನೆ . ಸೂರ್ಯೋದಯವಾದಾಗ ಧರ್ಮಬುದ್ಧಿಯು ದೇವರು ಗುರುಗಳು , ಬ್ರಾಹ್ಮಣರಿಗೆ ಪೂಜಿಸಿ , ವಂದಿಸುತ್ತಾನೆ . “ ಹೇ ವೃಕ್ಷವೇ , ನೀನು ಯಕ್ಷಾದಿದೇವತೆಗಳ ಆವಾಸವೇ ಆಗಿರುವೆ ಎಂಬ ಕಾರಣಕ್ಕೆ ನಿನ್ನನ್ನು ಸಾಕ್ಷಿಯನ್ನಾಗಿಸಿ ಕೇಳುತ್ತಿದ್ದೇವೆ . ನೀನು ನಡೆದಿರುವುದನ್ನು ತಿಳಿಸು ” ಎಂದು ನ್ಯಾಯ ತೀರ್ಮಾನ ಮಾಡುವವರು ಕೇಳಿ , ಪ್ರಾರ್ಥಿಸಿದರು .

ಆಗ ಆ ಮರದ ಪೊಟರೆಯೊಳಗೆ ಅಡಗಿ ಕುಳಿತಿದ್ದ ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಬುದ್ಧಿಕೆಟ್ಟು , ಧರ್ಮವನ್ನು ಬಿಟ್ಟು ಪ್ರಕೃತಿಯೇ ವಿಕೃತಿಯಾದರೆ ಮನುಷ್ಯನ ಆಯುಷ್ಯ ಕುಂದುತ್ತದೆ ‘ ಎಂಬಂತೆ ‘ ಧರ್ಮಬುದ್ಧಿಯೇ ಧನವನ್ನು ( ಹಣ , ಸಂಪತ್ತು ) ತೆಗೆದುಕೊಂಡನು ಎಂದು ಹೇಳಿದನು . ಅಲ್ಲಿ ಸೇರಿದ ಜನಸಮೂಹ ಹಾಗೂ ಧರ್ಮಾಧಿಕರಣದವರು ಈ ಮಾತುಗಳನ್ನು ಕೇಳಿ ಆಶ್ಚರ್ಯಪಟ್ಟರು . ಆಗ ಧರ್ಮಬುದ್ಧಿಯು ಇದು ಆಶ್ಚರ್ಯವಾದ ಸಂಗತಿಯೇ ಆಗಿದೆ .

ಆದರೆ ಈ ದೇವರು ಸತ್ಯವನ್ನು ಏಕೆ ಹೇಳುತ್ತಿಲ್ಲ ? ಎಂದು ಯೋಚಿಸಿ ಆ ದೊಡ್ಡಮರವನ್ನು ಪ್ರದಕ್ಷಿಣೆ ಮಾಡಿ ಬರುವಾಗ ಆ ಮರದಲ್ಲಿ ಒಂದು ದೊಡ್ಡ ಪೊಟರೆಯನ್ನು ಕಂಡನು . ಅಲ್ಲಿ ಮನುಷ್ಯ ಸಂಚಾರವನ್ನೂ ಗುರುತಿಸಿದನು . ಆಗ ಧರ್ಮಬುದ್ಧಿಯು ಧರ್ಮಾಧಿಕರಣದವರಿಗೆ ಹೀಗೆ ಹೇಳಿದನು ಸುಳ್ಳು ಹೇಳದಿರುವ ವ್ಯಾಪಾರಿಗಳೇ ಇಲ್ಲ . ನಾನೂ ಒಬ್ಬ ವ್ಯಾಪಾರಿ ನನ್ನ ವೃತ್ತಿಧರ್ಮಕ್ಕೆ ಹೊಂದಿಕೊಂಡು ನಾನು ಧರ್ಮಬುದ್ಧಿಯಿಂದ ಅಧರ್ಮಬುದ್ಧಿಯಾಗಿ ಧನವನ್ನು ( ಸಂಪತ್ತನ್ನು ) ಬಚ್ಚಿಟ್ಟುಕೊಂಡು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಈ ಮರದ ಪೊಟರೆಯೊಳಗೆ ಇಟ್ಟು ಮರುದಿವಸ ಮತ್ತೆ ಬಂದು ನೋಡಿದಾಗ ಒಂದು ಹಾವು ಆ ಸಂಪತ್ತನ್ನು ಸುತ್ತುವರೆದಿತ್ತು . ನಾನು ಭಯಪಟ್ಟು ಹೊರಟುಹೋದೆ .

ನೀವೆಲ್ಲಾ ಹಾಗೇ ನೋಡುತ್ತಿರಿ . ನಾನು ಈ ಮೊಟರೆಗೆ ಹೊಗೆಯನ್ನು ಇಟ್ಟು ಹಾವನ್ನು ಓಡಿಸಿ ಕಳೆದುಕೊಂಡ ಸಂಪತ್ತನ್ನು ಕೊಡುವೆನು ” ಎಂದು ಆ ಕ್ಷಣಕ್ಕೆ ಹೊಸ ತಂತ್ರವನ್ನು ಹೂಡಿ ಧರ್ಮಬುದ್ಧಿಯು ಹುಲ್ಲು ಕಟ್ಟಿಗೆಯನ್ನು ತರಿಸಿ , ಆ ಮೊಟರೆಯೊಳಗೆ ತುಂಬಿ ದುಷ್ಟಬುದ್ಧಿಯ ಮನೆಗೆ ಬೆಂಕಿ ಇಡುವಂತೆ ಬೆಂಕಿಹಚ್ಚಿದನು . ಹೀಗೆ ಹೊಗೆ ಹಾಕಿ ಬೆಂಕಿಯನ್ನು ಇಟ್ಟು ಕುತಂತ್ರವನ್ನು ಬಯಲಿಗೆಳೆದನು .

ದುಷ್ಟಬುದ್ಧಿಯ ತಂತ್ರ ಅವನಿಗೇ ತಿರುಗುಬಾಣವಾದ ಬಗೆಯನ್ನು

ಅತಿಯಾದ ಮೋಸದ ಮನಸ್ಸುಳ್ಳ ದುಷ್ಟಬುದ್ಧಿಯು ದುರಾಸೆಯಿಂದ , ತಾನೇ ಕಳ್ಳತನ ಮಾಡಿ ಕಳ್ಳತನದ ಆರೋಪವನ್ನು ತನ್ನ ಮೇಲೆ ಹಾಕುತ್ತಿದ್ದಾನೆಂದು , ಈ ರೀತಿ ಸುಳ್ಳು ಹೇಳುತ್ತಿರುವನೆಂದು ಧರ್ಮಬುದ್ಧಿಗೆ ತಿಳಿಯಿತು . ಆದರೆ ದುಷ್ಟಬುದ್ಧಿಯು ಮೊದಲೇ “ ಅಯ್ಯೋ ಕೆಟ್ಟೆನಲ್ಲ ! ” ಎಂದು ಹೇಳುತ್ತಾ ಹೊಟ್ಟೆಯನ್ನು ಬಡಿದುಕೊಂಡು ಬೊಬ್ಬೆಯಿಡುತ್ತಾ ಧರ್ಮಬುದ್ಧಿಯ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾನೆ .

ದುಷ್ಟಬುದ್ಧಿಯು ಸಂಪತ್ತನ್ನು ರಕ್ಷಿಸದಿರುವುದಕ್ಕೆ ಕಳವಳಗೊಂಡಂತೆ ನಟಿಸುತ್ತಾ ಸ್ನೇಹ ನಾಶವಾಯಿತಲ್ಲಾ ಎಂದು ಗೋಳಾಡಿದನು . ಈ ವಿಚಾರವನ್ನು ಧರ್ಮಾಧಿಕಾರಿಗಳಿಗೆ ಬಂದು ಹೇಳಿದನು . ಅಲ್ಲಿಯವರೆಗೆ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದ್ದನ್ನು ಕೇಳಿದರು . ಕೊನೆಯಲ್ಲಿ ದುಷ್ಟಬುದ್ಧಿಯು ಎಲ್ಲ ಸಂಪತ್ತನ್ನು ಧರ್ಮಬುದ್ಧಿಯೇ ಕದ್ದಿರುವನೆಂದೂ ಅದಕ್ಕೆ ಸಾಕ್ಷಿ ಇರುವುದೆಂದೂ ತಿಳಿಸುತ್ತಾನೆ .

ದುಷ್ಟಬುದ್ಧಿಯು ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ರಹಸ್ಯವಾಗಿ ಅಲ್ಲಿಯವರೆಗೂ ನಡೆದ ಘಟನೆಗಳನ್ನು ತಿಳಿಸಿ ನಿಮ್ಮ ಒಂದು ಮಾತಿನಿಂದ ಮಾತ್ರ ನಾವು ಹಸಿವಿನಿಂದ ಇರದೆ ಹಲವುಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು ( ಗಳಿಸಲು ) ಉಳಿಸಲು ಸಾಧ್ಯ . ನೀವು ಆ ಮರದ ಪೊಟರೆಯೊಳಗೆ ಅಡಗಿ ಕುಳಿತುಕೊಳ್ಳಿ .

ಎಲ್ಲರೂ ಮರವನ್ನು ಸಾಕ್ಷಿ ಕೇಳಿದಾಗ ನೀವು ಒಳಗಿನಿಂದಲೇ ( ವೃಕ್ಷಸಾಕ್ಷಿ ) “ ಧರ್ಮಬುದ್ಧಿಯೇ ಸಂಪತ್ತನ್ನು ಕೊಂಡೊಯ್ದನು ” ಎಂದು ಹೇಳಿರಿ ಎಂದನು . ಆ ದೊಡ್ಡ ಅಶ್ವತ್ಥ ಮರದ ಪೊಟರೆಯೊಳಗೆ ತಂದೆಯನ್ನು ಕಳಿಸಿದನು . ಅಲ್ಲಿಯೇ ಅಡಗಿರುವಂತೆ ತಿಳಿಸಿದನು . ಈ ರಹಸ್ಯ ಅರಿತ ಧರ್ಮಬುದ್ಧಿಯು ಆ .ಮೊಟರೆಯೊಳಗೆ ಬೆಂಕಿಹಚ್ಚಿದನು . ಹೀಗೆ ಅವರ ಕುತಂತ್ರವನ್ನು ಬಯಲಿಗೆಳೆದನು . ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾಯಿತು .

Vruksha Sakshi Kannada Notes in karnataka

ಈ ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ .

ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students
ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು | Vruksha Sakshi Kannada Notes 10th Standard Free For Students
“ ಪೊನ್ನನೆಲ್ಲಮಂ ನೀನೇ ಕೊಂಡೆ ”

ಈ ವಾಕ್ಯವನ್ನು ‘ ವೃಕ್ಷಸಾಕ್ಷಿ ‘ ಎಂಬ ಪಾಠದಿಂದ ಆರಿಸಲಾಗಿದೆ . ಇದರ ಆಕರ ಗ್ರಂಥ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರಂ ಎಂಬ ಕೃತಿ . ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು . ತಾವು ಗಳಿಸಿದ್ದ ಸಂಪತ್ತನ್ನು ಹಂಚಿಕೊಳ್ಳೋಣ ಎಂದು ಧರ್ಮಬುದ್ಧಿಯು ದುಷ್ಟಬುದ್ಧಿಗೆ ಹೇಳಿದನು . ಆಗ ದುರ್ಬುದ್ಧಿಯನ್ನು ಹೊಂದಿದ್ದ ದುಷ್ಟಬುದ್ಧಿಯು


ಮಾಡಿದನು . ಪಾಪ ಬುದ್ಧಿಯಿಂದ ಮನಸ್ಸಿನಲ್ಲಿ ದುರಾಲೋಚನೆಯನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಈ ರೀತಿ ಹೇಳಿದನು “ ನಾವೂ ಈ ಸಂಪತ್ತನ್ನು ಹಂಚಿಕೊಂಡು ಮನೆಯಲ್ಲಿ ಸ್ವತಂತ್ರವಾಗಿ ಸ್ಟೇಚ್ಛೆಯಿಂದ ಇರಲು ಸಾಧ್ಯವಿಲ್ಲ . ಇದನ್ನು ನಾವು ಉಳಿಸಬೇಕಾಗಿದೆ . ಆದುದರಿಂದ ನಿನಗೆ ಹಾಗೂ ನನಗೆ ಖರ್ಚುಮಾಡಲು ಬೇಕಾದಷ್ಟು ಸಂಪತ್ತನ್ನು ತೆಗೆದುಕೊಂಡು ಮಿಕ್ಕ ಸಂಪತ್ತನ್ನು ಇಲ್ಲಿಯೇ ಇಡೋಣ ” ಕೆಲವು ಕಾಲದ ನಂತರ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದಂತೆ ಅವರು ಸಂಪತ್ತನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಹೋಗಿ ಎಲ್ಲ ಸಂಪತ್ತನ್ನು ತೆಗೆದುಕೊಂಡು ಗುಂಡಿಯನ್ನು ಮೊದಲಿನಂತೆಯೇ ಮುಚ್ಚಿ ಬಂದನು . “ ಪೊನ್ನನೆಲ್ಲಮಂ ನೀನೆ ಕೊಂಡೆ ” “ ಅಯ್ಯೋ ಕೆಟ್ಟೆನಲ್ಲ ! ” ಎಂದು ಹೇಳುತ್ತಾ ಹೊಟ್ಟೆಯನ್ನು ಬಡಿದುಕೊಂಡು ಬೊಬ್ಬೆಯಿಡುತ್ತಾ ಧರ್ಮಬುದ್ಧಿಯ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾನೆ .

“ ಈತನ ಮಾತು ಅಶ್ರುತಪೂರ್ವಮ್ ”

ಈ ವಾಕ್ಯವನ್ನು ‘ ವೃಕ್ಷಸಾಕ್ಷಿ ‘ ಎಂಬ ಪಾಠದಿಂದ ಆರಿಸಲಾಗಿದೆ . ಇದರ ಆಕರ ಗ್ರಂಥ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಪಂಚತಂತ್ರ ಎಂಬ ಕೃತಿ ಕರ್ಣಾಟಕ ಈ ಮಾತನ್ನು ಧರ್ಮಾಧಿಕರಣರು ಹೇಳುತ್ತಾರೆ . ದುಷ್ಟಬುದ್ಧಿಯು ಮೊದಲೇ ಹಣ ಹೊನ್ನನ್ನು ಕದ್ದು , “ ಅಯ್ಯೋ ಕೆಟ್ಟೆನಲ್ಲ ! ” ಎಂದು ಹೇಳುತ್ತಾ ಹೊಟ್ಟೆಯನ್ನು ಬಡಿದುಕೊಂಡು ಬೊಬ್ಬೆಯಿಡುತ್ತಾ ಧರ್ಮಬುದ್ಧಿಯ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾನೆ . ದುಷ್ಟಬುದ್ಧಿಯು ಸಂಪತ್ತನ್ನು ರಕ್ಷಿಸದಿರುವುದಕ್ಕೆ ಕಳವಳಗೊಂಡಂತೆ ನಟಿಸುತ್ತಾ ಸ್ನೇಹ ನಾಶವಾಯಿತಲ್ಲಾ ಎಂದು ಗೋಳಾಡಿದನು . ಈ ವಿಚಾರವನ್ನು ಧರ್ಮಾಧಿಕರಣರಿಗೆ ಹೇಳಿದನು . ಅಲ್ಲಿಯವರೆಗೆ ನಡೆದ ಘಟನೆಗಳನ್ನು ವಿಸ್ತಾರವಾಗಿ ಕೇಳಿದರು .

ಕೊನೆಯಲ್ಲಿ ದುಷ್ಟಬುದ್ಧಿಯು ಎಲ್ಲ ಸಂಪತ್ತನ್ನು ಧರ್ಮಬುದ್ಧಿಯೇ ಕದ್ದಿರುವನೆಂದೂ ಅದಕ್ಕೆ ಸಾಕ್ಷಿ ಇರುವುದೆಂದೂ ತಿಳಿಸುತ್ತಾನೆ . ಆಗ ಸಭಾಸದರು ಸಾಕ್ಷಿ ಯಾರು ಹೇಳು ಎಂದಾಗ ಸಂಪತ್ತನ್ನು ಭೂಮಿಯಲ್ಲಿ ಹುಗಿದಿಡುವಾಗ ಇವನು ಮತ್ತು ನಾನು ಅಲ್ಲದೆ ಮತ್ಯಾವ ಮನುಷ್ಯರೂ ಅಲ್ಲಿರಲಿಲ್ಲ . ಆ ಮಹಾವೃಕ್ಷವೇ ಸಾಕ್ಷಿ ಎಂದು ದುಷ್ಟಬುದ್ಧಿಯು ಹೇಳಿದಾಗ ಧರ್ಮಾಧಿಕರಣದವರು ಆಶ್ಚರ್ಯಪಟ್ಟು “ ಈತನ ಮಾತು ಅಶ್ರುತಪೂರ್ವಮ್ ” ಈ ಹಿಂದೆ ಕೇಳಿಲ್ಲದ ಸಾಕ್ಷಿ ಹಾಗಾಗಿ ಆ ಅದ್ಭುತವನ್ನು ನೋಡೋಣ ಎಂದು ನಿಶ್ಚಯಿಸಿದರು .

“ ನಿನ್ನ ಪಟುವಗೆ ನಮ್ಮ ಕುಲಮನೆಲ್ಲಮನಡೆವ ಬಗೆ ”

ಈ ವಾಕ್ಯವನ್ನು ವೃಕ್ಷಸಾಕ್ಷಿ ‘ ಎಂಬ ಪಾಠದಿಂದ ಆರಿಸಲಾಗಿದೆ . ಇದರ ಆಕರ ಗ್ರಂಥ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರ ಎಂಬ ಕೃತಿ .
ಈ ಮಾತನ್ನು ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ದುಷ್ಟಬುದ್ಧಿಗೆ ಹೇಳುತ್ತಾನೆ . ದುಷ್ಟಬುದ್ಧಿಯು ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ರಹಸ್ಯವಾಗಿ ಅಲ್ಲಿಯವರೆಗೂ ನಡೆದ ಘಟನೆಗಳನ್ನು ತಿಳಿಸಿ ನಿಮ್ಮ ಒಂದು ಮಾತಿನಿಂದ ಮಾಡಿ ನಾವು ಹಸಿವಿನಿಂದ ಇರದೆ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ ( ವೃಕ್ಷಸಾಕ್ಷಿ ) ( ಗಳಿಸಲು ) ಉಳಿಸಲು ಸಾಧ್ಯ .

ನೀವು ಆ ಮರದ ಪೊಟರೆಯೊಳಗೆ ಅಡ ಕುಳಿತುಕೊಳ್ಳಿ . ಎಲ್ಲರೂ ಮರವನ್ನು ಸಾಕ್ಷಿ ಕೇಳಿದಾಗ ನೀವು ಒಳಗಿನಿಂದಲೇ “ ಧರ್ಮಬುದ್ಧಿಯೇ ಸಂಪತ್ತನ್ನು ಕೊಂಡೊಯ್ದನು ” ಎಂದು ಹೇಳಿರಿ ಎಂದನು . ಆಗ ದುಷ್ಟಬುದ್ಧಿಯ ತಂದೆಯು ದುಷ್ಟಬುದ್ಧಿಗೆ ಬುದ್ಧಿವಾದ ಹೇಳಿದನು . “ ಪರರ ಹಣವನ್ನು ಸಂಪತ್ತನ್ನು ಕದಿಯುವುದು , ವಿಶ್ವಾಸ ಘಾತುಕವನ್ನು ಮಾಡುವುದು ಸ್ವಾಮಿದ್ರೋಹವನ್ನು ಮಾಡುವುದು ಇವೆಲ್ಲವೂ ನಮ್ಮನ್ನು ಹಾಳುಮಾಡುತ್ತದೆ . ಇವೆಲ್ಲವನ್ನು ನೀನು ತಿಳಿದಿದ್ದರೂ ನನ್ನಿಂದ ಸುಳ್ಳುಸಾಕ್ಷಿ ಹೇಳಿಸಿ ನನ್ನನ್ನು ಹಾಳು ಮಾಡಲು ಯೋಚಿಸುತ್ತಿರುವೆ . ನಿನ್ನ ಕೆಟ್ಟ ಆಲೋಚನೆ ನಮ್ಮ ವಂಶವನ್ನೇ ಹಾಳುಮಾಡುತ್ತದೆ ” ಎನ್ನುತ್ತಾನೆ .

Vruksha Sakshi Kannada Notes for sslc students

“ ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ “

ಈ ವಾಕ್ಯವನ್ನು ‘ ವೃಕ್ಷಸಾಕ್ಷಿ ‘ ಎಂಬ ಪಾಠದಿಂದ ಆರಿಸಲಾಗಿದೆ . ಇದರ ಆಕರ ಗ್ರಂಥ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರ ‘ ಎಂಬ ಕೃತಿ ಪ್ರಕೃತಿಯೇ ವಿಕೃತಿಯಾದರೆ ಮನುಷ್ಯನ ಆಯುಷ್ಯ ಕುಂದುತ್ತದೆ ‘ ಎಂಬುದು ಒಂದು ನೀತಿ ಮಾತಾಗಿದೆ .

ಆ ಮರದ ಪೊಟರೆಯೊಳಗೆ ಅಡಗಿ ಕುಳಿತಿದ್ದ ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಬುದ್ಧಿಕೆಟ್ಟು , ಧರ್ಮವನ್ನು ಬಿಟ್ಟು ‘ ಪ್ರಕೃತಿಯೇ ವಿಕೃತಿಯಾದರೆ ಮನುಷ್ಯನ ಆಯುಷ್ಯ ಕುಂದುತ್ತದೆ ‘ ಎಂಬಂತೆ ‘ ಧರ್ಮಬುದ್ಧಿಯೇ ಧನವನ್ನು ( ಹಣ , ಸಂಪತ್ತು ) ತೆಗೆದುಕೊಂಡನು ಎಂದು ಹೇಳಿದನು . ಅಲ್ಲಿ ಸೇರಿದ ಜನಸಮೂಹ ಹಾಗೂ ಧರ್ಮಾಧಿಕರಣದವರು ಈ ಮಾತುಗಳನ್ನು ಕೇಳಿ ಆಶ್ಚರ್ಯಪಟ್ಟರು .

“ ಹುಸಿಯದ ಬೇಹಾರಿಯೇ ಇಲ್ಲ . ”

ಈ ವಾಕ್ಯವನ್ನು ‘ ವೃಕ್ಷಸಾಕ್ಷಿ ‘ ಎಂಬ ಪಾಠದಿಂದ ಆರಿಸಲಾಗಿದೆ . ಇದರ ಆಕರ ಗ್ರಂಥ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡ್ಮಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರ ಎಂಬ ಕೃತಿ ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣದವರಿಗೆ ಹೇಳುತ್ತಾನೆ . “ ಹೇ ವೃಕ್ಷವೇ , ನೀನು ಯಕ್ಷಾದಿದೇವತೆಗಳ ಆವಾಸವೇ ಆಗಿರುವೆ ಎಂಬ ಕಾರಣಕ್ಕೆ ನಿನ್ನನ್ನು ಸಾಕ್ಷಿಯನ್ನಾಗಿಸಿ ಕೇಳುತ್ತಿದ್ದೇವೆ .

ನೀನು ನಡೆದಿರುವುದನ್ನು ತಿಳಿಸು ಎಂದು ನ್ಯಾಯತೀರ್ಮಾನ ಮಾಡುವವರು ಕೇಳಿದರು .ಆಗ ಆ ಮರದ ಪೊಟರೆಯೊಳಗೆ ಅಡಗಿ ಕುಳಿತಿದ್ದ ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಬುದ್ದಿಕಟ್ಟು , ಧರ್ಮವನ್ನು ಬಿಟ್ಟು ಪ್ರಕೃತಿಯೇ ವಿಕೃತಿಯಾದರೆ ಮನುಷ್ಯನ ಆಯುಷ್ಯ ಕುಂದುತ್ತದೆ ‘ ಎಂಬಂತೆ ‘ ಧರ್ಮಬುದ್ಧಿಯೇ ಧನವನ್ನು ( ಹಣ , ಸಂಪತ್ತು ) ತೆಗೆದುಕೊಂಡನು ಎಂದು ಹೇಳಿದನು . ಈ ರಹಸ್ಯ ಅರಿತ ಧರ್ಮಬುದ್ಧಿಯು ಧರ್ಮಾಧಿ – ಕರಣದವರಿಗೆ ಹೀಗೆ ಹೇಳಿದನು ಸುಳ್ಳು ಹೇಳದಿರುವ ವ್ಯಾಪಾರಿಗಳೇ ಇಲ್ಲ .

ನಾನು ಒಬ್ಬ ವ್ಯಾಪಾರಿ ನನ್ನ ವೃತ್ತಿ ಧರ್ಮಕ್ಕೆ ಹೊಂದಿಕೊಂಡು ನಾನು ಧರ್ಮಬುದ್ಧಿಯಿಂದ ಅಧರ್ಮಬುದ್ಧಿಯಾಗಿ ಧನವನ್ನು ( ಸಂಪತ್ತನ್ನು ) ಬಚ್ಚಿಟ್ಟುಕೊಂಡು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಈ ಮರದ ಮೊಟರೆಯೊಳಗೆ ಇಟ್ಟು ಬಂದು ಮರುದಿವಸ ಮತ್ತೆ ಬಂದು ನೋಡಿದಾಗ ಒಂದು ಹಾವು ಆ ಸಂಪತ್ತನ್ನು ಸುತ್ತುವರೆದಿತ್ತು . ನಾನು ಭಯಪಟ್ಟು ಹೊರಟುಹೋದೆ ಎಂದು ಹೇಳಿ ಬೆಂಕಿ ಹಚ್ಚಿ ರಹಸ್ಯ ಭೇದಿಸಿದನು .

Vruksha Sakshi Kannada Notes kannada

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
ವಡ್ಡಾರಾಧನೆ – ಶಿವಕೋಟ್ಯಾಚಾರ್ಯ : ಪಂಚತಂತ್ರ…………

ದುರ್ಗಸಿಂಹ

ಕಬ್ಬ – ಕಾವ್ಯ : ಬೇಹಾರಿ—————

ವ್ಯಾಪಾರಿ

ಅನೃತ – ಸುಳ್ಳು : ಕೃತ್ರಿಮ…………….

ಕೃತಕ

ಬಂದಲ್ಲದೆ ಲೋಪ : ಧೃತಿಗೆಟ್ಟು

ಆದೇಶಸಂಧಿ

ದೈವಭಕ್ತಿ – ತತ್ಪುರುಷ :: ಅನ್ನೋದರ

ಬಹುಹಿಸಂಧಿ

Vruksha Sakshi Kannada Notes kseeb solutions

ಭಾಷಾ ಚಟುವಟಿಕೆ

ಈ ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ

ಪೋಗಲ್‌ವೇಲ್ಕಂ = ಪೋಗಲ್ + ಏಳ್ಳು ತಕ್ಕನಿತು = ತಕ್ಕ + ಇನಿತು – ಲೋಪಸಂಧಿ

ಪೊಡೆ = ಪೂಳ್ + ಎಡೆ – ಲೋಪಸಂಧಿ

ನೀಡಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ .
  • ಅತಿಕುಟಿಲ = ಅತಿಯಾದ + – ಆಗಮಸಂಧಿ ಕುಟಿಲ – ತತ್ಪುರುಷ ಸಮಾಸ
  • ಕೈಕೊಳ್ಳುದು = ಕೈ + ಕೊಳ್ಳುದು ಕ್ರಿಯಾ ಸಮಾಸ
  • ಕಟ್ಟೇಕಾಂತ : ಕಟು + ಏಕಾಂತ – ಕರ್ಮಧಾರಯ ಸಮಾಸ
  • ಸ್ವಾಮಿದ್ರೋಹ +ಸ್ವಾಮಿಗೆ ದ್ರೋಹ -ತತ್ಪುರುಷ ಸಮಾಸ
  • ಪಠಧನ = ಪರರ + ಧನ ತತ್ಪುರುಷ ಸಮಾಸ
  • ಧನಹರಣ = ಧನವನ್ನು + ಹರಣ ( ಕದಿಯುವುದು ) ಮಾಡಿ – ಕ್ರಿಯಾ ಸಮಾಸ
  • ಸಾಕ್ಷಿಮಾಡಿ =ಸಾಕ್ಷಿಯನ್ನು + ಮಾಡಿ – ಕ್ರಿಯಾ ಸಮಾಸ ಬಲವಂದು= ಬಲಭಾಗದಿಂದ ( ಪ್ರದಕ್ಷಿಣೆ ) + ಬಂದು – ಕ್ರಿಯಾ ಸಮಾ

ಭಾಷಾ ಚಟುವಟಿಕೆ

Vruksha Sakshi Kannada Notes karnataka

ಮಹಿಳಾ ಸಬಲೀಕರಣ

ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ ಎಂಬ ಮಾತೊಂದಿದೆ . ಮಹಿಳೆಯರು ಪುರುಷರಷ್ಟೇ ಸಮರ್ಥರು , ಸಮಾನರು . ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಸಾಧನೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ . ಆದರೆ ಕೆಲವು ಕಾರಣಗಳಿಂದ ಸ್ತ್ರೀಯರು ಅವಕಾಶ ವಂಚಿತರಾಗುತ್ತಿದ್ದಾರೆ . ಆದ್ದರಿಂದ ಅವರಿಗೆ ಅವಕಾಶಗಳನ್ನು ನೀಡಿ ಮಹಿಳಾ ಸಬಲೀಕರಣ ಮಾಡಬೇಕಾಗಿದೆ . ಮಹಿಳೆಯರನ್ನು ಸಬಲರನ್ನಾಗಿಸಲು ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ .

ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತಂದು ಅವರನ್ನು ಸಬಲರನ್ನಾಗಿಸುವಲ್ಲಿ ಸ್ತ್ರೀಶಕ್ತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ . ಇದಕ್ಕಾಗಿ ಸ್ವಸಹಾಯ ಗುಂಪುಗಳನ್ನು ನಿಯೋಜಿಸಲಾಗಿದೆ . ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಕಾನೂನು ನೆರವುಗಳನ್ನು ನೀಡಲು ಸಾಂತ್ವನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ .

ಸ್ವಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುತ್ತಿದೆ . ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ . ಒಟ್ಟಿನಲ್ಲಿ ಮಹಿಳೆಯರಿಗೆ ಗೌರವ ನೀಡಿ ಅವರೂ ಸಹ ಸ್ವಾಭಿಮಾನದಿಂದ , ಸ್ವಾವಲಂಬನೆಯಿಂದ ಬದುಕಲು ನೆರವಾಗಬೇಕು ಆ ಮೂಲಕ ಮಹಿಳಾ ಸಬಲೀಕರಣವನ್ನು ಮಾಡಬೇಕಾದ ಜವಾಬ್ದಾರಿ ಸರ್ಕಾರದೊಡನೆ ಸಾರ್ವಜನಿಕರದ್ದೂ ಆಗಿದೆ .

ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯಗಳ ಸಾಮಾಜಿಕ ಮಹತ್ವ

2002-2003 ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ತಲಾ 3 ಕೆ.ಜಿ. ಅಕ್ಕಿ ಅನಂತರ ಕ್ರಮೇಣವಾಗಿ ಬಿಸಿಯೂಟ ನೀಡುವ ಯೋಜನೆ ಜಾರಿಗೆ ಬಂದಿತು . 1 ರಿಂದ 10 ನೆಯ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಅಕ್ಷರ ದಾಸೋಹ ಎಂಬ ಹೆಸರಿನಿಂದ ಕರೆಯಲಾಗುತ್ತದೆ . ಅದೇ ರೀತಿ ಹಾಲನ್ನು ನೀಡುವ ಯೋಜನೆ ಜಾರಿಗೆ ಬಂದಿದೆ .

ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು , ಶಾಲೆ ತೊರೆಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು , ಪೌಷ್ಠಿಕಾಂಶದ ಆಹಾರವನ್ನು ನೀಡುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು , ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು

ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವುದು ಬರಪೀಡಿತ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲೂ ಸಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಹಾಲನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ . ಇದು ಅಭಿನಂದನೀಯವಾದ ಕಾರ್ಯವಾಗಿದೆ .

Vruksha Sakshi Kannada Notes important faq

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ .

Vruksha Sakshi Kannada Notes short notes

. ……ದಲ್ಲಿ ಭೇದ , ಪರೀಕ್ಷಾ , ವಿಶ್ವಾಸ , ವಂಚನಾ , ಮಿತ್ರಕಾರ್ಯ ಎಂಬ ಐದು ತಂತ್ರಗಳಿವೆ .

ಪಂಚತಂತ್ರ

ನೀಲಬಣ್ಣದ ಕುತ್ತಿಗೆ ಉಳ್ಳವ …ನಿಗೆ ಶಿತಿಕಂಠ ಎನ್ನುತ್ತಾರೆ .

ಶಿವ

…….. ವಿಗೆ ಅನ್ನೋದರ ಎಂದು ಕರೆಯುತ್ತಾರೆ .

ವಿಷ್ಣು

Vruksha Sakshi Kannada Notes summary

………ನಗರದಲ್ಲಿ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ಮಕ್ಕಳಿದ್ದರು .

ಮಧುರಾ

ದುರ್ಗಸಿಂಹನು- ಒಂದನೆಯ ….ಆಸ್ಥಾನದಲ್ಲಿ ದಂಡನಾಯಕನೂ ವ್ಯಾಪಾರಿಗಳ
ಸಂಧಿವಿಗ್ರಹಿಯೂ ಆಗಿದ್ದನು .

ಜಗದೇಕಮಲ್ಲನ

ದುಷ್ಟಬುದ್ಧಿಯ ತಂದೆಯ ಹೆಸರು

ಪ್ರೇಮಮತಿ

Vruksha Sakshi Kannada Notes pdf

ಹೇ ವೃಕ್ಷವೇ ನೀನ………….ಗಾಲ ವಾಸನೆ ಆಗಿರುವೆ

ಯಕ್ಷಾದಿದೇವತೆ

ಗುಣಾಡ್ಯನಿಂದ ಗಳ ಆವಾಸವ ಆಗಿರುವೆ . ಭಾಷೆಯಲ್ಲಿ ರಚಿತವಾದ ಬೃಹತ್ಕಥೆ ವಸುಭಾಗಭಟ್ಟನ ಸಂಸ್ಕೃತ ಪಂಚತಂತ್ರಕ್ಕೆ ಆಕರ

ಪೈಶಾಚಿಕ

“ ಪ್ರಕೃತಿ ಯಾದ ಮನುಷ್ಯನಾಯುಷ್ಯಂ ಕುಂದುಗುಂ ”

ವಿಕೃತಿ

Vruksha Sakshi Kannada Notes lesson summary pdf

“ ಪರರ ಹಣವನ್ನು ಸಂಪತ್ತನ್ನು ಕದಿಯುವುದು , ವಿಶ್ವಾಸ ಘಾತುಕವನ್ನು ಮಾಡುವುದು ಸ್ವಾಮಿದ್ರೋಹವನ್ನು ಮಾಡುವುದು ಇವೆಲ್ಲವೂ ನಮ್ಮನ್ನು ಹಾಳುಮಾಡುತ್ತದೆ ” ಎಂದು ದುಷ್ಟಬುದ್ಧಿಯ ತಂದೆಯು ದುಷ್ಟಬುದ್ಧಿಗೆ ………..ಹೇಳಿದರು .

ಬುದ್ಧಿವಾದ

Vruksha Sakshi Kannada Notes kseeb solutions class sslc

ಈ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ
  • ಊರೂರು + ಊರು + ಊರು = ಲೋಪಸಂಧಿ
  • ಬಲ್ಲೆನೆಂದು+ ಬಲ್ಲೆನು + ಎಂದು =ಲೋಪಸಂಧಿ
  • ಮಾತಂತು + ಮಾತು + ಅಂತು =ಲೋಪಸಂಧಿ
  • ಸಂಪನ್ನರಾದ + ಸಂಪನ್ನರು + ಆದ =ಲೋಪಸಂಧಿ
  • ಕೈಯನ್ನು + ಕೈ + ಅನ್ನು = ಆಗಮಸಂಧಿ
  • ಮಳೆಯಿಂದ + ಮಳೆ + ಇಂದ =ಆಗಮಸಂಧಿ
  • ಶಾಲೆಯಲ್ಲಿ + ಶಾಲೆ + ಅಲ್ಲಿ = ಆಗಮಸಂಧಿ
  • ಮರವನ್ನು + ಮರ + ಅನ್ನು =ಆಗಮಸಂಧಿ
  • ಮಗುವಿಗೆ + ಮಗು + ಇಗೆ ಆಗಮಸಂಧಿ
  • ಮಳೆಗಾಲ + ಮಳೆ + ಕಾಲ = ಆದೇಶಸಂಧಿ
  • ಮೈದೋರು + ಮೈ + ತೋರು =ಆದೇಶಸಂಧಿ
  • ಬೆಂಬತ್ತು +ಬೆನ್ + ಪತ್ತು = ಆದೇಶಸಂಧಿ
  • ಕಡುವೆಟ್ಟು ಕಡು + ಬೆಳ್ಳು = ಆದೇಶಸಂಧಿ
  • ಮಹಾತ್ಮ + ಮಹಾ + ಆತ್ಮ= ಸವರ್ಣದೀರ್ಘಸಂಧಿ
  • ಗಿರೀಶ + ಗಿರಿ + ಈಶ – ಸವರ್ಣದೀರ್ಘಸಂಧಿ
  • ಸುರಾಸುರ + ಸರ + ಅಸುರ =ಸವರ್ಣದೀರ್ಘಸಂಧಿ
  • ವಧೂಪೇತ + ವಧು + ಉಪೇತ = ಸವರ್ಣದೀರ್ಘಸಂಧಿ
  • ದೇವೇಂದ್ರ +ದೇವ + ಇಂದ್ರ = ಗುಣಸಂಧಿ
  • ಸೂಯ್ಯೋದ=ಸೂರ್ಯ + ಉದಯ= ಗುಣಸಂಧಿ
  • ಮಹರ್ಷಿ =ಮಹಾ + ಋಷಿ = ಗುಣಸಂಧಿ
  • ಮಹೇಶ = ಮಹಾ + ಈಶ =ಗುಣಸಂಧಿ
  • ಏಕೈಕ =ಏಕ + ಏಕ =ವೃದ್ಧಿಸಂಧಿ
  • ಜನೈಕ್ಯ= ಜನ + ಐಕ್ಯ – ವೃದ್ಧಿಸಂಧಿ
  • ವನೌಷಧಿ=ವನ + ಔಷಧಿ ಜ್ಞಾನ + ಈಶ್ವರ = ಗುಣಸಂಧಿ
  • ಅಷ್ಟೆಶ್ವರ – ಅಷ್ಟ + ಐಶ್ವರ್ಯ = ವೃದ್ಧಿಸಂಧಿ
  • ಅತ್ಯವಸರ=ಅತಿ + ಅವಸರ – ಯಣ್‌ಸಂಧಿ
  • ಜಾತ್ಯತೀತ = ಜಾತಿ + ಅತೀತ ಯಣ್‌ಸಂಧಿ
  • ಕೋಟ್ಯಧೀಶ್ವರ =ಕೋಟಿ + ಅಧೀಶ ಕೋಟಿ=ಯಣ್‌ಸಂಧಿ
  • ಕೋಟ್ಯನು =ಕೋಟೆ =ಕೋಟಿ+ಅನುಕೋಟಿ= ಯಣ್‌ಸಂಧಿ
  • ವಾಗ್ದೇವಿ= ವಾಕ್+ದೇವಿ=ಜಸ್ತ್ವಸಂಧಿ
  • ಅಜಂತ – ಅಚ್ + ಅಂತ=ಜಸ್ತ್ವ ಸಂಧಿ
  • ಷಡಾನನ – ಷಟ್ + ಆನ=ಜಸ್ತ್ವ ಸಂಧಿ
  • ದಿಗಂತ =ದಿಕ್ + ಅಂತ=ಜಸ್ತ್ವ ಸಂಧಿ
  • ಅಬ್ಬಿ – ಅಪ್ + ಧಿ =ಜಸ್ತಾವಸಂಧಿ
  • ಪಯಶಯನ -ಪಯಸ್ + ಶಯನ ಯಣ್‌ಸಂಧಿ
  • ಶರಚ್ಚಂದ್ರ ಶರತ್ + ಚಂದ್ರ – ಶ್ಚುತ್ವ ಸಂಧಿ
  • ಜಗಜ್ಯೋತಿ ಜಗತ್ + ಜ್ಯೋತಿ – ಶ್ರುತ್ವಸಂಧಿ
  • ಬೃಹಚ್ಛತ್ರ – ಬೃಹತ್ + ಛತ್ರ
  • ಷಣ್ಮುಖ ಷಟ್ + ಮುಖ ಅನುನಾಸಿಕಸಂಧಿ
  • ಸನ್ಮಾನ ಸತ್ + ಮಾನ – ಅನುನಾಸಿಕಸಂಧಿ
  • ಶ್ರುತಸಂಧಿ ವಾಗಮಯ=ವಾಕ್ + ಮಯ ಅನುನಾಸಿಕಸಂಧಿ
  • ಉನ್ಮಾದ=ಉತ್ + ಮಾನ- ಅನುನಾಸಿಕ ಸಂಧಿ
  • ತನ್ಮಯ =ತತ್ + ಮಯ್- ಅನುನಾಸಿಕಸಂಧಿ
  • ಮಂಡೇಶ್ವರ =ಮಂಡಳ + ಈಶ್ವರ =ಗುಣಸಂಧಿ
  • ಸಕಳಾಚಾರ= ಸಕಳ + ಆಚಾರ್ಯ=ಸವರ್ಣಧೀರ್ಘ ಸಂಧಿ
  • ಬೇಧವಿಲ್ಲ =ಭೇದ + ಇಲ್ಲ=ಆಗಮಸಂಧಿ
  • ಮಂಡಳೇಶ್ವರ=ಮಂಡಳ+ =ಆಗಮಸಂಧಿ
  • ಭೇದವಿಲ್ಲ =ಬೇಧ +ಇಲ್ಲ=ಆಗಮಸಂಧಿ
  • ಕೈವಿಡಿದು – ಕೈ+ಪಿಡಿದು =ಆದೇಶಸಂಧಿ
  • ವೃದ್ಧಿಯಾಗಿ – ವೃದ್ಧಿ + ಆಗಿ – ಆಗಮಸಂಧಿ
  • ಭೇದವಾಗಿ ಭೇದ + ಆಗಿ – ಆಗಮಸಂಧಿ
ಇನ್ನಷ್ಟು ಸಂಧಿಗಳ ಬಗ್ಗೆ ಅಭ್ಯಸಿಸಿ
  • ಕಾಣಲಾಗದು= ಕಾಣಲು + ಆಗದು=ಲೋಪಸಂಧಿ
  • ಜಿನಾಲಯ = ಜಿನ + ಆಲಯ=ಸವರ್ಣಧೀರ್ಘಸಂಧಿ
  • ತಪ್ಪಲೀಯದೆ =ತಪ್ಪಲು + ಈಯದೆ =ಲೋಪಸಂಧಿ
  • ಚಂದ್ರಾರ್ಕ ಚಂದ್ರ + ಅರ್ಕ= ಸವರ್ಣದೀರ್ಘಸಂಧಿ
  • ಶ್ರೀಮನ್ಮಹಾ =ಶ್ರೀಮತ್ + ಮಹಾ= ಅನುನಾಸಿಕಸಂಧಿ
  • ಪೋಗಲ್‌ವೇಲ್ಕಂ =ಮೋಗಲ್ + ಏಳ್ಳುಂ =ಆಗಮಸಂಧಿ
  • ತಕ್ಕನಿತು=ತಕ್ಕ + ಇನಿತು =ಲೋಪ ಸಂಧಿ
  • ಇರುಳಳಿದು= ಇರುಳು + ಅಳಿದು =ಲೋಪಸಂಧಿ
  • ತೆರೆದಿಕ್ಕುವ =ತೆರೆದು + ಇಕ್ಕುವ =ಲೋಪಸಂಧಿ
  • ಹೊಸಗಾಲ =ಹೊಸ + ಕಾಲ – ಆದೇಶಸಂಧಿ
  • ಚರಿಸುತದ್ವರದ =ಚರಿಸುತ + ಅಧ್ವರದ = ಲೋಪಸಂಧಿ
  • ನಿಜಾಶ್ರಮ =ನಿಜ + ಆಶ್ರಮ =ಸವರ್ಣಧೀರ್ಘಸಂಧಿ
  • ಲೇಖನವನೋದಿ =ಲೇಕನವನು + ಓದಿ =ಲೋಪಸಂಧಿ
  • ತೆಗೆದುತ್ತರೀಯಮಂ =ತೆಗೆದು + ಉತ್ತರೀಯಮಂ ಲೋಪಸಂಧಿ
  • ಬೇಡಬೇಡರಸುಗಳ= ಬೇಡಬೇಡ + ಅರಸುಗಳ ಲೋಪಸಂಧಿ
  • ನಿಂತಿರ್ದನು= ನಿಂತು + ಇರ್ದನು= ಲೋಪಸಂಧಿ
  • ಕಾದಾಟದಾಟ= ಕಾದಾಟದ + ಆಟ= ಲೋಪಸಂಧಿ
  • ಆದನೆಂಬ ಆದೆನು + ಎಂಬ= ಲೋಪಸಂಧಿ
  • ನೆತ್ತರೊಂದೆ – ನೆತ್ತರು + ಒಂದೆ ಲೋಪಸಂಧಿ
  • ಶವವಾದವು ಶವ + ಆದವು= ಅಗಮಸಂಧಿ
  • ಜೀವತೆತ್ತವರು – ಜೀವತೆತ್ತ + ಅವರು= ಲೋಪಸಂಧಿ
  • ಮನೋಹರವಾದುದು =ಮನೋಹರ+ಅದುದು= ಲೋಪಸಂಧಿ
  • ಆನಂದವನ್ನು ಆನಂದ + ಅನ್ನು =ಆಗಮಸಂಧಿ
  • ಪದ್ಯಗಳಿಂದ= ಪದ್ಯಗಳು + ಇಂದ =ಲೋಪಸಂಧಿ
  • ಸಮೃದ್ಧವಾಗಿ= ಸಮೃದ್ಧ + ಆಗಿ ಆಗಮಸಂಧಿ
  • ಸಂಗಮವಾದ= ಸಂಗಮ + ಆದ ಆಗಮಸಂಧಿ
  • ವಾಲ್ಮೀಕಿಯವರು= ವಾಲ್ಮೀಕಿ +ಅವರು=ಆಗಮಸಂಧಿ
  • ಲೋಕವನ್ನು=ಲೋಕ+ಅನ್ನು=ಆಗಮಸಂಧಿ
  • ಸೀತಾಪರಣ=ಸೀತಾ +ಅಪಹರಣ=ಸವರ್ಣಧೀರ್ಘಸಂಧಿ

FAQ

‘ ವೃಕ್ಷಸಾಕ್ಷಿ ‘ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡಿ ಚಂದ್ರಶೇಖರ ಐತಾಳರು ಗದ್ಯಾನುವಾದ ಮಾಡಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರ ಎಂಬ ಕೃತಿಯಿಂದ ‘ ವೃಕ್ಷಸಾಕ್ಷಿ ‘ ಕತೆಯ ಈ ಪಾಠವನ್ನು ಆರಿಸಲಾಗಿದೆ .

ವೃಕ್ಷಸಾಕ್ಷಿ ಪಾಠದ ಲೇಖಕರು?

ಲೇಖಕರು :ದುರ್ಗಸಿಂಹ

Vruksha Sakshi Kannada Notes question answer

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Vruksha Sakshi Kannada Notes

Leave a Reply

Your email address will not be published. Required fields are marked *