ಸಂಕಲ್ಪ ಗೀತೆ ನೋಟ್ಸ್ 10ನೇ ತರಗತಿ | Sankalpa Geethe Kannada Notes Question Answer

ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free

Sankalpa Geethe Question Answer , 10ನೇ ತರಗತಿ ಸಂಕಲ್ಪ ಗೀತೆ ಕನ್ನಡ ನೋಟ್ಸ್, Sankalpa Geete Questions and Answers, Summary, Notes. ಸಂಕಲ್ಪ ಗೀತೆ Notes KSEEB, ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು

Sankalpa Geethe Question Answer Notes 10th Standard

ಈ ಲೇಖನದಲ್ಲಿ 10ನೇ ತರಗತಿ ಸಂಕಲ್ಪ ಗೀತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಕವಿ ಪರಿಚಯ

ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free
ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free
ಕವಿ ಪರಿಚಯ : ಡಾ || ಜಿ . ಎಸ್ . ಶಿವರುದ್ರಪ್ಪ
  • ಪೂರ್ಣಹೆಸರು : ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ : ಕೃತಿಗಳು
  • ಕಾಲ:1926- 2013
  • ಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
  • ಕೃತಿಗಳು: ಸಾಮಗಾನ , ಚೆಲುವು – ಒಲವು , ದೇವಶಿಲ್ಪಿ , ದೀಪದ ಹೆಜ್ಜೆ , ಅನಾವರಣ , ವಿಮರ್ಶೆಯ ಪೂರ್ವಪಶ್ಚಿಮ , ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು , ಸೌಂದರ್ಯ ಸಮೀಕ್ಷೆ , ಕಾವ್ಯಾರ್ಥ ಚಿಂತನ , ಎದೆ ತುಂಬಿ ಹಾಡಿದೆನು .

ವಿಶೇಷ :

ಮೈಸೂರು , ಉಸ್ಮಾನಿಯಾ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ .

  • ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ .
  • ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು .

ಪ್ರಶಸ್ತಿ , ಗೌರವ

  • ‘ ಕಾವ್ಯಾರ್ಥ ಚಿಂತನ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ ನಾಡೋಜ ‘ ಪುರಸ್ಕಾರ
  • ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳಿಂದ ಗೌರವ ಡಿ.ಲಿಟ್ ಪದವಿ .
  • ಕರ್ನಾಟಕ ಸರ್ಕಾರದಿಂದ ‘ ರಾಷ್ಟ್ರಕವಿ ‘ ಅಭಿದಾನ
  • 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು .

ಆಕರ ಗ್ರಂಥ

ಎದೆ ತುಂಬಿ ಹಾಡಿದೆನು ‘ ( ಕವನ ಸಂಕಲನ )

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

Sankalpa Geethe Question Answer

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?

ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು .

ನದೀಜಲಗಳು ಏನಾಗಿವೆ ?

ನದೀ ನೀರು ಕಲುಷಿತಗೊಂಡಿದೆ .

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

ಕಲುಷಿತಗೊಂಡ ನದೀ ನೀರಿಗೆ ಮುಂಗಾರಿನ ಮಳೆಯಾಗಬೇಕು .

ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free
ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free

Sankalpa Geethe Question Answer pdf

ಕಾಡುಮೇಡುಗಳ ಸ್ಥಿತಿ ಹೇಗಿದೆ ?

ಮರಗಿಡಗಳನ್ನು ಕಡಿದು ಕಾಡುಮೇಡುಗಳನ್ನು ಬರಡಾಗಿಸಲಾಗುತ್ತಿದೆ .

ಯಾವ ಎಚ್ಚರದೊಳು ಬದುಕಬೇಕಿದೆ ?

ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದಲ್ಲಿ ಬದುಕಬೇಕಾಗಿದೆ .

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?

ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ
ಜ್ಯೋತಿಯನ್ನು ಹಟ್ಟೋಣ , ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ , ಹಡಗನ್ನು ಎಚ್ಚರದಿಂದ ಮುನ್ನಡೆಸೋಣ , ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ನಡೆಸೋಣ . ಹೆಜ್ಜೆ ಹೆಜ್ಜೆಗೂ ಅನೇಕ ಸಮಸ್ಯೆಗಳು ನಮಗೆ ಸವಾಲಾಗಿ ನಿಲ್ಲುತ್ತವೆ . ಎದೆಗುಂದದೆ ಮುನ್ನಡೆಸಬೇಕಿದೆ .

ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ ?

ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ . ಸಮಾಜವೂ ಭ್ರಷ್ಟವಾಗುತ್ತಿದೆ . ನದೀ ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ , ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ . ಮರಗಿಡಗಳನ್ನು ಕಡಿದು ಕಾಡುಮೇಡುಗಳನ್ನು ಬರಡಾಗಿಸಲಾಗುತ್ತಿದೆ . ಅಲ್ಲಿ ನಾವು ವಸಂತ ಕಾಲದಲ್ಲಿರುವಂತೆ ಸಮೃದ್ಧವಾದ ಪರಿಸರವನ್ನು ನಿರ್ಮಾಣ ಮಾಡಬೇಕಾಗಿದೆ .

ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ ?

ಕಟ್ಟುವುದು ಕಠಿಣ ಕೆಡಹುವುದು ಸುಲಭ . ಸಮಾಜದಲ್ಲಿ ಅನೇಕರು ಅಧಃ ಪತನಕ್ಕೆ ಹೋಗುತ್ತಿದ್ದಾರೆ . ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ . ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಆತ್ಮವಿಶ್ವಾಸವನ್ನು ಹೆಚ್ಚಿಸೋಣ , ಧೈರ್ಯವನ್ನು ತುಂಬೋಣ .

ಸಮಾಜದ ನವನಿರ್ಮಾಣಕ್ಕೆ ಪಣ ತೊಡೋಣ . ಮನುಷ್ಯರಲ್ಲಿ ವೈಮನಸ್ಸೆಂಬ ಅಡ್ಡಗೋಡೆ ಇದೆ , ಅನುಮಾನವೆಂಬ ಕಂದಕವಿದೆ , ಪರಸ್ಪರರನ್ನು ದ್ವೇಷಿಸುವ ದುರ್ಗಣ ಬೆಳೆಯುತ್ತಿದೆ . ಜಾತಿ , ಮತ , ಧರ್ಮಗಳ ಭೇದ ಭಾವ ಉಂಟಾಗಿದೆ . ಇಂಥ ಮನುಷ್ಯರ ನಡುವೆ ಸ್ನೇಹ , ಪ್ರೀತಿ , ನಂಬಿಕೆ , ವಿಶ್ವಾಸ , ಆತ್ಮಸ್ಥೆರ್ಯ , ಧೈರ್ಯ ಮುಂತಾದವುಗಳ ಸೇತುವೆಯನ್ನು ನಿರ್ಮಿಸಬೇಕಾಗಿದೆ

Sankalpa Geethe Question Answer 10th kannada

ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು ?

ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿಮತ , ವೇಶ , ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ .

ಅನುಮಾನ , ಭಯ , ಸಂಶಯ ಮುಂತಾದವುಗಳಿಂದ ಮಂಕಾಗಿರುವ , ಧೈರ್ಯಗುಂದಿರುವ ಕಣ್ಣಿನಲ್ಲಿ ನವ ಉತ್ಸಾಹವನ್ನು ಹೊಸ ಆದರ್ಶಗಳನ್ನು , ನೂತನ ಯೋಜನೆಗಳನ್ನು ಬಿತ್ತೋಣ . ಆ ಮೂಲಕ ಸದೃಢವಾದ ಸಮೃದ್ಧವಾದ ಸಮಾಜವನ್ನು ಕಟ್ಟಬೇಕಾಗಿದೆ . ಹೀಗೆ ನಾಳಿನ ಕನಸನ್ನು ಬಿತ್ತಬೇಕಾಗಿದೆ .

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ ?

ರಾಷ್ಟ್ರಕವಿಗಳಾಗಿದ್ದ ಡಾ | ಜಿ.ಎಸ್ . ಶಿವರುದ್ರಪ್ಪನವರು ಸಂಕಲ್ಪದ ಮಹತ್ವವನ್ನು ತಿಳಿಸಿದ್ದಾರೆ . ನಾವು ಜೀವನದಲ್ಲಿ ಯಾವಾಗಲೂ ಧನಾತ್ಮಕ ಭಾವನೆಯನ್ನು ರೂಢಿಸಿಕೊಳ್ಳಬೇಕು . ದೃಢ ಸಂಕಲ್ಪವನ್ನು ಹೊಂದಿರಬೇಕು .

ಯಾವುದೇ ರೀತಿಯ ಸವಾಲುಗಳು ನಮ್ಮ ಜೀವನದಲ್ಲಿ ಎದುರಾದರೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾಗಬೇಕು . ಆಗ ನಮಗೆ ಯಶಸ್ಸು ಲಭಿಸುತ್ತದೆ . ಭೇದಭಾವಗಳನ್ನು ಹೋಗಲಾಡಿಸಿ ಏಕತೆಯಿಂದ ಪ್ರಯತ್ನ ಶೀಲರಾಗಬೇಕು . ಆಗ ನಮ್ಮ ಬಲ , ಶಕ್ತಿ , ವೃದ್ಧಿಸುತ್ತದೆ . ವರ್ಧಿಸುತ್ತದೆ . ಈ ಸಮಾಜವು ಭಯ ಮತ್ತು ಅನುಮಾನಗಳಿಂದ ಆವರಿಸಲ್ಪಟ್ಟಿದೆ .

ಇಂಥ ಸಮಾಜವನ್ನು ದೃಢನಿಷ್ಠೆಯಿಂದ ಸದೃಢಗೊಳಿಸಬೇಕಾಗಿದೆ . ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆಯನ್ನು ಹಚ್ಚಿ ಅಜ್ಞಾನವೆಂಬ ಕತ್ತಲೆಯನ್ನು ದೂರವಾಗಿಸೋಣ ಎಂದು ಡಾ || ಜಿ.ಎಸ್ . ಶಿವರುದ್ರಪ್ಪರವರು ತಿಳಿಸಿದ್ದಾರೆ .

ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ .

ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಚ್ಚಣ , ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ , ಹಡಗನ್ನು ಎಚ್ಚರದಿಂದ ಮುನ್ನಡೆಸೋಣ . ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ .

ಸಮಾಜವೂ ಭ್ರಷ್ಟವಾಗುತ್ತಿದೆ . ನದೀ ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ . ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ . ಕಟ್ಟುವುದು ಕಠಿಣ ಕೆಡಹುವುದು ಸುಲಭ , ಸಮಾಜದಲ್ಲಿ ಅನೇಕರು ಅಧಃಪತನಕ್ಕೆ ಹೋಗುತ್ತಿದ್ದಾರೆ . ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ .

ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿ – ಮತ , ವೇಶ – ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ . ಹೀಗೆ ಕವಿ ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನದ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ .

Sankalpa Geethe Question Answer summary

ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ .

“ ಪ್ರೀತಿಯ ಹಣತೆಯ ಹಟ್ಟೋಣ . ”

ಈ ವಾಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಟ್ಟೋಣ ಎಂದಿದ್ದಾರೆ .

“ ಮುಂಗಾರಿನ ಮಳೆಯಾಗೋಣ . ”

ಈ ವಾಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಡಾ || ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ . ಸಮಾಜವೂ ಭ್ರಷ್ಟವಾಗುತ್ತಿದೆ .

ನದಿನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ . ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ ಎಂದಿದ್ದಾರೆ .

“ ಹೊಸ ಭರವಸೆಗಳ ಕಟ್ಟೋಣ . ”

ಈ ಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ಸಮಾಜದಲ್ಲಿ ಅನೇಕರು ಅಧಃಪತನಕ್ಕೆ ಹೋಗುತ್ತಿದ್ದಾರೆ .

ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ . ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಆತ್ಮ ವಿಶ್ವಾಸವನ್ನು ಹೆಚ್ಚಿಸೋಣ , ಧೈರ್ಯವನ್ನು ತುಂಬೋಣ . ಸಮಾಜದ ನವನಿರ್ಮಾಣಕ್ಕೆ ಪಣ ತೊಡೋಣ . “ ಹೊಸ ಭರವಸೆಗಳ ಕಟ್ಟೋಣ . ” ಎಂದಿದ್ದಾರೆ .

Sankalpa Geethe Question Answer important notes

“ ಹೊಸ ಎಚ್ಚರದೊಳು ಬದುಕೋಣ . ”

ಈ ವಾಕ್ಯವನ್ನು ಕವಿ ಡಾ | ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಡಾ || ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ .

ಈ ಮಾತನ್ನು ಕವಿ ಹೇಳಿದ್ದಾರೆ . ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿಮತ , ವೇಶ , ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ .

ಅನುಮಾನ , ಭಯ , ಸಂಶಯ ಮುಂತಾದವುಗಳಿಂದ ಮಂಕಾಗಿರುವ , ಧೈರ್ಯಗುಂದಿರುವ ಕಣ್ಣಿನಲ್ಲಿ ನವ ಉತ್ಸಾಹವನ್ನು ಹೊಸ ಆದರ್ಶಗಳನ್ನು , ನೂತನ ಯೋಜನೆಗಳನ್ನು ಬಿತ್ತೋಣ , “ ಹೊಸ ಎಚ್ಚರದೊಳು ಬದುಕೋಣ . ” ಎಂದಿದ್ದಾರೆ .

ಬಿಟ್ಟ ಜಾಗವನ್ನು ಸೂಕ್ತ ಪದದಿಂದ ತುಂಬಿ ,

ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free
ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free
ಸಂಕಲ್ಪ ಗೀತೆ ‘ ಪದ್ಯವನ್ನು ….ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಎದೆ ತುಂಬಿ ಹಾಡಿದೆನು

ಕತ್ತಲೆಯೊಳಗೆ ಪ್ರೀತಿಯ …….ಹಚ್ಚೋಣ

ಹಣತೆಯ

ಜಿ.ಎಸ್ . ಶಿವರುದ್ರಪ್ಪನವರು ……ಯಲ್ಲಿ ಸಮಾವೇಶಗೊಂಡ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ದಾವಣಗೆರೆ

Sankalpa Geethe Question Answer best shorts notes

ಭಾಷಾ ಚಟುವಟಿಕೆ

ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ .
  • ನಿಲ್ಲಿಸು -ನಿಲ್ಲು
  • ನಡೆಸು – ನಡೆ
  • ಹಚ್ಚುವುದು -ಹಚ್ಚು
  • ಕಟ್ಟುವುದು -ಕಟ್ಟು
  • ಮುಟ್ಟೋಣ-ಮುಟ್ಟು
  • ಆಗೋಣ – ಆಗು
ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ .
  • ಪ್ರೀತಿಯ – ಷಷ್ಠಿ ವಿಭಕ್ತಿ
  • ಬಿರುಗಾಳಿಗೆ – ಗೆ – ಚತುರ್ಥೀ ವಿಭಕ್ತಿ
  • ಜಲಕ್ಕೆ – ಕ್ಕೆ – ಚತುರ್ಥೀ ವಿಭಕ್ತಿ
  • ಬಿದ್ದುದನ್ನು – ಅನ್ನು – ದ್ವಿತೀಯಾ ವಿಭಕ್ತಿ
  • ಭರವಸೆಗಳ – ಅ – ಷಷ್ಠಿ ವಿಭಕ್ತಿ
ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ
  • ಸಂಶಯದೊಳ್ – ಒಳ್ -ಸಪ್ತಮೀ
  • ಜಲದಿಂ – ಇಂ-ತೃತೀಯ
  • ಮರದತ್ತ್ತಣಿ0 -ಅತ್ತಣಿಂ- ಪಂಚಮೀ
  • ರಾಯಂಗೆ-ಗೆ-ಚತುರ್ಥಿ

Sankalpa Geethe Question Answer guide

ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ , ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ .

ಧಾತು
ಹಾಡು
ನೋಡು
ಕಟ್ಟು
ಕೇಳು
ಓಡು

ವಿಧ್ಯರ್ಥಕ ರೂಪ
  • ಹಾಡಲು
  • ನೋಡಲಿ
  • ಮುಟ್ಟೋಣ
  • ಕಟ್ಟಲಿ
  • ಕೇಳಲಿ
  • ಓಡಲಿ
ಸಂಭಾವನಾರ್ಥಕ ರೂಪ
  • ಹಾಡಿಯಾನು
  • ನೋಡಿಯಾನು
  • ಕಟ್ಟಿಯಾನು
  • ಕೇಳಿಯಾನು
  • ಓಡಿಯಾನು
ನಿಷೇಧಾರ್ಥಕ ರೂಪ
  • ಹಾಡನು
  • ನೋಡನು
  • ಕಟ್ಟನು
  • ಕೇಳನು
  • ಓಡೆನು
‘ ಸಂಕಲ್ಪಗೀತೆ ‘ ಪದ್ಯದ ಎರಡು ಮತ್ತು ನಾಲ್ಕನೆಯ ಚರಣಗಳನ್ನು ಕಂಠಪಾಠ ಮಾಡಿ

ಕಲುಷಿತವಾದೀ ನದೀಜಲಗಳಿಗೆ

ಓದು ಬರೆ ಮುಂಗಾರಿನ ಮಳೆಯಾಗೋಣ

ಬರಡಾಗಿರುವೀ ಕಾಡುಮೇಡುಗಳ

ವಸಂತವಾಗುತ ಮುಟ್ಟೋಣ

ಮತಗಳೆಲ್ಲವೂ ಪಥಗಳು ಎನ್ನುವ

ಹೊಸ ಎಚ್ಚರದೊಳು ಬದುಕೋಣ

ಭಯ – ಸಂಶಯದೊಳು ಕಂದಿದ ಕಣ್ಣೂಳು

ನಾಳಿನ ಕನಸನು ಬಿಡೋಣ

Sankalpa Geethe Question Answer karnataka state board

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ

ಜಿ.ಎಸ್ . ಶಿವರುದ್ರಪ್ಪ ಅವರು 1992 ರಲ್ಲಿ….. ಯಲ್ಲಿ ಸಮಾವೇಶಗೊಂಡ 61 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ದಾವಣಗೆರೆ

ಜಿ.ಎಸ್ . ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು….
ಜಿಲ್ಲೆಯ ಶಿಕಾರಿಪುರದವರು .

ಶಿವಮೊಗ್ಗ

ಜಿ.ಎಸ್ . ಶಿವರುದ್ರಪ್ಪ ಅವರು ಮೈಸೂರು ,……. ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ , ಕನ್ನಡ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ .

ಉಸ್ಮಾನಿಯಾ

Sankalpa Geethe Question Answer kseeb solution

ಸಂಕಲ್ಪಗೀತೆ ‘ ಕವಿತೆಯ ಆಕರ ಗ್ರಂಥ…. ಕವನ ಸಂಕಲನ.

ಎದೆತುಂಬಿಹಾಡಿದೆನು

ನಾವು ಜೀವನದಲ್ಲಿ ಯಾವಾಗಲೂ…… ರೂಢಿಸಿಕೊಳ್ಳಬೇಕು .

ಧನಾತ್ಮ

ಮತಗಳೆಲ್ಲವೂ…….. ಎನ್ನುವ ಹೊಸ ಎಚ್ಚರದಲ್ಲಿ ಬದುಕಬೇಕಾಗಿದೆ .

ಪಥಗಳು

Sankalpa Geethe Question Answer quiz

ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ….. ಯನ್ನು ಹಚ್ಚ್ಬೋಣ .
ಅಧ್ಯಯನ ಕೇಂದ್ರದ ಮತ್ತು ಬೆಂಗಳೂರು

ಹಣತೆ

……ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ .

ನದಿ

ಭಯ – ಸಂಶಯದೊಳು ಕಂದಿದ ಕಣ್ಣೂಳು ನಾಳಿನ…… ಭಾವನೆಯನ್ನು ಬಿತ್ತೋಣ .

ಕನಸನು

ಮನುಜರ ನಡುವಣ ….. ಕೆಡವುತ ಸೇತುವೆಯಗೊಣ

ಅಡ್ಡಗೋಡೆಗಳ

ಬಿರುಗಾಳಿಗೆ ಹೊಯ್ದಾಡುವ……….ಎಚ್ಚರದಲಿ ಮುನ್ನಡೆಸೋಣ

ಹಡಗನು

ಬರಡಾಗಿರುವೀ ಕಾಡುಮೇಡುಗಳ…ವಾಗುತ ಮುಟ್ಟೋಣ.

ವಸಂತ

FAQ

ಸಂಕಲ್ಪ ಗೀತೆ ಗದ್ಯದ ಕವಿ

ಡಾ || ಜಿ . ಎಸ್ . ಶಿವರುದ್ರಪ್ಪ

ಡಾ || ಜಿ . ಎಸ್ . ಶಿವರುದ್ರಪ್ಪರವರ ಸ್ಥಳ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

Sankalpa Geethe Question Answer

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *