ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | 10th Standard Kannada Hakki Harutide Nodidira Notes

ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | Hakki Harutide Nodidira 10 Class free Notes In Kannada

Hakki Harutide Nodidira Questions and Answers, Summary, Notes Pdf, Siri Kannada Text Book Class 10 , ಹಕ್ಕಿ ಹಾರುತಿದೆ ನೋಡಿದಿರಾ notes, ಹಕ್ಕಿ ಹಾರುತಿದೆ ನೋಡಿದಿರಾ ಪಾಠದ ಪ್ರಶ್ನೋತ್ತರಗಳು

Hakki Harutide Nodidira 10 Class free Notes

ಈ ಲೇಖನದಲ್ಲಿ 10ನೇ ತರಗತಿ ಹಕ್ಕಿ ಹಾರುತಿದೆ ನೋಡಿದಿರಾ ಪಾಠದ ಪ್ರಶ್ನೋತ್ತರಗಳು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಹಕ್ಕಿ ಹಾರುತಿದೆ ನೋಡಿದಿರಾ ಕವಿ ಪರಿಚಯ

ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | Hakki Harutide Nodidira 10 Class free Notes In Kannada
ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | Hakki Harutide Nodidira 10 Class free Notes In Kannada

ದ ರಾ ಬೇಂದ್ರೆ ಅವರ ಕವಿ ಪರಿಚಯ ಕನ್ನಡದಲ್ಲಿ

ಕವಿ ಪರಿಚಯ :- ದ.ರಾ. ಬೇಂದ್ರೆ
 • ಪೂರ್ಣಹೆಸರು : ದತ್ತಾತ್ರೇಯ ರಾಮಚಂದ್ರ ಬೇಂದ್ರೆ
 • ಕಾವ್ಯನಾಮ : ಅಂಬಿಕಾತನಯದತ್ತ
 • ಕಾಲ : ಕ್ರಿ.ಶ. 1896
 • ಸ್ಥಳ: ಧಾರವಾಡ
 • ಕೃತಿಗಳು : ಗರಿ , ನಾದಲೀಲೆ , ಕೃಷ್ಣಕುಮಾರಿ , ಉಯ್ಯಾಲೆ , ಸಖೀಗೀತ , ಮೇಘದೂತ , ಗಂಗಾವತರಣ , ಸೂರಪಾನ , ನಗೆಯ ಹೊಗೆ , ಸಾಹಿತ್ಯ ವಿರಾಟ್ ಸ್ವರೂಪ , ಅರಳುಮರಳು , ನಾಕುತಂತಿ.

ವಿಶೇಷ:

 • ಪ್ರೌಢಶಾಲಾ ಅಧ್ಯಾಪಕರಾಗಿದ್ದರು . ಸೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು .
 • ಧಾರವಾಡದ ಬಾನುಲಿಕೇಂದ್ರದ ಸಲಹೆಗಾರರಾಗಿದ್ದರು . ಕನ್ನಡ , ಮರಾಠಿ , ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ .

ಪ್ರಶಸ್ತಿ:

 • ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ .
 • ಅರಳು – ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ .
 • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ .

ಗೌರವ :

1943 ರಲ್ಲಿ ಶಿವಮೊಗ್ಗದಲ್ಲಿ ಸಮಾವೇಶಗೊಂಡ 27 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ಆಕರಗ್ರಂಥ:

‘ ಗರಿ ‘ ಕವನ ಸಂಕಲನ

hakki harutide nodidira kannada poem

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ ?

ಸುತ್ತಮುತ್ತಲೂ ರಾತ್ರಿಗಳುರುಳಿ ಬೆಳಗಾಗುವುದರೊಳಗೆ , ಕಣ್ಣಿನರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಅನೇಕ ಹರದಾರಿ ಅಥವಾ ಮೈಲುಗಳಷ್ಟು ವೇಗದಲ್ಲಿ ಹಕ್ಕಿ ಹಾರುತಿದೆ .

ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ ?

ಹಾರುತ್ತಿರುವ ಹಕ್ಕಿಯು ಕಪ್ಪು ಬಿಳುವು ಬಣ್ಣದ ಮಚ್ಚಗಳನ್ನು ಹೊಂದಿದೆ . ಬಿಳಿ ಹಾಗೂ ಬಣ್ಣದ ಹೊಳೆಯುವ ಗರಿಗಳನ್ನು ಹೊಂದಿದೆ . ಕೆಂಪು ಹಾಗೂ ಹಳದಿ ಬಣ್ಣಗಳಿಂದ ಕೂಡಿದ ರೆಕ್ಕೆಗಳನ್ನು ಹೊಂದಿದೆ .

ಹಕ್ಕಿಯ ಕಣ್ಣುಗಳು ಯಾವುವು ?

ಸೂರ್ಯ ಚಂದ್ರರೇ ಹಕ್ಕಿಯ ಕಣ್ಣುಗಳು ಎಂದು ವರ್ಣಿಸಲಾಗಿದೆ .

hakki harutide nodidira kannada poem notes

ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?

ಈ ಕಾಲ ಎಂಬ ಹಕ್ಕಿಯು ಚಕ್ರವರ್ತಿಗಳು ಎನಿಸಿಕೊಂಡವರ ನೆತ್ತಿಯನ್ನು ಕುಕ್ಕಿ ಹಾರುತ್ತಿದೆ .

ಹಕ್ಕಿ ಯಾರನ್ನು ಹರಸಿದೆ ?

ಹಕ್ಕಿಯು ರೆಕ್ಕೆಯನ್ನು ಬೀಸುತ್ತಾ ಚೈತನ್ಯಯುಕ್ತರನ್ನಾಗಿಸಿ ಹೊಸಕಾಲದ ( ನಾಗರಿಕರನ್ನು ಮಕ್ಕಳನ್ನು ಹರಸುತ್ತಿದೆ .

ಹಕ್ಕಿಯು ಯಾವುದರ ಸಂಕೇತವಾಗಿದೆ ?

ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ . ಹಕ್ಕಿಯು ಕಾಲದ ಸಂಕೇತವಾಗಿದೆ .

ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ ?

ಹಕ್ಕಿಯು ತನ್ನ ಚುಂಚಗಳನ್ನು ದಿಗಂಡಲಗಳ ಅಂಚಿನ ಆಚೆಗೂ ಚಾಚಿದೆ .

hakki harutide nodidira poem summary in kannada

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ ?

ಹಕ್ಕಿಯು ಸೂರ್ಯ ಚಂದ್ರರನ್ನೇ ತನ್ನ ಕಣ್ಣಾನ್ನಾಗಿಸಿಕೊಂಡು ಚಿಕ್ಕೆಗಳ ಮಾಲೆಯನ್ನು ಸಿಕ್ಕಿಸಿಕೊಂಡು ನೀಲಮೇಘ ಮಂಡಲದ ಸಮ ಬಣ್ಣದಲ್ಲಿ ಮಿನುಗುತ್ತಾ ಮುಗಿಲಿನಲ್ಲಿ ರೆಕ್ಕೆ ಬಡಿಯುತ್ತಾ ಹಾರುತ್ತಿದೆ . ಹೀಗೆ ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೋಲಿಸಿದ್ದಾರೆ .

ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ ?

ಈ ಹಕ್ಕಿಯು ಯುಗಯುಗಗಳ ಹಣೆ ಬರಹವನ್ನೇ ಒರೆಸಿ ಹಾಕಿದೆ . ಪರಿವರ್ತನೆಯ ಮೂಲಕ ಹೊಸ ಭಾಗ್ಯದಯವಾಗುವಂತೆ ಮಾಡುತ್ತಿದೆ . ರೆಕ್ಕೆಯನ್ನು ಬೀಸುತ್ತಾ ಚೈತನ್ಯಯುಕ್ತರನ್ನಾಗಿಸಿ ಹೊಸಕಾಲದ ( ನಾಗರಿಕರನ್ನು ಮಕ್ಕಳನ್ನು ಹರಸುತ್ತಿದೆ ಎಂದು ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ .

ಹಕ್ಕಿಯು ಯಾವ ಮೇರೆ ಮೀರಿ , ನೀರನು ಹೀರಿದೆ ?

ಹಕ್ಕಿಯು ಎಲ್ಲ ಮೇರೆಯನ್ನು ಮೀರಿ ಹಾರುತ್ತಿದೆ . ಬೆಳ್ಳಿಯ ಹಳ್ಳಿ ಅಂದರೆ ಶುಕ್ರಗ್ರಹವನ್ನು ದಾಟಿ ಮುಂದೆ ಹೋಗಿ ಚಂದ್ರಲೋಕವನ್ನು ತಲುಪಿದೆ . ಹಕ್ಕಿಯು ಚಂದ್ರಲೋಕದಲ್ಲಿ ನೀರನ್ನು ಹೀರಿದೆ .

ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | Hakki Harutide Nodidira 10 Class free Notes In Kannada
ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು Hakki Harutide Nodidira 10 Class free Notes In Kannada

hakki harutide nodidira poem notes in kannada

ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು ?

ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದ.ರಾ. ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಹೋಲಿಸಿದ್ದಾರೆ . ಸುತ್ತಮುತ್ತಲೂ ರಾತ್ರಿಗಳುರುಳಿ ಬೆಳಗಾಗುವುದರೊಳಗೆ , ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಅನೇಕ ಹರದಾರಿ ಅಥವಾ ಮೈಲುಗಳಷ್ಟು ದೂರ ಹಾರುತ್ತಿರುವ ಹಕ್ಕಿಯನ್ನು ನೋಡಿದಿರಾ ? ಎಂದು ಕವಿ ದ.ರಾ. ಬೇಂದ್ರೆ ಪ್ರಶ್ನಿಸಿದ್ದಾರೆ . ಹಾರುತ್ತಿರುವ ಹಕ್ಕಿಯು ಕಪ್ಪು ಬಿಳುವು ಬಣ್ಣದ ಪುಚ್ಚಗಳನ್ನು ಹೊಂದಿದೆ . ಬಿಳಿ ಹಾಗೂ ಬಣ್ಣದ ಹೊಳೆಯುವ ಗರಿಗಳನ್ನು ಹೊಂದಿದೆ .

ಕೆಂಪು ಹಾಗೂ ಹಳದಿ ಬಣ್ಣಗಳಿಂದ ಕೂಡಿದ ರೆಕ್ಕೆಗಳನ್ನು ಹೊಂದಿದೆ . ಹಕ್ಕಿಯು ಸೂರ್ಯ ಚಂದ್ರರನ್ನೇ ತನ್ನ ಕಣ್ಣಾನ್ನಾಗಿಸಿಕೊಂಡು ಚಿಕ್ಕೆಗಳ ಮಾಲೆಯನ್ನು ಸಿಕ್ಕಿಸಿಕೊಂಡು ನೀಲಮೇಘ ಮಂಡಲದ ಸಮ ಬಣ್ಣದಲ್ಲಿ ಮಿನುಗುತ್ತಾ ಮುಗಿಲಿನಲ್ಲಿ ರೆಕ್ಕೆ ಬಡಿಯುತ್ತಾ ಹಾರುತ್ತಿದೆ . ಈ ಕಾಲ ಎಂಬ ಹಕ್ಕಿಯು ರಾಜ್ಯ ಸಾಮ್ರಾಜ್ಯಗಳೆಂದು ಬೇರ್ಪಡಿಸುತ್ತಾ ಭೂಮಂಡಲದಲ್ಲಿರುವ ಕೋಟೆ ಕೊತ್ತಲಗಳನ್ನು ಗಬಗಬನೆ ಆಪೋಷನ ತೆಗೆದುಕೊಂಡು ಖಂಡಖಂಡಗಳನ್ನೇ ತೇಲಿಸಿ , ಮುಳುಗಿಸಿ ಸಾರ್ವಭೌಮರೆನಿಸಿಕೊಂಡವರೂ ,

ಚಕ್ರವರ್ತಿಗಳು ಎನಿಸಿಕೊಂಡವರ ನೆತ್ತಿಯನ್ನು ಕುಕ್ಕಿ ಹಕ್ಕಿಯು ಹಾರುತ್ತಿದೆ . ಈ ಹಕ್ಕಿಯು ಯುಗಯುಗಗಳ ಹಣೆ ಬರಹವನ್ನೇ ಒರೆಸಿಹಾಕಿದೆ . ಪರಿವರ್ತನೆಯ ಮೂಲಕ ಹೊಸ ಭಾಗೋದಯವಾಗುವಂತೆ ಮಾಡುತ್ತಿದೆ . ರೆಕ್ಕೆಯನ್ನು ಬೀಸುತ್ತಾ ಚೈತನ್ಯಯುಕ್ತರನ್ನಾಗಿಸಿ ಹೊಸಕಾಲದ ( ನಾಗರಿಕರನ್ನು ಮಕ್ಕಳನ್ನು ಹರಸುತ್ತಿದೆ ಎಂದು ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ .

Hakki harutide nodidira notes kannada deevige

ಈ ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ .

“ ರೆಕ್ಕೆಗಳೆರಡೂ ಪಕ್ಕದಲ್ಲುಂಟು ” .

ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ ಹಕ್ಕಿ ಹಾರುತಿದೆ ನೋಡಿದಿರಾ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ದ.ರಾ.ಬೇಂದ್ರೆ ವಿರಚಿತ ‘ ಗರಿ ‘ ಕವನಸಂಕಲನದಿಂದ ಈ ಮಾತನ್ನು ಕವಿ ಹೇಳಿದ್ದಾರೆ . ಈ ಕಾಲ ಎಂಬ ಹಕ್ಕಿಯನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ಈ ಕಾಲ ಎಂಬ ಹಕ್ಕಿಯು ರಾಜ್ಯ ಸಾಮ್ರಾಜ್ಯಗಳೆಂದು ಬೇರ್ಪಡಿಸುತ್ತಾ ಭೂಮಂಡಲದಲ್ಲಿರುವ ಕೋಟೆ ಕೊತ್ತಲಗಳನ್ನು ಗಬಗಬನೆ ಆಪೋಷನ ತೆಗೆದುಕೊಂಡು ಖಂಡಖಂಡಗಳನ್ನೇ ತೇಲಿಸಿ , ಮುಳುಗಿಸಿದೆ ಎಂದು ದ . ರಾ . ಬೇಂದ್ರೆಯವರು ವರ್ಣಿಸಿದ್ದಾರೆ . ಇಲ್ಲಿ ಕಾಲದ ರೆಕ್ಕೆಗಳೆರಡೂ ಪಕ್ಕದಲ್ಲಿದೆ ಎಂದು ಹೇಳಲಾಗಿದೆ .

“ ಸಾರ್ವಭೌಮರಾ ನೆತ್ತಿಯ ಕುಕ್ಕಿ ”

ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ ಹಕ್ಕಿ ಹಾರುತಿದೆ ನೋಡಿದಿರಾ ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ . ಈ ಕಾಲ ಎಂಬ ಹಕ್ಕಿಯನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ಆಕರಗ್ರಂಥ : ದ.ರಾ.ಬೇಂದ್ರೆ ವಿರಚಿತ ‘ ಗರಿ ‘ ಕವನ ಸಂಕಲನದಿಂದ ಈ ಮಾತನ್ನು ಕವಿ ಹೇಳಿದ್ದಾರೆ . ಸಾರ್ವಭೌಮರೆನಿಸಿಕೊಂಡವರೂ , ಚಕ್ರವರ್ತಿಗಳು ಎನಿಸಿಕೊಂಡವರ ನೆತ್ತಿಯನ್ನು ಕುಕ್ಕಿ ಹಕ್ಕಿಯು ಹಾರುತ್ತಿದೆ .

“ ಬಲ್ಲರು ಯಾರಾ ಹಾಕಿದ ಹೊಂಚ ” .

ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ ಹಕ್ಕಿ ಹಾರುತಿದೆ ನೋಡಿದಿರಾ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ಎಂದು ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ . ಆಕರಗ್ರಂಥ : ದ.ರಾ.ಬೇಂದ್ರೆ ವಿರಚಿತ ‘ ಗರಿ ‘ ಕವನ ಸಂಕಲನದಿಂದ ಈ ಮಾತನ್ನು ಕವಿ ಹೇಳಿದ್ದಾರೆ . ಈ ಕಾಲ ಎಂಬ ಹಕ್ಕಿಯನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ಈ ಹಕ್ಕಿಯು ಯುಗಯುಗಗಳ ಹಣೆ ಬರಹವನ್ನೇ ಒರೆಸಿ ಹಾಕಿದೆ . ಇದು ಏನು ಹೊಂಚು ಹಾಕುತ್ತಿದೆ ಎಂದು ಬಲ್ಲವರಾರು ಎನ್ನುತ್ತ ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ .

“ ಹೊಸಗಾಲದ ಹಸುಮಕ್ಕಳ ಹರಸಿ ”

ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ ಹಕ್ಕಿ ಹಾರುತಿದೆ ನೋಡಿದಿರಾ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ದ.ರಾ. ಬೇಂದ್ರೆ ವಿರಚಿತ ‘ ಗರಿ ‘ ಕವನ ಸಂಕಲನದಿಂದ ಈ ಮಾತನ್ನು ಕವಿ ಹೇಳಿದ್ದಾರೆ . ಈ ಕಾಲ ಎಂಬ ಹಕ್ಕಿಯನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ರೆಕ್ಕೆಯನ್ನು ಬೀಸುತ್ತಾ ಚೈತನ್ಯಯುಕ್ತರನ್ನಾಗಿಸಿ ಹೊಸಕಾಲದ ( ನಾಗರೀಕರನ್ನು ) ಮಕ್ಕಳನ್ನು ಹರಸುತ್ತಿದೆ ಎಂದು ದ.ರಾ. ಬೇಂದ್ರೆಯವರು ವರ್ಣಿಸಿದ್ದಾರೆ .

“ ಮಂಗಳ ಲೋಕದ ಅಂಗಳಕೇರಿ ”

ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ ಹಕ್ಕಿ ಹಾರುತಿದೆ ನೋಡಿದಿರಾ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ಕವಿ ಹೇಳಿದ್ದಾನೆ .

ಹಕ್ಕಿಯು ಬೆಳ್ಳಿ ಹಳ್ಳಿಯನ್ನು ಎಂದರೆ ಶುಕ್ರಗ್ರಹವನ್ನು ದಾಟಿ , ಮುಂದೆ ಹೋಗಿ ಮಂಗಳ ಲೋಕದ ಅಂಗಳಕ್ಕೆ ಏರಿದೆ ಎಂದು ಸಮಯದ ಬಗ್ಗೆ ದ.ರಾ. ಬೇಂದ್ರೆಯವರು ಹೇಳಿದ್ದಾರೆ .

ಹೊಂದಿಸಿ ಬರೆಯಿರಿ .

 1. ಹಕ್ಕಿ
 2. ನಾಕುತಂತಿ
 3. ನೀಲಮೇಘಮಂಡಲ
 4. ರಾಜ್ಯದ ಸಾಮ್ರಾಜ್ಯದ
 5. ತೇಲಿಸಿ ಮುಳುಗಿಸಿ
 6. ಮಂಗಳ

ಜ್ಞಾನಪೀಠ ಪ್ರಶಸ್ತಿ
ಪಕ್ಷಿ
ಖಂಡ – ಖಂಡಗಳ
ತೆನೆ ಒಕ್ಕಿ
ಸಮ ಬಣ್ಣ
ಭಾಗ್ಯವ ತೆರೆಸಿ
ಅಂಗಳಕೇರಿ

ಉತ್ತರಗಳು
ಪಕ್ಷಿ
ಜ್ಞಾನಪೀಠ ಪ್ರಶಸ್ತಿ
ಸಮ ಬಣ
ತೆನೆ ಒಕ್ಕಿ
ಖಂಡ – ಖಂಡಗಳ
ಅಂಗಳಕೇರಿ

hakki harutide nodidira in kannada

ಭಾಷಾ ಚಟುವಟಿಕೆ

ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು | Hakki Harutide Nodidira 10 Class free Notes In Kannada
ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೋತ್ತರಗಳು
ನೀಡಿರುವ ಪದಗಳ ಸಮಾನಾರ್ಥಕ ಪದ ಬರೆಯಿರಿ

ಸೂರ್ಯ – ರವಿ , ಭಾನು , ಭಾಸ್ಕರ
ಗಡ ಕೋಟೆ
ಕೆನ್ನ – ಕೆಂಪು
ಒಕ್ಕಿ – ತೆನೆಯಿಂದ
ಕಾಳು – ಕಡ್ಡಿ ಬೇರ್ಪಡಿಸುವಿಕೆ
ಹರಸು – ಆಶೀರ್ವದಿಸು
ಮೇಘ – ಮೋಡ

ತತ್ಸಮ – ತದ್ಭವ ಬರೆಯಿರಿ .

ಬಣ್ಣ – ವರ್ಣ
ಅಂಗಳ – ಅಂಗಣ
ಬ್ರಹ್ಮ – ಬೊಮ್ಮ
ಚಂದ್ರ – ಚಂದಿ
ಜುಗ , ಯುಗ

ಸಂಧಿ ವಿಂಗಡಿಸಿ ಹೆಸರಿಸಿ .

ಇರುಳಳಿದು = ಇರುಳು + ಅಳಿದು- ಲೋಪಸಂಧಿ ತೆರೆದಿಕ್ಕುವ ತೆರೆದು + ಇಕ್ಕುವ – ಲೋಪಸಂಧಿ
ಹೊಸಗಾಲ = ಹೊಸ + ಕಾಲ – ಆದೇಶಸಂಧಿ
ದಿಗಂಡಲ = ದಿಕ್ + ಮಂಡಲ = ಜತ್ತ್ವಸಂಧಿ
ತಿಂಗಳಿನೂರು = ತಿಂಗಳಿನ + ಊರು = ಲೋಪಸಂಧಿ

ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿದೆ ಎಂಬುದನ್ನು ಗುರುತಿಸಿ .

ಅದುವೇ -ಅವಧಾರಗಾರ್ಥಕಾವ್ಯಯ
ಆದ್ದರಿಂದ -ಸಂಬಂಧಾರ್ಥಕಾವ್ಯಯ
ಅಯ್ಯೋ -ಭಾವಸೂಚಕಾವ್ಯಯ
ಬೇಗನೆ ಸಾಮಾನ್ಯರ್ಥಕಾವ್ಯಯ
ಧಗಧಗ-ಅನುಕರಣಾವ್ಯಯ
ಸಾಕು-ಕ್ರಿಯಾರ್ಥಕಾವ್ಯಯ
ಓಹೋ-ಕ್ರಿಯಾರ್ಥಕಾವ್ಯಯ
ಹೌದು -ಕ್ರಿಯಾರ್ಥಕಾವ್ಯಯ
ನೀನೇ-ಅವಧಾರಣಾರ್ಥಕಾವ್ಯಯ
ರೊಯ್ಯನೆ-ಅನುಕರಣಾವ್ಯಯ
ಮೆಲ್ಲಗೆ -ಸಾಮಾನ್ಯರ್ಥಕಾವ್ಯಯ
ಅಲ್ಲದೆ-ಸಂಬಂಧಾರ್ಥಕಾವ್ಯಯ

hakki harutide nodidira question and answers in kannada

ಹೆಚ್ಚುವರಿ ಪ್ರಶೋತ್ತರಗಳು

ಬಿಟ್ಟ ಸ್ಥಳ ತುಂಬಿರಿ .

ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದ.ರಾ. ಬೇಂದ್ರೆಯವರ ಪೂರ್ಣ ಹೆಸರು….

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

ನಾಲ್ಕು ಹರದಾರಿ ಅಥವಾ 12 ಮೈಲುಗಳ ಅಂತರಗಳ ದೂರವನ್ನು ಅಳೆಯುವ ಒಂದು ಪ್ರಮಾಣಕ್ಕೆ …ಎನ್ನುತ್ತಾರೆ .

ಗಾವುದ

ಪರಿವರ್ತನೆಯ ಕಾಲಕ್ಕೆ……. ಎನ್ನುತ್ತಾರೆ .

ಮನ್ವಂತರ

ಈ ಹಕ್ಕಿಯು……. ಗಳ ಹಣೆ ಬರಹವನ್ನೇ ಒರೆಸಿಹಾಕಿದೆ .

ಯುಗ ಯುಗ

ಹಕ್ಕಿಯು…….. ರನ್ನೇ ತನ್ನ ಕಣ್ಣಾನ್ನಾಗಿಸಿಕೊಂಡು ಚಿಕ್ಕಗಳ ಮಾಲೆಯನ್ನು ಸಿಕ್ಕಿಸಿಕೊಂಡು ನೀಲಮೇಘ ಮಂಡಲದ ಸಮ ಬಣ್ಣದಲ್ಲಿ ಮಿನುಗುತ್ತಾ ಮುಗಿಲಿನಲ್ಲಿ ರೆಕ್ಕೆ ಬಡಿಯುತ್ತಾ ಹಾರುತ್ತಿದೆ

ಸೂರ್ಯ ಚಂದ್ರ

ಹಾರುತ್ತಿರುವ ಹಕ್ಕಿಯು…….ಬಣ್ಣದ ಪುಚ್ಚಗಳನ್ನು ಹೊಂದಿದೆ .

ಕಪ್ಪು ಬಿಳುಪು

hakki harutide nodidira mcq questions

ದ.ರಾ. ಬೇಂದ್ರೆಯವರು ಕಾಲದ ಗತಿಯನ್ನು ಹಾರುವ……ಗೆ ಹೋಲಿಸಿದ್ದಾರೆ .

ಹಕ್ಕಿ

ಬೇಂದ್ರೆ , ಅವರು 1943 ರಲ್ಲಿ……..ದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ಶಿವಮೊಗ್ಗ

ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯ ಆಕರ ಗ್ರಂಥ….ಕವನ ಸಂಕಲನ.

‘ ಗರಿ ‘

ದ.ರಾ. ಬೇಂದ್ರೆಯವರು….ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ .

ಧಾರವಾಡದ

……ನೆತ್ತಿಯ ಕುಕ್ಕಿ ಹಕ್ಕಿ ಹಾರುತಿದೆ ನೋಡಿದಿರಾ ?

ಸಾರ್ವಭೌಮರಾ

ನೀಲಮೇಘಮಂಡಲಸಮ ಬಣ್ಣ …….ರೆಕ್ಕೆಗಳೊಡೆದವೊ ಅಣ್ಣಾ .

ಮುಗಿಲಿಗೆ

hakki harutide nodidira gk mcq questions

ಹೊಸಗಾಲದ …ಹರಸಿ ಹಕ್ಕಿ ಹಾರುತಿದೆ ನೋಡಿದಿರಾ ?

ಹಸುಮಕ್ಕಳ ಯುಗಯುಗ

ರೆಕ್ಕೆಗಳೆರಡೂ … ….ಹಕ್ಕಿ ಹಾರುತಿದೆ ನೋಡಿದಿರಾ ?

ಪಕ್ಕದಲುಂಟು

ಇರುಳಿರುಳಳಿದು ದಿನ ದಿನ . …ಸುತ್ತ – ಮುತ್ತಲೂ ಮೇಲಕೆ ಕೆಳಗೆ

ಬೆಳಗೆ

FAQ

ಹಕ್ಕಿ ಹಾರುತಿದೆ ನೋಡಿದಿರಾ ಪಾಠದ ಲೇಖಕರು ಯಾರು ?

ದ.ರಾ. ಬೇಂದ್ರೆ

ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ ?

ಸುತ್ತಮುತ್ತಲೂ ರಾತ್ರಿಗಳುರುಳಿ ಬೆಳಗಾಗುವುದರೊಳಗೆ , ಕಣ್ಣಿನರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಅನೇಕ ಹರದಾರಿ ಅಥವಾ ಮೈಲುಗಳಷ್ಟು ವೇಗದಲ್ಲಿ ಹಕ್ಕಿ ಹಾರುತಿದೆ .

hakki harutide nodidira 10th class question answer kannada

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *