ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್ | 2nd Puc Kannada Muttisikondavanu Notes

ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes

Muttisikondavanu Kannada Notes , muttisikondavanu kannada lesson notes , 2nd puc kannada muttisikondavanu notes , 2nd puc kannada notes muttisikondavanu , ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್

Muttisikondavanu Kannada Notes

ಮುಟ್ಟಿಸಿಕೊಂಡವನು ಕನ್ನಡ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Muttisikondavanu Kannada Notes

Muttisikondavanu Kannada Notes 2nd PUC

ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes
ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes

Muttisikondavanu Kannada Notes

ಒಂದು ಅಂಕದ ಪ್ರಶ್ನೆಗಳು

ಬಸಲಿಂಗನ ಹೆಂಡತಿಯ ಹೆಸರೇನು ?

ಬಸಲಿಂಗನ ಹೆಂಡತಿಯ ಹೆಸರು ಸಿದ್ಲಿಂಗಿ ,

ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು ?

ಬಸಲಿಂಗನಿಗೆ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿತು .

ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು ?

ಬಸಲಿಂಗನಿಗೆ ಮೊದಲು ಎಡಗಣ್ಣಿನಲ್ಲಿ ನೋವು ಆರಂಭವಾಯಿತು .

‘ ಮುಟ್ಟಿಸಿಕೊಂಡವನು ‘ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು ?

‘ ಮುಟ್ಟಿಸಿಕೊಂಡವನು ‘ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರು ಡಾ || ತಿಮ್ಮಪ್ಪ .

ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು ?

ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಿಗಿದ್ದ ಅಭಿಪ್ರಾಯವೆಂದರೆ “ ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ” ಎಂಬುದು .

ಬಸಲಿಂಗನು ಡಾ|| . ತಿಮ್ಮಪ್ಪನಿಗೆ ಏನೆಂದು ಸುಳ್ಳು ಹೇಳಿದನು ?

ಬಸಲಿಂಗನು ಡಾ || ತಿಮ್ಮಪ್ಪನಿಗೆ “ ತಾನು ತಲೆಗೆ ನೀರು ಸೋಂಕಿಸಿದರೂ ಸೋಂಕಿಸಿಯೇ ಇಲ್ಲವೆಂದು ” ಸುಳ್ಳು ಹೇಳಿದನು .

ಬಸಲಿಂಗನು ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಯಾರು ?

ಬಸಲಿಂಗನು ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಲಿಂಗಾಯತ ಜಾತಿಯ ರುದ್ರಪ್ಪ .

ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಯಾವ ಸ್ತರವನ್ನು ತಲುಪತೊಡಗಿತ್ತು ?

ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ‘ ಮಾನಸಿಕ ಸ್ತರವನ್ನು ತಲುಪತೊಡಗಿತ್ತು .

ಡಾ || ತಿಮ್ಮಪ್ಪ ಬಸಲಿಂಗನಿಗೆ ಯಾವ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು ?

ಡಾ ॥ ತಿಮ್ಮಪ್ಪ ಬಸಲಿಂಗನಿಗೆ ಡಾ || ಚಂದ್ರಪ್ಪ ಎಂಬ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು .

ಕೊನೆಗೆ ಬಸಲಿಂಗ ಯಾವುದರಿಂದ ಮುಕ್ತನಾಗಿದ್ದ ?

ಕೊನೆಗೆ ಬಸಲಿಂಗ ಸುಳ್ಳುಗಳಿಂದ ಮುಕ್ತನಾಗಿದ್ದ .

Muttisikondavanu Kannada Notes KSEEB 2nd PUC

ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes
ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes

Muttisikondavanu Kannada Notes

Muttisikondavanu Kannada Notes questions and answers

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಯಾಕೆ ?

ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಏಕೆಂದರೆ ಅದು
ಕೃಷಿ ಸಮಯವಾಗಿತ್ತು . ಒಂದು ವೇಳೆ ಬಸಲಿಂಗ ಉಳುಮೆ ಮಾಡುವುದನ್ನು ನಾಲ್ಕು ದಿನ ತಡಮಾಡಿದರೂ ನೇಗಿಲಿನ ತುದಿ ನೆಲದಲ್ಲಿ ನಾಟುವುದು ಕಷ್ಟವಾಗುತ್ತಿತ್ತು . ಅದೂ ಅಲ್ಲದೆ ಆತನ ಎರಡೂ ಎತ್ತುಗಳು ಒಂದಕ್ಕಿಂತ ಒಂದು ಸೋಮಾರಿಗಳಾಗಿದ್ದವು . ಅವುಗಳನ್ನು ಆತ ಸಾಟಿ ಮಾಡಲು ಆಲೋಚಿಸುತ್ತಿದ್ದ . ಅಲ್ಲದೆ ಮಗುವಿನ ಕೆಮ್ಮಿನ ಸಮಸ್ಯೆ , ಜೊತೆಯಲ್ಲಿ ಆತನ ಎಡಗಣ್ಣಿನಲ್ಲಿ ನೋವು ಕಾಣಿಸಿಕೊಂಡಿತ್ತು . ಈ ಎಲ್ಲಾ ಸವಾಲುಗಳನ್ನು ಆತ ಎದುರಿಸಬೇಕಾಗಿತ್ತು .

ಹೆಂಡ್ತಿ ಸಿದ್ಧಿಂಗಿ ಏನು ಹೇಳುತ್ತಲೇ ಇದ್ದಳು ?

ಬಸಲಿಂಗನಿಗೆ ಗೇಯಬೇಕಾದ ಅನಿವಾರ್ಯತೆ ಒಂದೆಡ ‘ ಯಾದರೆ ಇನ್ನೊಂದೆಡೆ ಅವನು ಹೊಂದಿದ್ದ ಎರಡು ಎತ್ತುಗಳು ಸೋಮಾರಿಗಳಾಗಿದ್ದವು . ಇದರ ಜೊತೆಯಲ್ಲಿ ಆತನ ಹೆಂಡತಿ ಸಿದ್ಧಿಂಗಿ ಮಗುವಿಗೆ ಮೈಯಲ್ಲಿ ಸರಿಯಿಲ್ಲ , ಏನು ಮಾಡಿದರೂ ಕೆಮ್ಮು ಕಡಿಮೆಯಾಗಲಿಲ್ಲ , ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೇಳುತ್ತಲೇ ಇದ್ದಳು .

ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಯಾವುದು ಗೌಣವಾಗಿ ಕಾಣತೊಡಗಿದವು ?

ಬಸಲಿಂಗನಿಗೆ ಕಾಣಿಸಿಕೊಂಡ ಕಣ್ಣಿನ ಸಮಸ್ಯೆ ಆತನನ್ನು ತೀವ್ರತರದಲ್ಲಿ ಹಿಂಸೆಗೆ ಒಳಪಡಿಸುತ್ತಿತ್ತು . ಅದಕ್ಕೆ ಸರಿಯಾಗಿ ಆತನ ಹೆಂಡತಿಯು ಆತನ ನೋವನ್ನು ಅರಿಯದಾದಳು . ಇದರಿಂದ ಬಸಲಿಂಗನಲ್ಲಿ ತೀವ್ರವಾದ ಆಕ್ರೋಶ ಮತ್ತು ಅಸಹಾಯಕತೆ ಕಾಣಿಸಿಕೊಂಡಿತು . ನೋವನ್ನು ಸುಮ್ಮನೆ ವಿವರಿಸದೆ . ಕೆಲವರಲ್ಲಿ ತನ್ನ ಇತರ ಕಷ್ಟಗಳನ್ನೂ ತೋಡಿಕೊಂಡ . ಅವನಿಗೆ ಆತನ ಕಷ್ಟದ ಮುಂದೆ ಉಳದಿರುವ ನೆಲ , ಮಗುವಿನ ಕಾಯಿಲೆ ಎಲ್ಲವೂ ಗೌಣವಾಗಿ ಕಾಣತೊಡಗಿದವು .

ಕಣ್ಣನ್ನು ಪರೀಕ್ಷಿಸಿದ ಡಾ || ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು ?

ಬಸಲಿಂಗ ತನಗೆ ಕಾಣಿಸಿದ ಎಡಗಣ್ಣಿನ ನೋವಿಗೆ ಎಲ್ಲೂ ಸರಿಯಾದ ಚಿಕಿತ್ಸೆ ಸಿಗದೇ ಇದ್ದಾಗ ಡಾ || ತಿಮ್ಮಪ್ಪನವರ ಬಳಿಗೆ ಹೋಗುತ್ತಾನೆ . ತನ್ನ ಎಲ್ಲಾ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ . ಸೂಟಿಯಾದ ( ಕೈ ಚಳಕ ) ಬೆರಳುಗಳ ವಿಶ್ವಾಸ ತುಂಬಿದ ಮಾತುಗಳ ಡಾಕ್ಟರು ತಿಮ್ಮಪ್ಪ ಅವನನ್ನು ಪರೀಕ್ಷಿಸಿದರು . ಬಸಲಿಂಗನ ದೃಷ್ಟಿಯ ಅಳತೆ , ಸ್ಪಷ್ಟತೆಯನ್ನು ನೋಡಿದರು . ನೋವಿನ ನಿಖರ ಕಾರಣಕ್ಕಾಗಿ ಹುಡುಕಿದರು . ಕೊನೆಗೆ ಹೇಳಿದರು . “ ನಿನ್ನ ಕಣ್ಣು ಸರಿ ಹೋಗುತ್ತೆ , ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ ? ಎಂದರು .

ಸಿದ್ಲಿಂಗಿ ಏಕೆ ರಾದ್ಧಾಂತ ಮಾಡಿದಳು ?

ಬಸಲಿಂಗ ಡಾಕ್ಟರ್ ತಿಮ್ಮಪ್ಪನವರಲ್ಲಿ ಚಿಕಿತ್ಸೆಯನ್ನು ಪಡೆಯಲು ಮುಂದಾಗುತ್ತಾನೆ . ಆತನಿಗೆ ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂಬುದು ತಿಳಿದಿರುವುದಿಲ್ಲ . ಆದರೆ ಬಸಲಿಂಗನ ` ಹೆಂಡತಿ ಸಿದ್ಲಿಂಗಿಗೆ ಡಾ || ತಿಮ್ಮಪ್ಪ ಹೊಲೆಯ ಜಾತಿಗೆ
ಸೇರಿದವರೆಂಬುದು ತಿಳಿಯುತ್ತದೆ . ಒಬ್ಬ ಹೊಲೆಯ ಜಾತಿಯವನನ್ನು ಮುಟ್ಟುವುದು ಮೈಲಿಗೆ ಎಂಬ ಜಾತೀಯ ಭಾವನೆ ಹೊಂದಿದ ಆಕೆ ಈ ವಿಷಯ ತಿಳಿದಾಗ ರಾದ್ಧಾಂತವನ್ನೇ ಎಬ್ಬಿಸುತ್ತಾಳೆ .

ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು ?

ಬಸಲಿಂಗ ತನ್ನ ಎಡಗಣ್ಣಿನ ನೋವು ತಡೆಯದಾದಾಗ ಆತ ಮರಳಿ ಡಾ . ತಿಮ್ಮಪ್ಪನಲ್ಲಿಗೆ ಹೋಗುತ್ತಾನೆ . ಆದರೆ ಅವರು ಮರಳಿ ಆಪರೇಷನ್ ಮಾಡಲು ಸಾಧ್ಯವಿಲ್ಲವೆಂದು ಔಷಧಿ ಬರೆದು ಕೊಡುತ್ತಾರೆ . ಇದರಿಂದ ರೋಷಗೊಂಡ ಬಸಲಿಂಗ ತನ್ನ ಉಡಾಫೆತನದಿಂದ ಲಿಂಗಾಯತ ರಾಜಕಾರಣಿ ರುದ್ರಪ್ಪನನ್ನು ಕರೆದುಕೊಂಡು ಬೇರೆ ವೈದ್ಯರ ಬಳಿಗೆ ಹೋದ . ಇವನನ್ನು ಪರೀಕ್ಷಿಸಿದ ಕೆಲವು ಡಾಕ್ಟರುಗಳು ಇದಕ್ಕೆ ಆಪರೇಷನ್ನೇ ಬೇಕಿಲ್ಲ . ಆ ಡಾಕ್ಟರ್ ತಿಮ್ಮಪ್ಪನಿಗೆ ಬುದ್ಧಿ ಇಲ್ಲ . ಅದಕ್ಕೆ ಆಪರೇಷನ್ ಮಾಡಿದ್ದಾರೆ ಎಂದರು . ಔಷಧಿ ನೀಡಿ ಹಿತವಚನ ಕೊಟ್ಟರು .

ಡಾ | ಚಂದ್ರಪ್ಪ ಬಸಲಿಂಗನಿಗೆ ಡಾ | ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು ?

ಡಾ । ತಿಮ್ಮಪ್ಪನವರ ಆದೇಶದ ಮೇರೆಗೆ ಡಾ | ಚಂದ್ರಪ್ಪನವರ ಬಳಿಗೆ ಬಂದ ಬಸಲಿಂಗನನ್ನು ಪರೀಕ್ಷಿಸಿದ ಡಾ | ಚಂದ್ರಪ್ಪನವರು ಬಸಲಿಂಗನ ಎಡಗಣ್ಣಿನ ಪೂರ್ತಿ ಚರಿತ್ರೆಯನ್ನು ತಿಳಿದು ಹೀಗೆ ಹೇಳಿದರು . “ ಡಾ | ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ . ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ , ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ.ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು , ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ ” ಎಂದರು .

ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು ?

ಡಾ । ತಿಮ್ಮಪ್ಪನವರ ಆದೇಶದ ಮೇರೆಗೆ ಬಸಲಿಂಗ ಡಾ | ಚಂದ್ರಪ್ಪನವರಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾನೆ . ಆಗ ಚಂದ್ರಪ್ಪನವರು ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ . ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತದೆ ಎನ್ನುತ್ತಾರೆ . ಆಗ ರುದ್ರಪ್ಪನವರೊಂದಿಗೆ ಹೊರಗೆ ಬಂದ ಬಸಲಿಂಗ ತಲೆಯ ಮೇಲೆ ಕೈ ಹೊತ್ತು ಕೂತು ಯಾರು ಮಾತಾಡಿಸಿದರೂ ಮಾತಾಡಲೇ ಇಲ್ಲ . ಹೆಂಡತಿಯ ಮಾತೂ ಸಹ ಕಿವಿಗೆ ಬೀಳದಾಯಿತು ಬಲಗಣ್ಣಿನ ದೃಷ್ಟಿಯು ಬರುಬರುತ್ತ ಮಂದವಾಗುತ್ತಿರುವುದು ಆತನಿಗೆ ಗೊತ್ತಿತ್ತು . ಈ ನಡುವೆ ಬಸಲಿಂಗನಿಗೆ ತನ್ನ ಉಡಾಫೆ , ಸುಳ್ಳು , ಜಾತಿ , ಮಠದ ಗುರು- ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗಿತ್ತು .

Muttisikondavanu Kannada Notes PDF

ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes
ದ್ವಿತೀಯ ಪಿ.ಯು.ಸಿ ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌ | Muttisikondavanu Kannada Notes Best No1 Kannada Notes

Muttisikondavanu Kannada Notes

Muttisikondavanu Kannada Notes 2nd PUC NOTES PDF

ನಾಲ್ಕು ಅಂಕಗಳ ಪ್ರಶ್ನೆಗಳು :

ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು ?

ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಬಸಲಿಂಗ ಒಬ್ಬ ಲಿಂಗಾಯತ ಜಾತಿಯ ಶ್ರಮಿಕ . ಕಷ್ಟಪಟ್ಟು ದುಡಿಯುವ ಮುಖಾಂತರವಾಗಿ ತನ್ನ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ . ಅದು ಬಸಲಿಂಗನಿಗೆ ದುಡಿಮೆಯ ಕಾಲವಾಗಿದ್ದರಿಂದ ಸ್ವಲ್ಪವೂ ಪುರುಸೊತ್ತು ಇರಲಿಲ್ಲ . ಒಂದು ವೇಳೆ ಬಸಲಿಂಗ ಉಳುಮೆ ಮಾಡುವುದನ್ನು ನಾಲ್ಕು ದಿನ ತಡಮಾಡಿದರೂ ನೇಗಿಲಿನ ತುದಿ ನೆಲದಲ್ಲಿ ನಾಟುವುದು ಕಷ್ಟವಾಗುತ್ತಿತ್ತು . ಹಾಗಾಗಿ ಬೇಗ ಬೇಗ ಉಳುಮೆ ಮಾಡುವ ಅನಿವಾರ್ಯತೆ ಅವನಿಗಿತ್ತು .

ಆದರೆ ಬಸಲಿಂಗ ಆ ಸಮಯದಲ್ಲಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ . ಬಸಲಿಂಗನ ಸಮಸ್ಯೆಗಳಲ್ಲಿ ಮೊದಲನೆಯದು ಆತನ ಸೋಮಾರಿಗಳಾದ ಎರಡು ಎತ್ತುಗಳು . ಒಂದಕ್ಕಿಂತ ಇನ್ನೊಂದು ದುಡಿಮೆಯಲ್ಲಿ ಹಿಂದಿತ್ತು . ಒಂದು ನೊಗ ಇದ್ದೊಡನೆ ಮಲಗಿ ಬಿಡುತ್ತದೆ . ಎಷ್ಟು ಹೊಡೆದರೂ ಏಳುವುದಿಲ್ಲ . ಇನ್ನೊಂದು ಕೂಡ ತನ್ನ ಸಹೋದ್ಯೋಗಿಯಂತೆಯೇ ಆಗಿ ಬಿಡುವ ಸೂಚನೆಗಳಿವೆ . ಮಲಗಿರುವ ಒಂದು ಎತ್ತು ಒಂದು ಏಟು ಕೊಟ್ರೊಡನೆ ಏಳುತ್ತದೆ .

ಇನ್ನೊಂದು ಜೊತೆಗಾರ ಏಳುವುದನ್ನೇ ಕಾದು ಕೆಲಸವಿಲ್ಲದ ಬಗ್ಗೆ ಖುಷಿಗೊಳ್ಳುವಂತೆ ಕಂಡುಬರುತ್ತದೆ . ಇದರಿಂದ ಬೇಸರಗೊಂಡ ಬಸಲಿಂಗ ಈ ಎರಡೂ ಎತ್ತುಗಳನ್ನು ಯಾರಾದರೊಬ್ಬರಿಗೆ ಸಾಟಿಯಲ್ಲಿ ಕೊಟ್ಟು ಹೊಸ ಎತ್ತುಗಳನ್ನು ಹೊಂಚಿಕೊಳ್ಳುವ ಯೋಚನೆ ಮಾಡುತ್ತಿದ್ದ . ಆದರೆ ಈ ಎರಡು ಎತ್ತುಗಳನ್ನು ಮಾರುವುದು ಆತನಿಗೆ ಒಂದು ಸವಾಲಾಗಿತ್ತು . ಯಾಕೆಂದರೆ ಈ ಎತ್ತುಗಳ ಬಗ್ಗೆ ಒಳ್ಳೆಯದನ್ನು ಹೇಳಲು ಲೆಕ್ಕ ಹಾಕಿದಂತೆಲ್ಲ ಅವನ ತಲೆ ಬಿಸಿಯಾಗುತ್ತಿತ್ತು .

ಅವನು ಎದುರಿಸುತ್ತಿದ್ದ ಎರಡನೇ ಸಮಸ್ಯೆಯೆಂದರೆ , ಅವನ ಮಗುವಿಗೆ ಮೈಯಲ್ಲಿ ಸರಿಯಿಲ್ಲ . ಶಿವನೂರು ಸ್ವಾಮಿಗಳಿಗೆ ತೋರಿಸಬೇಕೆಂದು ಹೆಂಡತಿ ಸಿದ್ಧಿಂಗಿ ಹೇಳುತ್ತಲೇ ಇದ್ದಾಳೆ . ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅವನ ಮಗು ಅವನಿಂದ ದೂರವಾಗುವ ಸಂಭವವಿತ್ತು . ಮೂರನೆಯ ಮತ್ತು ಮುಖ್ಯವಾದ ಸಮಸ್ಯೆಯೆಂದರೆ ಬಸಲಿಂಗನ ಎಡಗಣ್ಣಿನಲ್ಲಿ ಕಾಣಿಸಿಕೊಂಡ ನೋವು . ಇದು ದಿನದಿಂದ ದಿನಕ್ಕೆ ವ್ಯಾಪಿಸಿ ಕುಗ್ಗುವಂತೆ ಮಾಡಿತು . ಈ ಎಲ್ಲಾ ಸಮಸ್ಯೆಗಳು ಮೇಲಿಂದ ಮೇಲೆ ಬಸಲಿಂಗನನ್ನು ಕಾಡುತ್ತಿದ್ದವು .

ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು ?

ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಬಸಲಿಂಗ ಆರಂಭದಲ್ಲಿಯೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ . ಅದು ದುಡಿಮೆಯ ಕಾಲವಾಗಿತ್ತು . ಆದರೆ ಆತನ ಎತ್ತುಗಳು ಸೋಮಾರಿಗಳಾಗಿದ್ದವು . ಬಸಲಿಂಗನ ಮಗು ಕೆಮ್ಮಿನಿಂದ
ಬಳಲುತ್ತಿತ್ತು . ಇದೆಲ್ಲಕ್ಕಿಂತ ಮುಖ್ಯವಾಗಿ ಬಸಲಿಂಗನ ಎಡಗಣ್ಣಲ್ಲಿ ನೋವು ಕಾಣಿಸಿಕೊಂಡಿತು . ಆರಂಭದಲ್ಲಿ , ಬಸಲಿಂಗ ತನಗೆ ಕಾಣಿಸಿಕೊಂಡ ಕಣ್ಣು ಬೇನೆಯನ್ನು ಅಷ್ಟೊಂದು ದೀರ್ಘವಾಗಿ ಪರಿಗಣಿಸಲಿಲ್ಲ .

ಇದೊಂದು ಸಾಮಾನ್ಯ ಸಮಸ್ಯೆ ಎಂದುಕೊಂಡ , ನೋವು ಕಾಣಿಸಿಕೊಂಡರೂ ಆತನ ಕಣ್ಣು ಕೆಂಪಾಗಿರಲಿಲ್ಲ . ಆದರೆ ನೋವು ಇನ್ನಷ್ಟು ತೀವ್ರವಾಗಿ ಎಡಗಣ್ಣು ಮಂದವಾದಂತಾದಾಗ ಬಸಲಿಂಗನಿಗೆ ಹೆದರಿಕೆ ಶುರುವಾಯಿತು . ಅಲ್ಲದೆ ಎಡಗಣ್ಣಿನಲ್ಲಿ ಇರುವ ನೋವು ಬಲಗಣ್ಣಿನಲ್ಲಿ ಇರಲಿಲ್ಲ .ನೋವು ಇನ್ನಷ್ಟು ಜಾಸ್ತಿಯಾಗ ತೊಡಗಿದಾಗ ಆತ ನಗರದ ತನ್ನ ಮಾಮೂಲಿ ವೈದ್ಯರಿಗೆ ತೋರಿಸಿದ . ವೈದ್ಯರು ನೋವಿನ ವಿವರಗಳನ್ನೆಲ್ಲ ಕೇಳಿ ರೆಪ್ಪೆ ಅಗಲಿಸಿ ನೋಡಿದರು .

ಅವರಿಗೆ ಏನೂ ಅರ್ಥವಾಗದಿದ್ದರೂ ಬಸಲಿಂಗನಿಗೆ ಧೈರ್ಯ ತುಂಬಲು ಒಳ್ಳೆಯ ಮಾತನಾಡಿದರು . ತಮ್ಮ ವೈದ್ಯಕೀಯ ಪವಾಡಗಳನ್ನು ವಿವರಿಸಿದರು . ಹಚ್ಚಿಕೊಳ್ಳಲು ಒಂದು ಲೇಹ್ಯ ಕೊಟ್ಟರು . ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ಹಲವು ದಿನ ಲೇಹ್ಯ ಹಚ್ಚಿಕೊಂಡು ವೈದ್ಯರು ಹೇಳಿದಂತೆ ಬಟ್ಟೆಯ ಕಾವು , ಉಪ್ಪಿನಕಾವು ಕೊಟ್ಟುಕೊಂಡ . ಆದರೆ ಈ ರೀತಿಯಾದ ಯಾವ ಚಿಕಿತ್ಸೆಯೂ ಆತನನೋವನ್ನು ಕಡಿಮೆ ಮಾಡಲಿಲ್ಲ .

ಬದಲಾಗಿ ಕಣ್ಣಿನ ಮಂದಸ್ಥಿತಿ ಹೆಚ್ಚಾಗುತ್ತಾ ಹೋಯಿತು . ಅಲ್ಲದೆ ತನ್ನ ನೋವಿನ ತೀವ್ರತೆಯನ್ನು ಹೆಂಡತಿ ಸಿದ್ಧಿಂಗಿಯಲ್ಲಿ ಹೇಳಿಕೊಂಡಾಗ ಆಕೆಯೂ ಕೂಡ ಸ್ಪಂದಿಸದೆ ಎಲ್ಲ ಅವನ ಭ್ರಮೆ ಎನ್ನುವಂತೆ ಮಾತನಾಡಿದಳು . ಕೊನೆಯಲ್ಲಿ ಎಲ್ಲೂ ಒಳ್ಳೆಯ ಚಿಕಿತ್ಸೆ ಸಿಗದಾಗ ಬಸಲಿಂಗನಿಗೆಯಾರೋ ಒಬ್ಬರು ಸರ್ಕಾರಿ ವೈದ್ಯ ಡಾ | ತಿಮ್ಮಪ್ಪನವರನ್ನು ಕಾಣಲು ಹೇಳಿದರು.ಅದರಂತೆ ಆ ವೈದ್ಯರನ್ನು ಕಾಣಲು ಮುಂದಾದ .

ಬಸಲಿಂಗ ಡಾ || ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು ?

ಆರಂಭದಲ್ಲಿ ಬಸಲಿಂಗನಿಗೆ ಕಾಣಿಸಿಕೊಂಡ ಕಣ್ಣು ಬೇನೆಗೆ ಎಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ . ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಇವನ ನೋವನ್ನು ಸರಿಪಡಿಸುವಲ್ಲಿ ವಿಫಲರಾದರು.ಇದರಿಂದ ಬಸಲಿಂಗನ ಕಣ್ಣಿನ ನೋವು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು . ತನ್ನ ನೋವಿನ ಮುಂದೆ ಉಳಿದಿರುವ ನೆಲ , ಮಗುವಿನ ಕಾಯಿಲೆ ಎಲ್ಲವೂ ಅವನಿಗೆ ಗೌಣವಾಗಿ ಕಾಣತೊಡಗಿದವು . ಕೊನೆಗೆ ಯಾರೋ ಒಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ | ತಿಮ್ಮಪ್ಪನವರಿಗೆ ತೋರಿಸಲು ಹೇಳಿದರು ,

ಬಸಲಿಂಗ ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕುದಿವಾಳಿ ಇಲ್ಲದವರು ಹೋಗುವ ಜಾಗ ಎಂದು ತಿಳಿದಿದ್ದ . ಆದರೆ ಕೊನೆಯ ಪ್ರಯತ್ನವಾಗಿ ಡಾ । ತಿಮ್ಮಪ್ಪನವರ ಬಳಿಗೆ ಹೋಗುತ್ತಾನೆ . ಸೂಟಿಯಾದ ಬೆರಳುಗಳ ವಿಶ್ವಾಸ ತುಂಬಿದ ಡಾ | ತಿಮ್ಮಪ್ಪ ಬಸಲಿಂಗನ ದೈಹಿಕ ಸಮಸ್ಯೆಯ ಜೊತೆಗೆ ಅವನ ಇತರ ಸಮಸ್ಯೆಗಳನ್ನು ಆಲಿಸಿ ಬಸಲಿಂಗನ ದೃಷ್ಟಿಯ ಅಳತೆ ಸ್ಪಷ್ಟತೆಯನ್ನು ನೋಡಿ ನಿನ್ನ ಕಣ್ಣು ಸರಿಹೋಗುತ್ತೆ , ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ ಎಂದರು .

ಮರುದಿನ ಆಪರೇಷನ್ ಮಾಡಿದ ತಿಮ್ಮಪ್ಪ ಮುಂಜಾಗ್ರತಾ ಕ್ರಮಗಳನ್ನು ಹೇಳಿ ಕಳುಹಿಸಿದರು . ಎರಡು ವಾರ ತಲೆಗೆ ನೀರು ಸೋಂಕಿಸಬಾರದು ನೀರು ಬಿದ್ದರೆ ಕಣ್ಣು ಕೆಟ್ಟುಹೋಗುತ್ತದೆ ಎಂದರು . ಆದರೆ ತಿಮ್ಮಪ್ಪನವರು ಹೊಲೆಯ ಜಾತಿಗೆ ಸೇರಿದವರೆಂದು ಸಿದ್ದಿಂಗಿಗೆ ಅದು ಹೇಗೋ ಗೊತ್ತಾಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸುತ್ತಾಳೆ . ಈ ವಿಷಯ ಬಸಲಿಂಗನಿಗೆ ತಿಳಿದಾಗ ಒಂದು ಕ್ಷಣ ತಿಮ್ಮಪ್ಪನವರು ತಮ್ಮ ಜಾತಿಯ ಬಗ್ಗೆ ಹೇಳಬಾರದಿತ್ತೆ ಎನ್ನುವುದಾಗಿಯೂ ಅಂದುಕೊಳ್ಳುತ್ತಾನೆ .

ಹೊಲೆಯ ಜಾತಿಯ ತಿಮ್ಮಪ್ಪ ಬಸಲಿಂಗನನ್ನು ಮುಟ್ಟಿ ಮೈಲಿಗೆಯಾದ ಕಾರಣ ಆತ ಮೈಲಿಗೆಯನ್ನು ತೊಲಗಿಸಿ ಪರಿಶುದ್ಧತೆಗಾಗಿ ಮತ್ತೆ ಕಣ್ಣನ್ನು ಬಿಟ್ಟು ತಲೆಗೆ ನೀರನ್ನು ಹೆಂಡತಿ ಸಿದ್ದಿಂಗಿ ಮೂಲಕ ಹಾಕಿಸಿಕೊಳ್ಳುತ್ತಾನೆ . ಬಸಲಿಂಗ ಮೈಲಿಗೆ , ಜಾತೀಯ ಕಾರಣಗಳಿಂದ ತಿಮ್ಮಪ್ಪ ನೀಡಿದ ಸೂಚನೆಗಳನ್ನು ಪಾಲಿಸಲು ಹಿಂಜರಿಯುತ್ತಾನೆ .

ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು ? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ ?

ಆಪರೇಷನ್ ಮಾಡಿದ ಡಾ | ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂಬುದು ಸಿದ್ಧಿಂಗಿಗೆ ತಿಳಿದು ಆಕೆ ರಾದ್ಧಾಂತವನ್ನು ಎಬ್ಬಿಸುತ್ತಾಳೆ . ಈ ವಿಚಾರ ಬಸಲಿಂಗನಿಗೂ ತಿಳಿದಾಗ ಆತ ತಿಮ್ಮಪ್ಪನವರು ತಾನು ಹೊಲೆಯ ಜಾತಿಗೆ ಸೇರಿದವರೆಂದು ಒಮ್ಮೆ ಹೇಳಿದ್ದರೆ ಚೆನ್ನಾಗಿರುತಿತ್ತು ಅಂದುಕೊಂಡ .

ಅನಂತರ ಇಬ್ಬರೂ ಕೂಡ ಡಾ | ತಿಮ್ಮಪ್ಪನವರಿಂದ ಚಿಕಿತ್ಸೆ ಪಡೆದ ವಿಚಾರ ಯಾರಿಗೂ ಹೇಳಬಾರದು ಎಂದುಕೊಂಡು ತಿಮ್ಮಪ್ಪನವರು ಹೇಳಿದ ಮುನ್ಸೂಚನೆಗಳನ್ನು ಸರಿಯಾಗಿ ಪಾಲಿಸದೆ ತನಗಾದ ಮೈಲಿಗೆಯನ್ನು ನೀರಿನಿಂದ ತಲೆಗೆ ನೀರು ಸೋಂಕಿಸಿಕೊಂಡು ಪರಿಶುದ್ಧಗೊಳಿಸಿಕೊಂಡ . ಆದರೆ ನೋವು ಮತ್ತೆ ಕಾಣಿಸಿಕೊಂಡಾಗ ಬಸಲಿಂಗ ತಬ್ಬಿಬ್ಬಾದ . ತಿಮ್ಮಪ್ಪನವರನ್ನು ಬಿಟ್ಟು ಉಳಿದ ಎಲ್ಲಾ ವೈದ್ಯರುಗಳನ್ನು ಭೇಟಿ ಆದ .

ಆದರೆ ಎಲ್ಲೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ . ಬರುವುದು ಕೊನೆಗೆ ತಿಮ್ಮಪ್ಪನವರ ಬಳಿಗೆ ಅನಿವಾರ್ಯವಾಯಿತು . ಆದರೆ ಬಸಲಿಂಗನನ್ನು ಕಂಡ ತಿಮ್ಮಪ್ಪನವರು ಬಸಲಿಂಗನ ಸ್ಥಿತಿ ಗಮನಿಸಿ ಆತನಿಂದ ನೈಜ ವಿಚಾರ ತಿಳಿದುಕೊಳ್ಳುತ್ತಾರೆ . ನಡೆದ ಎಲ್ಲಾ ವಿಚಾರ ಬಸಲಿಂಗ ಹೇಳಿ ‘ ಹೆಂಗಾದ್ರೂ ಮಾಡಿ ಇನ್ನೊಂದಲ ಆಪರೇಷನ್ ಮಾಡಿಬಿಡಿ , ನಿಮ್ಮ ಮಾತು ಮೀರೋಲ್ಲ ‘ ಅಂದ.ಆದರೆ ತಿಮ್ಮಪ್ಪನವರು ನಿರಾಕರಿಸಿ : ಗಾಯಕ್ಕೆ ಔಷಧಿ ಕೊಟ್ಟು ಕಳುಹಿಸುತ್ತಾರೆ.

ಇದರಿಂದ ಬಸಲಿಂಗ ಸಿಟ್ಟುಗೊಂಡು ಬಸಲಿಂಗನಿಗೆ ತಿಮ್ಮಪ್ಪ ತನ್ನ ಜಾತಿಯನ್ನು ಕೆಡಿಸಿದ್ದು ಮಾತ್ರವಲ್ಲದೆ ತನ್ನ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಅನಿಸತೊಡಗಿತು . ತನ್ನ ಕಣ್ಣು ಹೋಗಲು ಅದ್ಯಾವುದೋ ರೀತಿಯಲ್ಲಿ ಇವರು ಕಾರಣವಾದಂತೆ ತಿಳಿದು ತಾನು ಬಲ್ಲವರಲ್ಲಿ ಹೇಳಿಕೊಂಡು ತಿಮ್ಮಪ್ಪನವರನ್ನು ಟೀಕಿಸಿದ .

ಅಲ್ಲದೆ ತಾನು ಹೇಳುತ್ತಿರುವುದೇ ಸತ್ಯ ಎನ್ನುವುದನ್ನು ನಂಬಿದ ಇದನ್ನು ಅಂದರೆ ಈ ಸುಳ್ಳುಗಳೆಲ್ಲವನ್ನು ತನ್ನ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕೆ ದಾಳವಾಗಿ ಬಳಸಿಕೊಳ್ಳಬಹುದೆಂದು ತಿಳಿದ . ಅನ್ಯ ಡಾಕ್ಟರುಗಳು ತಿಮ್ಮಪ್ಪನವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಾಗೆ ಮಾಡಿದ . ಹೀಗೆ ತಿಮ್ಮಪ್ಪನವರ ಬಗೆಗಿನ ಅಸಮಾಧಾನವನ್ನು ಬಸಲಿಂಗ ಈ ರೀತಿಯಾಗಿ ತೀರಿಸಿಕೊಂಡ .

ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು ? ಅದಕ್ಕೆ ಕಾರಣಗಳೇನು ?

ಬಸಲಿಂಗ ಕೊನೆಗೂ ತಿಮ್ಮಪ್ಪನವರನ್ನೇ ಕಾಣುವ ನಿರ್ಧಾರ ಮಾಡಿದ , ಬಸಲಿಂಗ ಡಾ | ತಿಮ್ಮಪ್ಪನವರ ಬಗ್ಗೆ ತನ್ನ ಜಾತಿಯನ್ನು ಕೆಡಿಸಿಕೊಳ್ಳಲು ಇವರೇ ಕಾರಣ ಎಂದು ತೀರ್ಮಾನಿಸಿ ಸಿಟ್ಟು ಮಾಡಿಕೊಂಡು ಅವರ ವಿರುದ್ಧ ಇತರರು ಕೆಟ್ಟ ಮಾತುಗಳನ್ನು ಮಾತನಾಡುವ ಹಾಗೆ ಮಾಡಿದ . ಹಾಗೆ ತನ್ನ ಉಡಾಫೆತನವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಂದಾದ ಅಲ್ಲದೆ ಅನ್ಯ ಡಾಕ್ಟರುಗಳು ಕೂಡ ಡಾ । ತಿಮ್ಮಪ್ಪನಿಗೆ ಬುದ್ಧಿ ಇಲ್ಲ .

ಅದಕ್ಕೆ ಆಪರೇಷನ್ ಮಾಡಿದ್ದಾರೆ ಎಂದು ಹೇಳುವ ಹಾಗೆ ಮಾಡಿದ . ಆದರೆ ಯಾರೂ ಕೂಡ ಬಸಲಿಂಗನಿಗೆ ಬೇಕಾದ ಸರಿಯಾದ ಔಷಧ ನೀಡಲಿಲ್ಲ . ಕೊನೆಗೆ ತಿಮ್ಮಪ್ಪನವರ ಬಳಿಗೆ ಹೋದಾಗ ಅವರು ಬಸಲಿಂಗನ ಪರಿಸ್ಥಿತಿಯನ್ನು ಗಮನಿಸಿ ನಾನು ನಿನ್ನನ್ನು ಮುಟ್ಟಿದ್ದು ಕೇವಲ ಡಾಕ್ಟರಾಗಿ ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದ್ದನ್ನು ಮಾಡಿದೆ ಎನ್ನುತ್ತಾ ಆತನನ್ನು ಡಾ | ಚಂದ್ರಪ್ಪನ ಬಳಿಗೆ ಕಳುಹಿಸಿಕೊಡುತ್ತಾರೆ . ಅದರೆ ಡಾ | ಚಂದ್ರಪ್ಪನವರು ಬಸಲಿಂಗನ ಪೂರ್ಣ ಕತೆಯನ್ನು ತಿಳಿದು ‘ ಡಾ । ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ .

ಅವರು ನಮ್ಮ ವೈದ್ಯ ಲೋಕಬಲ್ಲ ಅತ್ಯಂತ ಪ್ರಾಮಾಣಿಕ , ಪ್ರತಿಭಾವಂತ ಡಾಕ್ಟರು , ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ ‘ ಎಂಬುದಾಗಿ ಹೇಳಿ ಪುನಃ ತಿಮ್ಮಪ್ಪನ ಬಳಿಗೆ ಕಳುಹಿಸುತ್ತಾರೆ . ಆಗ ಬಸಲಿಂಗನಿಗೆ ತನ್ನ ತಪ್ಪಿನ ಅರಿವು ಆಗುತ್ತದೆ . ಆತನಿಗೆ ಕೊನೆಯಲ್ಲಿ ತನ್ನ ಸುಳ್ಳು , ಉಡಾಫೆ , ಜಾತಿ , ಮಠದ ಗುರು ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗುತ್ತದೆ . ಕೊನೆಗೆ ಆತ ಬೇರೆ ಕೆಟ್ಟ ಆಲೋಚನೆ ಮಾಡದೆ ತಿಮ್ಮಪ್ಪನವರ ಬಳಿಗೆ ಹೋಗಿ ತನ್ನ ತಪ್ಪಿಗೆ ಕ್ಷಮೆ ಕೇಳಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ .

FAQ

ಬಸಲಿಂಗನ ಹೆಂಡತಿಯ ಹೆಸರೇನು ?

ಬಸಲಿಂಗನ ಹೆಂಡತಿಯ ಹೆಸರು ಸಿದ್ಲಿಂಗಿ ,

‘ ಮುಟ್ಟಿಸಿಕೊಂಡವನು ‘ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು ?

‘ ಮುಟ್ಟಿಸಿಕೊಂಡವನು ‘ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರು ಡಾ || ತಿಮ್ಮಪ್ಪ .

Muttisikondavanu Kannada Notes

ಇತರೆ ವಿಷಯಗಳನ್ನು ನೋಡಿ

Muttisikondavanu Kannada Notes Notes

Leave a Reply

Your email address will not be published. Required fields are marked *