ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | 2nd Puc Shilube Eriddane Kannada Poem Notes

ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes

Shilube Eriddane Kannada Notes, ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Shilube Eriddane Kannada Notes Question Answer pdf guide Download Second Puc , 2nd Puc Kannada Notes

Shilube Eriddane Kannada Notes 2nd Puc Kannada

ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣಾವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಒಂದು ಅಂಕದ ಪ್ರಶ್ನೆಗಳು

ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ಧತೆಗೆ ಯಾವ ರೂಪ ಕರುಣ ಸಿದೆ ?

ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಗಿಡದ ರೂಪ ಕರುಣಿಸಿದೆ .

ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ ?

ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಮಂಜಿನ ಕೆಲಸ ಮಾಡಿದೆ .

ಶಿಲುಬೆಯೇರಿದವರು ಯಾರು

ಶಿಲುಬೆಯೇರಿದವರು ಜೀಸಸ್.

Shilube Eriddane Kannada Notes KSEEB

ಜೀಸಸ್‌ನ ಮುಖಮುದ್ರೆ ಏನನ್ನು ನುಡಿವಂತಿದೆ ?

ಜೀಸಸ್‌ನ ಮುಖಮುದ್ರೆ ಯಾತನೆಯಲ್ಲಿಯೂ ಒಳ್ಳೆಯ ಮಾತು ನುಡಿವಂತಿದೆ .

ಜೀಸಸ್‌ನ ಶಿಲುಬೆಗೇರಿಸಿದವರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ ?

ಜೀಸಸ್‌ನ ಶಿಲುಬೆಗೇರಿಸಿದವರು ಕೊಲೆಗಡುಕ ಬರಬ್ಬನ ಪರ ವಕಾಲತ್ತು ನಡೆಸಿದವರಾಗಿದ್ದಾರೆ .

ಏನು ಬಂದೇ ತಿರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೇರಿದ್ದಾನೆ ?

ದೈವೀರಾಜ್ಯ ಬಂದೇ ತಿರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೇರಿದ್ದಾನೆ .

ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪಹಚ್ಚದ ಸ್ಥಳ ಯಾವುದು ?

ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪಹಚ್ಚದ ಸ್ಥಳ ದಲಿತ ವಾಸದ ಸೋಗೆ ಬಿಲಗಳು .

ಯಾರ ಕಂಬನಿಯನ್ನೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ?

ಶೋಷಿತರ ಕಂಬನಿಯನ್ನೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ .

Shilube Eriddane Kannada Notes 2nd PUC Karnataka

ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes
ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes

ಎರಡು ಅಂಕಗಳ ಪ್ರಶ್ನೆಗಳು :

ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ ?

ಕ್ರಿಸ್ಮಸ್ ಮನೆಗೆ ಕೇಕು , ಚಳಿ , ನಕ್ಷತ್ರದೀಪ , ಪ್ಲಾಸ್ಟಿಕನ ನಕಲಿ ಗಿಡ , ಅದಕೆ ಮಂಜಿನ ಕೆಲಸ ಮಾಡಿದ ಹತ್ತಿ , ಇವೆಲ್ಲದರ ನಡುವೆ ಬೆಚ್ಚನೆಯ ಪ್ರಾರ್ಥನೆಗಳನ್ನು ತಂದಿದೆ .

ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ , ಏನನ್ನು ಅನ್ನುವಂತಿದೆ ?

ಶಿಲುಬೆಗೇರಿದ ಯೇಸುವಿನ ದೇಹ ತನ್ನನ್ನು ಶಿಲುಬೆಗೇರಿಸಿದವರೆ ಕೊಲೆಗಡುಕ ಬರಬ್ಬನ ‘ ವಕಾಲತ್ತು ನಡಿಸಿದವರೇ , ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೇ , ಮನ್ನಿಸಲಿ ನಿಮ್ಮನ್ನು ಆ ದೇವರೆ ! ಎಂದು ಹೇಳುವಂತಿದೆ .

ಶಿಲುಬೆಗೇರಿಸಿದವರ ಗುಣಗಳು ಇಂದುಯಾವ ವೇಷ ತಾಳಿವೆ ?

ಶಿಲುಬೆಗೇರಿಸಿದವರ ಗುಣಗಳು ಕಾಲ ರಾಯನಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡಿವೆ . ಆಧಿಕಾರದ ಬಲಿಷ್ಠ ಕೈಗಳು , ಎದೆಯಾಳದ ಮುಖ್ಯಗಳು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಇವುಗಳು ದ್ವೇಷದ ಹೊಸ ರೂಪಗಳಾಗಿವೆ .

ಯಾವ ಸಂದೇಶವನ್ನು ನೀಡುವರೀತಿಯಲ್ಲಿ ಜೀಸಸ್ ಶಿಲುಬೆಯೇರಿದ್ದಾನೆ ?

ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಎನ್ನುವಂತೆ , ಶೋಷಿತರ ಕಂಬನಿಯನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .

Shilube Eriddane Kannada Notes 2nd PUC Notes Questions and Answers

ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes
ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes

ನಾಲ್ಕು ಅಂಕಗಳ ಪ್ರಶ್ನೆಗಳು :

ಶಿಲುಬೆಗೇರಿಸಿದ ಜೀಸಸ್‌ನ ದೇಹ ಏನನ್ನು ಹೇಳುವಂತಿದೆ ? ವಿವರಿಸಿ .

ಶಿಲುಬೆ ಏರಿದ್ದಾನೆ ಎಂಬ ಕವನವು ಜೀಸಸನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿದೆ . ಮನುಕುಲಕ್ಕೆ ಒಳ್ಳೆಯದನ್ನು ಬಯಸಿದ ದೇವಮಾನವ ; ಆತನ ಒಳ್ಳೆಯ ಮನಸ್ಸನ್ನು ಅರಿಯಲಾರದ ಜನ , ಆತನ ಮರಣಕ್ಕೆ ಮುನ್ನುಡಿಯನ್ನು ಬರೆಯಲು ಮುಂದಾಗುತ್ತಾರೆ . ಇದನ್ನು ಕಂಡು ಮರುಗುವ ಕವಿ ಮನಸ್ಸು ಕ್ರಿಸ್ಮಸ್ ಇಂದು ನಮಗೆ ಸಂಭ್ರಮವನ್ನು ತರುತ್ತದೆ . ಆದರೆ ಅದರ ಹಿಂದೆ ಪ್ರಾಣವನ್ನುಗೈದ ಏಸುವಿನ ಉದ್ದೇಶ ಇಂದು ಈಡೇರಿಲ್ಲ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ .

ಗೋಡೆಯ ಮೇಲೆ ಶಿಲುಬೆ ಏರಿದ ಜೀಸಸ್‌ನ ಪ್ರತಿಬಿಂಬವಿದೆ.ಅವನ ಬಾಗಿದ ಶಿರ , ಕುತ್ತಿಗೆಯಲ್ಲಿ ಉಬ್ಬಿದ ನರ , ಅಂತಹ ನೋವಿನ ಸಂದರ್ಭದಲ್ಲಿಯೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಆತನ ಮುಖಮುದ್ರೆ , ತನ್ನನ್ನು ಶಿಲುಬೆಗೇರಿಸಿದರೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಯೇಸುವಿನ ಒಳ್ಳೆಯತನ , ವಿಶಾಲವಾದ ಹೃದಯ ಅವರ್ಣನೀಯ ಎನ್ನುವ ಕವಿ ಮುಂದುವರಿಸಿ ಒಬ್ಬ ಮಹಾನ್ ವ್ಯಕ್ತಿಯನ್ನು ನಡೆಸಿಕೊಂಡ ರೀತಿಯನ್ನು ಕಂಡು ಬೇಸರಿಸುತ್ತಾರೆ .

ಕೊಲೆಗಡುಕ ಬರಬ್ಬನ ಪರಿ ವಕಾಲತ್ತು ನಡೆಸಿದವರು . ಎಡಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದಿರಿ . ಅಂತಹ ಸ್ಥಿತಿಯಲ್ಲೂ ಆತ ಉದಾತ್ತಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ . ಅವರನ್ನು ಕ್ಷಮಿಸು’ಎನ್ನುವಂತಿದೆ
ಸನ್ಮಾನಿಸಿದವರೇ , ಮನ್ನಿಸಲಿ ನಿಮ್ಮನ್ನು ಆ ದೇವರೆ ! ಎಂದು ಹೇಳುವಂತಿದೆ .

ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ? ಚರ್ಚಿಸಿ .

ಅಂದು ಜೀಸಸ್ ಶಿಲುಬೆ ಏರಿದನು ; ಕಾರಣ ಅಂಧಕಾರ ದಲ್ಲಿದಿರುವ ಜನರನ್ನು , ತನ್ನ ಮೇಲೆ ಹರಿಹಾಯ್ದ ಜನರನ್ನು , ಅವರ ಮೌಡ್ಯತನವನ್ನು ಹೋಗಲಾಡಿಸಬೇಕು ಎಂದು . ಆದರೆ ಏಸುವಿನ ಒಳ್ಳೆಯತನ ಅರಿಯಲು ವಿಫಲರಾದ ರೋಮಿನ ಯಾಜಕರು ( ಧರ್ಮಗುರು ) ಆ ದಿನ ಕೊಲೆಗಡುಕ ಬರಬ್ಬನನ್ನು ಕ್ಷಮಿಸಲು ಆಗ್ರಹಿಸುತ್ತಾರೆಯೇ ವಿನಾ ಜೀಸಸ್‌ನನ್ನು ಕ್ಷಮಿಸಲು ಒಪ್ಪುವುದಿಲ್ಲ . ಇಬ್ಬರು ಕಳ್ಳರ ಮಧ್ಯೆ ಏಸುವನ್ನು ಗಲ್ಲಿಗೇರಿಸಲಾಯಿತು .

ಅಂದು ಕ್ರೋಧ ತಿಳಿಗೇಡಿತನಕ್ಕೆ ಜೀಸಸ್ ಶಿಲುಬೆ ಏರಿದನು . ಆದರೆ ಇಂದಿನ ಕಾಲಕ್ಕೆ ಮತಧರ್ಮಗಳ ಕಿತ್ತಾಟಗಳನ್ನು ನೋಡುತ್ತಾ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಮನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂದೀಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಮರುಗುತ್ತಾ ನಿತ್ಯವೂ ಶಿಲುಬೆ ಏರಿದ್ದಾನೆ . ಶೋಷಿತರ ಕಂಬನಿಗಳನ್ನು ಒರೆಸುವ ಆಶಾಕಿರಣವಾಗಿ ಸತ್ಯಕ್ಕೆ ಹೊಸ ಕವಲುಗಳ ತೆರೆಸುವ ಕಾರಣಕ್ಕಾಗಿ ಜೀಸಸ್ ಶಿಲುಬೆ ಏರಿದ್ದಾನೆ ಎಂಬುದು ಕವಿಯ ವಿವರಣೆಯಾಗಿದೆ .

ಶಿಲುಬೆ ಏರಿದ್ದಾನೆ ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಾವ ರೀತಿ ನಿರೂಪಿಸಿದ್ದಾರೆ ? ವಿವರಿಸಿ .

ಶಿಲುಬೆ ಏರಿದ್ದಾನೆ ಕವನ ಜೀಸಸ್ ಬಗ್ಗೆ ಗೋವಿಂದ ಪೈ’ಯವರ ‘ ಗೊಲ್ಗೊಥಾ’ಕವನದ ನಂತರ ಬಂದ ವಿಶಿಷ್ಟ ಕವನ . ಜೀಸಸ್‌ನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಕ್ರೌರ್ಯ ಈ ಕಾಲದಲ್ಲೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ . ಜೀಸಸ್‌ನ ಸಾವನ್ನು ವಿಷಾದದಿಂದ ನೋಡುವ ಕವಿ , ಆತ ಇಂದು ಅಸಂಖ್ಯ ಹೃದಯಗಳಲ್ಲಿ ಮಾನವತೆಯ ಕಿಡಿಯನ್ನು ಹಚ್ಚಿಹೋಗುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ .

ಕವಿತೆಯ ಆರಂಭದಲ್ಲಿ ಕ್ರಿಸ್ಮಸ್ ಮನೆಗೆ ಆಗಮಿಸುತ್ತಿರುವುದರ ವಿವರಣೆಯನ್ನು ಕೊಡುವ ಕವಿ ಕ್ರಿಸ್ಮಸ್ ಮನೆಗೆ ಕೇಕು , ಚಳಿ , ನಕ್ಷತ್ರದೀಪ , ಪ್ಲಾಸ್ಟಿಕ್‌ನ ನಕಲಿ ಗಿಡ , ಮಂಜಿನ ಹತ್ತಿಯಿಂದ ಕಂಗೊಳಿಸುತ್ತಿದೆ . ಇಲ್ಲೆಲ್ಲ ನಕಲಿತನ ಇದ್ದರೂ ಮೊಣಕಾಲಲ್ಲಿ ಮೋಂಬತ್ತಿ ಹಿಡಿದು ಕುಳಿತಿರುವ ಹುಡುಗಿಯ ಭಕ್ತಿ ಮಾತ್ರ ಅಸಲಿ ಎನ್ನುತ್ತಾರೆ ಕವಿ . ಮನುಕುಲಕ್ಕೆ ಒಳ್ಳೆಯದನ್ನು ಬಯಸಿದ ದೇವಮಾನವ ಜೀಸಸ್ , ಆದರೆ ಜನ ಆತನ ಒಳ್ಳೆಯತನವನ್ನು ಅರಿಯದಾದರು . ಕೊಲೆಗಡುಕ ಬರಬ್ಬನ ಪರ ವಕಾಲತ್ತು ನಡೆಸಿ ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದರು . ಅಂತಹ ಸ್ಥಿತಿಯಲ್ಲೂ ಆತ ಉದಾತ್ತಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ .

Shilube Eriddane Kannada Notes In Kannada

ಅವರನ್ನು ಕ್ಷಮಿಸು ‘ ಎನ್ನುವ ಆತನ ಮಾತುಗಳು ಅವನ ವಿಶಿಷ್ಟ ವ್ಯಕ್ತಿತ್ವವನ್ನು ತಿಳಿಸುತ್ತದೆ . ಅಂದು ಯೇಸುವನ್ನು ಶಿಲುಬೆಗೇರಿಸಿ ಜೀವಂತ ಇರುವಾಗಲೇ ಮೊಳೆಗಳನ್ನು ಆತನ ದೇಹದ ಅಂಗಾಂಗಳಿಗೆ ಬಡಿಯಲಾಯಿತು . ಜೊತೆಗೆ ಅವಮಾನ ಮಾಡುವ ನೆಲೆಯಲ್ಲಿ ಮುಳ್ಳಿನ ಕಿರೀಟವನ್ನೂ ಧರಿಸಲಾಯಿತು . ಹಿಂದೆ ನಡೆದಂತಹ ಈ ಎಲ್ಲಾ ಕ್ರೌರ್ಯಗಳು ಇನ್ನೂ ಕಾಲರಾಯನ ಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಎಂಬ ಹೊಸ ರೂಪ ತಾಳಿವೆ .

ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಎನ್ನುವಂತೆ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಮನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂಧಿಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಶೋಷಿತರ ಕಂಬನಿಯನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .

Shilube Eriddane Kannada Notes

ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes
ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್‌ | Shilube Eriddane Kannada Notes In Kannada Best No1 Notes

ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು

ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ

ಆಯ್ಕೆ : ಈ ವಾಕ್ಯವನ್ನು ‘ ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಶಿಲುಬೆ ಏರಿದ ಯೇಸುವಿನ ವಿಶೇಷ ಸಹನಾ ಗುಣವನ್ನು ವಿವರಿಸುವ ವಾಕ್ಯವಿದು .
ವಿವರಣೆ : ಕವಿಯು ಆರಂಭದಲ್ಲಿ ಕ್ರಿಸ್ಮಸ್ ಆಗಮಿಸಿರುವುದರ ಬಗ್ಗೆ ವಿವರಿಸುತ್ತಾ , ಗೋಡೆಯ ಮೇಲೆ ಶಿಲುಬೆ ಏರಿದ ಜೀಸಸ್‌ನ ಪ್ರತಿಬಿಂಬವಿದೆ . ಆ ಬಿಂಬದಲ್ಲಿ ಅವನ ಶಿರಬಾಗಿದೆ , ಕುತ್ತಿಗೆಯಲ್ಲಿ ಒಂದು ನರ ಉಬ್ಬಿಕೊಂಡಿದೆ . ಅಂತಹ ನೋವಿನ ಸಂದರ್ಭದಲ್ಲಿಯೂ ಎಲ್ಲರಿಗೂ ಒಳ್ಳೆಯದನ್ನು ಬಯಸುವಂತೆ ಕಾಣುತ್ತಿದ್ದ ಆತನ ಮುಖ ಮುದ್ರೆ ಕವಿಯ ಗಮನವನ್ನು ಸೆಳೆದಿದೆ . ತನ್ನನ್ನು ಶಿಲುಬೆಗೇರಿಸಿದರೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಯೇಸುವಿನ ಒಳ್ಳೆಯತನವನ್ನು ಕವಿ ವಿವರಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ .

ಮನ್ನಿಸಲಿ ನಿಮ್ಮನ್ನ ಆ ದೇವರೆ !

ಆಯ್ಕೆ : ಈ ವಾಕ್ಯವನ್ನು ‘ ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಯೇಸುವಿನ ಕ್ಷಮೆಯ ಗುಣವನ್ನು ವಿವರಿಸುವ ಸಾಲಿದು . ಅರಿಯದ
ವಿವರಣೆ : ಯೇಸುವನ್ನು ಶಿಲುಬೆಗೇರಿಸಿದ ಸಂದರ್ಭವನ್ನು ನೆನಪಿಸುತ್ತಾ ಕವಿ ವಿಷಾದವನ್ನು ವ್ಯಕ್ತಪಡಿಸುತ್ತಾರೆ . ಮನುಕುಲದ ಒಳ್ಳೆಯದನ್ನು ಬಯಸಿದ ದೇವಮಾನವನ ಒಳ ಮನಸ್ಸನ್ನು ಜನರು , ಕೊಲೆಗಡುಕ ಬರಬ್ಬನ ಪರವ ಕಾಲತ್ತು ನಡೆಸಿದರು . ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದರು . ಅಂತಹ ಸ್ಥಿತಿಯಲ್ಲೂ ಆತ ಉದಾತ್ತ ಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ . ಅವರನ್ನು ಕ್ಷಮಿಸು ‘ ಎನ್ನುವ ಆತನ ಗುಣವನ್ನು ಕವಿ ಸ್ಮರಿಸುವಾಗ ಈ ಮೇಲಿನ ಮಾತು ಬಂದಿದೆ .

ವೇಷ ಮರೆಸಿವೆ ಅಷ್ಟೆ – ಈ ಎಲ್ಲ ಕೇಡುಗಳು

ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್‌ಅಹಮದ್ ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಕಾಲ ಗತಿಸಿದರೂ ಯೇಸುವಿನ ಕಾಲದಲ್ಲಿದ್ದ ಹಿಂಸೆ ಕೊನೆಗೊಳ್ಳದೆ ಬೇರೆರೂಪ ಪಡೆದ ವಿವರಣೆ ಇಲ್ಲಿದೆ . ವಿವರಣೆ : ಅಂದು ಯೇಸುವನ್ನು ಶಿಲುಬೆಗೇರಿಸಿ ಜೀವಂತ ಇರುವಾಗಲೇ ಮೊಳೆಗಳನ್ನು ಆತನ ದೇಹದ ಅಂಗಾಂಗಳಿಗೆ ಬಡಿಯಲಾಯಿತು . ಜೊತೆಗೆ ಅವಮಾನ ಮಾಡುವ ನೆಲೆಯಲ್ಲಿ ಮುಳ್ಳಿನ ಕಿರೀಟವನ್ನೂ ಧರಿಸಲಾಯಿತು . ಆದರೆ ಹಿಂದೆ ನಡೆದಂತಹ ಈ ಎಲ್ಲಾ ಕ್ರೌರ್ಯಗಳು ಇನ್ನೂ ಕಾಲ ರಾಯನ ಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಎಂಬ ಹೊಸ ರೂಪ ತಾಳಿವೆ . ನಮ್ಮದೇ ಬಲಿಷ್ಠ ಕೈಗಳು , ಎದೆಯಾಳದ ಮುಯ್ಯಗಳನ್ನು ಮುಂದಿಟ್ಟುಕೊಂಡು ಸೆಣಸುತ್ತಿದ್ದೇವೆ ಎನ್ನುವಾಗ ಈ ಮಾತು ಬಂದಿದೆ .

Shilube Eriddane Kannada Notes Guide

ಬಂದೇ ತೀರುತ್ತದೆ ದೈವೀರಾಜ್ಯ ,

ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಆಶಾವಾದವನ್ನು ಹೊರಹೊಮ್ಮಿಸುವ ವಾಕ್ಯ ಇದಾಗಿದೆ .
ವಿವರಣೆ : ಯೇಸುವು ಶಿಲುಬೆಯೇರಿದ್ದರೂ , ಮತ್ತೆ ಆತ ಉದಯಿಸಿ ಬಂದು ದೈವೀರಾಜ್ಯ ತರುವನೆಂಬ ನಂಬಿಕೆ ಕವಿಯದಾಗಿದೆ . ಅದನ್ನು ಕವಿ ಹೀಗೆ ವಿವರಿಸುತ್ತಾರೆ . ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಶೋಷಿತರ ಕಂಬನಿಯ ನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .

ದಿನನಿತ್ಯ ಶಿಲುಬೆ ಏರಿದ್ದಾನೆ ಜೀಸಸ್

ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಶೋಷಿತರ ಕಂಬನಿಯನ್ನೊರೆಸುವ ಆಶಾಕಿರಣ ಯೇಸು ಎಂಬ ಆಶಯವನ್ನು ವ್ಯಕ್ತಪಡಿಸುವ ಸಾಲು ಇದಾಗಿದೆ .
ವಿವರಣೆ : ಅಂದುಕ್ರೋಧ ತಿಳಿಗೇಡಿತನಕ್ಕೆ ಜೀಸಸ್ ಶಿಲುಬೆ ಏರಿದನು . ಆದರೆ ಇಂದಿನ ಕಾಲಕ್ಕೆ ಮತಧರ್ಮಗಳ ಕಿತ್ತಾಟಗಳನ್ನು ನೋಡುತ್ತಾ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಣಿನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂದೀಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಮರುಗುತ್ತಾ ನಿತ್ಯವೂ ಶಿಲುಬೆ ಏರಿದ್ದಾನೆ . ಇಂದಿನ ಸಮಾಜ ಸಾಗುತ್ತಿರುವ ಪರಿಯನ್ನು ವಿವರಿಸುತ್ತಾ , ಶೋಷಿತರ ಕಂಬನಿಗಳನ್ನು ಒರೆಸುವ ಆಶಾಕಿರಣ ಯೇಸುವಾಗುತ್ತಾನೆ ಎಂಬ ಆಶಯ ಇಲ್ಲಿದೆ .

ಇತರೆ ವಿಷಯಗಳನ್ನು ನೋಡಿ

Leave a Reply

Your email address will not be published. Required fields are marked *