ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ 10 Class | Hasuru Kannada Poem Notes

Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ

10ನೇ ತರಗತಿ ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ, 10ನೇ ತರಗತಿ ಹಸುರು ನೋಟ್ಸ್ ಪ್ರಶ್ನೆ ಉತ್ತರ ಪದ್ಯ, kannada deevige 10th Hasuru Kannada Poem Notes Question Answer pdf text book summary in kannada, hasuru kannada poem question answer

Hasuru Kannada Poem Notes Questions and Answers

ಈ ಲೇಖನದಲ್ಲಿ 10ನೇ ತರಗತಿ ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

ಲೇಖಕರ ಪರಿಚಯ

Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
ಕವಿ : ಕುವೆಂಪು
  • ಪೂರ್ಣ ಹೆಸರು : ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ :
  • ಕಾಲ :29.12.1904 – 1994
  • ಸ್ಥಳ:ಶಿವಮೊಗ್ಗ ಜಿಲ್ಲೆ , ತೀರ್ಥಹಳ್ಳಿ ತಾಲೂಕು ,
  • ಕೃತಿಗಳು : ಕೊಳಲು , ಪಾಂಚಜನ್ಯ , ಪ್ರೇಮಕಾಶ್ಮೀರ , ಪಕ್ಷಿಕಾಶಿ , ನನ್ನ ದೇವರ ಮತ್ತು ಇತರೆ ಕಥೆಗಳು , ಕಾನೂರು ಹೆಗ್ಗಡತಿ , ಮಲೆಗಳಲ್ಲಿ ಮದುಮಗಳು ತಪೋನಂದನ ರಸೋವೈಸಃ , ಅಮಲನ ಕಥೆ , ಮೋಡಣ್ಣನ ತಮ್ಮ ಬೊಮ್ಮನಹಳ್ಳಿಯ ಕಿಂದರಜೋಗಿ , ಜಲಗಾರ , ಯಮನಸೋಲು , ಬೆರ ಕೊರಳ್ , ನೆನಪಿನ ದೋಣಿಯಲ್ಲಿ ,
  • ಆಕರಗ್ರಂಥ :

ಪಕ್ಷಿಕಾಶಿ
ಪ್ರಶಸ್ತಿ :

ಕೇಂದ್ರ ಸಾಹಿತ್ಯ ಅಕಾಡೆಮಿ , ಭಾರತೀಯ ಜ್ಞಾನಪೀಠ ಪ್ರಶಸ್ತಿ , ಪಂಪ ಪ್ರಶಸ್ತಿ , ಪದ್ಮವಿಭೂಷಣ , ಗೌರವ ಡಾಕ್ಟರೇಟ್ , ರಾಷ್ಟ್ರಕವಿ ಪ್ರಶಸ್ತಿಗಳು

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ? Hasuru Kannada Poem Notes Ondu Vakya

ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ ?

ಆಶ್ವಯುಜದ ಗದ್ದೆಯ ಬಣ್ಣವು ಗಿಳಿಯ ಹಸುರಿನಂತಿದೆ .

ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?

ಕವಿಯು ನೋಡಿದ ಅಡಕೆಯ ತೋಟವು ಕಾಡಿನ ( ಬನದ ) ಅಂಚಿನಲ್ಲಿದೆ .

ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?

ಹಸುರು ‘ ಎಂಬುದು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ

ಹಸುರು ಪದ್ಯದ ಪ್ರಶ್ನೆ ಉತ್ತರ

ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?

ಕವಿಗೆ ಹುಲ್ಲಿನ ಹಾಸು ಹೊಸ ಹಸುರಿನ ಮಕಮಲ್ಲಿನ ಜಮಖಾನದಂತೆ ಕಂಡಿದೆ .

Hasuru Kannada Poem Notes 10th Standard

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ . Hasuru Kannada Poem Notes 3-4 Vakyadalli Uttarisi

Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ?

ನವರಾತ್ರಿಯಲ್ಲಿ ಆಶ್ವಯುಜ ಮಾಸದಲ್ಲಿ ಕವಿಗೆ ಸಮುದ್ರ , ಆಗಸ , ಮುಗಿಲು ಗದ್ದೆ , ಬಯಲು , ಬೆಟ್ಟ , ಕಣಿವೆ , ಸಂಜೆ , ಬಿಸಿಲು ಎಲ್ಲವೂ ಹಸುರಾಗಿ ಕಾಣಿಸುತ್ತಿದೆ .

ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?

ಕವಿ ಕುವೆಂಪು ಅವರಿಗೆ ಸರ್ವವೂ ಹಸಿರಂತೆ ಕಂಗೊಳಿಸುತ್ತದೆ ಕವಿಯ ಆತ್ಮವು ಹಸುರುಗಟ್ಟಿದೆ ಎಂದು ಹೇಳುವುದರ ಮೂಲಕ ಹಸುರು ಕವಿಯ ಸಕಲೇಂದ್ರಿಯಗಳನ್ನು ವ್ಯಾಪಿಸದೆ ಎಂದು ವರ್ಣಿಸಲಾಗಿದೆ .

ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು ?

ಭೂಮಿಯೆಲ್ಲ ಹೊಸ ಹಸುರಿನ ಮಕಮಲ್ಲಿನಂಥ ಜಮಖಾನದಂತೆ ಕವಿಗೆ ಭಾಸವಾಗುತ್ತಿದೆ . ಹೂವಿನ ಕಂಪು , ಗಾಳಿಯ ತಂಪು , ಹಕ್ಕಿಯ ಇಂಪು ಎಲ್ಲವು ಹಸುರುಮಯ , ಹಸಿರು ಇಳೆಯ ಉಸಿರು ಎಂಬ ಭಾವನೆ ಬಂದಿದ್ದರಿಂದ ಕವಿಯ ಆತ್ಮ ಹಸುರುಗಟ್ಟಲು ಕಾರಣವಾಗಿದೆ .

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . Hasuru Kannada Poem Notes yentu Hatthu Vakyagalu

Hasuru Kannada Poem Notes Best Notes Kannada

‘ ಹಸುರು ‘ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ .

ನವರಾತ್ರಿಯಲ್ಲಿ ಹೊಸದಾಗಿ ಕಾಣುವ ಭೂಮಿಯ ಮೇಲಿನ ಸಮುದ್ರವು ಕವಿ ಕುವೆಂಪು ಅವರಿಗೆ ಹಸುರಾಗಿ ಕಾಣಿಸುತ್ತಿದೆ . ಆಗಸ , ಮುಗಿಲು , ಗದ್ದೆ , ಬಯಲು ಬೆಟ್ಟ , ಕಣಿವೆ , ಸಂಜೆ , ಬಿಸಿಲು , ಎಲ್ಲವೂ ಹಸುರುಮಯವಾಗಿದೆ . ಆಶ್ವಯುಜ ಮಾಸದಲ್ಲಿ ಗದ್ದೆಗಳು ಗಿಳಿಯ ಹಸುರಿನಂತೆ ಕಂಗೊಳಿಸುತ್ತವೆ . ಭೂಮಿಯ ಮೇಲೆ ಹುಲ್ಲಿನ ಹಾಸು ಮಕಮಲ್ಲಿನ ಜಮಖಾನದಂತೆ ಕಂಗೊಳಿಸುತ್ತಿದೆ .

ಹೊಸ ಹೂವಿನ ಇಂಪು , ಬೀಸುವ ಗಾಳಿಯ ತಂಪು , ಹಕ್ಕಿಯ ಕೊರಳಿನ ಇಂದು ಎಲ್ಲವೂ ಹಸುರಾದ ಅನುಭವ ನೀಡುತ್ತಿದೆ ಕಡಲಿನ ಎಲ್ಲ ಕಡೆಯೂ ಹಸುರು ಕಂಗೊಳಿಸುತ್ತಿದೆ . ಕವಿಯ ಆತ್ಮ , ದೇಹದಲ್ಲಿರುವ ರಕ್ತವೂ ಹಸುರಾಗಿದೆಯೆಂಬ ಭಾವನೆ ಕವಿಗಿದೆ ಒಟ್ಟಿನಲ್ಲಿ ಕವಿಗೆ ಧರೆಯಲ್ಲಿ ಹಸುರನ್ನು ಹೊರತು ಪಡಿಸಿ ಬೇರೆ ಯಾವ ಬಣ್ಣಗಳೂ ಕಾಣಿಸುತ್ತಿಲ್ಲ . ಅವರ ನರನಾಡಿಗಳಲ್ಲಿ ಹಸುರು , ಹಸುರಗಟ್ಟಿದೆ .

ಪ್ರಕೃತಿಯ ‘ ಹಸುರು ‘ ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ .

ಪ್ರಕೃತಿಯು ಪಂಚಭೂತಗಳಿಂದ ಕೂಡಿದ್ದಾಗಿದೆ . ಆಕಾಶ , ಭೂಮಿ , ಗಾಳಿ , ನೀರು , ಆಗ್ನಿ , ಕವಿ ಇವೆಲ್ಲವುಗಳಲ್ಲೂ ಹಸುರನ್ನು ಕಾಣಲು ಬಯಸುತ್ತಾರೆ . ಕಾರಣ ಹಸುರು ನಮ್ಮ ಭೂಮಿಯ ಉಸಿರು , ಗಿಡ , ಮರ , ಬಳ್ಳಿ , ಕಾಡು , ತೋಟ ಎಲ್ಲವೂ ಹಸುರುಮಯ . ಮಾನವ ಇಂದು ತನ್ನ ಸ್ವಾರ್ಥಕ್ಕಾಗಿ ಹಸುರನ್ನು ಹೆಸರಿಲ್ಲದಂತೆ ಮಾಡುತ್ತಿದ್ದಾನೆ . ನಮ್ಮ ಮುಂದಿನ ಪೀಳಿಗೆಯ ಜನ ಮರ ಗಿಡಗಳನ್ನು ಮೂಸಿಯಂನಲ್ಲಿ ನೋಡಬೇಕಾಗಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ . ಮನೆಗೊಂದು ಮಗು ಮನೆಗೊಂದು ಮರ ಎಂಬ ಘೋಷಣೆಗಳು ಇಂದು ವ್ಯರ್ಥ ಎಂಬ ಭಾವನೆ ಮೂಡುತ್ತಿದೆ . ಹಸುರು ಇಲ್ಲದಿದ್ದರೆ ಭೂಮಿಯ ಮೇಲಿನ ಯಾವ ಜೀವಿಯ ಉಸಿರೂ ಇರುವುದಿಲ್ಲ . ಆದುದರಿಂದ ಪ್ರಕೃತಿಯು ಸದಾ ಹಸುರಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಾಗರೀಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.

ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ . Hasuru Kannada Poem Notes Sandarbha

“ ಹಸುರಾದುದು ಕವಿಯಾತ್ಮಂ ”

ಈ ವಾಕ್ಯವನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಎಂಬ ಕವನ ಸಂಕಲನದ ಒಂದು ಭಾಗವಾಗಿರುವ ‘ ಹಸುರು ‘ ಎಂಬ ಪದ್ಯದಿಂದ ಆರಿಸಲಾಗಿದೆ . ಈ ಮಾತನ್ನು ಕವಿ ಹೇಳಿದ್ದಾರೆ . ನವರಾತ್ರಿಯ ಹೊಸ ಭೂಮಿಯಂತೆ ಕಂಗೊಳಿಸುವ ಧರೆಯ ಮೇಲಿನ ಸಮುದ್ರದಲ್ಲಿ ಕವಿಯ ಆತ್ಮ ಮಿಂದು ಹಸುರಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ .

ಆತ್ಮ ಎಂಬುದು ಅಮೂರ್ತ , ಕಣ್ಣಿಗೆ ಕಾಣದ ಅಗೋಚರ ಅಂಶವಾಗಿರುವ ಆತ್ಮವೂ ಹಸುರಾದುದು ಎಂಬಲ್ಲಿ ಸರ್ವವೂ ಹಸುರುಮಯ ಎಂಬ ಸ್ವಾರಸ್ಯವನ್ನಿಲ್ಲಿ ಕಾಣಬಹುದಾಗಿದೆ .

“ ಬೇರೆ ಬಣ್ಣವನೆ ಕಾಣೆ ”

ಈ ವಾಕ್ಯವನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಎಂಬ ಕವನ ಸಂಕಲನದ ಒಂದು ಭಾಗವಾಗಿರುವ ‘ ಹಸುರು ‘ ಎಂಬ ಪದ್ಯದಿಂದ ಆರಿಸಲಾಗಿದೆ . ಈ ಮಾತನ್ನು ಕವಿ ಹೇಳಿದ್ದಾರೆ . ಇಡೀ ಭೂಮಿಯು ಹೊಸ ಹಸುರಿನ ಹುಲ್ಲು ಹಾಸಿನ ಮಕಮಲ್ಲಿನ ಜಮಖಾನದಂತೆ ಕಾಣುತ್ತಿದೆ ಎಂದು ವರ್ಣಿಸುವಾಗ ಈ ಮಾತನ್ನು ಹೇಳಲಾಗಿದೆ . ಇದೇ ಇರಬಹುದು . ತಾವು ಆರಾಧಿಸುವ , ಆಶಿಸುವ ವಸ್ತುವನ್ನು ಎಲ್ಲೆಡೆಯೂ ಕಾಣಬೇಕು ಎಂಬ ಸ್ವಾರಸ್ಯವನ್ನು ನಾವಿಲ್ಲಿ ಸಂಪೂರ್ಣ ತನ್ಮಯತೆ ಎಂದರೆ ಕಾಣಬಹುದು .

“ ಹಸುರು ಹಸುರಿಳೆಯುಸಿರೂ

ಈ ವಾಕ್ಯವನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಎಂಬ ಕವನ ಸಂಕಲನದ ಒಂದು ಭಾಗವಾಗಿರುವ ‘ ಹಸುರು ‘ ಎಂಬ ಪದ್ಯದಿಂದ ಆರಿಸಲಾಗಿದೆ . ಈ ಮಾತನ್ನು ಕವಿ ಹೇಳಿದ್ದಾರೆ . ಹೂವಿನ ಕಂಪು , ಗಾಳಿಯ ತಂಪು , ಹಕ್ಕಿಯ ಕೊರಳಿನ ಇಂದು ಎಲ್ಲವೂ ಕವಿಗೆ ಹಸುರುಮಯವಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಹಸುರು ಈ ಇಳೆಯ ಅಂದರೆ ಭೂಮಿಯ ಉಸಿರು ಎಂಬಲ್ಲಿ ತೀವ್ರವಾದ ಇಚ್ಚೆಯಿದೆ , ಹಸುರು ಇಲ್ಲದ ಇಳೆಯನ್ನು ಊಹಿಸಲು ಸಾಧ್ಯವಿಲ್ಲ , ಉಸುರಿಲ್ಲದ ವ್ಯಕ್ತಿಯಂತೆ ವ್ಯರ್ಥವೆಂಬ ಸ್ವಾರಸ್ಯ ಇಲ್ಲಿ ಅಡಗಿದೆ .

Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
Hasuru Kannada Poem Notes Free Question Answer | ಹಸುರು ಪದ್ಯ 10ನೇ ತರಗತಿ ಕನ್ನಡ
“ ಹಸುರತ್ತಲ್ , ಹಸುರಿತ್ತಲ್ , ಹಸುರೆತ್ತಲ್ ”

ಈ ವಾಕ್ಯವನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಎಂಬ ಕವನ ಸಂಕಲನದ ಒಂದು ಭಾಗವಾಗಿರುವ ‘ ಹಸುರು ‘ ಎಂಬ ಪದ್ಯದಿಂದ ಆರಿಸಲಾಗಿದೆ . ಈ ಮಾತನ್ನು ಕವಿ ಹೇಳಿದ್ದಾರೆ . ಹಸುರು ಎಲ್ಲೆಲ್ಲಿಯೂ ಇದೆ , ಆತ್ಮ , ರಕ್ತದಲ್ಲಿ ಬೆರೆತಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ಕವಿಯ ಆತ್ಮ ಹಸುರುಗಟ್ಟಿದೆ ಎಂಬ ಪದ ಪ್ರಯೋಗವು ಕವಿಯ ಹಾಗೂ ಹಸುರಿನ ನಡುವಿನ ಗಾಢವಾದ ಸಂಬಂಧವನ್ನು ಸೂಚಿಸುತ್ತದೆ . ಕವಿಯ ಭಾವನೆ ಹಸುರಿನ ಬಗ್ಗೆ ಎಂಥ ತೀವ್ರತೆಯನ್ನು ಪಡೆದುಕೊಂಡಿದೆ ಎಂಬ ಸ್ವಾರಸ್ಯವನ್ನಿಲ್ಲಿ ಕಾಣಬಹುದಾಗಿದೆ .

ಗಾದೆಗಳು

Hasuru Kannada Poem Notes Gademathugalu

ಮನಸ್ಸಿದ್ದರೆ ಮಾರ್ಗ

ಹಿರಿಯರ ಅನುಭವದ ನುಡಿಮುತ್ತೇ ಗಾದೆ . ಕಿರಿಯದಾದ ಮಾತುಗಳಲ್ಲಿ ಹಿರಿಯದಾದ ಅರ್ಥ ಹೇಳುವುದೇ ಗಾದೆಗಳ ವೈಶಿಷ್ಟ್ಯ , ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ , ಬುದ್ಧಿವಾದ ಹೇಳುವಾಗ , ತಪ್ಪನ್ನು ಎತ್ತಿ ತಿಳಿ ಹೇಳುವಾಗ , ವಿಶೇಷ ಗುಣಗಳ ಮಹತ್ವವನ್ನು ವಿವರಿಸುವಾಗ ಗಾದೆಗಳನ್ನು ಬಳಸುತ್ತೇವೆ . ಗಾದೆಗಳಿಲ್ಲದ ಭಾಷೆ ಇಲ್ಲ , ದೇಶ ಇಲ್ಲ . ಮನಸ್ಸಿದ್ದರೆ ಮಾರ್ಗ ಎನ್ನುವುದು ಒಂದು ಜನಪ್ರಿಯ ಗಾದೆ . ದಿನ ನಿತ್ಯದ ಬದುಕಿನಲ್ಲಿ ಪದೇ ಪದೇ ಬಳಸುತ್ತೇವೆ .

ಯಾವುದೇ ಕಾರ್ಯವನ್ನು ಮಾಡುವಾಗ , ಗುರಿ ಸಾಧಿಸುವಾಗ , ಅಸಾಧ್ಯವಾದದನ್ನು ಸಾಧ್ಯ ಮಾಡಬಹುದು ಎಂದು ನಿರೂಪಿಸಲು ಮನಸ್ಸಿನಿಂದ ಛಲದಿಂದ ಪ್ರಯತಿಸಬೇಕು . ಆಗ ಗುರಿ ತಲುಪಲು ಮಾರ್ಗ ನಿಚ್ಚಳವಾಗಿ ನಮಗೆ ಗೋಚರವಾಗುತ್ತದೆ . ಅಪಾಯದಲ್ಲಿ ಸಿಕ್ಕಿಕೊಂಡಾಗ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಯೋಚಿಸಿದರೆ ಅದರಿಂದ ಹೊರಬರುವ ಮಾರ್ಗ ತಾನೇ ತಾನಾಗಿ ಗೋಚರವಾಗುತ್ತದೆ ಎನ್ನುವುದು ಈ ಗಾದೆಯ ಅರ್ಥ .

ಮಾತೇ ಮುತ್ತು ಮಾತೇ ಮೃತ್ಯು

ಗಾದೆಗಳು ಹಿರಿಯರ ಅನುಭವಾಮೃತವಾಗಿದೆ . ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ ಮಾತೊಂದಿದೆ . ಮಾತೆ ಮುತ್ತು ಮಾತೆ ಮೃತ್ಯು ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲೊಂದಾಗಿದೆ . ನವರತ್ನಗಳಲ್ಲಿ ಮುತ್ತು ಒಂದಾಗಿದೆ . ಅದು ತುಂಬಾ ಬೆಲೆಯುಳ್ಳದ್ದು ತುಂಬಾ ಸುಂದರವಾದದ್ದು ಮನಸ್ಸಿಗೆ ಮುದವನ್ನುಂಟುಮಾಡುವಂಥದ್ದು ನಾವು ಆಡುವ ಒಳ್ಳೆಯ ಮಾತುಗಳನ್ನು ಮುತ್ತಿಗೆ ಹೋಲಿಸಲಾಗುತ್ತದೆ .

ಅದನ್ನೇ ಬಸವಣ್ಣನವರು ನುಡಿದರೆ ಮುತ್ತಿನಹಾರದಂತಿರಬೇಕು ಎಂದಿದ್ದಾರೆ . ಆದರೆ ಕೆಲವು ಮಾತು ಬೇರೆಯವರ ಮನಸ್ಸಿಗೆ ನೋವಾಗುತ್ತದೆ . ಅಂತಹ ಅವಮಾನಿಸುವ ಮಾತು ತರವಲ್ಲ , ಅದು ಮೃತ್ಯುವಿಗೆ ಆಹ್ವಾನ ನೀಡಿದಂತೆ . ಆದ್ದರಿಂದ ಒಳ್ಳೆಯ ಮಾತುಗಳನ್ನಾಡೋಣ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಪ್ರತಿಯೊಂದು ಮಾತು ಅರ್ಥಪೂರ್ಣವಾಗಿರಲಿ .

ಪದಗಳ ಅರ್ಥ Hasuru Kannada Poem Notes Padagala Arthagalu

ಪದಗಳ ಅರ್ಥಗಳು
  • ಆಶ್ವಿಜ-ಚೈತ್ರದಿಂದ ಏಳನೆಯ ಮಾಸ ( ಆಶ್ವಯುಜ )
  • ಇಳೆ -ಭೂಮಿ
  • ಎಲರ್-ಗಾಳಿ
  • ಕೊನೆ-ಗೊನೆ
  • ತಿರ – ಭೂಮಿ
  • ನವಧಾತ್ರಿ- ಹೊಸದಾಗಿ ಕಾಣುವ ಭೂಮಿ
  • ಮಕಮಲ್ಲು -ನಯವಾದ ಬಟ್ಟೆ ( ಹುಲ್ಲಿನ ಮಕಮಲ್ಲು – ಹುಲ್ಲುಹಾಸು )
  • ವನಧಿ-ಸಮುದ್ರ ( ಹಸುರಿನ ಸಮುದ್ರ )
  • ಶ್ಯಾಮಲ -ಕಪ್ಪು , ನೀಲ
  • ಶಾಲೀವನ – ಬತ್ತದ ಗದ್ದೆ
  • ಹೊಸಪಚ್ಚೆ- ಹೊಸ ಹಸುರು , ಎಳೆಯ ಚಿಗುರು.

FAQ

10th ಹಸುರು ಪದ್ಯ ಲೇಖಕರು?

ಕುವೆಂಪು

ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?

ಹಸುರು ‘ ಎಂಬುದು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *