Chalamane Merevem Kannada Question Answer | ಛಲಮನೆ ಮೆರೆವೆಂ ಪ್ರಶ್ನೋತ್ತರಗಳು

ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free

Chalamane Merevem Kannada Notes , 10ನೇ ತರಗತಿ ಛಲಮನೆ ಮೆರೆವೆಂ ಕನ್ನಡ ನೋಟ್ಸ್ , ಛಲಮನೆ ಮೆರೆವೆಂ ಸಾರಾಂಶ pdf , chalamane merevem question answer in kannada

Chalamane Merevem Kannada Notes Question Answer in Kannada

ಈ ಲೇಖನದಲ್ಲಿ 10ನೇ ತರಗತಿ ಛಲಮನೆ ಮೆರೆವೆಂ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

ಕವಿ ಪರಿಚಯ chalamane merevem kannada notes kavi parichay

ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಕವಿ :ರನ್ನ
  • ಕಾಲ ಕ್ರಿ.ಶ. ಸುಮಾರು 949 ( ಹತ್ತನೆಯ ಶತಮಾನ )
  • ಸ್ಥಳ: ಬಾಗಲಕೋಟೆ ಜಿಲ್ಲೆಯ ಮುದುವಳಲು ( ಈಗಿನ ಮುಧೋಳ )
  • ತಂದೆ ;ಜಿನವಲ್ಲಭ
  • ತಾಯಿ ;ಅಬ್ಬಲಬ್ಬೆ
  • ಕೃತಿಗಳು;ಸಾಹಸಭೀಮ ವಿಜಯಂ ( ಗದಾಯುದ್ಧ ) ಅಜಿತ ತೀರ್ಥಂಕರ ಪುರಾಣ ತಿಲಕಂ , ಪರಶುರಾಮ ಚರಿತಂ , ಚಕ್ರೇಶ್ವರಚರಿತಂ ‘ ರನ್ನಕಂದ ‘ ಎಂಬ ನಿಘಂಟು
  • ಬಿರುದು: ಕವಿ ಚಕ್ರವರ್ತಿ
  • ವಿಶೇಷ :ರನ್ನ ಕವಿಯು ರತ್ನತ್ರಯರಲ್ಲಿ ಒಬ್ಬನು , ಇವರು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು .
  • ಆಕರಗ್ರಂಥ : ಸಾಹಸಭೀಮ ವಿಜಯಂ ( ಗದಾಯುದ್ಧ )

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ .

ನಿಮಗೆ ನಮ್ಯಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುವನು ?

ನಿಮಗೆ ನಮ್ಮಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನನು ಭೀಷ್ಮನಿಗೆ ಹೇಳುವನು .

ದಿನಪಸುತ ಎಂದರೆ ಯಾರು ?

ದಿನಪಸುತ ಎಂದರೆ ಕರ್ಣ

ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ

ಅರ್ಜುನ ಹಾಗೂ ಭೀಮರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ .

ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ಯಾರು ?

‘ ದುರ್ಯೋಧನನು ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು .

ಅಂತರಾತ್ಮಜ ಎಂದರೆ ಯಾರು ?

ಯಮನ ಮಗನಾದ ಯುಧಿಷ್ಟಿರ ‘ ( ಧರ್ಮರಾಯ ) ನೇ ಅಂತರಾತ್ಮಜ

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.

ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ ?

ಪಾಂಡವರೊಡನೆ ಸಂಧಿ ಮಾಡಿಕೋ ಎಂದು ಭೀಷ್ಮನು ದುರ್ಯೋಧನನಿಗೆ ಹೇಳಿದನು . ಆದರೆ ದುರ್ಯೋಧನನು ಅದನ್ನು ತಿರಸ್ಕರಿಸಿ , ಕೇವಲ ಭೀಷರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸುತ್ತಾನೆ . ಈ ಭೂಮಿ ನನಗೆ ಹಾಳು ಭೂಮಿ , ತಾನು ಭೂಮಿಗಾಗಿ ಹೋರಾಡುವುದಿಲ್ಲ . ಕೇವಲ ಛಲಕ್ಕಾಗಿ ಪಾಂಡವರಡೊನೆ ಹೋರಾಡುವುದಾಗಿ ದುರ್ಯೋಧನನು ತಿಳಿಸುತ್ತಾನೆ .

ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಗೆ ವಿವರಿಸುತ್ತಾನೆ .

ತನ್ನ ಪ್ರೀತಿಯ ಬಂಟ ಕರ್ಣ ಹಾಗೂ ಪ್ರೇಮದ ಸೋದರ ದುಶ್ಯಾಸನರ ಸಾವಿನಿಂದ ದುರ್ಯೋಧನನು ನೊಂದಿರುತ್ತಾನೆ . ಅದಕ್ಕಾಗಿ ಸಂಧಿ ಮಾಡಿಕೊಳ್ಳದಿರಲು

ತೀರ್ಮಾನಿಸುತ್ತಾನೆ . ಕರ್ಣನನ್ನು ಕೊಲ್ಲಿಸಿದ ಭೂಮಿಯೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲ ಎಂದು ದುರ್ಯೋಧನನು ಭೀಷ್ಮರಿಗೆ ಹೇಳಿದನು .

ಪಾರ್ಥ – ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು ?

ದುರ್ಯೋಧನನ ಬಂಟನಾದ ಕರ್ಣನನ್ನು ಅರ್ಜುನನು ಕೊಂದಿರುತ್ತಾನೆ . ಅವನ ತಮ್ಮನಾದ ದುಶ್ಯಾಸನನನ್ನು ಭೀಮನು ಕೊಂದಿರುತ್ತಾನೆ . ಆದ ಕಾರಣ ದುರ್ಯೋಧನನು ಸಂಧಿಗೆ ಒಪ್ಪುವುದಿಲ್ಲ . ಅರ್ಜುನ ಹಾಗೂ ಭೀಮರನ್ನು ಕೊಲ್ಲುವವರೆಗೆ ತನ್ನ ದುಃಖ ಕಡಿಮೆಯಾಗುವುದಿಲ್ಲ ಎಂಬುದು ದುರ್ಯೋಧನನ ಅಭಿಪ್ರಾಯವಾಗಿತ್ತು

ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .Chalamane Merevem Kannada Notes 10 vakya

ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ .

ಶರಶಯ್ಕೆಯಲ್ಲಿದ್ದ ಭೀಷ್ಮನು ದುರ್ಯೋಧನನಿಗೆ ಈ ರೀತಿ ಬುದ್ಧಿವಾದವನ್ನು ಹೇಳುತ್ತಾನೆ . “ ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ ಒಪ್ಪುವೆಯಾದರೆ ಪಾಂಡವರನ್ನು ಒಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು . ಈಗಲೂ ಅವರು ನಮ್ಮ ಮಾತನ್ನು ಕೇಳುತ್ತಾರೆ . ಅವರು ನಮ್ಮ ಮಾತನ್ನು ಮೀರುವುದಿಲ್ಲ ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ ‘ . ಈ ಮಾತನ್ನು ಕೇಳಿ ದುರ್ಯೋಧನನು ಮುಗುಳುಕ್ಕನು .

ಅವರನ್ನು ಕುರಿತು ಹೀಗೆ ಹೇಳಿದನು “ ತಾನು ನಿಮಗೆ ನಮಸ್ಕಾರ ಮಾಡಿ ಹೋಗಬೇಕೆಂದು ಬಂದಿದ್ದೇನೆ . ನಾನು ಶತ್ರುಗಳೊಡನೆ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ . ಯುದ್ಧದಲ್ಲಿ ನಾನು ಯಾವ ಕಾರ್ಯ ಮಾಡಬೇಕಾಗಿದೆ ಎಂಬುದನ್ನು ತಿಳಿಸಿ , ನಾನು ಭೂಮಿಗಾಗಿ ಹೋರಾಡುತ್ತಿಲ್ಲ . ಕೇವಲ ನನ್ನ ಛಲಕ್ಕಾಗಿ ಹೋರಾಡುತ್ತಿರುವೆನು . ನನ್ನ ಮಕ್ಕಳು ಹಾಗೂ ಸೋದರರನ್ನು ಕೊಂದಿರುವ ಪಾಂಡವರನ್ನು ಸೋಲಿಸಲು ಹೋರಾಡುವನು ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಸಂಧಿಗೆ ಒಪ್ಪಲಾರೆನು ” ಕರ್ಣ ಹಾಗೂ ದುಶ್ಯಾಸನನನ್ನು ಕೊಂದಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವುದಾಗಿ ಹೇಳುತ್ತಾನೆ .

ದುರ್ಯೋಧನನ ಛಲದ ಗುಣ ಅವನು ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ .

ಭೀಷ್ಮನು ಶರಶಯ್ಕೆಯಲ್ಲಿದ್ದರೂ ಪಾಂಡವರು ಹಾಗೂ ಕೌರವರ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ . ತನ್ನ ಭೇಟಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸೂಚಿಸುತ್ತಾನೆ . ಆದರೆ ದುರ್ಯೋಧನನು ಅವರ ಮಾತಿಗೆ ಸಮತವಿಲ್ಲವೆಂದು ತಿಳಿಸುತ್ತಾನೆ . ದುರ್ಯೋಧನನು ತಾನು ಭೂಮಿಗಾಗಿ ಹೋರಾಡುವುದರ ಬದಲು ಛಲಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸುತ್ತಾನೆ . ತನ್ನ ಬಂಟ ಕರ್ಣ , ಸೋದರ ದುಶ್ಯಾಸನನ ಹತ್ಯೆ ಮಾಡಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವ ಛಲವನ್ನು ಹೊಂದಿರುತ್ತಾನೆ . ತನ್ನ ಮಕ್ಕಳು ಹಾಗೂ ಸಹೋದರರನ್ನು ಕೊಂದ ಪಾಂಡವರೊಡನೆ
ಒಪ್ಪಂದ ಮಾಡಿಕೊಳ್ಳುವ ಭೀಷ್ಮರ ಮಾತನ್ನು ಒಪ್ಪಿಕೊಳ್ಳುವುದಿಲ್ಲ . ಕೇವಲ ಪಾಂಡವರೊಡನೆ ಹೋರಾಡುವ ಛಲವನ್ನೇ ಮರೆಯುವನು ಎಂದು ದುರ್ಯೋಧನನು ಹೇಳುತ್ತಾನೆ .

ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಈ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ Chalamane Merevem Kannada Notes Sandarbha Sahitha Visvarisi
“ ನಲಕಿಟೆವನೆಂದು ಬಗೆದಿರ ಚಲಕಿಯವಂ ”

ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ , ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳಿದನು . ಶರಸಯ್ಕೆಯಲ್ಲಿ ಮಲಗಿದ್ದು ಭೀಷ್ಮರ ಆಶೀರ್ವಾದ ಪಡೆದು ಹೋಗಲು ಬಂದಿದ್ದಾಗ ಭೀಷ್ಮನು ಪಾಂಡವರೊಡನೆ ಸಂಧಿ ಮಾಡಿಕೋ ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ದುರ್ಯೋಧನನು ಹೇಳುತ್ತಾನೆ .

ತಾನು ಭೂಮಿಗಾಗಿ ಹೋರಾಡುವುದಿಲ್ಲ ಬದಲಾಗಿ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವನು ಎಂದು ಹೇಳುವಲ್ಲಿ ಛಲದಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ವಾರಸ್ಯವು ಈ ಮಾತಿನಲ್ಲಿ ಅಡಗಿದೆ .

“ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ ” ಎಂದು

ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳಿದನು . ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೋ ಹೇಳಿದ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಒಪ್ಪಂದವನ್ನು ಮಾಡಿಕೊಳ್ಳುವುದನ್ನು ಬಿಟ್ಟು ನಾನು ಯುದ್ಧದಲ್ಲಿ ಯಾವ ಕಾರ್ಯ ಮಾಡಬೇಕೆಂದು ಕೇಳುವಲ್ಲಿ ಸಂಧಿಯ ಬಗ್ಗೆ ನಿರಾಸತ್ತೆಯನ್ನು ತೋರುವ ಸ್ವಾರಸ್ಯವ ಈ ಮಾತಿನಲ್ಲಿ ಅಡಗಿದೆ .

“ ಪಾಂಡವರೊಳಿದು ಛಲಮನೆ ಮೆರೆವಂ “

ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷರಿಗೆ ಹೇಳುತ್ತಾನೆ .

ತನ್ನ ನೂರು ಮಕ್ಕಳು ಹಾಗೂ ನೂರು ಸೋದರರು ಶತ್ರುಗಳೊಡನೆ ಹೋರಾಡಿ ಸತ್ತಿರುವರು ಎಂದು ಹೇಳುವ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಪಾಂಡವರೊಡನೆ ಕಾದಾಡಿ ತನ್ನ ಛಲವನ್ನು ಮೆರೆಯುತ್ತೇನೆ ಎಂದು ಹೇಳುವಲ್ಲಿ ಛಲಕ್ಕೆ ದುರ್ಯೋಧನನ್ನು ನೀಡುತ್ತಿದ್ದ ಮಹತ್ವದ ಸ್ವಾರಸ್ಯವನ್ನೇ ಈ ಮಾತಿನಲ್ಲಿ ಕಾಣಬಹುದಾಗಿದೆ .

ಮೇಲಾಯ್ತು ಕೌರವರಿಗವನಿತಳಂ , ”

ಈ ವಾಕ್ಯವನ್ನು ನನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳುತ್ತಾನೆ . ಸಂಧಿ ಮಾಡಿಕೋ ಎಂಬ ಭೀಷರ ಮಾತನ್ನು ಒಪ್ಪದೆ ಕಾಳಗದಲ್ಲಿ ಕಾದಾಡುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಯುದ್ಧದ ನಂತರ ಭೂಮಿಯ ಒಡೆತನ ಪಾಂಡವರಿಗೆ ಹೋಗಬೇಕು ಇಲ್ಲವೆ ಕೌರವರಿಗೆ ಉಳಿಯಬೇಕು ಎಂಬಲ್ಲಿ ಯುದ್ಧದ ಫಲಿತಾಂಶ ಏನೇ ಬಂದರು ಸ್ವೀಕರಿಸಲು ಸಿದ್ಧ ಎಂಬ ಸ್ವಾರಸ್ಯವು ಈ ಮಾತಿನಲ್ಲಿ ಅಡಗಿದೆ .

ಭಾಷಾ ಚಟಿವಟಿಕೆ

ಕೊಟ್ಟಿರುವ ಪದ್ಯದ ಸಾಲುಗಳಿಗೆ ಪ್ರಸಾರ ಹಾಕಿ , ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ಬರೆಯಿರಿ
ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free
ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free

ಕೊಟ್ಟಿರುವ ಪದಗಳಿಗೆ ತತ್ಸಮ – ತದ್ಭವಗಳನ್ನು ಬರೆಯಿರಿ

ಕಪ್ಪ – ಕಾರ್ಯ ,
ಅಜ್ಜ – ಆರ್ಯ

ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿ .
ಪಾರ್ಥಭೀಮರು , ಅಂತಕಾತ್ಮಜ , ದಿನಪಸುತ

ಪಾರ್ಥಭೀಮರು = ಪಾರ್ಥನು + ಭೀಮನು = ದ್ವಂದಸಮಾಸ

ಅಂತಕಾತ್ಕಜ ದಿನಪಸುತ = ಯಾರು ಅಂತಕನ ( ಯಮನ ) ಆತ್ಮಜನೋ ( ಮಗನೋ ) ಅವನು ( ಯುಧಿಷ್ಠಿರ ) ಬಹುವೀಹಿ ಸಮಾಸ = ಯಾರು

ದಿನಪನ ( ಸೂರ್ಯನ ) ಸುತನೋ ( ಮಗನೋ ) ಅವನು ( ಕರ್ಣ ) ಬಹುವೀಹಿ ಸಮಾಸ

ಪದಗಳ ಅರ್ಥ .

ಪದಗಳ ಅರ್ಥಗಳು

ವಚನ : ಇಂಬುಕೆಯ್ದೆ – ಒಪ್ಪಿಕೊಳ್ಳಲು , ಸಮ್ಮತಿ ಸೂಚಿಸಲು , ಒಡಂಬಡಿಸಿ ಒಪ್ಪಿಸಿ , ಸಂಧಿ – ಒಪ್ಪಂದ ; ಪೂರ್ವಕ್ರಮದೊಳ್ – ಹಿಂದಿನಂತೆಯೇ ಮೊದಲಿನಂತೆಯೇ ; ನಡೆವಂತೆ – ನಡೆದುಕೊಳ್ಳುವ ಹಾಗೆ ; ಮಾಲ್ಪೆಂ- ಮಾಡುವೆನು ; ಎಮ್ಮೆಂದುದ – ನಾನು ಹೇಳಿದ್ದನ್ನು ನೆಗೆಲ್ವೇಟೈಂ – ನಡೆದುಕೊಳ್ಳಬೇಕು ; ಸುಯೋಧನ – ದುದ್ಯೋಧನ .

  1. ಪೊಡೆಮಟ್ಟು – ನಮಸ್ಕರಿಸಿ ; ಅಹಿತರೊಳ್ – ಶತ್ರುಗಳಲ್ಲಿ , ಪಾಂಡವರಲ್ಲಿ ; ಒಪ್ಪಂದವನ್ನು ಏರ್ಪಡಿಸು ; ಸಮರದೊಳ್ ಭೂಮಿಯಲ್ಲಿ ; ಪೇಟೆ ಹೇಳಿ ; ಕಜ್ಜಂ ಸಮಗೊಳಿಸು ಯುದ್ಧ ಕಾರ್ಯ , ಕೆಲಸ . ಹೋರಾಡುವ ; ಪಾಂಡುಸುತರೋಳ್
  2. ಇಟವೆ ಪಾಲ – – ಪಾಂಡುವಿನ ಮಕ್ಕಳಲ್ಲಿ ; – ಪಾಳು ಬಿದ್ದಿರುವ ನೆಲ ; ದಿನಪಸಂತ – ಕರ್ಣ ; ಪುದುವಾಳಪೆನೆ ? – ಬಾಳುವುದುಂಟೆ ?
  3. ಅಣುಗಾಳ್ – ಪ್ರಿಯ ಗೆಳೆಯ , ( ಕರ್ಣ ) ಅಣುಗದಮ್ಮ – ಪ್ರಿಯತಮ್ಮ , ( ದುಶ್ಯಾಸನ ) ; ಪಾರ್ಥ ಅರ್ಜುನ ; ಅಸು ಪ್ರಾಣ : ಇರ್ಬರು ಕೊಂದು ; ಬಜೆಕ್ಕೆ – ಆಮೇಲೆ ; ಅಂತಕಾತ್ಮಜ – ಅಂತಕ – ಆತ್ಮಜ – ಯಮನ ಇಬ್ಬರು ; ಇಕ್ಕಿ – ಮಗ ( ಯುಧಿಷ್ಠಿರ ) ; ಅಲ್ ದುಃಖ ,
  4. ಪುಟ್ಟದ – ಹುಟ್ಟಿದ ; ಓಡವುಟ್ಟದ – ಜೊತೆಯಲ್ಲಿ ಹುಟ್ಟಿದ ; ನೂರ್ವರು ನೂರು ಜನರು ; ಇದಿರ್ಚಿ – ಹೋರಾಡಿ : ಸತರ್ ಪಟ್ಟರೆ – ಸತ್ತರೆ ಮತ್ತೆ ಹುಟ್ಟುವುದಿಲ್ಲವೆ ? ಛಲಮನೆ ಮೆರೆವೆಂ – ಚಲವನ್ನೇ ಮರೆಯುವೆ , ಸಾಧಿಸುವ
  5. ಕಾದು – ಹೋರಾಡು : ಸಮರ – ಯುದ್ಧ ; ಕೌರವಂಗ – ದುರ್ಯೋಧನನಿಗೆ : ಅವನಿ – ಭೂಮಿ

Chalamane Merevem Kannada Notes kannada 10th

FAQ

ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ?

ಅರ್ಜುನ ಹಾಗೂ ಭೀಮರನ್ನು

ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳಿದನು ?

ನಿಮಗೆ ನಮ್ಮಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನನು ಭೀಷ್ಮನಿಗೆ ಹೇಳುವನು .

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *