ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary

Jaliya Maradante Kannada Poem Summary, ದ್ವಿತೀಯ ಪಿ.ಯು.ಸಿ ಜಾಲಿಯ ಮರದಂತೆ ಕನ್ನಡ ಪದ್ಯದ ಸಾರಾಂಶ, 2nd PUC Jaliya Maradante Kannada Summary Saramsha Pdf Download, ಜಾಲಿಯ ಮರದಂತೆ ಸಾರಾಂಶ , 2nd PUC Jaliya Maradante Kannada Summary ,

Jaliya Maradante Kannada Poem Summary

ಪದ್ಯದ ಸಾರಾಂಶ ಮತ್ತು ವಿಮರ್ಶೆ:
ಪುರಂದರದಾಸರ ಸಮಾಜ ವಿಮರ್ಶೆಯ ರಚನೆಗಳಲ್ಲಿ ತುಂಬಾ ಪ್ರಸಿದ್ಧವಾದ ಕೀರ್ತನೆಯಿದು.
೧) ಜಾಲಿಯ ಮರದಂತೆ ಧರೆಯೊಳು ದುರ್ಜನರು|| ಪ ||

ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ || ೨ ||


ಪುರಂದರದಾಸರು ಕೆಟ್ಟವರನ್ನು – ದುರ್ಜನರನ್ನು ‘ಜಾಲಿಯ ಮರದಂತೆ’ ಎಂದು ಟೀಕೆ ಮಾಡಿದ್ದಾರೆ. ಜಾಲಿಯ ಮರವು ಬುಡದಿಂದ ತುದಿಯವರೆಗೂ ಮುಳ್ಳನ್ನು ತುಂಬಿಕೊಂಡಿರುತ್ತದೆ. ಇದೇ ರೀತಿ ದುರ್ಜನರೂ ಕೂಡ ಅಡಿಯಿಂದ – ಮುಡಿಯವರೆಗೂ ಕೆಟ್ಟ ವಿಚಾರಗಳನ್ನೇ ತುಂಬಿಕೊ ಹೇಗೆ ಎಲ್ಲದಕ್ಕೂ ನಿರುಪಯುಕ್ತವೋ ಹಾಗೆ ರುತ್ತಾರೆ. ಜಾಲಿಮರ ರ್ಜನರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಜಾಲಿಮ ಮತ್ತು ದುರ್ಜನರು ಧರೆಯೊಳಿರುವುದು ವ್ಯರ್ಥ ಎಂಬುದು ಪುರಂದರದಾಸರ ಅಭಿಪ್ರಾಯವಾಗಿದೆ.

ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary


೨) ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ

ಹಸಿದು ಬಂದವರಿಗೆ ಗೆ ಹಣ್ಣು ಇಲ್ಲ

ಕುಸುಮ ವಾಸ ಕೂಡಲು ಸ್ಥಳವಿಲ್ಲ

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ


ಕೀರ್ತನೆಯ ಈ ಭಾಗದಲ್ಲಿ ಕವಿಯು ಜಾಲಿಯ ಮರದ ಸ್ವರೂಪವನ್ನು ವಿವರಿಸಿ ಅದರ ನಿರರ್ಥಕತೆಯನ್ನು ನಿರೂಪಿಸಿದ್ದಾರೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಜಾಲಿಯ ಮರ ನೆರಳನ್ನು ಒದಗಿಸುವುದಿಲ್ಲ. ಹಸಿವು ಎಂದು ಬಂದವರಿಗೆ ಜಾಲಿಯ ಮರ ಹಣ್ಣನ್ನು ನೀಡಿ ಸಲಹುವುದಿಲ್ಲ. ಅದು ಹೂಬಿಟ್ಟು ಸುವಾಸನೆಯನ್ನು ಪಸರಿಸಿ ತನ್ನ ಸುತ್ತಲ ವಾತಾವರಣವನ್ನು ಆಹ್ಲಾದಗೊಳಿಸುವುದೂ ಇಲ್ಲ. ಜಾಲಿಯ ಮರದ ಕೆಳಗೆ ನೆರಳು ಸ್ವಲ್ಪವಾದರೂ ಸಿಗದೆ ಯಾರೂ ಕುಳಿತುಕೊಳ್ಳಲೂ ಆಗದು. ಇನ್ನು ಜಾಲಿಯ ಮರದ ರಸವೋ ವಿಷದಂತೆ ಕಹಿಯಾಗಿದ್ದು ಆಸ್ವಾದಿಸಲು ಸಾಧ್ಯವಿಲ್ಲ. ಹೀಗೆ ಜಾಲಿಯ ಮರವು ಈ ಮೇಲೆ ವಿವರಿಸಿರುವ ಯಾವ ಅರ್ಥದಲ್ಲಿಯೂ ಉಪಯೋಗಕ್ಕೆ ಬಾರದೆ, ಭೂಮಿಯ ಮೇಲೆ ನಿರುಪಯುಕ್ತವಾಗಿ ಎಲ್ಲೆಂದರಲ್ಲಿ ಬೆಳೆದಿರುತ್ತದೆಂದು ಪುರಂದರದಾಸರು ವಿವರಿಸಿದ್ದಾರೆ.

ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary
ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary


೩) ಊರಹಂದಿಗೆ ಷಡ್ರಸಾನ್ನವನಿಕ್ಕಲು

ನಾರುವ ದುರ್ಗಂಧ ಬಿಡಬಲ್ಲುದೆ

ಘೋರಪಾಪಿಗೆ ತತ್ವಜ್ಞಾನವ ಪೇಳಲು

ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ


ಕೆಟ್ಟ ಗುಣಗಳನ್ನು ಹೊಂದಿರುವ ಸಮಾಜ ಕಂಟಕರನ್ನು ಏನು ಮಾಡಿದರೂ ಬದಲಾಯಿಸಲು ನಿಮ್ಮ ಅಲ್ಲವೆಂಬು ದನ್ನು ಕವಿ ಈ ಭಾಗದಲ್ಲಿ ವಿವರಿಸಿದ್ದಾರೆ. ಊರ ಹಂದಿಯು ಸದಾ ಕೆಸರು – ಗಲೀಜುಗಳಲ್ಲಿ ವಾಸಿಸುತ್ತಿದ್ದು ದುರ್ನಾತ ಬೀರುತ್ತಿರುತ್ತದೆ. ಅದಕ್ಕೆ ಷಡ್ರಸಾನ್ನವನ್ನಿಕ್ಕಿದ ಮಾತ್ರಕ್ಕೆ ಅದರ ಮೈಯಿಂದ ಹೊರಸೂಸುವ ದುರ್ಗಂಧ ಕಡಿಮೆಯಾಗುವುದಿಲ್ಲ. ಇದೇ ರೀತಿಯಲ್ಲಿ ಘೋರಪಾಪಿಯಾದವರಿಗೆ ತತ್ವಜ್ಞಾನವನ್ನು ಹೇಳಿದರೆ ಆತ ತಾನು ಮಾಡುತ್ತಿರುವ ಕ್ರೂರವಾದ ಕೆಲಸವನ್ನು ಬಿಟ್ಟು ಒಳ್ಳೆಯವನಾಗಿ ಬಿಡುವುದಿಲ್ಲ. ಮೂಲಗುಣಗಳನ್ನು ಉಪದೇಶದ ಮಾತುಗಳಿಂದ ಬದಲಾಯಿಸುವುದು ತುಂಬಾ ಕಷ್ಟ ಮತ್ತು ಅದರಿಂದ ಉಪಯೋಗವಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ.

ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary
ಜಾಲಿಯ ಮರದಂತೆ ಸಾರಾಂಶ | Jaliya Maradante Kannada Poem Summary

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ವಿಭಕ್ತಿ ಪ್ರತ್ಯಯಗಳು ಕನ್ನಡ

ಕನ್ನಡ ಕಾಗುಣಿತ

ಕನ್ನಡ ಸಮಾಸಗಳು

ಕನ್ನಡ ಪತ್ರ ಲೇಖನಗಳು

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *