ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem

jaliya maradante kannada poem notes, ಜಾಲಿಯ ಮರದಂತೆ ಕನ್ನಡ ನೋಟ್ಸ್‌, Chapter 5 Jaliya Maradante Questions and Answers Pdf, Notes, Summary, 2nd PUC Kannada Textbook Answers

Jaliya Maradante Kannada Poem

ಜಾಲಿಯ ಮರದಂತೆ ಕನ್ನಡ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ವಿದ್ಯಾರ್ಥಿಗಳು ಪಡೆಯಬಹುದು ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳಿಗಾಗಿ ಉಚಿತವಾಗಿದೆ.

ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)


ಪ್ರಶ್ನೆ 1.
ಜಾಲಿಯ ಮರದಂತಿರುವವರು ಯಾರು?

ಉತ್ತರ: ದುರ್ಜನರು ಜಾಲಿಯ ಮರದಂತೆ ಇರುವರು.


ಪ್ರಶ್ನೆ 2.ಜಾಲಿಯ ಮರ ಯಾರಿಗೆ ನೆರಳು ಕೊಡುವು


ಉತ್ತರ:ಜಾಲಿಯ ಮರವು ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಕೊಡುವುದಿಲ್ಲ.


ಪ್ರಶ್ನೆ 3.ಜಾಲಿಯ ರಸಾಸ್ವಾದ ಹೇಗಿರುತ್ತದೆ?


ಉತ್ತರ:ಜಾಲಿಯ ರಸಸ್ಸಾದವು ವಿಷದಂತೆ ಕಹಿಯಾಗಿರುತ್ತದೆ.


ಪ್ರಶ್ನೆ 4.ದುರ್ಗಂಧ ಬಿಡದಿರುವುದು ಯಾವುದು?


ಉತ್ತರ:ಊರ ಹಂದಿಯು ಷಡ್ರಸಾನ್ನವನ್ನಿಕ್ಕಿದರೂ ದುರ್ಗಂಧ ಬೀರುವುದು ಬಿಡುವುದಿಲ್ಲ.

ಪ್ರಶ್ನೆ 5.ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ?

ಉತ್ತರ:ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ.


ಪ್ರಶ್ನೆ 6.ಜಾಲಿಯ ಮುಳ್ಳು ಹೇಗೆ ಆವರಿಸುತ್ತದೆ?

ಉತ್ತರ:ಜಾಲಿಯ ಮುಳ್ಳು ಬುಡದಿಂದ ತುದಿಯವರೆಗೂ ಆವರಿಸಿರುತ್ತದೆ.


ಪ್ರಶ್ನೆ 7.ತತ್ವಜ್ಞಾನವನ್ನು ಕೇಳದವರು ಯಾರು?


ಉತ್ತರ:ದುರ್ಜನರು ತತ್ತ್ವಜ್ಞಾನ ಉಪದೇಶ ಮಾಡಿದರೆ ಕೇಳುವುದಿಲ್ಲ.

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem

ಹೆಚ್ಚುವರಿ ಪ್ರಶ್ನೆಗಳು: (ಪ್ರಶ್ನೆಕೋಶದಿಂದ)


ಪ್ರಶ್ನೆ 8.
ಧರೆಯೊಳಗೆ ದುರ್ಜನರು ಯಾವ ರೀತಿ ಇದ್ದಾರೆ?
ಉತ್ತರ:ಧರೆಯೊಳಗೆ ದುರ್ಜನರು ಜಾಲಿಯ ಮರದಂತೆ ಇದ್ದಾರೆ.

ಪ್ರಶ್ನೆ 9 .ಜಾಲಿಯ ಮರ ಯಾರಿಗೆ ಹಣ್ಣು ಕೊಡುವುದಿಲ್ಲ?
ಉತ್ತರ:ಜಾಲಿಯ ಮರವು ಹಸಿದು ಬಂದವರಿಗೆ ಹಣ್ಣು ಕೊಡುವುದಿಲ್ಲ.

ಪ್ರಶ್ನೆ 10.ಜಾಲಿಯಲ್ಲಿ ಯಾವುದರ ವಾಸನೆಯಿಲ್ಲ?
ಉತ್ತರ:ಜಾಲಿಯಲ್ಲಿ ಕುಸುಮದ ವಾಸನೆಯಿರುವುದಿಲ್ಲ.


ಪ್ರಶ್ನೆ 11. ಘೋರಪಾಪಿ ಯಾವುದನ್ನು ಬಿಡುವುದಿಲ್ಲ?

ಉತ್ತರ: ಘೋರಪಾಪಿ ಕ್ರೂರಕರ್ಮವನ್ನು ಬಿಡುದಿಲ್ಲ

ಪ್ರಶ್ನೆ 12.ಪುರಂದರದಾಸರ ಕೀರ್ತನೆಗಳ ಅಂಕಿತ ಯಾವುದು?

ಉತ್ತರ:ಪುರಂದರದಾಸರ ಕೀರ್ತನೆಗಳ ಅಂಕಿತ ‘ಪುರಂದರ ವಿಠಲ’.

ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

1 ) ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ ?

ಜಾಲಿಯ ಮರವು ಆಮೂಲಾಗ್ರ ಅಂದರೆ ಬುಡದಿಂದ ತುದಿಯವರೆಗೂ ಮುಳ್ಳಿನಿಂದ ಕೂಡಿರುತ್ತದೆ . ಇದರಲ್ಲಿ ಎಲೆಗಳಾಗಲಿ , ಸುವಾಸನೆ ಬೀರುವ ಹೂವಾಗಲಿ , ಹಣ್ಣಾಗಲಿ ಬಿಡುವುದಿಲ್ಲ . ಇದರಿಂದಾಗಿ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಸಿಗುವುದಿಲ್ಲ ಕೂರಲು ಕೂಡ ಸ್ಥಳ ದೊರಕದು . ಅದರಿಂದ ಬರುವ ರಸಸ್ವಾದವು ವಿಷದಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

2 ) ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ ? ಏಕೆ ?

ಊರ ಹಂದಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ . ಏಕೆಂದರೆ ಅದಕ್ಕೆ ನಾರುವ ದುರ್ಗಂಧವೇ ಪ್ರಿಯವಾಗಿರುತ್ತದೆ .

3 ) ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ?

ದುರ್ಜನರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ .

4 ) ದುರ್ಜನರ ಕಾರ್ಯ ಯಾವ ಬಗೆಯದು ?

ದುರ್ಜನರು ಇತರರಿಗೆ ಉಪಕಾರ ಮಾಡುವುದಂತು ಇಲ್ಲವೆ ಇಲ್ಲ . ಕೇವಲ ಬಿನ್ನಾಣದ ಮಾತುಗಳನ್ನಾಡುತ್ತಾ , ಮೋಸಗೊಳಿಸುತ್ತಲೆ ಇರುತ್ತಾರೆ . ಇವರ ಕಾರ್ಯವೆಲ್ಲ ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem

ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಜಾಲಿಯ ಮರವು ನಿರಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ ?

ಜಾಲಿಯ ಮರವು ಧರೆಯೊಳಿರುವುದು ನಿರುಪಯುಕ್ತವೆಂಬುದು ಪುರಂದರದಾಸರ ಅಭಿಪ್ರಾಯವಾಗಿದೆ. ಮರವೊಂದು ಭೂಮಿಯ ಮೇಲೆ ಹುಟ್ಟಿ ಬೆಳೆದರೆ ಇತರರಿಗೆ ನೆರಳನ್ನು ಹಣ್ಣನ್ನು, ಹೂವಿನ ಸುವಾಸನೆಯನ್ನು ನೀಡಿ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಆದರೆ ಜಾಲಿಯ ಮರದಿಂದ ಈ ಬಗೆಯ ಉಪಯೋಗವಿಲ್ಲ. ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರುವ ಜಾಲಿಮರವು ಬಿಸಿಲಲ್ಲಿ ಬಳಲಿ ಬಂದವರಿಗೆ ಸ್ವಲ್ಪವೂ ನೆರಳನ್ನು ಒದಗಿಸುವುದಿಲ್ಲ. ಹಸಿವೆಂದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಜಾಲಿಯ ಮರದ ಹೂವು ಸುವಾಸನೆಯನ್ನು ಪಸರಿಸುವುದಿಲ್ಲ. ಅದರ ರಸವೂ ಕೂಡ ಕುಡಿಯಲು ವಿಷದಂತೆ ಕಹಿಯಾಗಿರುತ್ತದೆ. ಆದ್ದರಿಂದ ಜಾಲಿಯ ಮರವು ಯಾವುದೇ ಬಗೆಯ ಉಪಯೋಗಕ್ಕೆ ಬಾರದೆ ನಿರರ್ಥಕತೆಯನ ಹೊಂದಿದೆ ಎಂಬುದು ಪುರಂದರದಾಸರ ಅಭಿಪ್ರಾಯವಾಗಿ

ಜಾಲಿಯ ಮರದಂತೆ ಸಾರಾಂಶ


2. ಜಾಲಿಮರ ಮತ್ತು ದುಜ ೯ನರನ್ನು ಸಮೀಕರಿಸಿರುವುದರ ಔಚಿತ್ಯವನ್ನು ಚರ್ಚಿಸಿ,

ಉತ್ತರ: “ಜಾಲಿಯ ಮರದಂತೆ ಧರೆಯೊಳು ದುರ್ಜನರು’ ಎಂದು ಪುರಂದರದಾಸರು ದುರ್ಜನರನ್ನು ಜಾಲಿಯ ಮರಕ್ಕೆ ಹೋಲಿಸಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಏಕೆಂದರೆ ಜಾಲಿಯ ಮರದಿಂದಲೂ ದುರ್ಜನರಿಂದಲೂ ಯಾವ ಉಪಯೋಗವೂ ಸಮಾಜಕ್ಕಿಲ್ಲ. ಎರಡೂ ನಿರರ್ಥಕವಾದ ಜೀವನಕ್ಕೆ ಉದಾಹರಣೆಗಳೇ, ಜಾಲಿಯ ಮರ ಮೈತುಂಬ ಚುಚ್ಚುವ ಮುಳ್ಳನ್ನು ಹೊಂದಿರುವಂತೆ ದುರ್ಜನರ ಮನಸ್ಸಿನ ತುಂಬಾ ಕೆಟ್ಟ ವಿಚಾರಗಳೇ ತುಂಬಿರುತ್ತದೆ. ಜಾಲಿಯ ಮರ ನೆರಳನ್ನಾಗಲಿ, ಹಣ್ಣನ್ನಾಗಲಿ, ಹೂವಿನ ಸುವಾಸನೆಯನ್ನಾಗಲೀ ಲೋಕಕ್ಕೆ ಒದಗಿಸುವುದಿಲ್ಲ. ಇದೇ ರೀತಿ ದುರ್ಜನರೂ ಕೂಡ ತಮ್ಮದುಷ್ಟ ಕೆಲಸಗಳಿಂದಾಗಿ ಸಮಾಜಕ್ಕೆ ಅಪಾಯವನ್ನುಂಟು ಮಾಡುತ್ತಿರುವ ಹೊರೆಯಾಗಿದ್ದಾರೆ. ಆದ್ದರಿಂದ ದುರ್ಜನರನ್ನು ಜಾಲಿಯ ಮರದೊಂದಿಗೆ ಸಮೀಕರಿಸಿರುವುದು ಸರಿಯಾದ ಹೋಲಿಕೆಯಾಗಿದೆ ಎನ್ನಬಹುದು.


ಪ್ರಶ್ನೆ 3. ಸಮಾಜಕಂಟಕರ ಬಗೆಗೆ ಪುರಂದರದಾಸರ ಅಬಿಪ್ರಾಯಗಳನ್ನು ಸಂಗ್ರಹಿಸಿ.

ಉತ್ತರ: ಸಮಾಜಕಂಟಕರ ಬಗೆಗೆ ಪುರಂದರದಾಸರು ಅಸಮಾಧಾನಗೊಂಡಿದ್ದಾರೆ. ಎಳ್ಳಷ್ಟೂ ಉಪಯೋಗವಿಲ್ಲದ ದುರ್ಜನರಿಂದ ಸಮಾಜದ ನೆಮ್ಮದಿ ಹಾಳು. ಅವರಿಗೆ ತತ್ತ್ವಜ್ಞಾನವನ್ನು ಬೋಧಿಸಿಯೂ ಉಪಯೋಗವಿಲ್ಲ. ಬರಿ ಬಿನ್ನಾಣದ ಮಾತುಗಳನ್ನಾಡಿ ಮಾತುಗಳನ್ನಾಡಿಕೊಂಡು ಕೆಟ್ಟ ಕೆಲಸಗಳಲ್ಲಿ ನಿರತರಾಗಿರುವ ದುಷ್ಟರನ್ನು ಪುರಂದರದಾಸರು ಜಾಲಿಯ ಮರಕ್ಕೆ ಊರ ಹಂದಿಗೆ, ಕೂಳಿಗೆ ಕಚ್ಚಾಡುವ ಕುನ್ನಿಗೆ ಹೋಲಿಸಿರುವುದನ್ನು ಗಮನಿಸಿದರೆ ಅವರಿಗೆ-ದುರ್ಜನರ ಬಗ್ಗೆ ಇರುವ ಅಭಿಪ್ರಾಯವು ವೇದ್ಯವಾಗುತ್ತದೆ.

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | Jaliya Maradante Kannada Poem

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

೧. “ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ “

ʼಪುರಂದರದಾಸರು ರಚಿಸಿದ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ದುರ್ಜನರನ್ನು ಜಾಲಿಯ ಮರದೊಂದಿಗೆ ಹೋಲಿಸಿರುವ ಕವಿಯು , ಜಾಲಿಯ ಮರದಲ್ಲಿ ಬುಡದಿಂದ – ತುದಿಯವರೆಗೂ ಮುಳ್ಳುಗಳೇ ತುಂಬಿರುತ್ತವೆ . ಇದೇ ರೀತಿ ದುರ್ಜನರಲ್ಲಿಯೂ ಬರಿಯ ಕೆಟ್ಟ ವಿಚಾರ – ದುಷ್ಟಬುದ್ಧಿಗಳೇ ತುಂಬಿರುತ್ತವೆ . ಆದ್ದರಿಂದ ದುರ್ಜನರು ಸಮಾಜದಲ್ಲಿ ಜಾಲಿಯಮರದಂತೆ ನಿರುಪಯುಕ್ತರು , ಅವರು ಒಳ್ಳೆಯವರನ್ನು ಚುಚ್ಚುವ ಮುಳ್ಳುಗಳಿದ್ದಂತೆ ಎಂದು ಕವಿ ಹೇಳಿರುವರು .

೨. “ ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಸುಪ್ರಸಿದ್ಧ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಜಾಲಿಯ ಮರವನ್ನು ಕುರಿತು ಕವಿಯು ಈ ಮೇಲಿನ ಮಾತನ್ನಾಡಿದ್ದಾರೆ . ಜಾಲಿಯ ಮರವು ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರು ತದೆ . ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಅದರಿಂದ ಸಿಗುವುದಿಲ್ಲ . ಅದರ ಹೂವು ಕೂಡ ಸುವಾಸನೆಯನ್ನು ಬೀರುವುದಿಲ್ಲ .ಮರದ ಕೆಳಗೆಲ್ಲಾ ಮುಳ್ಳು ಬಿದ್ದಿರುತ್ತದೆಯಾದ್ದರಿಂದ ಜಾಲಿಯ ಮರದ ಕೆಳಗೆ ಕುಳಿತುಕೊಳ್ಳಲೂ ಸ್ಥಳವಿರುವುದಿಲ್ಲ . ಒಟ್ಟಾರೆ ಜಾಲಿಯ ಮರದಿಂದ ಯಾವ ಉಪಯೋಗವೂ ಇರುವುದಿಲ್ಲವೆಂದು ಕವಿ ವಿವರಿಸಿದ್ದಾರೆ .

೩. “ ನಾರುವ ದುರ್ಗಂಧ ಬಿಡಬಲ್ಲುದೆ “

ʼಪುರಂದರದಾಸರು ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ದುರ್ಜನರಿಗೆ ಮಾನ್ಯತೆ ನೀಡುವುದು ವ್ಯರ್ಥವೆಂಬುದನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಊರಿನ ಹೊಲಸಿನಲ್ಲಿ ಜೀವಿಸುವ ಹಂದಿಯನ್ನು ತಂದು , ಅದಕ್ಕೆ ಷಡ್ರಸಾನ್ನ ಭೋಜನ ಮಾಡಿಸಿದ ಮಾತ್ರಕ್ಕೆ ಅದು ತನ್ನ ಮೈಯಿಂದ ದುರ್ಗಂಧ ಬೀರುವುದನ್ನು ಬಿಡುವುದಿಲ್ಲ . ಇದರಂತೆಯೇ ಸದಾ ದುಷ್ಟ ಕೆಲಸದಲ್ಲಿ ಮುಳುಗಿರುವ ದುರ್ಜನರಿಗೆ ತತ್ರೋಪದೇಶಗಳನ್ನು ಹೇಳಿದರೆ ಅವರು ತಮ್ಮ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ . ಆದ್ದರಿಂದ ಕವಿಯು ಹಂದಿ ಮತ್ತು ದುರ್ಜನರ ಮೂಲಸ್ವಭಾವಗಳನ್ನು ಬದಲಾಯಿಸಲು ಪ್ರಯತ್ನಿಸುವುದು ವ್ಯರ್ಥವಾದ ಕೆಲಸವೆಂದಿದ್ದಾರೆ .

೪. “ ಬಿನ್ನಾಣದ ಮಾತಿಗೆ ಕೊನೆಯಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಜನರ ವರ್ತನೆಯನ್ನು ಈ ಮೇಲಿನ ವಾಕ್ಯದ ಮೂಲಕ ಕವಿಯು ಟೀಕೆ ಮಾಡಿರುವರು . ಸದಾ ದುಷ್ಟತನದ ಕಾರ್ಯಗಳಲ್ಲಿ ಮುಳುಗಿರುವ ದುರ್ಜನರಿಂದ ಸಮಾಜಕ್ಕೆ ಎಳ್ಳಷ್ಟು ಉಪಯೋಗವಿಲ್ಲ . ಆದರೂ ಅವರು ತನ್ನಿಂದಲೇ ಹಾಗಾಯ್ತು , ಹೀಗಾಯ್ತು ಎಂದು ಜಂಬ ಕೊಚ್ಚುತ್ತಿರುತ್ತಾರೆ . ಆದ್ದರಿಂದ ಕವಿಯು ಅವರ ಜಂಬದ ವರ್ತನೆಯನ್ನು “ ಬಿನ್ನಾಣದ ಮಾತಿಗೆ ಕೊನೆಯಿಲ್ಲ ‘ ಎಂದು ಟೀಕೆ ಮಾಡಿದ್ದಾರೆ .

ಜಾಲಿಯ ಮರದಂತೆ ಕವಿ ಪರಿಚಯ:

‘ದಾಸರೆಂದರೆ ಪುರಂದರದಾಸರಯ್ಯ’ ಎಂದುಗುರುಗಳಿಂದಹೊಗಳಿಸಿಕೊಂಡ ಮಹಾನುಭಾವರೇಪುರಂದರದಾಸರು. ಕ್ರಿ.ಶ. ಹದಿನೈದು-ಹದಿನಾರನೆಯ ಶತಮಾನದಲ್ಲಿ ಜೀವಿಸಿದ್ದ ಪುರಂದರದಾಸರು ‘ಪುರಂದರ ವಿಠಲ’ ಎಂಬ ಅಂಕಿತ ಪಡೆದು ಹರಿದಾಸರಾದುದರಿಂದ ಈ ಹೆಸರನ್ನು ಪಡೆದರು. ಇವರ ಜನ್ಮನಾಮ ಶ್ರೀನಿವಾಸನಾಯಕ ಎಂದು. ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ವ್ಯಾಪಾರವು ಮಾಡುತ್ತಾ ‘ನವಕೋಟಿ ನಾರಾಯಣ’ ಎಂದೇ ಖ್ಯಾತರಾದ ಇವರು ತಮ್ಮ ಜೀವನದಲ್ಲಿ ನಡೆದ ಪವಾಡದಿಂದ ಜಿಪುಣತನವನ್ನು ಕಳೆದುಕೊಂಡು ಮಹಾ ಉದಾರಿಗಳಾಗಿ, ಹರಿದಾಸರಾಗಿ, ವಾಗ್ಗೇಯಕಾರ ಾಗಿ ವಿಜೃಂಭಿಸಿದರು.
ಕ್ರಿ.ಶ. 1484 ರಿಂದ 1564ರವರೆಗೆ ಜೀವಿಸಿದ ಪುರಂದರದಾಸರು ವೇದಾಂತವನ್ನು ಕನ್ನಡದಲ್ಲಿ ಂಗಮವಾಗಿ ಹಾಡಿದರು. ಅವರು ಆಶು ಕವಿತೆಗಳನ್ನು ಲೀಲಾಜಾಲವಾಗಿ ರಚಿಸಿದರು. ಕೀರ್ತನೆ, ಸುಳಾದಿ ಮತ್ತು ಉಗಾಭೋಗಗಳೆಂಬ ಮೂರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿದ ದಾಸರು ‘ಕರ್ನಾಟಕ ಸಂಗೀತ ಪಿತಾಮಹ’ರೆನಿಸಿಕೊಂಡರು. ಅಂದು ಪುರಂದರದಾಸರು ಮಾಡಿದ ಪಾಠ ಪರಿಷ್ಕರಣವನ್ನು ಇಂದಿನ ಸಂಗೀತದ ಅಧ್ಯಾಪಕರು ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಕೇರಳ ನಾಡಿನಲ್ಲಿ ಜಾರಿಯಲ್ಲಿಟ್ಟುಕೊಂಡಿದ್ದಾರೆ. ಪುರಂದರದಾಸರು ರಚಿಸಿರುವ ಸುಮಾರು ಸಾವಿರ ಕೀರ್ತನೆಗಳು ದೊರೆತಿವೆ.

ಭಾಷಾಭ್ಯಾಸ:

೧) ದುರ್ಜನರು – ಸುಜನರು, ಸ್ವಾದ – ವಿಷ ಈ ಮುಂತಾದ ಪದಗಳ
ವೈರುಧ್ಯವನ್ನು ಗಮನಿಸಿ,
ದುರ್ಜನರು ಕೆಟ್ಟ ಗುಣಗಳಿಂದ ಜ ಕಂಟಕರಾಗಿರುತಾರೆ – ಸುಜನರಿಂದ ಸಮಾಜದಲ್ಲಿ ಸೌಹಾರ್ದ, ಶಾಂತಿ, ನೆಮ್ಮ ನೆಲೆಸಿರುತ್ತವೆ. ಅಂತೆಯೇ ಸ್ವಾದ -‘ನಾಲಗೆಗೆ ಹಿತವನ್ನು ವಿಷ ಅಹಿತ ಉಂಟುಮಾಡುವ ವಿರುದ್ಧ ಗುಣಗಳನ್ನು ಹೊಂದಿದೆ


೨) ಘೋರಪಾಪಿ, ದುರ್ಜನ, ದುರ್ಗ೦ – ಈ ಪದಗಳಲ್ಲಿರುವ ಗುಣವಾಚಕಗಳನ್ನು ಗುರುತಿಸಿ

  • ಘೋರಪಾಪಿ – ‘ಘೋರ’ ಎಂಬುದು ಗುಣವಾಚಕ.
  • ದುರ್ಜನ – ‘ದುರ್ ಎಂಬುದು ಗುಣವಾಚಕ.
  • ದುರ್ಗಂಧ – ‘ದು‌’ ಎಂಬುದು ಗುಣವಾಚಕ,

೪) ಧರೆ, ಕುಸುಮ, ಕರ್ಮ, ಬಿನ್ನಾಣ, ಕುನ್ನಿ – ಇವುಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  • ಧರೆ – ಭೂಮಿ, ವಸುಧೆ, ನೆಲ, ಧರಣಿ, ಧಾರುಣಿ, ಪೃಥ್ವಿ, ಇಳೆ, ವಸುಂಧರೆ
  • ಕುಸುಮ – ಹೂವು, ಪುಷ್ಪ, ಸುಮ
  • ಕರ್ಮ – ಕೆಲಸ, ಕಾರ್ಯ, ಕಜ್ಜ, ಉದ್ಯೋಗ, ಎಜ್ಜುಗ
    ಬಿನ್ನಾಣ, ಬೆಡಗು, ಜಂಬ, ಒನಪು, ಒಯ್ಯಾರ
    ಕುನ್ನಿ – ನಾಯಿ, ಶ್ವಾನ, ಶುನಕ.
    ೫) ದುರ್ಜನರು, ಬಿಸಿಲಲ್ಲಿ, ಪಾಪಿಗೆ, ಹಣ್ಣಿನಲ್ಲಿ – 1 ಗುರುತಿಸಿ, ಗಳ ವಿಭಕ್ತಿ ಪ್ರತ್ಯಯಗಳನ್ನು
  • ದುರ್ಜನರು – ಪ್ರಥಮಾ ವಿಭಕ್ತಿ
    ಬಿಸಿಲಲ್ಲಿ – ಸಪ್ತಮೀ ವಿಭಕ್ತಿ –
  • ಪಾಪಿಗೆ – ಚತುರ್ಥಿ ವಿಭಕ್ತಿ
    ಹಣ್ಣಿನಲ್ಲಿ – ಸಪ್ತಮೀ ವಿಭಕ್ತಿ,

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ವಿಭಕ್ತಿ ಪ್ರತ್ಯಯಗಳು ಕನ್ನಡ

ಕನ್ನಡ ಕಾಗುಣಿತ

ಕನ್ನಡ ಸಮಾಸಗಳು

ಕನ್ನಡ ಪತ್ರ ಲೇಖನಗಳು

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *