ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary

ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary

mumbai jataka kannada summary , ಮುಂಬೈ ಜಾತಕ ಪದ್ಯ ಸಾರಾಂಶ, ದ್ವಿತೀಯ ಪಿ.ಯು.ಸಿ ಮುಂಬೈ ಜಾತಕ ಕನ್ನಡ ಸಾರಾಂಶ, 2nd PUC Mumbai Jataka Kannada Poem Summary Saramsha Bhavartha Pdf Download, Chapter 8 Mumbai Jataka Questions and Answers

Mumbai Jataka Kannada Summary

ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary
ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ‘ಮುಂಬೈ ಜಾತಕ’ ಎಂಬ ಕವಿತೆಯು ಕನ್ನಡದ ಶ್ರೇಷ್ಠ ಕವಿತೆಗಳಲ್ಲಿ ಒಂದೆನಿಸಿದೆ. ವಲಸೆ ಬರುವವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿರುವ ಇಂದಿನ ದಿನಗಳಲ್ಲಿ ಈ ಕವಿತೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಮುಂಬೈಯಂತಹ ರಾಕ್ಷಸನಗರದಲ್ಲಿ ವಾಸಿಸುವ ಜನರಲ್ಲಿ ಮಾನವೀಯತೆ ಕಣ್ಮರೆಯಾಗಿ ಒಂದು ಬಗೆಯ ಪರಕೀಯತೆ ಜೀವನದುದ್ದಕ್ಕೂ ಆವರಿಸಿಕೊಳ್ಳುವುದನ್ನು ಈ ಕವಿತೆ ಸುಂದರವಾಗಿ o, ಅಕೃತಿಯಿಂದ ದೂರವಾದಷ್ಟು ಮನುಷ್ಯ ಹೃದಯವಂತಿಕೆಯಿಂದ ದೂರಾಗಿ ಯಾಂತ್ರಿಕಗೊಳ್ಳುವುದನ್ನು ಈ ಕವಿತೆ ಚಿತ್ರಿಸುತ್ತದೆ.

೧) ಹುಟ್ಟಿದ್ದು : ಆಸ್ಪತ್ರೆಯಲ್ಲಿ
ಬೆಳದದ್ದು : ಬಸ್ಸು ಟ್ರಾಂ ಕಾರು ಟಾಕ್ಸಿ ಎಲೆಕ್ನಿಕ್‌ ಟ್ರೇನುಗಳಲ್ಲಿ

ಕುಡಿದದ್ದು : ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ

ಬಾಟ್ಲಿಯ ಹಾಲು, ಗ್ರೆಪ್ ಸಿರಪ್, ಹಾರ್ಲಿಕ್ಸ್ ಇತ್ಯಾದಿ

ಕಂಡದ್ದು : ಬೆಳಗಿನಿಂದ ಸಂಜೆಯತನಕ ಲಕ್ಷ ಚಕ್ರದ ಉರುಳು

ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು ಕಲಿತದ್ದು : ಕ್ಯೂ ನಿಲ್ಲು ಫುಟ್‌ಪಾತಿನಲ್ಲೇ ಸಂಚರಿಸು; ರಸ್ತೆದಾಟುವಾಗೆಚ್ಚರಿಕೆ ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇಲೂರು, ಹೀರು.

ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary
ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary


ಪ್ರಸ್ತುತ ಕವಿತೆಯ ರಚನೆಯು ಸಾಮಾನ್ಯ ಕವಿತೆಯೊಂದರ ಅರ್ಜಿ ನಮೂನೆಯ ರೀತಿಯಲ್ಲಿದೆ. ‘ಹುಟ್ಟಿದ್ದು’ ಎಂದಾಗ ಎಲ್ಲರ ಸಾಮಾನ್ಯವಾಗಿ ನಮ್ಮನಮ್ಮ ಹುಟ್ಟೂರಿನ ಹೆಸರನ್ನು ಬರೆಯುತ್ತೇ ಆದರೆ ಮುಂಬೈನಲ್ಲಿ ವಾಸಿಸುವ ವ್ಯಕ್ತಿ ‘ಆಸ್ಪತ್ರೆಯಲ್ಲಿ’ ಎಂದು ಬರೆದಿದ್ದಾನೆ. ಅಂದರೆ ಹೇಳಿಕೊಳ್ಳಲು ಯಾವ ಊರೂ ಗತಿಯಿಲ್ಲ ಎಂಬುದು ಗೋಚರಿಸುತ್ತದೆ.

ಕವಿತೆ ಮುಂದುವರೆದಂತೆ ಬೆಳೆದದ್ದು’ ಎಂಬ ಎರಡನೆಯ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಸಿಗುವ ಉತ್ತರ ಗಮನಿಸಿ, ಮನೆ-ಮಠಕೇರಿಗಳಿರದೆ ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ನಿಕ್‌ ಟ್ರೇನುಗಳಲ್ಲಿ ಎಂದಿದೆ. ಇವೆಲ್ಲಾ ಮುಂಬೈ ನಗರದೊಳಗಿನ ಸಂಚಾರಿ ಸಾರಿಗೆಗಳು ಇದರೊಳಗೆ ಓಡಾಡುತ್ತಲೇ ಬೆಳೆದದ್ದು ಎಂದು ಇಲ್ಲಿನ ವ್ಯಕ್ತಿ ಉತ್ತರಿಸುವಾಗ, ಅವನಿಗೊಂದು ಐಡೆಂಟಿಟಿಯೂ ಇಲ್ಲದ ಸಂದರ್ಭ ಎದುರಾಗುತ್ತದೆ. ಆತ ಕುಡಿದಿರುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು. ಎಮ್ಮೆಯನ್ನೂ ನೋಡಿಲ್ಲ, ಹಾಲನ್ನು ಕರೆಯುವ ಕೈಯನ್ನು ಕಾಣುವ

ಸಂದರ್ಭವೇ ಎದುರಾಗಿಲ್ಲ. ಹಾಲಿನ ಜೊತೆಗೆ ಹೊಟ್ಟೆನೋವಾದಾಗಿಪ್ಪಿರಪ್, ಶಕ್ತಿಗಾಗಿ ಹಾರ್ಲಿಕ್ಗಳು. ತಾಯ ಎದೆಹಾಲನ್ನು ಕುಡಿದು ಬೆಳೆದೆ ಎನ್ನಲೂಧೈರ್ಯವಿಲ್ಲ. ಮಗುವಿನ ಬಾಲ್ಯದ ಪೋಷಣೆಯ, ಪ್ರೀತಿಯ, ಲಾಲಿಯ, ಆಟಪಾಠಗಳ ಚಿತ್ರಣವೇ ಇಲ್ಲಿಲ್ಲ. ಮಗು ಕಂಡಿರುವುದಾದರೂ ಏನನ್ನು? ಚಂದಮಾಮ, ಹಕ್ಕಿ, ಹೂವು, ಇರುವೆ, ಗೊಂಬೆ ಮುಂತಾದವನ್ನಲ್ಲ. ಬದಲಿಗೆ ಮುಂಬೈನಗರದಲ್ಲಿ ಯಾವಾಗಲೂ ಕಾಣಸಿಗುವುದು, ಬೆಳಗಿನಿಂದ ಸಂಜೆಯತನಕ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅವಸರವಸರವಾಗಿ ತಮ್ಮತಮ್ಮ ಕೆಲಸಗಳಿಗೆ ಓಡುತ್ತಿರುವ ಜನರನ್ನು, ಮಗು ಇದನ್ನೇ ನೋಡುತ್ತಾ ಬೆಳೆಯಬೇಕು.


ಮಗುವಾಗಿರುವಾಗ ಕಲಿತದ್ದೇನು? ಎಂಬುದು ಮುಂದಿನ ಪ್ರಶ್ನೆ, ಬಾಲ್ಯಲೀಲೆಗಳನ್ನು, ಗೆಳೆಯರೊಂ ಒಡನಾಟ, ಆಟ-ಪಾಠ ಯಾವುದೂ ಇಲ್ಲ. ದಿನನಿತ್ಯ ಒಂದಲ್ಲ ಒಂದಕ್ಕೆ ‘ಕ್ಯೂ ನಿಲ್ಲು’, ‘ಪಾದಚಾರಿಗಳು ಸಂಚರಿಸುವಲ್ಲೇ ಓಡಾರ ‘ಅವರಿವರನ್ನು ತಳ್ಳಿಯಾದರೂ ಸರಿಯೇ ನಿನ್ನ ಅಸ್ತಿತ್ವವನ್ನು ಕಂಡುಕೋ’ – ಇವೇ ಮುಂತಾದವು. ಬೆಳೆಯುವಾಗಲೇ ಸ್ವಾರ್ಥಿಯಾಗಿ ನೆಲೆನಿಲ್ಲು ಎಂಬುದನ್ನು ಮುಂಬೈ ನಗರವು ಕಲಿಸಿಬಿಡುತ್ತದೆಂಬುದನ್ನು ಕವಿ ಅತ್ಯಂತ ವಿಷಾದದಿಂದ ಇಲ್ಲಿ ಚಿತ್ರಿಸಿದ್ದಾರೆ.


9) ತಾಯಿ : ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ
ಕೈ ಹಿಡಿದು ನಡೆಸಿದವಳು. ಇರುವ ಒಂದಿಂಚು
ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸಿ

ಎಚ್ಚರಿಕೆ ಕೊಟ್ಟವಳು.
ತಂದೆ : ಬೆಳಗಿಂದ ಸಂಜೆಯ ತನಕ ಕಣ್ಮರೆಯಾಗಿ

ಒಮ್ಮೊಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು

ಕುಳಿತು ಕೆಮ್ಮುವ ಪ್ರಾಣಿ


ನಗರದ ಕೃತಕ ವಾತಾವರಣದಲ್ಲಿ ಬೆಳೆಯುವ ಮಗುವಿಗೆ ‘ತಾಯಿ’ ಎಂದರೆ ನೆನಪಿಗೆ ಬರುವುದು ಅವಳು ತುತ್ತು ತಿನ್ನಿಸಿ, ಜೋಗುಳ ಹಾಡಿ, ಚಂದ್ರಮಾಮನನ್ನು ತೋರಿದ ಅಕ್ಕರೆಯ ವಾತ್ಸಲ್ಯದ ಬದಲಿಗೆ ಹೆತ್ತ ತಪ್ಪಿಗೆ ಯಾಂತ್ರಿಕ ವಾಗಿ ತನ್ನ ಕರ್ತವ್ಯವನ್ನು ತೋರಿಸಿದವಳು. ಅವಳು ತಾನೆ ಏನು ಮಾಡಿಯಾಳು? ಅವರ ಮನೆ ಇರುವುದೇ ತೀರಾ ಪುಟ್ಟದಾಗಿ, ಇರುವ ಒಂದಿಂಚು ಕೋಣೆಯಿಂದಲೇ ಹೊರ ಜಗತ್ತನ್ನು ಪರಿಚಯಿಸಿದ್ದಾಳೆ. ಸಾವಿರಾರು ವಾಹನಗಳು ರಭಸವಾಗಿ ನುಗ್ಗುವ ರಸ್ತೆ ಬದಿಯಲ್ಲೇ ಮಗುವಿನ ನಡೆಯುವುದನ್ನು ಕಲಿಸಿದ್ದಾಳೆ. ಏಳು-ಬೀಳುಗಳ ಬಗ್ಗೆ ಕೈಹಿಡಿದುಕೊಂಡು ನಡೆಯುವುದನ್ನು ಕಲಿಸಿದ್ದಾಳೆ. ಏಳು-ಬೀಳುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ. ಅಸಹಾಯಕಳಾದ ಆ ತಾಯಿಯಿಂದ ಇಷ್ಟನ್ನು ಮಾತ್ರವೇ ಮಾಡಲು ಸಾಧ್ಯ.


ಇನ್ನು ‘ತಂದೆ’ ಎಂದರೆ ಮಗುವಿಗೆ ಯಾವ ಸಂಗತಿಯೂ ನೆನಪಿಗೆ ಬರುತ್ತಿಲ್ಲ ಮಗು ಆತನನ್ನು ನೋಡುವುದೇ ಅಪರೂಪ. ಮಗು ಬೆಳಿಗ್ಗೆ ಏಳುವ ಮೊದಲೇ ಆತ ಕೆಲಸಕ್ಕೆ ಹೋಗಿರುತ್ತಾನೆ. ರಾತ್ರಿ ಆತ ಮನೆಗೆ ಹಿಂದಿರುಗುವಷ್ಟರಲ್ಲಿ ಮಗು ಮಲಗಿಯಾಗಿರುತ್ತವೆ. ಹೀಗಾಗಿ ಅಪ್ಪ ದಿನನಿತ್ಯ ಕಾಣಿಸಿಕೊಳ್ಳುವುದೇ ಇಲ್ಲ. ಮಗು ಅಪ್ಪನನ್ನು ನೋಡುವುದು ರಜಾ ದಿನಗಳಲ್ಲಿ ಕುಳಿತು ಕೆಮ್ಮುವ

ಪ್ರಾಣಿಯಾಗಿ ಮಾತ್ರ ಉಳಿದಂತೆ ಅಪ್ಪನ ಪ್ರೀತಿ-ವಾತ್ಸಲ್ಯಗಳ ಅನುಭವದ
ನೆನಪುಗಳೇ ಇಲ್ಲಿಲ್ಲ. ಹೆತ್ತ ತಂದೆ-ತಾಯಿಗಳೊಂದಿಗೆ ಮಗುವಿನ ಕೃತಕ
ಸಂಬಂಧವನ್ನು ಕವಿತೆಯ ಈ ಭಾಗ ಸೊಗಸಾಗಿ ಚಿತ್ರಿಸಿದೆ.

೩) ವಿದ್ಯೆ : ಶಾಲೆ ಕಾಲೇಜುಗಳು ಕಲಿಸಿದ್ದು, ದಾರಿ ಬದಿ

ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು;

ರೇಡಿಯೊ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದು,

ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್‌ಸ್ಟಾಪಿನಲ್ಲಿ ನಿಂತ

ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು

ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಮಗು ಕಲಿತದ್ದಾದರೂ ಏನನ್ನು? ಎಂಬ ಪ್ರಶ್ನೆಗೆ ಕವಿ ಈ ಭಾಗದಲ್ಲಿ ಉತ್ತರಿಸುವ ಯತ್ನ ಮಾಡಿದ್ದಾರೆ. ತಂದೆ-ತಾಯಿ, ಗುರು-ಹಿರಿಯರಿಂದ ನೈತಿಕ ಮೌಲ್ಯಗಳನ್ನು ಉತ್ತಮ ಸಂಸ್ಕಾರವನ್ನು ಈ ಇಲ್ಲಿಲ್ಲ, ಪ್ರಕೃತಿಯೊಂದಿಗಿನ ಒಡನಾಟವಂತೂ ಕಲಿಯುವ ಅವಕಾಶವೇ ಇಲ್ಲಿಲ್ಲ. ಪ್ರಕೃತಿಯೊಂದಿಗಿನ ಒಡನಾಟವಂತೂ ದೂರದ ಮಾತು. ಶಾಲೆ-ಕಾಲೇಜುಗಳಲ್ಲಿ ತಲೆಗೆ ತುರುಕಿದ ಯಾಂತ್ರಿಕ ಪಾಠಗಳು. ದಾರಿ, ರುವ ಪೋಸ್ಟರ್‌ಗಳಲ್ಲಿ ಕಾಣಬರುವುದನ್ನೋ, ರೇಡಿಯೋದಲ್ಲಿ ಬರುವ ಜಾಹೀರಾತುಗಳನ್ನೇ ಕಲಿತು ಮಗು ಬೆಳೆಯಬೇಕು. ಮಗು ತಾನಾಗೇ ಕಲಿತಿರುವುದು ಶೂನ್ಯ. ತಾನಾಗಿಯೇ ಕಲಿತಿರುವುದು ಒಂದೇ
ಒಂದು. ಅದೆಂದರೆ, ಬಸ್‌ಸ್ಟಾಂಡಿನಲ್ಲಿ ನಿಂತಿರುವ ಹುಡುಗಿಯರನ್ನು

ನೋಡುವುದು. ಇದನ್ನು ಮಾತ್ರ ಯಾರೂ ಕಲಿಸದೆಯೇ ಮಗು ಕಲಿತುಕೊಂಡು
ಬಿಡುತ್ತದೆಂದು ಕವಿ ವಿನೋದದಿಂದ ಚಿತ್ರಿಸಿದ್ದಾರೆ.

೪) ಜೀವನ : ಈ ಲಕ್ಷದಾರಿಗಳ ಚದುರಂಗದಾಟದಲಿ, ನೂರು

ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ

ಮುಂದುವರಿಯುವುದು; ಏಳುವುದು, ಬಟ್ಟೆಯಲಿ

ಮೈ ತುರುಕಿ ಓಡುವುದು; ರೈಲನೋ ಬಸ್ಸನೋ

ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ

ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು

ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ

ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು

ಎಚ್ಚರಿಸುವುದು; ತಣ್ಣಗೆ ಕೊರೆವ ಕೂಳುಂಡು

ಬಾಡಿಗೆ ಮನೆಯ ರಳಿನ ಕೆಳಗೆ, ಮತ್ತೆ

ಸಾವಿರ ಗಾಲಿಯುಜ್ಜುವ ಕನಸು ಬಂಡಿಯ ಕೆಳಗೆ

ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.

ಕವಿತೆಯ ಕೊನೆಯ ಭಾಗದಲ್ಲಿ ಕವಿಯು ಮುಂಬೈ ನಗರದ ಜೀವನ
ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂಬೈ ನಗರದ ಜೀವನವೆಂದರೆ ಒಂದಲ್ಲ,
ಎರಡಲ್ಲ, ಲಕ್ಷ ದಾರಿಗಳ ಚದುರಂಗದಾಟ. ಇಲ್ಲಿ ಯಾರದೋ ಕೈಗೊಂಬೆಯಾಗಿ

ಜೀವಿಸಬೇಕು. ಬೆಳಿಗ್ಗೆ ಎದ್ದರೆ ಮೈಗೆ ಬಟ್ಟೆಯನ್ನು ನಿಧಾನಕ್ಕೆ ಹಾಕಿಕೊಳ್ಳಲೂ ಪುರುಸೊತ್ತಿರುವುದಿಲ್ಲ. ಬಟ್ಟೆಗೆ ಮೈಯನ್ನು ತುರುಕಿ ಓಡಬೇಕು. ರೈಲಿನಲ್ಲೋ, ಬಸ್ಸಿನಲ್ಲೋ ಹೋಗಿ ಕೆಲಸ ಮಾಡುವ ಜಾಗಕ್ಕೆ ತಲುಪಬೇಕು. ಕೆಲಸ ಮುಗಿದ ಮೇಲೆ ಆಯಾಸದಿಂದ ಮತ್ತೆ ಮನೆಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆ. ಯಾರೊಡನೆಯೂ ಸ್ನೇಹದಿಂದ ನಾಲ್ಕು ಮಾತಾಡಲೂ ಸಮಯವಿಲ್ಲ.

ಮನೆಗೆ ಬಂದು, ಕಾದೂ ಕಾದೂ ತೂಕಡಿಸಿ ಮಲಗಿದ ಹೆಂಡತಿಯನ್ನು ಎಚ್ಚರಿಸಿ ಬಡಿಸಿದ ತಂಗಳನ್ನು ಉಂಡು, ಬಾಡಿಗೆಯ ಮನೆಯ ಸೂರಿನಡಿ ಮತ್ತೆ ಮರುದಿನದ ಮಾಮೂಲಿ ದಿನಚರಿಯನ್ನು ನೆನೆದು ತತ್ತರಿ ಮಲಗುವುದು, ಇದಿಷ್ಟೇ ಬದುಕು, ಮನರಂಜನೆಗಾಗಲಿ, ಮಡದಿ ಳೊಂದಿಗೆ ಪ್ರೀತಿಯಿಂದ ಮಾತಾಡಿ ಕಾಲಕಳೆಯಲಾಗಲಿ ಪುರುಸೊತ್ತಿದ್ದರೆ ತಾನೇ? ನಗರ ಜೀವನವೆಂದರೆ ಈ ಯಾಂತ್ರಿಕ ಬದುಕಿನ ಕ್ರಮ ಮಾತ್ರವೇ ಎಂದು ಕವಿ ‘ಮುಂಬೈ ಜಾತಕ’ವನ್ನೇ ಬರೆ ದ್ದಾರೆ. ಇಲ್ಲಿ ‘ಮುಂಬೈ’ ನೆಪಮಾತ್ರ. ಎಲ್ಲ ಮಹಾನಗರಗಳ ಹಣೆಬರಹವೂ ಇದೇ – ರೀತಿಯಲ್ಲಿರುವುದನ್ನು ನಾವು ಗಮನಿಸಬಹುದು.

ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary
ಮುಂಬೈ ಜಾತಕ ಪದ್ಯ ಸಾರಾಂಶ । Mumbai Jataka Kannada Summary

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ವಿಭಕ್ತಿ ಪ್ರತ್ಯಯಗಳು ಕನ್ನಡ

ಕನ್ನಡ ಕಾಗುಣಿತ

ಕನ್ನಡ ಸಮಾಸಗಳು

ಕನ್ನಡ ಪತ್ರ ಲೇಖನಗಳು

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *