ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary

ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary

muttisikondavanu kannada lesson summary, ಮುಟ್ಟಿಸಿಕೊಂಡವನು summary Download 2nd PUC Kannada Lesson 1 Muttisikondavanu Questions and Answers Pdf, Summary, Notes, 2nd PUC Kannada Textbook Answers , muttisikondavanu summary in kannada , muttisikondavanu summary kannada , muttisikondavanu kannada saramsha , 2nd PUC ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌

Muttisikondavanu Kannada Lesson Summary

ಮುಟ್ಟಿಸಿಕೊಂಡವನು ಪಾಠದ ಸಾರಾಂಶವನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಮುಟ್ಟಿಸಿಕೊಂಡವನು ಸಾರಾಂಶ

ರೈತನಾದ ಬಸಲಿಂಗನಿಗೆ ಉಳುಮೆ ಸಮಯದಲ್ಲಿಯೇ ಅವನ ಎತ್ತುಗಳು ತೊಂದರೆ ನೀಡುತ್ತವೆ. ಅದೇ ಸಮಯಕ್ಕೆ ಸರಿಯಾಗಿ ಅವನ ಎಡಗಣ್ಣಿನಲ್ಲಿ ನೋವು ಶುರುವಾಗುತ್ತದೆ. ಸಾಮಾನ್ಯ ಕಣ್ಣು ಬೇನೆಯಿರಬಹುದೆಂದು ತಿಳಿದಿದ್ದ ಬಸಲಿಂಗನಿಗೆ ಕಣ್ಣು ಮಂದವಾದಂತೆನಿಸಿತು.

ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary
ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary

ಹೆದರಿ ತನ್ನ ಕುಟುಂಬದ ವೈದ್ಯರಿಗೆ ತೋರಿಸಿದಾಗ ಅವರು ಧೈರ್ಯ ತುಂಬಿ ಏನೋ ಲೇಹ್ಯ ನೀಡಿದರು. ಅವರ ಸಲಹೆಯಂತೆಯೇ ಮುಲಾಮು ಹಚ್ಚಿ ಉಪ್ಪಿನಕಾವು ಕೊಟ್ಟರು ನೋವು ಕಡಿಮೆ ಆಗಲಿಲ್ಲ. ಯಾರು ಯಾರಲ್ಲೋ ತನ್ನ ಕಣ್ಣು ನೋವಿನ ವಿಷಯ ಹೇಳಿಕೊಂಡಾಗ ಯಾರೋ ಅವನಿಗೆ ಸರ್ಕಾರಿ ಆಸ್ಪತ್ರೆಯ ಡಾ|| ತಿಮ್ಮಪ್ಪನವರಿಗೆ ತೋರಿಸಲು ಹೇಳಿದರು.

ಇದು ತನ್ನ ಕೊನೆಯ ಪ್ರಯತ್ನವೆಂದು ಅವರಲ್ಲಿಗೆ ಹೋಗುತ ಡಾಕ್ಟರ್ ತಿಮ್ಮಪ್ಪ ಸುತ್ತಲಿನ ಪ್ರದೇಶದಲ್ಲೇ ಪ್ರಸಿದ್ಧ ವೈದ್ಯರು. ಜನರು ಆಸ್ಪತ್ರೆಯಲ್ಲಿ ಸರದಿಗಾಗಿ ಕಾದು ನಿಂತಿದ್ದರು. ಬಸಲಿಂಗನ ಸರದಿ ಬಂದಾಗ ಡಾಕ್ಟರ್ ತಿಮ್ಮಪ್ಪನವರಲ್ಲಿ ತನ್ನ ಕಣ್ಣು ನೋವಿನ ಜೊತೆ ತನ್ನ ಸಂಸಾರದ ಇತರ ನೋವನ್ನೂ ಹೇಳಿಕೊಳ್ಳುತ್ತಾನೆ.

muttisikondavanu kannada saramsha

ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary


ಅವರು ಬಸಲಿಂಗನಿಗೆ ಧೈರ್ಯ ತುಂಬಿ ಇದಕ್ಕೆ ಆಪರೇಷನ್ ಮಾಡಿದರೆ ಸರಿಯಾಗುತ್ತದೆಯೆಂದು ಭರವಸೆ ನೀಡುತ್ತಾರೆ. ಬಸಲಿಂಗನಿಗೆ ಮರುದಿನ ಆಪರೇಷನ್ನನ್ನೂ ಮಾಡಿದ ತಿಮ್ಮಪ್ಪನವರು “ಇದು ಸೂಕ್ಷ್ಮವಾದ ಆಪರೇಷನ್. ನೀನು ಎರಡು ವಾರ ತಲೆಗೆ ನೀರು ಸೋಕಿಸಕೂಡದು. ನೀರು ಬಿದ್ದರೆ ಕಣ್ಣ ಹೋಗುವ ಸಂಭವವಿದೆ” ಎಂದು ಎಚ್ಚರಿಸಿದರು.
ತಿಮ್ಮಪ್ಪನವರ ಆಪರೇಷನ್‌ನಿಂದ ಬಸಲಿಂಗನಲ್ಲಿ ವೈದ್ಯರ ಕುರಿತು ವಿಶಿಷ್ಟ ಪ್ರೀತಿ ಬೆಳೆದು ಅವರಿಂದ ಪ್ರಭಾವಿತನಾಗಿದ್ದನು. ಆದರೆ ಡಾಕ್ಟರರು ಜಾತಿಯಿಂದ ಹೊಲೆಯರೆಂಬುದನ್ನು ಹೇಗೋ ಬಸಲಿಂಗನ ಹೆಂಡತಿ ತಿಳಿದುಕೊಂಡು ರಾದ್ಧಾಂತವನ್ನೇ ಮಾಡಿದಳು.


ಇದರಿಂದ ನೊಂದ ಬಸಲಿಂಗ ಈ ವಿಷಯ ಯಾರಿಗೂ ಹೇಳದೇ ಇರಲು ನಿರ್ಧರಿಸಿದ, ಸಿದ್ಧಿಂ ಒಪ್ಪಿದಳು. ಆದರೆ ಹೊಲೆಯ ವೈದ್ಯರಿಂದ ಚಿಕಿತ್ಸೆ ಪಡೆದುದರಿಂದ ಮೈ ತೊಳೆದು ಸೂತಕ ಕಳಕೊಳ್ಳಲು ಪಟ್ಟು ಹಿಡಿದಳು. ಮೈಲಿಗೆಯನ್ನು ಕಳೆದುಕ ಬಸಲಿಂಗ ಸ್ನಾನ ಮಾಡಿದ ನೀರು ತಾಗಿ ಕಣ್ಣು ನೋಯತೊಡಗಿತು.
ತಾನು ಮಾಡಿದ ತಪ್ಪಿನ ಅರಿವಾಗಿ ಬಸಲಿಂಗ ಪಶ್ಚಾತ್ತಾಪ ಪಟ್ಟನು.

ತಿಮ್ಮಪ್ಪನವರಲ್ಲಿಗೆ ಮತ್ತೆ ಹೋದರೆ ಮೈಲಿಗೆಯಾಗುತ್ತದೆಂದು ಬೇರೊಬ್ಬ ವೈದ್ಯರಲ್ಲಿಗೆ ಹೋಗುತ್ತಾನೆ. ಅವರು ಹೇಳಿದಂತೆಯೇ ಮಾಡಿದರೂ ಕಣ್ಣಿನ ನೋವು ಮಾತ್ರ ಕಡಿಮೆಯಾಗಲೇ ಇಲ್ಲ ಬೇರೆ ದಾರಿಯಿಲ್ಲದೇ ತಿಮ್ಮಪ್ಪನವರ ಬಳಿಗೆ ತಿರುಗಿ ಬಂದನು, ಅವರು ಕೇಳಿದ್ದಕ್ಕೆಲ್ಲಾ ಸುಳ್ಳನೇ ಹೇಳಿದನು.

ಅವನ ಮನಸ್ಸನ್ನು ತಿಳಿದ ತಿಮ್ಮಪ್ಪನವರು ನಡೆದದ್ದನ್ನು ನಡೆದಂತೆ ಹೇಳೆಂದು ಸೌಮ್ಯತೆಯಿಂದ ಕೇಳಿದರು. ತಾನು ಹೇಳಿದ ಸುಳ್ಳುಗಳು ತಿಮ್ಮಪ್ಪನವರಿಗೆ ತಿಳಿಯಿತೆಂದು ಅರಿತ ಬಸಲಿಂಗ ನಡೆದುದೆಲ್ಲವನ್ನು ಹೇಳಿದ.
“ಹೇಗಾದರೂ ಮಾಡಿ ಇನ್ನೊಂದು ಸಲ ಆಪರೇಷನ್ ಮಾಡಿ. ನಿಮ್ಮ ಮಾತನ್ನು ಈ ಸಲ ಮೀರುವುದಿಲ್ಲ’ ಎಂದು ಗೋಗರೆದ.

“ಮತ್ತೆ ಆಪರೇಷನ್ ಮಾಡುವುದರಿಂದ ಏನೂ ಆಗುವುದಿಲ್ಲ. ಔಷಧಿ ಕೊಡುತೇನೆ. ಹೆಚ್ಚಿಕೋ” ಎಂದು ಹೇಳಿ ಕಳಿಸಿದರು.
ತಾನು ಹೇಳಿದಂತೆ ಆಪರೇಷನ್ ಮಾಡಲಿಲ್ಲವೆಂದು ಬಸಲಿಂಗನಿಗೆ ತಿಮ್ಮಪ್ಪನವರ ಮೇಲೆ ಸಿಟ್ಟು ಬಂತು. ಕಂಡ ಕಂಡವರ, ಮುಂದೆಲ್ಲಾ ತನ್ನ ಕಣ್ಣು ಹೋಗಲು ತಿಮ್ಮಪ್ಪನವರೇ ಕಾರಣವೆಂದು ಹೇಳಿದ. ಬಸಲಿಂಗನ ದುರಾದೃಪ್ಪದಿಂದಲೋ ಎಂಬಂತೆ ಅವನ ಎಡಗಣ್ಣು ಪೂರ್ತಿ ಇಲ್ಲವಾ. ವಾಸಿಯಾದಂತೆ ಅವನ ಬಲಗಣ್ಣಿನಲ್ಲಿ ನೋವು ಆರಂಭವಾಯಿತು.

2nd PUC ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್‌

ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary
ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary


ಈ ಬಾರಿ ಬಸಲಿಂಗ ತನ್ನ ಜಾತಿಯ ರಾಜಕಾರಣಿಯಾದ ರುದ್ರಪ್ಪನ ಸಹಾಯದಿಂದ ಬೇರೆ ಬೇರೆ ವೈದ್ಯರ ಬಳಿ ಹೋದನು. ಕೆಲವು ವೈದ್ಯರು “ಆ ತಿಮ್ಮಪ್ಪನಿಗೆ ಬುದ್ಧಿಯಿಲ್ಲದೇ ಆಪರೇಷನ್ ಮಾಡಿದರು” ಎನ್ನುತ್ತ ಔಪಧಿ ಕೊಟ್ಟರು. ಆದರೆ ಬಸಲಿಂಗನ ನೋವು ಮಾತ್ರ ಕಡಿಮೆಯಾಗಲಿಲ್ಲ.


ಕೊನೆಗೊಮ್ಮೆ ಅವನು ತಿಮ್ಮಪ್ಪನವರ ಬಳಿಗೇ ಬರಬೇಕಾಯಿತು. ಆದರೆ ಅವನಲ್ಲಿ ತಿಮ್ಮಪ್ಪನವರ ಕುರಿತು ಒಂದು ರೀತಿ ಉಡಾಫೆಯ ಭಾವವೇ ಎದ್ದು ಕಾಣುತ್ತಿತ್ತು. ಮೊದಲಿನ ಮುಗ್ಧತೆ ಅವನಲ್ಲಿ ಇರಲಿಲ್ಲ. ತಿಮ್ಮಪ್ಪನವರಿಗೆ ಈ ಬದಲಾವಣೆ ಕಂಡಿತು. ಬಸಲಿಂಗನ ಗಂಟಲು ದೊಡ್ಡದಾಗಿತ್ತು. ಅವನ ಕಾಯಿಲೆಯು ದೈಹಿಕತೆಯಿಂದ ಮಾನಸಿಕ ಸ್ತರವನ್ನು ತಲುಪಿದೆಯೆಂದು ಅರಿತ ತಿಮ್ಮಪ್ಪನವರು “ಬಸಲಿಂಗ, ನಾನು ನಿನ್ನನ್ನು ಮುಟ್ಟಿದ್ದು ಒಬ್ಬ ಡಾಕ್ಟರನಾಗಿ, ಆದರೆ ನಿನ್ನಂಥ ಮುಗನಲ್ಲಿಯೂ ಈ ಮುಟ್ಟಿಸಿಕೊಳ್ಳುವಿಕೆ ನಾನು ಊಹಿಸದೇ ಇದ್ದುದನ್ನು ಮಾಡಿದೆಯೆಂದರೆ ಇದು ನಿನ್ನ ತಪ್ಪಲ್ಲ.


ಈ ಬಾರಿ ನೀನು ಡಾ|| ಚಂದ್ರಪ್ಪನವರಲ್ಲಿ ಹೋಗು. ಅವರೂ ಸಹ ನನ್ನ ಒಳ್ಳೆಯ ಡಾಕ್ಟರು” ಎಂದು ಹೇಳಿ ಕಳಿಸಿದರು. ಬಸಲಿಂಗನು ತನ್ನ ಜೊತೆಗಾರ ರಾಜಕಾರಣಿ ರುದ್ರಪ್ಪನಲ್ಲಿ ಡಾ| ಚಂದ್ರಪ್ಪನವರ ಜಾತಿಯ ಕುರಿತು ವಿಚಾರಿಸಿದ. ತಿಮ್ಮಪ್ಪನವರಷ್ಟು ಕೆಟ್ಟ ಜಾತಿಯವರಲ್ಲವೆಂದು ತಿಳಿದು ಅವರ ಬಳಿ ಹೋದನು. ಬಸಲಿಂಗನಿಂದ ಎಲ್ಲ ವಿವರವನ್ನೂ ಕೇಳಿದ ು ತಿಮ್ಮಪ್ಪನವರಿಂದ ರು ಕ ನನ್ನಿಂದ ಸಾಧ್ಯವಿಲ್ಲ.


ಅವರು ವೈದ್ಯಲೋಕವೇ ತಿಳಿದಂತೆ ಅತಂತ ಪ್ರಾಮಾಣಿಕ ಹಾಗೂ ಪ್ರತಿಭಾವಂತ ವೈದ್ಯರು. ನಿನ್ನ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು, ಅವರಿಂದ ಮಾತ್ರ ನಿನ್ನ ಉಳಿದಿರುವ ಒಂದು ಕಣ್ಣು ಉಳಿಯಲು ಸಾಧ್ಯ” ಎಂದು ಹೇಳಿದರು. ಚಂದ್ರಪ್ಪನವರ ದವಾಖಾನೆಯಿಂದ ಹಿಂದಿರುಗಿದ ಬಸಲಿಂಗನ ಅಹಂಕಾರ ಕರಗತೊಡಗಿತು. ನೋವಿನಿಂದ ಬಳಲಿದ ಆತನಿಗೆ ತನ್ನ ಉಡಾಫೆ, ಜಾತಿ, ಸುಳ್ಳುಗಳು, ಮಠದ ಗುರು ಇವು ಯಾವವೂ ತನ್ನ ಕಣ್ಣನ್ನು ಉಳಿಸಲಾರದೆಂದು ಅರಿವಾಯಿತು. ದೈಹಿಕ ನೋವನ್ನು ಮೀರಿದ ಸಂಕಟ ಅವನಲ್ಲಿ ತುಂಬಿತು.

ಡಾ!! ತಿಮ್ಮಪ್ಪನವರ ಮಿಂಚಿನಂತಹ ಬೆರಳು, ಪ್ರೀತಿ ತುಂಬಿದ ಮಾತುಗಳು, ಮುಖ ನೆನಪಾಯಿತು. ಜೊತೆಗೆ ತನ್ನ ಹೊಲ, ಎತ್ತುಗಳು, ಗದ್ದೆಯ ವಾರೆಯ ಮಾವಿನ ಮರ, ಪಾರಿಜಾತದ ಹೂ ಎಲ್ಲವೂ ನೆನಪಾದವು. ಬಸಲಿಂಗ ನೇರವಾಗಿ ತಿಮ್ಮಪ್ಪನವರಲ್ಲಿಗೆ ಹೋಗಿ ಅವರ ಕೈ ಹಿಡಿದುಕೊಂಡು ಗಟ್ಟಿಯಾಗಿ ಅಳಲಾರಂಭಿಸಿದ.
ಕೆಲ ಕಾಲ ಸಮ್ಮನಿದ್ದ ಅವರಿಗೂ ಬಸಲಿಂಗನ ಸ್ಥಿತಿ ಕಂಡು ದುಃಖವಾಯಿತು.

muttisikondavanu summary kannada

ಮುಟ್ಟಿಸಿಕೊಂಡವನು Summary । Muttisikondavanu Kannada Lesson Summary

ಬಸಲಿಂಗನಿಗೆ ಧೈರ್ಯ ತುಂಬುತ್ತ “ಈ ಸಲ ತಲೆಗೆ ನೀರು ಸೋಂಕಿಸಕೂಡದು. ಈ ಕಣ್ಣು ಸರಿಯಾಗುತ್ತದೆ” ಎಂದು ಹೇಳಿ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳತೊಡಗಿದರು. ಬಸಲಿಂಗ ತನ್ನ ಸುಳ್ಳು, ಜಂಭ, ಉಡಾಫೆಗಳಿಂದ ಮುಕ್ತನಾಗಿ ಮಗುವಿನಂತೆ ಅವರ ಚಲನವಲನ ನೋಡುತ್ತ ಕೂತ.

ಮುಟ್ಟಿಸಿಕೊಂಡವನು ಪೂರ್ತಿ ನೋಟ್ಸ್ ಇಲ್ಲಿ ಕ್ಲಿಕ್ ಮಾಡಿ

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *