ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | Val‌parai Abhivrudhi Tanda Duranta Kannada

2nd puc Kannada 2nd Lesson Notes Val‌parai Abhivrudhi Tanda Duranta Kannada

2nd puc kannada 2nd lesson notes, 2 PUC Valparai Abhivrudhi Tanda Durantha Kannada Notes, ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌, Abhivrudhi Tanda Duranta Questions and Answers Pdf, Notes, Summary, 2nd PUC Kannada Textbook Answers

2nd puc Kannada 2nd Lesson Notes Val‌parai Abhivrudhi Tanda Duranta Kannada

ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ): 2nd puc Kannada 2nd Lesson Notes

ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?
ಕೆಂಪುಪಟ್ಟಿಗೆ ಸೇರಿರುವುದು ಸಿಂಹ ಬಾಲದ ಕೋತಿಗಳು,

ವಾಲ್‌ಪರೆನ ದುರಂತದ ಮೂಲ ಬೀಜಗಳು ರೂಪದಲ್ಲಿ ಬಂದವು?
ವಾಲ್‌ಪರೆನ ದುರಂತದ ಮೂಲಬೀಜಗಳು ಚಹಾಗಿಡಗಳ ರೂಪದಲ್ಲಿ ಬಂದವು

ಮಾರ್ಷ್ ವಾಲ್‌ಪಿಗೆ ಬಂದುದು ಯಾವಾಗ?
ಮಾರ್ಷ್ 1890ರಲ್ಲಿ ವಾಲ್‌ರೆಗೆ ಬಂದನು.

ಮಾರ್ಷನ ಜೊತೆಗಾರನ ಹೆಸರೇನು?
ಪೂನಾಚ್ಚಿ ಎಂಬ ಆದಿವಾಸಿ

ಬ್ರಿಟಿಷರಲ್ಲಿ ಹಾಯ್ದು ಬಂದಿರುವ ಆನುಷಂಗಿಕ ಗುಣ ಯಾವುದು?
ಹೊಸತನ್ನು ಶೋಧಿಸುವ, ಅನ್ವೇಷಿಸುವ ಪ್ರವೃತ್ತಿಗಳು ಬ್ರಿಟಿಷರಿಗೆ ಆನುಷಂಗಿಕವಾಗಿ ಹಾಯ್ದು ಬಂದಿರುವ ಗುಣವಾಗಿದೆ.

ವಾಲ್‌ಪಿಗೆ ಬಂದ ಬ್ರಿಟಿಷ್ ಪ್ರಜೆ ಯಾರು?
ವಾಲ್‌ಪರೆಗೆ ಬಂದ ಬ್ರಿಟಿಷ್ ಪ್ರಜೆ ಕಾರ್ವೆರ್ ಮಾರ್ಷ್.

ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes
2nd puc Kannada 2nd Lesson Notes

ಹೆಚ್ಚುವರಿ ಪ್ರಶ್ನೆಗಳು: 2nd puc Kannada 2nd Lesson Notes

ವಾಲ್‌ಪರೆ ಈಗ ಹೇಗೆ ಕಾಣುತ್ತಿದೆ?
ಈಗ ಇಡೀ ವಾಲ್‌ರೆ ಹಸಿರು ಕಂಬಳಿ ಹೊದ್ದು ಗಿದಂತಿದೆ.

ಕಾನೂನಿನಲ್ಲಿ ಯಾವುದಕ್ಕೆ ಅವಕಾಶವಿಲ್ಲ?
ಕಾನೂನಿನಲ್ಲಿ ‘ ಮೃತ್ಯು’ವಿಗೆ ಅವಕಾಶವಿಲ್ಲ.

ಬದುಕುಳಿಯುವ ಛಲತೊಟ್ಟ ಹಾಡುಹಕ್ಕಿ ಯಾವುದು?
ವಿಷಲಿಂಗ್ ಕ್ರಷ್ ಬದುಕುಳಿಯುವ ಛಲತೊಟ್ಟ ಹಾಡುಹಕ್ಕಿ,

ಕಗ್ಗತ್ತಲ ಖಂಡ ಯಾವುದು?
ದಕ್ಷಿಣ ಆಫ್ರಿಕಾ ದೇಶವು ಕಗ್ಗತ್ತಲ ಖಂಡ.

ಮಾರ್ಡ್ನ ಚಹಾ ತೋಟದ ಯಶಸ್ಸು ಯಾರನ್ನು ಕೈಬೀಸಿ ಕರೆಯಿತು?
ಮಾರ್ಷ್ ಚಹಾತೋಟದ ಯಶಸ್ಸು ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು.

.

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು ) 2nd puc Kannada 2nd Lesson Notes

ಬ್ರಿಟಿಷರು ಬರುವ ಮೊದಲು ವಾಲ್‌ರೈ ಹೇಗಿತ್ತು ?

ಬ್ರಿಟಿಷರು ಬರುವ ಮೊದಲು ವಾಲ್‌ಪರೆ ದಟ್ಟ ಅರಣ್ಯ ಪ್ರದೇಶವಾಗಿತ್ತು . ಗಗನ ಚುಂಬಿ ಮರಗಳ ಮೇಲ್ಬಾವಣಿಯನ್ನು ಛೇದಿಸಿ ಭೂಸ್ವರ್ಶ ಮಾಡಲು ಸೂರ್ಯನ ಕಿರಣಗಳು ಸೆಣೆಸುತ್ತಿದ್ದ ದಟ್ಟವಾದ ಕಾಡುಗಳು ಇದಾಗಿದ್ದವು . “ ಕಗ್ಗತ್ತಲಖಂಡ ಆಫ್ರಿಕಾವನ್ನು ನೆನಪಿಸುವಂತಿತ್ತು . ಶೋಲಾ ಕಾಡುಗಳು ಪರ್ವತ ಶ್ರೇಣಿಗಳ ನಡುವೆ ಅಕ್ಷಾಂಶ – ರೇಖಾಂಶ ಬರೆದಂತೆ ಹರಿವ ಹಳ್ಳ – ಕೊಳ್ಳಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು .

ಸಿಂಹ ಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು ?

ಮರದ ಮೇಲೆ ವಾಸಮಾಡುತ್ತಿದ್ದ ಸಿಂಹ ಬಾಲದ ಕೋತಿಗಳಿಗೆ ವಾಸಸ್ಥಾನದ ಆಹಾರದ ಸಮಸ್ಯೆ ಉಂಟಾಯಿತು . ಮರದಿಂದ ಮರಕ್ಕೆ ಹಾರಬಲ್ಲ ಈ ಕೋತಿಗಳು ಈಗ ಮತ್ತೊಂದು ಮರ ಹತ್ತಬೇಕಾದರೆ ಮರದಿಂದ ಇಳಿದು ಡಾಂಬರ್ ರಸ್ತೆ ದಾಟಿ ಮತ್ತೊಂದು ಮರ ಹತ್ತಬೇಕಾಗಿತ್ತು . ವಾಹನಗಳ ಸಂಚಾರ ಹೆಚ್ಚಾದ ಕಾರಣ ಎಷ್ಟೋ ಕೋತಿಗಳು ಅಂಗವಿಕಲವಾದವು , ಇವು ಕೆಂಪು ಪಟ್ಟಿಯಿರುವ ಜೀವಿಗಳಾದವು . ಅರಣ್ಯ ಇಲಾಖೆಯವರು ವಿಜ್ಞಾನಿಗಳ ಅಸಹಾಯಕತೆಯಿಂದಾಗಿ ಇವು ಬದುಕುಳಿಯಲು ಊರಿನಂಗಳದ ಕಸದ ತೊಟ್ಟಿಗಳಲ್ಲಿ ಆಹಾರ ಹುಡುಕುತ್ತಾ ಬದುಕು ನೂಕುತ್ತಿವೆ .

ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ ?

ಮಾರ್ಷ್‌ನ ಚಹಾ ತೋಟದ ಯಶಸ್ಸಿನಿಂದಾಗಿ ಸ್ವಾತಂತ್ರೋತ್ತರದಲ್ಲಿ ಭಾರತದ ಅಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು . ಗಗನ ಚುಂಬಿ ಮರಗಳು ನೆಲಕ್ಕೆ ಉರುಳಿದವು , ದಿಮ್ಮಿ ಕೊಳ್ಳಲು ಕಂಟ್ರಾಕ್ಟರುಗಳು ಬಂದರು . ಫಲವತ್ತಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಯಿತು . ಹೊಗೆಯುಗುಳುವ , ಗಡಗಡ ಸದ್ದು ಮಾಡುವ ಲಾರಿ , ಟ್ರ್ಯಾಕ್ಟರ್‌ಗಳು ಬರತೊಡಗಿದವು . ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು , ಉದ್ಯಮಿಗಳಿಗೆ ಅನುಕೂಲವಾಗುವಂತೆ ವರ್ತಿಸಿದ ಕಾರಣದಿಂದಾಗಿ ನಿಭಿಡ ಅರಣ್ಯಗಳು ಚಹಾ ತೋಟಗಳಾಗಿ ಮಾರ್ಪಟಾದವು

ಮಾರ್ಷ್‌ನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು ?

ಮಾರ್ಷ್‌ನನ್ನು ಕಂಡು ಆದಿವಾಸಿಗಳು ಹೆದರಿದರು , ಏಕೆಂದರೆ ಅವರೆಂದೂ ಕುದುರೆಯಂತಹ ಪ್ರಾಣಿಗಳನ್ನು ಕಂಡಿರಲಿಲ್ಲ . ಮಾರ್ಷ್‌ನ ನಾಜೂರು ಪೋಷಾಕುಗಳನ್ನು ಕೂಡ ಅವರು ಕಂಡಿರಲಿಲ್ಲ . ಆದ್ದರಿಂದ ಕುದುರೆ ಹೆಜ್ಜೆಯ ಸಪ್ಪಳ ಕೇಳುತ್ತಿದ್ದಂತೆ ಕಾಡಿನೊಳಗೆ ಮಾಯವಾಗಿದ್ದರು .

ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ೪ ಅಂಕದ ಪ್ರಶ್ನೆಗಳು ) 2nd puc Kannada 2nd Lesson Notes

ಸಿಂಹಬಾಲದ ಕೋತಿಗಳು ಮತ್ತು ಹಾಡು ಹಕ್ಕಿಗಳಿಗಾದ ಅನಾನುಕೂಲಗಳಾವುವು ? ವಿವರಿಸಿ.

ಪ್ರಾಣಿ ಸಂಕುಲದ ಅಪರೂಪದ ಜೀವಿಗಳೆನಿಸಿದ್ದ ಸಿಂಹಬಾಲದ ಕೋತಿಗಳು ಮರದ ಮೇಲೆ ವಾಸ ಮಾಡುತ್ತಾ ಸ್ವಚ್ಚಂದವಾಗಿದ್ದವು . ಮರಗಳು ಧರೆಗುರಿಳಿದ ಮೇಲೆ ಇವುಗಳ ವಾಸಕ್ಕೆ ಮಾತ್ರವಲ್ಲ , ಆಹಾರಕ್ಕೂ ತೊಂದರೆಯಾಯಿತು . ಮರದಿಂದ ಮರಕ್ಕೆ ಹಾರಲು ಈಗ ಸಾಧ್ಯವಾಗುತ್ತಿರಲಿಲ್ಲ .

ಮರದಿಂದ ಇಳಿದು ಡಾಂಬರ್ ರ ಎಷ್ಟೋ ದಾಟಿ ಮತ್ತೊಂದು ಮರ ಹತ್ತಬೇಕಾಗುತ್ತಿತ್ತು . ವಾಹನಗಳ ಸಂಚಾರದಿಂದಾಗಿ ಕೋತಿಗಳು ಅಂಗವಿಕಲವಾದವುಗಳಾಗಿ ಕೆಂಪು ಪಟ್ಟಿಗೆ ಸೇರಿದ್ದು , ಈಗ ಆಹಾರಕ್ಕೆ ತೊಂದರೆಯಾಗಿ ಊರಿನ ಕಸದ ತೊಟ್ಟಿಗಳಲ್ಲಿ ಆಹಾರ ಹುಡುಕಿಕೊಂಡು ಬದುಕುತ್ತಿವೆ . ಇನ್ನು ಹಾಡುವ ಹಕ್ಕಿಗಳಾದ ವಿಷಲಿಂಗ್‌ಡ್ರಷ್‌ಗಳ ಬದುಕು ಕೂಡ ಇದೇ ರೀತಿಯಾಗಿದೆ . ಹಸಿರುಬೆಟ್ಟಗುಡ್ಡಗಳ ಝರಿಗಳ ಸ್ವಲ್ಪ ತಿಳಿ ನೀರಿನಲ್ಲಿ ವಾಸಿಸುತ್ತಿದ್ದ ಇವು ಇಂದು ಕೊಳಚೆ ಚರಂಡಿಗಳಲ್ಲಿ ಹಾಡುತ್ತ ಬದುಕು ಸಾಗಿಸುತ್ತವೆ .

ಅಂತಾರಾಷ್ಟ್ರೀಯ ವಿದ್ಯಾಮಾನಗಳಿಂದಾಗಿ ವಾಲ್‌ಪರೈಗೆ ಒದಗಿದ ಸಮಸ್ಯೆಗಳೇನು

ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವೆಂದು ಗುರುತಿಸಿಕೊಂಡಿದ ವಾಲ್‌ಪರೆ ಈಗ ತತ್ತರಿಸುತ್ತಿದೆ . ಏಕೆಂದರೆ ಅಂತಾರಾಷ್ಟ್ರೀಯ ವಿದ್ಯಮಾನಗಳು ವಾಲ್‌ಪರೈನ ಆರ್ಥಿಕ ಸ್ಥಿತಿಗತಿಗೆ ಕುತ್ತು ತಂದಿವೆ , ವಿಶ್ವ ಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದಿದೆ .

ರಫ್ತು ಇಳಿಮುಖಗೊಂಡು ಚಹಾ ತೋಟಗಳು ನಷ್ಟವನ್ನು ಅನುಭವಿಸುತ್ತಿವೆ . ಬದುಕುಳಿಯಲು ತೋಟದ ಮಾಲೀಕರು ಉತ್ಪಾದನಾ ಮ ಕಡಿತಗೊಳಿಸುವ ಅನಿವಾರ್ಯತೆಯಲ್ಲಿದ್ದಾರೆ , ಜನರು ನಿರ್ವಹಿಸುತ್ತಿದ್ದ ಕೆಲಸಗಳನ್ನು ಯಾಂತ್ರೀಕರಣ ಮಾಡಲು ಮುಂದಾಗಿದ್ದಾರೆ . ಕಂಗಾಲಾದ ಕಾರ್ಮಿಕರು ಕಂಡು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ . ಸರ್ಕಾರಕ್ಕೆ ಮನವಿ ಸಲ್ಲಿಸಿದರು ಬದುಕು ಹಸನುಗೊಳ್ಳುವ ಯಾವ ಭರವಸೆಯೂ ಕಾಣುತ್ತಿಲ್ಲ .

ವಾಲ್‌ಪರೈಗೆ ಬಂದ ಮಾರ್ಷ್ ಅಲ್ಲಿ ಹೇಗೆ ನೆಲೆಯೂರಿದ ? ವಿವರಿಸಿ .

ವಾಲ್‌ಪರೈಗೆ ಬಂದ ಮಾರ್ಷ್ ಪೂಣಚ್ಚಿ ಎಂಬ ಆದಿವಾಸಿಯ ನೆರವಿನಿಂದ ಇಡೀ ಅರಣ್ಯವನ್ನೆಲ್ಲ ಅನ್ವೇಷಿಸಿದ . ಪ್ರಕೃತಿಯನ್ನು ಆಸ್ವಾದಿಸುತ್ತಾ ತಾನೂ ಇಲ್ಲಿಯೇ ನೆಲಸಬೇಕೆಂದು ತೀರ್ಮಾನಿಸಿದ ಪೂಣಚ್ಚಿಯ ಸಹಕಾರದಿಂದ ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿ ಜೊತೆಗೆ ಭಾರತಕ್ಕೆ ಆಗಷ್ಟೆ ಪ್ರವೇಶಿಸಿದ್ದ ಚಹಾಗಿಡಗಳನ್ನು ತಂದು ನೆಟ್ಟನು , ಮಾರ್ಷ್ ನಿಧಾನವಾಗಿ ಕಾಡು ಕಡಿಯುತ್ತಾ ಚಹಾಗಿಡಗಳನ್ನು ಪುಳಕಿಸುತ್ತ ತೋಟವನ್ನು ವಿಸ್ತರಿಸುತ್ತಾ ಆನಂದಿಸುತ್ತಿದ್ದ .

ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಪಠ್ಯದ ಹಿನ್ನಲೆಯಲ್ಲಿ ಚರ್ಚಿಸಿ .

ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪಕ್ಕೆ ವಾಲ್‌ಪರೈ ಸಾಕ್ಷಿಯಾಗಿದೆ , ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶಗೈಯುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ . ಅರಣ್ಯ ಲೂಟಿ , ಪ್ರಾಣಿ ಸಂಕುಲಗಳ ಬೇಟೆ , ಇವೆಲ್ಲವೂ ಪ್ರಕೃತಿ ಮತ್ತು ಜೀವಜಾಲಕ್ಕೆ ವಿನಾಶವನ್ನು ತಂದಿದೆ . ಅರಣ್ಯನಾಶದಿಂದ ಪ್ರಾಣಿಸಂಕುಲ ನಾಶವಾಗಿದೆ .

ಹವಾಮಾನ ವೈಪರಿತ್ಯ , ಬರಗಾಲ , ಜಲಮೂಲಗಳ ನಾಶ ಇದರಿಂದ ನಾನಾ ಕಾಯಿಲೆಗಳ ತವರಾಗಿ ಮಾನವ ಹಾಗೂ ಪ್ರಾಣಿ ಸಂಕುಲಗಳ ಬದುಕು ದುರ್ಬರವಾಗುತ್ತಿದೆ . ಇದಕ್ಕೆ ಉದಾಹರಣೆ ಎಂದರೆ ಸಿಂಹ ಬಾಲದ ಕೋತಿಗಳು ಹಾಗೂ ಹಾಡುಹಕ್ಕಿಗಳಾದ ವಿಷಲಿಂಗ್ ಕ್ಲಪ್‌ಗಳು ರುದ್ರ ರಮಣೀಯವಾದ ಗತಲಖಂಡ ಆಫ್ರಿಕಾವನ್ನು ನೆನಪಿಸುವ ಕಾಡು ಇಂದು ಬಯಲು ಪ್ರದೇಶಗಳಾಗಿ ಹಾ ತೋಟಗಳಾಗಿ ಮಾರ್ಪಟ್ಟಿವೆ .

2nd puc Kannada 2nd Lesson Notes

ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes
ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ : 2nd puc Kannada 2nd Lesson Notes

“ ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ . ”

ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ವಾಲ್‌ರೈ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿರುವ ವಾಕ್ಯವಿದು . ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವಾಗಿದ್ದ ವಾಲ್‌ರೈ ಅಂತಾರಾಷ್ಟ್ರೀಯ ವಿದ್ಯಮಾನಗಳ ಕಾರಣದಿಂದ ಆರ್ಥಿಕವಾಗಿ ಕುಸಿಯಿತು .

ಇದಕ್ಕೆ ಮುಖ್ಯ ಕಾರಣ ವಿಶ್ವ ಮಾರುಕಟ್ಟೆಯಲ್ಲಿ ಚಹಾದ ಬೇಡಿಕೆ ಇಳಿಮುಖವಾಗಿದ್ದು , ಈ ಸಂದರ್ಭದಲ್ಲಿ ತೋಟದ ಮಾಲೀಕರು ಬದುಕುಳಿಯಲು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಜನರ ಬದಲಿಗೆ ಯಂತ್ರಗಳನ್ನು ಬಳಸಲಾರಂಭಿಸಿದರು .

ನಿರುದ್ಯೋಗಿಗಳಾದ ಕಾರ್ಮಿಕರು ಪ್ರತಿಭಟನೆಗೆ ತೊಡಗಿ , ಕೆಂಪು ಬಾವುಟಗಳನ್ನು ಹಿಡಿದುಕೊಂಡು ಹೋರಾಟದಲ್ಲಿ ತೊಡಗಿದ್ದರು . ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಅವರ ಬದುಕು ಹಸನಾಗುವ ಭರವಸೆಗಳಿಲ್ಲ ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನಂತೆ ಹೇಳಿರುವರು .

“ ಅದು ಅವರು ಆವರೆಗೂ ನೋಡಿರದ ಪ್ರಾಣಿ .”

ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ಜೀವಜಾಲ ‘ ಕೃತಿ ಯಿಂದಾಯ್ದ ‘ ವಾಲ್‌ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ವಾಲ್‌ಪರೈನ ಕಗ್ಗತ್ತಲ ಅರಣ್ಯ ಪ್ರದೇಶಕ್ಕೆ ಮೊತ್ತಮೊದಲ ಬಾರಿಗೆ ಸಾಹಸಿ ಬ್ರಿಟಿಷ್ ಪ್ರಜೆಯಾದ ಕಾರ್ವೆಲ್ ಮಾರ್ಷ್ ಕುದುರೆಯ ಮೇಲೆ ಕುಳಿತು ಬಂದಾಗ ಅವನಿಗೆ ನಾಲ್ಕಾರು ಪುಟ್ಟ ಗುಡಿಸಲುಗಳಿದ್ದ ಹಾಡಿ ಕಾಣಿಸಿತು .

ಅಲ್ಲಿದ್ದ ಹತ್ತಾರು ಆದಿವಾಸಿಗಳು ಮಾರ್ಷ್‌ನ ಕುದುರೆಯ ಖುರಪುಟದ ಸದ್ದಿಗೆ ದಿಗಿಲುಗೊಳ್ಳುತ್ತಾರೆ . ಏಕೆಂದರೆ ಅವರೆಂದು ಕುದುರೆಯನ್ನು ಕಂಡಿರಲಿಲ್ಲ . ಕಾಡಿನ ಪ್ರಾಣಿಗಳನ್ನು ಮಾತ್ರ ಕಂಡಿದ್ದ ಅವರಿಗೆ ಕುದುರೆ ಮತ್ತು ವಿಚಿತ್ರ ಪೋಷಾಕಿನ ಮಾರ್ಷ್‌ನನ್ನು ನೋಡಿ ಭಯವುಂಟಾಗಿ ಮಿಂಚಿನಂತೆ ಅಲ್ಲಿಂದ ಮಾಯವಾದರೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ .

“ ಈ ಪ್ರದೇಶಕ್ಕೆ ಆಗ ಹೆಸರೇ ಇರಲಿಲ್ಲ . ”

ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ವಾಲ್‌ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸ ಬಹುದು . ‘ ವಾಲ್‌ಪರೆ ‘ ಎಂದು ಹೆಸರಾಗುವ ಮೊದಲು ಅನನ್ಯ ಜೀವ ಸಂಕುಲಗಳಿಂದ ಸಮೃದ್ಧವಾಗಿದ್ದ ಪಶ್ಚಿಮಘಟ್ಟ ಶ್ರೇಣಿಯ ಈ ದಟ್ಟ ಅರಣ್ಯ ಪ್ರವೇಶಕ್ಕೆ ಆಗ ಯಾವ ಹೆಸರೂ ಇಲ್ಲದಿದ್ದರೂ ಗಗನಚುಂಬಿ ಮರಗಳ ಮೇಲ್ಮಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯ ಕಿರಣಗಳು ಸೆಣಸುತ್ತಿದ್ದ ದಟ್ಟವಾದ ಕಾಡಿದ್ದ ಪ್ರದೇಶವಿದಾಗಿತ್ತೆಂದು ಲೇಖಕರು ವಾಲ್‌ಪರೆ ಭೂಪ್ರದೇಶವನ್ನು ವರ್ಣಿಸಿದ್ದಾರೆ .

ಅವರು ನೀಡಿದ ಚಿತ್ರ ಹದಿನೆಂಟನೇ ಶತಮಾನದ ಅಂತ್ಯಭಾಗದ್ದಾಗಿದ್ದು ನಿಧಾನವಾಗಿ ಅಲ್ಲಿನ ಕಾಡು ಕಣ್ಮರೆಯಾದ ಬಗೆಗೆ ಲೇಖಕರು ಗಮನ ಸೆಳೆದಿರುವರು . ಆ ಪ್ರದೇಶಕ್ಕೆ ಹೆಸರಿಲ್ಲದಿರುವುದು ಅಲ್ಲಿ ಜನ ಪ್ರವೇಶಿಸಿರಲಿಲ್ಲವೆಂಬುದಕ್ಕೆ ಸಾಕ್ಷಿಯನ್ನೂ , ಹೆಸರು ಬಂದ ನಂತರ ಆ ಪ್ರದೇಶ ಹೊಂದಿದ ಅವನತಿಯನ್ನೂ ಈ ಮೇಲಿನ ವಾಕ್ಯವು ಧ್ವನಿಸಿದೆ .

“ ಹಾಡುವುದು ಅವುಗಳಿಗೆ ಅನಿವಾರ್ಯ ; ಅವುಗಳ ಕರ್ಮ ! ”

ಕೃಪಾಕರ ಸೇನಾನಿ ಅವರು ರಚಿಸಿರುವ ‘ ವಾಲ್‌ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು .ಅಭಿವೃದ್ಧಿ ತಂದ ದುರಂತದ ಫಲವಾಗಿ ವಾಲ್‌ಪರೈನ ಎಷ್ಟೋ ಜೀವವೈವಿಧ್ಯಗಳು ನೆಲೆ ಕಳೆದುಕೊಳ್ಳುವಂತಾಯಿತು . ಅವುಗಳಲ್ಲಿ ವಿಷಲಿಂಗ್ ಭ್ರಷ್‌ಗಳೆಂಬ ಹಾಡುಹಕ್ಕಿಗಳೂ ಸೇರಿವೆ .

ಕಾಡು ಕಣ್ಮರೆಯಾದ ಕಾರಣ ಅವೀಗ ಬದುಕುಳಿಯಲು ಕೊಳಚೆ ನೀರಿನ ಚರಂಡಿಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿಯನ್ನು ವಿವರಿಸುತ್ತಾ ಲೇಖಕರು ನೆಲೆ ಕಳೆದು ಕೊಂಡ ನೋವಿನಲ್ಲೂ ಮುಂಜಾನೆ ಬೇಗನೆ ಎದ್ದು ರಾಗವಾಗಿ ಹಾಡುವುದನ್ನು ಬಿಡದ ಹಾಡುಹಕ್ಕಿಗಳ ಬಗ್ಗೆ ವಿವರಿಸುತ್ತಾ “ ಹಾಡುವುದು ಅವುಗಳಿಗೆ ಅನಿವಾರ್ಯ ; ಅವುಗಳ ಕರ್ಮ ” ಎಂದಿದ್ದಾರೆ .

“ ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು .”

ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ಜೀವಜಾಲ ‘ ಎಂಬ ಕೃತಿ “ ಯಿಂದಾಯ್ದ ‘ ವಾಲ್‌ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವಿದೆ . ಪೂಣಚ್ಚಿ ಎಂಬ ಆದಿವಾಸಿ ಒಡನಾಡಿಯ ಸಹಾಯದಿಂದ ಕಾಡನ್ನು ಸುತ್ತಿ ಬಂದ ಮಾರ್ಷ್ ಅಲ್ಲಿನ ಪ್ರಕೃತಿಯನ್ನು ಆಸ್ವಾದಿಸಿ ತಾನು ಅಲ್ಲಿಯೇ ನೆಲೆಸಬೇಕೆಂದು ತೀರ್ಮಾನಿಸಿದ . ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿದ .

ಇದರ ಜೊತೆಗೆ ಆಗಷ್ಟೆ ಭಾರತ ಪ್ರವೇಶ ಮಾಡಿದ್ದ ಚಹಾ ಗಿಡಗಳನ್ನು ತಂದು ಆ ಪ್ರದೇಶದಲ್ಲಿ ನೆಟ್ಟು ಬೆಳೆಸಿದ . ಈ ಸಂದರ್ಭವನ್ನು ವಿವರಿಸುತ್ತಾ ಲೇಖಕರು “ ವಾಲ್‌ಪರ ಕಾಡಿನ ಮುಂದಿನ ದಿನಗಳ ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದಿದ್ದವು ” ಎಂದು ಹೇಳಿದ್ದಾರೆ .

ವಾಲ್‌ಪರೆ: ಅಭಿವೃದ್ಧಿ ತಂದ ದುರಂತ ಲೇಖಕರ ಪರಿಚಯ:2nd puc Kannada 2nd Lesson Notes

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಮೈಸೂರಿನವರು. ವನ್ಯಜೀವಿಗಳ ಛಾಯಾಗ್ರಹಣ, ಸಾಕ್ಷ್ಯ ಚಿತ್ರಗಳ

ತಯಾರಿಕೆ ಇವರ ಹವ್ಯಾಸ. ಪರಿಸರ ಮತ್ತು ವನ್ಯಜೀವಿ ಸಂಕುಲಗಳ ಬಗ್ಗೆ ಅಪಾರ ಕಾಳಜಿಯುಳ್ಳ ಇವರಿಬ್ಬರೂ ಡಾ. ಕೆ. ಪುಟ್ಟಸ್ವಾಮಿಯವರೊಂದಿಗೆ ಕೂಡಿ ‘ಜೀವಜಾಲ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ಕೃಪಾಕರ-ಸೇನಾನಿ ಕಾಡುಗಳ್ಳನೊಂದಿಗಿನ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.

ಇವರಿಬ್ಬರೂ ನಿರ್ಮಿಸಿದ ಸೀಳುನಾಯಿಗಳನ್ನು ಕುರಿತ ಸಾಕ್ಷ್ಯ ಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ ಲಭಿಸಿದೆ. ಈ ಪ್ರಶಸ್ತಿಯನ್ನು ಏಷ್ಯಾಖಂಡದಲ್ಲಿ ಪಡೆದ ಮೊದಲಿಗರಿವರು. ಡಾ.ಕೆ. ಪುಟ್ಟಸ್ವಾಮಿ ತಮ್ಮ ‘ಸಿನಿಮಾಯಾನ’ ಕೃತಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತರು. ಪ್ರಸ್ತುತ ‘ವಾಲ್ ತಿಗಳ ಸ್ವರ್ಣಕಮಲ ಅಭಿವೃದ್ಧಿ ತಂದ ದುರಂತ’ ಎಂಬ ಲೇಖನವನ್ನು ಅವರ ಜೀವ ಲ’ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes
ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes

ಭಾಷಾಭ್ಯಾಸ 2nd puc Kannada 2nd Lesson Notes

ಆಗಮಿಸಿದ, ಅನ್ವೇಷಿಸುತ್ತಾ, ಹುಡುಕುವನು, ಹರಿಯುತ್ತಿದ್ದ – ಈ ಕ್ರಿಯಾಪದಗಳ ಕಾಲವನ್ನು ಸೂಚಿಸಿ.

  • ಆಗಮಿಸಿದ – ಭೂತಕಾಲ
    ಅನ್ವೇಷಿಸುತ್ತಾ – ವರ್ತಮಾನಕಾಲ
  • ಹುಡುಕುವನು
    ಹರಿಯುತ್ತಿದ್ದ – ವರ್ತಮಾನಕಾಲ

ಮಾರ್ಷ್‌ಗೆ, ಜಾಡನ್ನು, ಗುಡಿಸಿಲಿನಿಂದ, ಮುಖದಲ್ಲಿ, ಕೋತಿಗಳ – ಈ ಪದಗಳಲ್ಲಿ ಬಳಕೆಯಾಗಿರುವ ವಿಭಕ್ತಿ ಪ್ರತ್ಯಯಗಳನ್ನು ಹೆಸರಿಸಿ.

  • ಮಾರ್ಷ್‌ಗೆ – ಚತುರ್ಥಿ ವಿಭಕ್ತಿ
    ಜಾಡನ್ನು – ದ್ವಿತೀಯಾ ವಿಭಕ್ತಿ
  • ಗುಡಿಸಲಿನಿಂದ – ತೃತೀಯಾ ವಿಭಕ್ತಿ

ಕಿರುಹಾದಿ, ಹಸಿರುಕಂಬಳಿ, ಸಣ್ಣಕುರುಹು, ಹಾಡುಹಕ್ಕಿ, ಶುದ್ಧನೀರು, ಸ್ವಚ್ಛಸಮುದ್ರ – ಈ ಪದಗಳಲ್ಲಿರುವ ಗುಣವಾಚಕಗಳನ್ನು ಗುರುತಿಸಿ. –

  • ಕಿರುಹಾದಿ – ಕಿರು ಎಂಬುದು ಗುಣವಾಚಕ
  • ಹಸಿರುಕಂಬಳಿ – ಹಸಿರು ಎಂಬುದು ಗುಣವಾಚಕ
    ಸಣ್ಣ ಕುರುಹು – ಸಣ್ಣ ಎಂಬುದು ಗುಣವಾಚಕ –
    ಹಾಡುಹಕ್ಕಿ – ಹಾಡು ಎಂಬುದು ಗುಣವಾಚಕ
    ಶುದ್ಧನೀರು – ಶುದ್ಧ ಎಂಬುದು ಗುಣವಾಚಕ
  • ಸ್ವಚ್ಛ ಸಮುದ್ರ – ಸ್ವಚ್ಛ ಎಂಬುದು ಗುಣವಾಚಕ
ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes
ದ್ವಿತೀಯ ಪಿ.ಯು.ಸಿ ವಾಲ್‌ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್‌ | 2nd puc Kannada 2nd Lesson Notes

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *