ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

valparai abhivrudhi tanda duranta kannada summary, ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ, ವಾಲ್ಪರೈ ಅಭಿವೃದ್ಧಿ ತಂದ ದುರಂತ, valparai abhivrudhi tanda duranta 2nd puc notes, valparai abhivrudhi tanda duranta kannada, ವಾಲ್ ಪರೈ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್ , 2nd Puc Kannada 2nd Lesson Notes Question Answer Valparai Abhivrudhi Tanda Durantha Pdf

Valparai Abhivrudhi Tanda Duranta Kannada Summary

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶವನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary
ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ

‘ವಾಲ್‌ಪರೆ: ಅಭಿವೃದ್ಧಿ ತಂದ ದುರಂತ’ ಎಂಬ ಈ ಲೇಖನವನ್ನು ಕೃಪಾಕರ ಸೇನಾನಿ ಮತ್ತು ಕೆ. ಪುಟ್ಟಸ್ವಾಮಿಯವರ ‘ಜೀವಜಾಲ’ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಮಾನವ ತನ್ನ ಕಲ್ಯಾಣಕ್ಕಾಗಿ ನಡೆಸುವ ಅಭಿವೃದ್ಧಿ ಕಾರಿಗಳೆಲ್ಲ ಹೇಗೆ ದುರಂತಕ್ಕೆ ಮೂಲವಾಗುತ್ತದೆಂಬ ಸುಡುಸತ್ಯವನ್ನು ನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ನಾಗರೀಕತೆಯ ಖ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶಮಾಡುವ, ಆ ಮೂಲಕ ಜೀವಸಂಕುಲದ ದುರಂತಕ್ಕೆ ನಾಂದಿ ಹಾಡುವ, ವ್ಯಂಗ್ಯವನ್ನು ಲೇಖಕರು ವಾಲ್‌ರೆ ಅರಣ್ಯ ದುಃಸ್ಥಿತಿಯ ಉದಾಹರಣೆಯೊಂದಿಗೆ ಮೂಡಿಸಿದ್ದಾರೆ.

ವಾಲ್‌ಪರೆ ಇಡೀ ಪಶ್ಚಿಮ ಘಟ್ಟಗಳಲ್ಲೇ ಶ್ರೀಮಂತವಾಗಿದ್ದ ವಲಯ, ಸೂರನ ಕಿರಣ ಕೂಡ ನೆಲಕ್ಕೆ ಸೊ ದಟ್ಟವಾಗಿತ್ತು ಇಲ್ಲಿನ ಅರಣ್ಯ ಪ್ರದೇಶ. ಅಲ್ಲಿನ ಪ್ರಕೃತಿ ರಮ್ಯತೆಯು ಆಫ್ರಿಕಾದ ಕಗ್ಗತ್ತಲ ಖಂಡವನ್ನು ನೆನಪಿಗೆ ತರುವಂತಿತ್ತು. ಕೊಯಮುತ್ತೂರಿನ ಹತ್ತಿರದ ಈ ಪ್ರದೇಶ ಸಾಹಸಿಗರಿಗೆ ಸವಾಲೊಡ್ಡಿ ನಿಂತು ನ ಹತ್ತಿರದ ಈ ಪ್ರದೇಶ ಸಾಹಸಿಗರಿಗೆ ಸವಾಲೊಡ್ಡಿ ನಿಂತು ನಿಗೂಢವೆನಿಸಿತ್ತು. ಆದರೆ 1890ರಲ್ಲಿ ಕಾರ್ವೆರ್ ಮಾರ್ಷ್ ಎಂಬ ಈ ಬ್ರಿಟಿಷ್ ಅಧಿಕಾರಿ ಈ ನಿಗೂಢವನ್ನು ಭೇದಿಸುವ ಸಾಹಸ ಮಾಡಿದ. ಕುದುರೆಯೇರಿ ಅಲ್ಲಿಗೆ ಬಂದ ಆತ ಮೊದಲಿಗೆ ದಿಕ್ಕು ತಪ್ಪಿ ಪರಿತಪಿಸಿದರೂ ಪೂಣಚ್ಚಿ ಎಂಬ ಆದಿವಾಸಿಗಳ ಗೆಳೆತನ ಬೆಳೆಸಿ, ಉಳಿದ ಆದಿವಾಸಿಗಳ ಸಂಪರ್ಕ ಸಾಧಿಸಿದ. ಮಾತ್ರವಲ್ಲ ಅವನ ನೆರವಿನಿಂದ ಇಡೀ ವಾಲ್‌ಪರೆ ಪ್ರದೇಶವನ್ನು ಪರಿಚಯಿಸಿಕೊಂಡು, ಈ ನಿಬಿಡ ಅರಣ್ಯದಲ್ಲೇ ನೆಲೆಸಲು ನಿರ್ಧರಿಸಿದನು.

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary
ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

ಮಾರ್ಷ್ ವಾಲ್‌ಪರೆಯಲ್ಲಿ ಚಹಾ ಗಿಡಗಳನ್ನು ತಂದು ನೆಟ್ಟಿದ್ದೇ ಅಲ್ಲಿನ ದುರಂತಕ್ಕೆ ಬೀಜವಾಯಿತೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಹೊಸ ಜಾಗದಲ್ಲಿ ಅವನು ನೆಟ್ಟ ಚಹಾ ಗಿಡಗಳು ಹುಲುಸಾದ ತೋಟವಾಗಿ ಬೆಳೆಯಿತು. ಆದರೆ ಮಾರ್ಷ್‌ನ ಟೀ ತೋಟದ ಯಶಸ್ಸು ಸ್ವಾತಂತ್ರೋತ್ತರ ಭಾರತದ ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು. ಅದರ ಪರಿಣಾಮವಾಗಿ ಗಗನಚುಂಬಿ ಮರಗಳೆಲ್ಲ ನೆಲಕ್ಕುರುಳಿ, ಉದ್ಯಮಿಗಳ ನೆಲೆವೀಡಾಯಿತು. ಈಗ ಇಡೀ ವಾಲ್‌ಪರೆ ಅರಣ್ಯ ಪ್ರದೇಶ ಚಹಾ ತೋಟವಾಗಿ ಮಾರ್ಪಟ್ಟು ಹಸಿರು ಕಂಬಳಿ ಹೊದ್ದು ಮಲಗಿದೆ. ಮನುಷ್ಯ ಪ್ರಕ ಮೇಲೆ ನಡೆಸಿದ ಅತ್ಯಾಚಾರವಿದು.

ಅಭಿವೃದ್ಧಿ ಹೆಸರಿನಲ್ಲಿ ವಾಲ್‌ರೆಗೆ ಕಾಲಿಟ್ಟ ನಾಗರಿಕ ಪ್ರಪಂಚ ಅಲ್ಲಿನ ಜೀವಸಂಕುಲವನ್ನು ವಿನಾಶದ ಅಂಚಿಗೆ ತಳ್ಳಿದವು. ಅಲ್ಲಿನ ಸಿಂಹ ಬಾಲದ ವಾನರಗಳು ನೆಲೆ ಕಳೆದುಕೊಂಡು, ಅವುಗಳ ಸಂತತಿ ಕ್ಷೀಣಿಸತೊಡಗಿತು. ಈಗ ನೆಲೆ ತಪ್ಪಿರುವ 30 ಸಿಂಹ ಬಾಲದ ಕೋತಿಗಳು ವಾಲ್‌ರೆನ ಪುದುತೋಟಂ ಎಂಬ ತೋಟದಲ್ಲಿ ಆಶ್ರಯ ಪಡೆದಿವೆ. ವೃಕ್ಷವಾಸಿಗಳಾದ ಈ ಕೋತಿಗಳು ಜೀವಿಸಲು ವೃಕ್ಷಗಳೇ ಇಲ್ಲವಾಗಿದೆ. ನೆಲದ ಮೇಲೆ ಓಡಾಡುವ ಅಭ್ಯಾಸವಿಲ್ಲದ ಈ ಕೋತಿಗಳು ಡಾಂಬರ್ ರಸ್ತೆ ದಾಟುವಾಗ ವಾಹನಕ್ಕೆ ಸಿಕ್ಕು ಅಂಗವಿಕಲಗೊಂಡಿವೆ.

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

ಅವುಗಳನ್ನು ಬೇರೆಡೆ ಸಾಗಿಸುವ ಉಪಾಯ ಕಾಣದೆ ವಿಜ್ಞಾನಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಕೈಕಟ್ಟಿ ಕೂತಿವೆ. ವಾಣಿಜ್ಯ ದೃಷ್ಟಿಯಿಂದ ಶ್ರೀಮಂತವೆನಿಸಿದ್ದ ವಾಲ್‌ಪರೆ ಪ್ರದೇಶ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದ ಪರಿಣಾಮದಿಂದ ಆರ್ಥಿಕ ಮುಗ್ಗಟ್ಟನ್ನೆದಿರುಸುತ್ತಿದೆ. ಅಲ್ಲಿನ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕಾರಣಗಳಿಂದ ವಾಲ್‌ಪರೆ ತನ್ನಈ ಎಲ್ಲಾ ಕಳಾಹೀನವಾಗಿದೆ. ನೀರು ಹರಿವ ಜುಳುಜುಳು ಸದ್ದು, ಹಕ್ಕಿಗಳ ಬದಲಾಗಿ ಯಂತ್ರಗಳ ಕರ್ಕಶ ಸದ್ದು ತುಂಬಿಕೊಂಡಿದೆ.

ಒಂದು ದುರ್ಗಮ ಅರಣ್ಯವಾಗಿದ್ದ ಇಲ್ಲಿ ಲಕ್ಷಕ್ಕೂ ಮೀರಿ ಜನಸಂಖ್ಯೆ ತಮ್ಮದೇ ಸಮಸ್ಯೆಗಳಿಂದ ಜೀವಿಸುತ್ತಿದ್ದಾರೆ. ಮನುಷ್ಯ ಕಾಡಿನೊಳಗೆ ಕಾಲಿಟ್ಟರೆ ಏನೆಲ್ಲ ದುರಂತ ಸಂಭವಿಸುತ್ತದೆಂಬುದಕ್ಕೆ ವಾಲ್ · ಪ್ರದೇಶ ಜೀವಂತ ಉದಾಹರಣೆಯಾಗಿದೆ. ಆದರೆ ಅಲ್ಲಿ ಾಡುಹಕ್ಕಿಗಳು ಮಾತ್ರ ಹಾಡುವುದನ್ನು ಮರೆತಿಲ್ಲವೆಂದು ಲೇಖಕರು ಳಿದ್ದಾರೆ.

ಶಬ್ದಾರ್ಥ:

ದುರಂತ-ಅಪಾಯ; ಪರಾಕಾಷ್ಠೆ-ತುತ್ತತುದಿ; ವಿರಾಟ್-ವಿಶ್ವರೂಪ; ಪತನ-ಅವನತಿ; ಸಂಕುಲ-ಗುಂಪು, ಸಮೂಹ; ರೋಚಕ-ಸುಖಕರವಾದ, ಹಿತಕಾರಿ; ಅಧಿಪತ್ಯ-ಯಜಮಾನಿಕೆ, – ಸಾಂದ್ರವಾದ; ಸಾಂದ್ರತೆ-ದಟ್ಟಣೆ; ಎಡೆ-ಸ್ಥಳ, ಒಡೆತನ; ನಿಬಿಡ-ದಟ್ಟವಾದ, ಜಾಗ; ಬಿಡಾರ-ತಂಗುವ ಸ್ಥಳ; ನೀರವತೆ-ಮೌನ, ನಿಶ್ಯಬ್ದ; ಕುಮ್ಮಕ್ಕು-ಸಹಾಯ, ಒತ್ತಾಸೆ; ಏಕಸ್ವಾಮ್ಯತೆ-ಒಬ್ಬರ ಒಡೆತನದಲ್ಲಿರುವ ಕುರುಹು-ಗುರುತು; ಕ್ಷೀಣಿಸು- ಸೊರಗು, ಕ್ಷಯಿಸು; ಅನುರಣಿಸು-ಅನುಸರಿಸಿ ಮುಂದುವರಿದ ಧ್ವನಿ; ಅವನತಿ- ಕೀಳುದೆಸೆ.

ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary
ವಾಲ್ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ | Valparai Abhivrudhi Tanda Duranta Kannada Summary

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *