ಒಮ್ಮೆ ನಗುತ್ತೇವೆ Notes | Omme Nagutteve Kannada Notes

ಒಮ್ಮೆ ನಗುತ್ತೇವೆ Notes | Omme Nagutteve Kannada Notes

Omme Nagutteve Kannada Notes , 2nd puc kannada omme nagutteve notes, ಒಮ್ಮೆ ನಗುತ್ತೇವೆ Notes, ಒಮ್ಮೆ ನಗುತ್ತೇವೆ ಸಾರಾಂಶ , Omme Nagutteve Questions and Answers Pdf, Notes, Summary, 2nd PUC Kannada Textbook Answers, Karnataka State Board Solutions, 2nd PUC ಒಮ್ಮೆ ನಗುತ್ತೇವೆ ಕನ್ನಡ ನೋಟ್ಸ್‌

Omme Nagutteve Kannada Notes

ಒಮ್ಮೆ ನಗುತ್ತೇವೆ ಪಾಠದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ

ಒಮ್ಮೆ ನಗುತ್ತೇವೆ Notes | Omme Nagutteve Kannada Notes
ಒಮ್ಮೆ ನಗುತ್ತೇವೆ Notes | Omme Nagutteve Kannada Notes

ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ?
ಕವಯಿತ್ರಿ ದಲಿತರ ದೀನ ದಲಿತತನಕ್ಕೆ ಧಿಕ್ಕಾರವಿರಲಿ ಎಂದಿದ್ದಾರೆ.

ಜನರನ್ನು ಯಾವುದರಿಂದ ಪಾರು ಮಾಡುತ್ತೇನೆಂದು ಕವಯಿತ್ರಿ ಹೇಳುವರು?
ಬಡತನದ ಧಗೆಯಿಂದ-ಹೊಗೆಯಿಂದ ಜನರನ್ನು ಪಾರು ಮಾಡುತ್ತೇನೆಂದು
ಕವಯಿತ್ರಿ ಹೇಳಿದ್ದಾರೆ.

ದನಗಳಿಗೆ ಏನಿಲ್ಲ?
ದನಗಳಿಗೆ ಮೇವಿಲ್ಲ.

ಜನರಿಗೆ ಯಾವುದಕ್ಕೆ ಗತಿಯಿಲ್ಲ?
ಜನರಿಗೆ ಗಂಜಿಗೂ ಗತಿಯಿಲ್ಲ.

ಕವಯಿತ್ರಿ ಯಾರಲ್ಲಿ ಮೊರೆ ಇಡುತ್ತಾರೆ?
ಕವಯಿತ್ರಿ ತಾವೆಂದೂ ನಂಬದಿರುವ ದೇವರಲ್ಲಿ ಮೊರೆ ಇಟ್ಟಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು: (ಪ್ರಶ್ನೆ ಕೋಶದಿಂದ) Omme Nagutteve Kannada Notes

ಕವಯಿತ್ರಿ ಯಾವು ಆಪೋಶನ ಮಾಡುತ್ತೇನೆ ಎನ್ನುತ್ತಾರೆ?
ಕವಯಿತ್ರಿ ನನ್ನವರ ದಾರಿದ್ರವನ್ನೇ ಆಪೋಶನ ಮಾಡುತ್ತೇನೆ ಎಂದಿದ್ದಾರೆ.

ಒಮ್ಮನಗುತ್ತೇವ’ ಕವಿತೆಯನ್ನು ಬರೆದವರು ಯಾರು?
ಶ್ರೀಮತಿ ಸುಕನ್ಯಾ ಮಾರುತಿಯವರು ‘ಒಮ್ಮೆನಗುತ್ತೇವೆ’ ಎಂಬ ಪದ್ಯದ ರಚನೆಕಾರ್ತಿ.

ನನ್ನವರು ಏನನ್ನು ಕಿತ್ತು ತಿನ್ನುತ್ತಿದ್ದಾರೆ?
ಸತ್ತ ದನಗಳನ್ನು ಕಿತ್ತು ತಿನ್ನುತ್ತಿದ್ದಾ

ಎರಡು ಅಂಕದ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

ಕವಯಿತ್ರಿ ನಗುವ ನಗು ಎಂಥಹುದು ?

ಕವಯಿತ್ರಿ ನಗುವ ನಗು ಕೊನೆಯಿಲ್ಲದ್ದು , ಮೊನೆಯಿಲ್ಲದ್ದು , ಆಕಾಶದಲ್ಲಿ ಕಾರ್ಮೋಡ ಕಲಿಸುವ ನಗು , ಮಳೆ ಸುರಿಸುವ , ಹೊಳೆ ಹರಿಸುವ , ಬೆಳೆ ಬೆಳೆಸುವ ನಗು ಕವಯಿತ್ರಿಯದು .

ಜನರನ್ನು ಕವಯಿತ್ರಿ ಯಾವ ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ?
ಕವಯಿತ್ರಿ ಜನರನ್ನು ಬಡತನವೆಂಬ ಬವಣೆಯ ಧಗೆಯಿಂದ ಹೊರನುಗಿಸುತ್ತೇನೆ ಮತ್ತು ದಾರಿದ್ರವೆಂಬ ಹೊಗೆಯಿಂದ ಪಾರು ಮಾಡುತ್ತೇನೆಂದಿದ್ದಾರೆ.

ದನಗಳಿಗೆ, ಜನಗಳಿಗೆ ಏನೇನು ಇಲ್ಲ?
ದನಗಳಿಗೆ ಮೇವಿಲ್ಲ. ಜನಗಳಿಗೆ ಕುಡಿಯಲು ನೀರಿಲ್ಲ. ಗಂಜಿಗೂ ಗತಿಯಿಲ್ಲ.

ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ?
‘ದನಗಳ-ಜನಗಳ ಕಷ್ಟ ನೋಡಲಾರದೆ ಕವಯಿತ್ರಿ ಮಳೆಗಾಗಿ ಮುಗಿಲತ್ತ
ಕೈಚಾಚಿ ನಿಂತಿದ್ದಾರೆ.

ಒಮ್ಮೆ ನಗುತ್ತೇವೆ Notes | Omme Nagutteve Kannada Notes
ಒಮ್ಮೆ ನಗುತ್ತೇವೆ Notes | Omme Nagutteve Kannada Notes

ಐದಾರು ವಾಕ್ಯದಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )

ಕವಯಿತ್ರಿ ಅಗ್ನಿಪರ್ವತ ಜ್ವಾಲಾಮುಖಿ ಆಗಿದ್ದೇನೆ ಎನ್ನಲು ಕಾರಣಗಳೇನು ?

ಶೋಷಿತ ಸಮುದಾಯದವರು , ದೀನದಲಿತರು , ತುತ್ತಾನ್ನಕ್ಕೆ ಗತಿ ಇಲ್ಲದವರು , ದನಗಳಿಗೂ ಮೇವಿಲ್ಲ , ಜನಗಳಿಗೆ ನೀರಿಲ್ಲ , ಗಂಜಿಗೂ ಗತಿ ಇಲ್ಲ . ಸತ್ತ ದನಗಳನ್ನು ಕಿತ್ತು ತಿನ್ನುವುದನ್ನು ನೋಡಲಾಗದೆ ಈ ಸಮಾಜದ ಸ್ಥಿತಿಗತಿಯನ್ನು ಕಂಡು ಆಕ್ರೋಶ ಭುಗಿಲೆಳೆತ್ತದೆ . ದೀನದಲಿತರ ಬಗ್ಗೆ ತೋರುವ ಸಮಾಜದ ರೀತಿ – ನೀತಿಯಿಂದ ನೊಂದುಬೆಂದು ಕವಯಿತ್ರಿ ಜ್ವಾಲಾಮುಖಿಯಂತೆ ಸಿಡಿದಿದ್ದಾರೆ . ಆದ್ದರಿಂದ ಸ್ವತಃ ಕವಯಿತ್ರಿಯವರು ‘ ಅಗ್ನಿಪರ್ವತ , ಜ್ವಾಲಾಮುಖಿ ಆಗಿದ್ದೇನೆ ‘ ಎಂದು ಹೇಳಿದ್ದಾರೆ .

‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ .

‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯವೆಂದರೆ – ‘ ನಗು ಆರೋಗ್ಯ , ಆಯಸ್ಸು ಕೊಡುತ್ತದೆ . ಆದರೆ ಈ ದಲಿತರ ಜೀವನದಲ್ಲಿ ನಗ ಎಂಬುದಿಲ್ಲ . ಸಾಮಾಜಿಕ ಅಸಮಾನತೆಯನ್ನು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತದೆ . ಅವರ ಮೊಗದಲ್ಲಿ ನಗೆ ಅರಳ ಬೇಕಾದರೆ ಮೂಲಭೂತ ಸೌಕಯ್ಯಗಳನ್ನು ಒದಗಿಸಬೇಕು . ಅದಕ್ಕಾಗಿ ಅವರ ಬಾಳಿನಲ್ಲಿ ಕವಯಿತ್ರಿ ನಗೆ ಮೂಡಿಸುವ ಪ್ರಯತ್ನ ಮಾಡುತ್ತಾ ಅವರನ್ನು ನಗಿಸಿ ತಾನೂ ಕೂಡ ನಗುವ ವಿಚಾರ ವ್ಯಕ್ತಪಡಿಸಿದ್ದಾರೆ . ಕವಯಿತ್ರಿ ತಾನೇ ಸ್ವಯಂ ಹೇಳುವಂತೆ ದೀನದಲಿತರನ್ನು ಹೊಗೆಯಿಂದ ಪಾರು ಮಾಡಿ . ಅವರನ್ನು ನಗಿಸುತ್ತೇನೆ . ನಾನು ನಗುತ್ತೇನೆ , ಅದು ಕೊನೆಯಿಲ್ಲದ , ಮೊನೆಯಿಲ್ಲದ ನಗು , ಆಕಾಶದಲ್ಲಿ ಕಾರ್ಮೋಡ ಕವಿಸುವ , ಮಳೆ ಸುರಿಸುವ ಹೊಳೆಹರಿಸುವ , ಬೆಳೆ ಬೆಳೆಸುವ , ದನ , ಜನ , ಎಲ್ಲ ಕೂಡಿ ನಕ್ಕೆ ನಗುತ್ತೇವೆ ‘ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದೇ ಈ ಕವಿತೆಯ ವೈಶಿಷ್ಟ್ಯವಾಗಿದೆ .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

“ ಗಂಜಿಗೂ ಗತಿಯಿಲ್ಲ ”

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಆರಂಭದಲ್ಲಿ ಈ ಮೇಲಿನ ವಾಕ್ಯವಿದೆ .ಜನಗಳು ಮತ್ತು ವನಗಳು ಭೀಕರ ಬರಗಾಲದ ಧಾಳಿಗೆ ಸಿಕ್ಕು ತತ್ತರಿಸಿ , ದಾರಿದ್ರವನ್ನು ಅನುಭವಿಸುತ್ತಿರುವ ಸ್ಥಿತಿಯನ್ನು ವಿವರಿಸುವ ಸಂದರ್ಭದಲ್ಲಿ ಕವಯಿತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ದನಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ . ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ . ತಿನ್ನಲು ಗಂಜಿಗೂ ಗತಿಯಿಲ್ಲ . ಇಂತಹ ಪರಿಸ್ಥಿತಿಯಲ್ಲಿ ಜನರೆಲ್ಲ ಸತ್ತ ದನಗಳನ್ನು ಕಿತ್ತು ಕಿತ್ತು ತಿನ್ನಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆಂದು ಕವಯಿತ್ರಿ ಅತ್ಯಂತ ವಿಷಾದದಿಂದ ಹೇಳಿದ್ದಾರೆ .

ಬೆಳಗು ಜಾವ Notes

“ ಧಗಧಗ ಉರಿವ ಜ್ವಾಲಾಮುಖಿಯಾಗಿದ್ದೇನೆ ”

ಶ್ರೀಮತಿ ಸುಕನ್ಯಾ ಮಾರುತಿ ಅವರ ` ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ಕವಯಿತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಭೀಕರವಾದ ಬರಗಾಲದಲ್ಲಿ ದನಕರುಗಳು , ಜನರು ತಿನ್ನಲು ಆಹಾರವಿಲ್ಲದೆ , ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ . ಈಗ ಮಳೆ ಬಂದರೆ ಮಾತ್ರವೇ ಅವರ ಉಳಿಗಾಲ . ಇಂತಹ ಸಂದರ್ಭದಲ್ಲಿ ಅವರ ದೀನ ಸ್ಥಿತಿ ನೋಡಲಾರದೆ ಕವಯಿತಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ . ಮಳೆಗಾಗಿ ಬೇಡುತ್ತಿದ್ದರೂ ಮನದೊಳಗೆ ಧಗಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದೇನೆಂದು ಈ ಸಂದರ್ಭದಲ್ಲಿ ಕವಯಿತ್ರಿ ಹೇಳಿರುವರು .

“ ದೀನದಲಿತತನಕ್ಕೆ ಧಿಕ್ಕಾರವಿರಲಿ ! ”

ಶ್ರೀಮತಿ ಸುಕನ್ಯಾ ಮಾರುತಿಯವರ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದೀನದಲಿತರಿಗಾಗಿ ಎಂದೂ ನಂಬದ , ಕಾಣದ ದೇವರನ್ನು ಪ್ರಾರ್ಥಿಸಿರುವ ಕವಯಿತ್ರಿ ಯಾರೂ ಸಹಾಯಹಸ್ತವನ್ನು ಚಾಚದಿದ್ದ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಮುಳುಗಿಸಿ ಬಿಡುವ ಛಲ ಮೂಡುವುದೆಂದು ಹೇಳಿರುವರು . ಬೆಂಕಿ ನಾಲಗೆ ಚಾಚಿ ನನ್ನವರ ದಾರಿದ್ರವನ್ನೇ ಆಪೋಶನ ಮಾಡಬೇಕೆನ್ನುವ ಅವರು ದಲಿತರಿಂದ ದೀನ ದಲಿತತನ ಸರ್ವನಾಶವಾಗಬೇಕೆಂಬ , ಸಮಾನತೆಯು ಮೂಡಬೇಕೆಂಬ ಆಶಯ ಹೊಂದಿರುವುದನ್ನು ಈ ಮೇಲಿನ ವಾಕ್ಯದಲ್ಲಿ ಗಮನಿಸಬಹುದಾಗಿದೆ .

“ ಒಮ್ಮೆ ನಕ್ಕೇ ನಗುತ್ತೇವೆ . ”

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಕೊನೆಯ ವಾಕ್ಯವಿದು . ಜಗತ್ತನ್ನು ಆವರಿಸಿರುವ ಬರಗಾಲ ದೂರಾಗಿ , ಬಡತನ – ದಾರಿದ್ರ ತೊಲಗಿ ಜನರು ಸಂತೋಷದಲ್ಲಿರಬೇಕು . ಆಕಾಶದಲ್ಲಿ ಕಾರ್ಮೋಡ ಕವಿದು , ಭೂಮಿಗೆ ಮಳೆ ಸುರಿದು , ಹೊಳೆ ತುಂಬಿ ಹರಿದು , ಬೆಳೆ ಬೆಳೆಯುವಂತಾದಾಗ ಜನರೆಲ್ಲ ಸಂತೋಷದಿಂದ ಜೀವಿಸುತ್ತಾರೆ . ದನಕರುಗಳು ನೆಮ್ಮದಿಯಿಂದ ಬದುಕುತ್ತವೆ . ಈ ಎಲ್ಲ ಸಹಜೀವಿಗಳು ಸಂತೋಷದಿಂದಿರುವಾಗ ತಾವೂ ಅವರೊಂದಿಗೆ ಒಮ್ಮೆ ನಕ್ಕೆ ನಗುತ್ತೇವೆ , ಎಲ್ಲರೂ ಕೂಡಿ ನಗುತ್ತೇವೆ . ಅಂತಹ ಕಾಲ ಬಂದೇ ತೀರುವುದೆಂಬ ಆಶಯವನ್ನು ಕವಯಿತ್ರಿ ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ .

ಒಮ್ಮೆ ನಗುತ್ತೇವೆ Notes | Omme Nagutteve Kannada Notes
ಒಮ್ಮೆ ನಗುತ್ತೇವೆ Notes | Omme Nagutteve Kannada Notes

ಒಮ್ಮೆ ನಗುತ್ತೇವೆ ಕವಿ ಪರಿಚಯ:

ಶ್ರೀಮತಿ ಸುಕನ್ಯಾ ಮಾರುತಿ ‘ಬಂಡಾಯ ಕವಯಿತ್ರಿ’ ಎಂದೇ ಪ್ರಸಿದ್ದರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿ ಮಾರ್ಚ್ 1, 1956ರಲ್ಲಿ ಜನಿಸಿದ ಇವರು ಧಾರವಾಡದ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ‘ಪಂಚಾಗ್ನಿಯ ಮಧ್ಯೆ’, ‘ನಾನು ನನ್ನವರು’, ‘ತಾಜಮಹಲಿನ ಹಾಡು’, ‘ಬಿಂಬದೊಳಗಣ ಮಾತು’, ‘ನಾನೆಂಬ

ಮಾಯೆ’ ಮುಂತಾದ ಕವಿತಾ ಸಂಕಲನಗಳನ್ನು ಸುಕನ್ಯಾ ಅವರು ಪ್ರಕಟಿಸಿದ್ದಾರೆ.
ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
‘ಪ್ರಣಯಿನಿ’, ‘ಸಂಕೃತಿ’, ‘ಪ್ರಶಾಂತ’ ಎಂಬ ಕೃತಿಗಳನ್ನು .
ಸಂಪಾದಿಸಿಕೊಟ್ಟಿದ್ದಾರೆ.

ಒಮ್ಮೆ ನಗುತ್ತೇವೆ Notes | Omme Nagutteve Kannada Notes
ಒಮ್ಮೆ ನಗುತ್ತೇವೆ Notes | Omme Nagutteve Kannada Notes

ಶಬ್ದಾರ್ಥ:

ಕುದಿ-ಬೇಯು; ಮೊರೆಯಿಡು-ಬೇಡು, ಯಾಚಿಸು; ಕಂಬನಿ-ಕಣ್ಣೀರು; ಲಾವಾರಸ ಭೂಮಿಯಿಂದ ಹೊರಬರುವ ಜ್ವಾಲಾಮುಖಿ; ಧಗೆ-ಹೊಗೆ; ಹೊಳೆ-ಕಾಂತಿ; ಅಪೋಶನ-ಊಟದ ಮೊದಲು ಮತ್ತು ನಂತರ ಅಂಗೈಯಲ್ಲಿ ಹಾಕಿಕೊಂಡು
ಕುಡಿಯುವ ನೀರು/ಹಾಲು.

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ಪ್ರಬಂಧ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *