2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

Ondu Hu Hechige Edutini Kannada Notes, 2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌, ಒಂದು ಹೂ ಹೆಚ್ಚಿಗೆ ಇಡುತೀನಿ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Ondu Hoo Hechige Idutini Kannada Notes Question Answer Pdf Chapter 11, Ondu Hoo Hechige Idutini Questions and Answers Pdf, Notes, Summary, 2nd PUC Kannada Textbook Answers

Ondu Hu Hechige Edutini Kannada Notes

ಒಂದು ಹೂ ಹೆಚ್ಚಿಗೆ ಇಡುತೀನಿ ಪಾಠದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

Ondu Hu Hechige Edutini Kannada Notes

2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes
2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

ಮುದುಕ ಇರುವುದೆಲ್ಲಿ?
ಮುದುಕ ದೂರದ ಅಸ್ಸಾಮಿನಲ್ಲಿ ಕಿರಿಮಗ-ಸೊಸೆಯೊಂದಿಗಿದ್ದಾನೆ.

ಮೊಮ್ಮಗಳು ಏನು ಮಾಡುತ್ತಿದ್ದಳು?
ಮೊಮ್ಮಗಳು ಸ್ವಂತ ಕಂಪ್ಯೂಟರಿನಲ್ಲಿ ಮೂಜಗವನ್ನೇ ಆವಾಹಿಸಿಕೊಂಡು ಕುಳಿತಿದ್ದಳು.

ಮುದುಕಿ ಯಾವ ದೇವರಿಗೆ ಹರಕೆ ಹೊತ್ತಳು?
ಮುದುಕಿಯು ತನ್ನ ಮನೆದೇವರಾದ ಗುಟ್ಟೇಮಲ್ಲಪ್ಪನಿಗೆ ಹರಕೆ ಹೊತ್ತಳು

ಮುದುಕಿಯು ಏನೆಂದು ಹರಕೆ ಹೊತ್ತಳು?
ಮುದುಕಿಯು ಗಟ್ಟಿಪಾದಕ್ಕೆ ದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಹರಕೆ ಹೊತ್ತಳು.

ಮುದುಕಿಯ ಭಯಕ್ಕೆ ಕಾರಣವೇನು?
ಫೋನೆತ್ತಿಕೊಂಡರೆ ಸೊಸೆ ಏನೆನ್ನುವಳೋ ಎಂಬ ಭಯ ಮುದುಕಿಗೆ.

ಮುದುಕಿಗೆ ಯಾರಿಂದ ಫೋನ್ ಕರೆ ಬಂದಿತ್ತು?
ಮುದುಕನಿಂದ ಮುದುಕಿಗೆ ಫೋನ್ ಕರೆ ಬಂದಿತ್ತು

ಹೆಚ್ಚುವರಿ ಪ್ರಶ್ನೆಗಳು: Ondu Hu Hechige Edutini Kannada Notes

ಮುದುಕ ಏನನ್ನು ತಬ್ಬಿ ಹಿಡಿದಿದ್ದಾನೆ?
ಮುದುಕ ಫೋನುಗೂಡನ್ನೇ ತಬ್ಬಿ

ಮುದುಕಿ ಮಹಡಿಯ ಮೇಲಿರುವ ಯಾರನ್ನು ಕಾಡಿ ಕರೆಯುತ್ತಾಳೆ?
ಆ ಮುದುಕಿ ಮಹಡಿ ಮೇಲಿರುವ ಮೊಮ್ಮಗಳನ್ನು ಕಾಡಿ ಕರೆಯುತ್ತಾಳೆ.

ಮೊಮ್ಮಗಳು ಫೋನೆತ್ತಿ ಕುಕ್ಕಿ ಏನೆಂದಳು?’
ಮೊಮ್ಮಗಳು ಫೋನೆತ್ತಿ ಕುಕ್ಕಿ ರಾಂಗ್‌ನಂಬರ್ ಎಂದಳು.

ಮುದುಕಿ ಯಾರ ಜೊತೆ ಇದ್ದಾಳೆ?
ಮುದುಕಿಯು ಹಿರಿಯ ಮಗನ ಜೊತೆಗಿದ್ದಾಳೆ.

ಮುದುಕಿ ಯಾರೊಂದಿಗೆ ಮಾತಾಡಿ ತನ್ನ ಬಾಯತುರಿಕೆ ಕಡಿಮೆ ಮಾಡಿಕೊಳ್ಳುತ್ತಾಳೆ?
ಮುದುಕಿ ಮಗ-ಸೊಸೆ ಇಲ್ಲದಾಗ ಅಕ್ಕಪಕ್ಕದವರೊಡಗೂಡಿ ಮಾತಾಡುವ ಮೂಲಕ ಬಾಯತುರಿಕೆ ಕಡಿಮೆ ಮಾಡಿಕೊಳ್ಳುತ್ತಾಳೆ.

2nd Puc Ondu Hoo Hechige Idutini Notes Pdf

2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes
2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

ಮುದುಕಿಯ ಜೀವ ಎಳೆಯುತ್ತಿರುವುದೇಕೆ ?

ಮುದುಕ ( ಮುದುಕಿಯ ಪತಿ ) ದೂರದ ಅಸ್ಸಾಂನಲ್ಲಿ ಕಿರಿಮಗನ ಜೊತೆಗಿದ್ದನು . ಮುದುಕಿ ಹಿರಿ ಮಗನ ಜೊತೆಗಿದ್ದಳು . ವೃದ್ಧಾಪ್ಯದಲ್ಲಿ ಒಬ್ಬರನ್ನೊಬ್ಬರು ಅಗಲಿ ಇರಬೇಕಾದ ಪರಿಸ್ಥಿತಿ ಉಂಟಾಗಿತ್ತು . ಯಾರು ಇಲ್ಲದ ಸಮಯದಲ್ಲಿ ಮಾತ್ರ ಇಬ್ಬರು ಸಾವಕಾಶವಾಗಿ ಫೋನಿನಲ್ಲಿ ಮಾತನಾಡಬಹುದಿತ್ತು . ಅದಕ್ಕಾಗಿ ಮುದುಕಿಯ ಜೀವ ಮುದುಕನ ಫೋನ್‌ಗಾಗಿ ಜೀವ ಎಳೆಯುತ್ತಿತ್ತು .

ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದ್ದೇಕೆ ?

ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದಳು . ಏಕೆಂದರೆ , ಎಲ್ಲರೂ ಹೊರಗೆ ಹೋಗಿದ್ದಾರೆ . ಸೊಸೆಯು ಹೊರಗಿನ ಕೆಲಸಕ್ಕೆ ಹೋದರೆ ಮುದುಕನ ( ತನ್ನ ಪತಿಯ ) ಬಳಿ ಸಾವಕಾಶವಾಗಿ ಮಾತಾಡಬಹುದೆಂದು ಮುದುಕಿ ಬಯಸಿದಳು .

ಮೊಮ್ಮಗಳ ಆತುರಕ್ಕೆ ಮುದುಕಿ ಏನೆಂದುಕೊಂಡಳು ?

ಮೊಮ್ಮಗಳ ಆತುರವನ್ನು ಕಂಡು ಮುದುಕಿಯು “ ಈ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ , ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ ” ಎಂದು ಯೋಚಿಸಿದಳು .

ಮುದುಕಿಯು ಯಾರನ್ನು ಏನೆಂದು ಪ್ರಾರ್ಥಿಸುವಳು ?

ಮುದುಕಿಯು ಗುಟ್ಟೆಮಲ್ಲಪ್ಪನಿಗೆ – ಸೊಸೆಯೊಬ್ಬಳಿಗೆ ಈ ಹೊತ್ತು ದೇವರೆ ಹೊರಗಿನ ಕೆಲಸ ಸಮ್ಮಿಸಲಿ , ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿ ಪಾದಕ್ಕೆ ಎಂದು ಪ್ರಾರ್ಥಿಸಿದಳು .

ಮುದುಕ ಏನೆಂದು ಗೋಗರೆಯುತ್ತಾನೆ ?

ಬೆಳಗಿನಿಂದ ರಾತ್ರಿಯವರೆಗೆ ತಾನೊಬ್ಬನೆ , ತನ್ನೊಡನೆ ಯಾರು ಮಾತನಾಡುವವರಿಲ್ಲ . ಮಾತು ಮರೆತಂತೆ ಆಗುತ್ತಿದೆ . ನೀನಾದರೂ ನನ್ನೊಡನೆ ಮಾತನಾಡು ಮಾತಾಡು ಮಾತು ಆಡುತ್ತಲೇ ಇರು ‘ ಎಂಬುದಾಗಿ ಮುದುಕ ಮುದುಕಿಯನ್ನು ಗೋಗರೆಯುತ್ತಾನೆ .

ಐದಾರು ವಾಕ್ಯದಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )

ಮುದುಕನ ಕುರಿತು ಮುದುಕಿಯ ನೆನಕೆಗಳೇನು ?

ಮುದುಕನನ್ನು ಕುರಿತು ಮುದುಕಿಗೆ ನೆನಪು ತುಂಬಾ ಕಾಡುತ್ತಿತ್ತು . ಮುದುಕಿ ಇರುವುದು ಕನ್ನಡ ದೇಶದಲ್ಲಿ , ಆದರೆ ಮುದುಕ ಇದ್ದುದು ಅಸ್ಸಾಂನಲ್ಲಿ , ಕಿರಿಯ ಮಗ ಸೊಸೆ ಬೆಳಿಗ್ಗೆ ಹೋದರೆ ಬರುತ್ತಿದ್ದುದ್ದು ರಾತ್ರಿ ಮಾತನಾಡುವವರು ಯಾರು ಇಲ್ಲ . ನೆರೆಹೊರೆಯವರ ಬಳಿ ಮಾತಾಡೋಣವೆಂದರೆ ಭಾಷೆ ಸ್ವಲ್ಪವೂ ತಿಳಿಯದು . ಫೋನು ಮಾಡಿದಾಗ ಮುದುಕ “ ಮಾತೆ ಮರೆತು ಹೋಗಿದೆ ಕಣೆ . ಮಾತಾಡು ಮಾತಾಡು . ಮಾತಾಡುತ್ತಿರು ನಿಲ್ಲಿಸಬೇಡ ಎಂದು ಗೋಗರೆಯುತ್ತಾನೆ ‘ ಈ ನೆನಪುಗಳು ಮುದುಕಿಗೆ ತಳಮಳವನ್ನುಂಟು ಮಾಡುತ್ತದೆ .

ಮಗ , ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ಹೇಗೆ ನಡೆಸಿಕೊಳ್ಳುವರು ?

ಮಗ , ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ತಾಯಿ , ಅತ್ತೆ , ಅಜ್ಜಿ ಎಂಬ ಸಂಬಂಧವನ್ನು ಮರೆತು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದ್ದರು . ಮುದುಕಿ ಹೇಳುವಂತೆ , ಸೊಸೆ ಏನೆನ್ನುವಳೋ , ಮಗ ಗದರಬಹುದು . ಇನ್ನು ಮೊಮ್ಮಗಳಿಗೆ ಗಡಿಬಿಡಿ , ರೈಟ್‌ನಂಬರನ್ನು ರಾಂಗ್ ಎಂದಳೇನೋ ಹೀಗೆ ಎಲ್ಲರೂ ಮುದುಕಿಯ ಬಗ್ಗೆ ತಾತ್ಸಾರ ತೋರುವವರೇ ಆಗಿದ್ದರು .

ವೃದ್ಧರ ತವಕ – ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ ?

ವೃದ್ಧರ ತವಕ – ತಲ್ಲಣಗಳನ್ನು ಕವಯಿತ್ರಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ . ತನ್ನ ಜೀವನ ಸಂಗತಿಯಿಂದ ದೂರವಾಗಿ ಮಗನ ಆಶ್ರಯದಲ್ಲಿರುವ ಮುದುಕಿಯೊಬ್ಬಳ ತಳಮಳವನ್ನು ಈ ಕವಿತೆ ಚಿತ್ರಿಸಿದೆ . ಮತ್ತೊಬ್ಬ ಮಗನ ಬಳಿಯಿರುವ ಮುದುಕನ ಬಗೆಗೆ ಅವಳಲ್ಲಿ ಕಳಕಳಿ – ಚಿಂತೆಗಳು ತುಂಬಿವೆ . ಫೋನಿನ ಮೂಲಕ ಪರಸ್ಪರರ ದನಿ ಕೇಳಲು ಚಡಪಡಿಸುವ ಈ ಹಿರಿಯ ಜೀವಗಳು ಇಂದಿನ ಕೃತಕ ಸಂಬಂಧಗಳನ್ನು ಕುಟುಕುವಂತಿದೆ . ವೃದ್ಧರನ್ನು ಗೌರವ , ಪ್ರೀತಿ , ಆದರಗಳಿಂದ ಕಾಣುವ ಮನೋಭಾವ , ಕರ್ತವ್ಯಕಷ್ಟೇ ಸೀಮಿತವಾಗಿರುವುದನ್ನು ಈ ಕವಿತೆ ಹೃದ್ಯವಾಗಿ ನಿರೂಪಿಸಿದೆ .

ಮುದುಕಿಯ ತಳಮಳವು ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ ?

ಮುದುಕಿ , ತನ್ನ ಪತಿಗಾಗಿ ಹಂಬಲಿಸುತ್ತಾ ಫೋನಿನಲ್ಲಿ ಆತನೊಡನೆ ಮಾತನಾಡಬೇಕು . ಆತನ ಕ್ಷೇಮ ವಿಚಾರಿಸಬೇಕು ಎಂಬ ತವಕ . ಫೋನು ರಿಂಗಾದಾಗ ಎತ್ತಿದರೆ ಸೊಸೆ ಎನ್ನಬಹುದೋ ಮಗ ‘ ಎಷ್ಟು ಸಲ ಹೇಳುವುದು ನಿನಗೆ ? ‘ ಎಂದು ಗದರಬಹುದು . ಯಾರಾದರು ಬಂದು ಫೋನು ತೆಗೆದುಕೊಳ್ಳಬಾರದೆ ಎಂದು ಒಮ್ಮೆ ಕಿಚನ್ ಕಡೆಗೆ ಮತ್ತೊಮ್ಮೆ ಸ್ಟಡಿರೂಂ ಕಡೆಗೆ ನೋಡತೊಡಗಿದರು . ಯಾರು ಕಾಣದಿದ್ದಾಗ ಮಂಡಿನೋವು ಇದ್ದರೂ ಮೊಮ್ಮಗಳನ್ನು ಕೂಗಿದರೆ ರಾಂಗೆಂದಳೋ ಎಂದು ಹೀಗೆ ಮುದುಕನ ಬಳಿ ಮಾತಾಡಲು ಆಕೆ ತಳಮಳಗೊಳ್ಳುತ್ತಿದ್ದುದನ್ನು ಕವಯಿತ್ರಿ ಬಹಳ ಸೊಗಸಾಗಿ ವರ್ಣಿಸಿದ್ದಾರೆ .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

“ ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು “

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ರಚಿಸಿರುವ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಮುದುಕಿ ಇರುವುದು ಹಿರಿಯ ಮಗನ ಬಳಿ , ಸದ್ಯ ಅದು ಕನ್ನಡ ಪ್ರದೇಶ , ಆದರೆ ಮುದುಕ ಕಿರಿಮಗ ಸೊಸೆಯೊಂದಿಗೆ ದೂರದ ಅಸ್ಸಾಮಿನಲ್ಲಿದ್ದಾನೆ . ತಾನಾದರೂ ಇಲ್ಲಿ ಯಾರೂ ಮನೆಯಲ್ಲಿಲ್ಲದ್ದಾಗ ಅವರಿವರೊಂದಿಗೆ ಕನ್ನಡದಲ್ಲಿ ಮಾತನಾಡಿ ಬಾಯಿತುರಿಕೆ ತೀರಿಸಿಕೊಳ್ಳಬಹುದು . ಆದರೆ ಮುದುಕನಿಗೆ ಅಸ್ಸಾಮಿ ಭಾಷೆ ಸ್ವಲ್ಪವೂ ಬಾರದು . ಹೀಗಾಗಿ ಆತನಿಗೆ ಮಾತೇ ಮರೆತು ಹೋಗಿದೆ ಎಂದು ಮುದುಕಿಯೊಂದಿಗೆ ಹೇಳಿಕೊಂಡಿದ್ದನ್ನು ಮುದುಕಿಯು ನೆನಪಿಸಿಕೊಳ್ಳುವ ಸಂದರ್ಭವಿದಾಗಿದೆ .

“ ಇನ್ನೊಂದು ಸೇರ್ಪಡೆ ಆ ಲೀಲಾ ಮಾತ್ರನಿಗೆ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ಕೊನೆಯ ವಾಕ್ಯವಿದು . ಇದನ್ನು ಕವಯಿತ್ರಿಯೇ ಅತ್ಯಂತ ವಿಷಾದದಿಂದ ಹೇಳಿದ್ದಾರೆ . ಮುದುಕನಿಂದ ಕರೆ ಬಂದ ಸಂದರ್ಭದಲ್ಲಿ ಮನೆಯವರೆಲ್ಲರೂ ಹೊರ ಹೊರಟರೆ ತಾನು ನಿರಾತಂಕವಾಗಿ ಮುದುಕನೊಂದಿಗೆ ಸ್ವಲ್ಪ ಹೊತ್ತು ಮಾತನಾಡಬಹು ದೆಂದು ಮುದುಕಿಯು ಯೋಚಿಸುತ್ತಾಳೆ . ಅವಳು ಇದುವರೆಗೆ ಸಲ್ಲಿಸಿರುವ ಇಂತಹ ಒಂದು ದೊಡ್ಡ ಗಂಟೆ ದೇವರ ಬಳಿ ಇರುವಾಗ ಈಗಿನ ಅವಳ ಪ್ರಾರ್ಥನೆಯು ಇನ್ನೊಂದು ಸೇರ್ಪಡೆ ಎಂದು ಕವಯಿತ್ರಿ ವಿಷಾದದಿಂದ ಹೇಳಿದ್ದಾರೆ .

“ ಮಾತೇ ಮರೆತು ಹೋಗಿದೆ ಕಣೆ “

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ವಾಕ್ಯವಿದು . ಇದನ್ನು ಮುದುಕ ಮುದುಕಿಗೆ ಹೇಳಿರುವುದಾಗಿದೆ . ದೂರದ ಅಸ್ಸಾಮಿನಲ್ಲಿ ಕಿರಿಮಗನ ಮನೆಯಲ್ಲಿರುವ ಆತನಿಗೆ ಒಂಟಿತನ ಕಾಡುತ್ತಿದೆ . ಗುಡ್ಡದ ಮೇಲಿರುವ ವಸತಿಗೃಹದಲ್ಲಿ ಆತ ಒಂಟಿಯಾಗಿದ್ದಾನೆ . ಮಗ – ಸೊಸೆ ಬೆಳಿಗ್ಗೆ ಕೆಲಸಕ್ಕೆ ಹೋದರೆ ಹಿಂದಿರುಗುವುದು ಕತ್ತಲಾದ ಮೇಲೆ , ಅಕ್ಕಪಕ್ಕದವರೊಂದಿಗೆ ಮಾತನಾಡಲು ಅಲ್ಲಿಯ ಭಾಷೆ ಬರುವುದಿಲ್ಲ . ಹೀಗಾಗಿ ಆತನಿಗೆ ಮಾತೇ ಮರೆತು ಹೋದಂತಾಗಿದೆ . ಇದನ್ನಾತ ಮುದುಕಿಗೆ ಕರೆ ಮಾಡಿದಾಗ ತಿಳಿಸಿದ್ದಾನೆ .

“ ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಮುದುಕಿಯು ಫೋನ್ ರಿಸೀವ್ ಮಾಡುವಂತೆ ಮಹಡಿ ಮೇಲಿದ್ದ ಮೊಮ್ಮಗಳನ್ನು ಕಾಡುತ್ತಾಳೆ . ಕಂಪ್ಯೂಟರ್ ಪರದೆಯ ಮೇಲೆ ಮೂಜಗವನ್ನೇ ಆವಾಹಿಸಿ ಕೊಂಡು ಕುಳಿತಿದ್ದ ಆಕೆಗೆ ಆಜ್ಜಿಯ ಕಾಟದಿಂದ ಕಿರಿಕಿರಿಯಾಯಿತು . ಅವಳು ಧಡಧಡನೆ ಮೆಟ್ಟಲಿಳಿದು ಬಂದು , ಫೋನ್ ರಿಸೀವರನ್ನು ಎತ್ತಿ ಕುಕ್ಕಿ ‘ ರಾಂಗ್ ನಂಬರ್ ‘ ಎಂದು ಕ್ಷಣಾರ್ಧದಲ್ಲಿ ಮಾಯವಾದಳು . ಆಗ ಮುದುಕಿಯು ತನ್ನ ಮೊಮ್ಮಗಳು ಸರಿಯಾಗಿ ಕೇಳಿಸಿಕೊಂಡಳೋ ಅಥವಾ ಬಿಟ್ಟರೆ ಸಾಕೆಂದು ರೈಟನ್ನೇ ರಾಂಗೆಂದಳೋ ಎಂಬ ಅನುಮಾನ ಕಾಡುವ ಸಂದರ್ಭವಿದಾಗಿದೆ .

“ ಎಷ್ಟುಸಲವಮ್ಮ ಹೇಳುವುದು ನಿನಗೆ ? ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ ಒಂದು ಹೂ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮುದುಕಿಯ ಮಗ ಈ ಮೇಲಿನಂತೆ ಗದರಬಹುದೆಂದು ತನ್ನೊಳಗೆ ಯೋಚಿಸುತ್ತಾಳೆ . ಫೋನು ಝಣಗುಡುತ್ತಿದೆ . ಅದು ಮುದುಕನದಾಗಿರಬಹುದೆಂದು ಭಾವಿಸಿದ ಮುದುಕಿ ಯಾರೂ ಬರದಿದ್ದಾಗ ತಾನೇ ಎತ್ತಿಕೊಳ್ಳಲು ಹಿಂಜರಿಯುತ್ತಾಳೆ . ಫೋನ್ ಮುಟ್ಟಿದರೆ ಸೊಸೆ ಕೋಪಿಸಿಕೊಳ್ಳಬಹುದು , ಮಗ ಎಷ್ಟು ಸಲವಮ್ಮ ಹೇಳುವುದೆಂದು ಗದರಬಹುದೆಂಬ ಭಯ ಆಕೆಯದು . ಹಿಂದೆ ಗದರಿರುವ ಅನುಭವಗಳು ಈಗ ಈ ರೀತಿ ಯೋಚಿಸುವಂತೆ ಮಾಡಿದೆ . ಅವಲಂಬಿತಳಾಗಿರುವ ಆಕೆಗೆ ಮಗನ ಮನೆಯಲ್ಲಿ ಸ್ವಾತಂತ್ರ್ಯವೇ ಇಲ್ಲ . ಮಗನ ಬಗ್ಗೆ ಭಯದಿಂದಲೇ ವರ್ತಿಸಬೇಕಾದ ಸ್ಥಿತಿ ಮುದುಕಿಯದು .

“ ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ ”

ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರ ‘ ಒಂದು ಹಣ ಹೆಚ್ಚಿಗೆ ಇಡುತೀನಿ ‘ ಎಂಬ ಕವಿತೆಯ ವಾಕ್ಯವಿದು . ಇದು ಮುದುಕಿಯು ತನ್ನೊಳಗೇ ದೇವರಿಗೆ ಸಲ್ಲಿಸಿರುವ ಪ್ರಾರ್ಥನೆಯಾಗಿದೆ .ಮುದುಕನಿಂದ ಕರೆ ಬಂದ ಸಮಯದಲ್ಲೇ ಮಗನ ಕಾರು , ಮೊಮ್ಮಗಳ ಸ್ಕೂಟಿ ಹೊರಟ ಸದ್ದು ಕೇಳಿದೆ . ಮೊಮ್ಮಗ ಸ್ಕೂಲಿಗೆ ಹೋಗುವ ವ್ಯಾನೂ ಬಂದಾಯಿತು . ಇನ್ನಿರುವ ಅಡ್ಡಿಯೆಂದರೆ ಸೊಸೆ . ಅವಳಿಗೂ ಹೊರಗಡೆಯ ಕೆಲಸ ಸಮ್ಮಿಲಿಸಿದರೆ ತಾನು ಮುದುಕನೊಂದಿಗೆ ಸ್ವಲ್ಪ ಹೊತ್ತು ನಿರಾಳವಾಗಿ ಮಾತನಾಡಿಕೊಳ್ಳಬಹುದು . ಇದಕ್ಕೆ ಅವಕಾಶ ಮಾಡಿಕೊಟ್ಟರೆ ತನ್ನ ಮನೆದೇವರಾದ ಗುಟೆಮಲ್ಲಪ್ಪನಿಗೆ ಒಂದು ಹೂ ಹೆಚ್ಚಿಗೆ ಇಡುವುದಾಗಿ ಮುದುಕಿಯು ಸಲ್ಲಿಸುವ ಪ್ರಾರ್ಥನೆಯಾಗಿದೆ .

Ondu Hu Hechige Edutini Kannada Notes 2nd PUC

2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes
2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

ಒಂದು ಹೂ ಹೆಚ್ಚಿಗೆ ಇಡುತೀನಿ ಕವಿ ಪರಿಚಯ:

ಶ್ರೀಮತಿ ಲಲಿತಾ ಸಿದ್ದಬಸವಯ್ಯ (ಜನನ: 27-02-1955) ವರ್ತಮಾನದ ಸರಳ ಸಾಮಾನ್ಯ ಸಂಗತಿಗಳನ್ನು, ಅವುಗಳ ಒಳವಿವರಗಳೊಂದಿಗೆ ಕವಿತೆಯನ್ನಾಗಿ ಕಟ್ಟುವ ಕೌಶಲವನ್ನು ಕರಗತವಾಗಿಸಿಕೊಂಡಿರುವ ಅಪರೂಪದ ಕವಯಿತ್ರಿ. ಇವರು ತುಮಕೂರು ಜಿಲ್ಲೆಯ ಕೊರಟಗೆರೆಯ ಜನಿಸಿದರು. ಇವರ ತಂದೆ ಡಿ.ಎಸ್. ಸಿದ್ದಲಿಂಗಯ್ಯ, ತಾಯಿ ಆ‌. ಪುಟ್ಟಮ್ಮಣ್ಣಿ, ಕೊರಟಗೆರೆ- ತುಮಕೂರುಗಳಲ್ಲಿ ವ್ಯಾಸಂಗ ಮುಗಿಸಿ, ಬಿ.ಎಸ್ಸಿ. ಪದವೀಧರೆಯಾದರು. 28 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

‘ಮೊದಲಸಿರಿ’, ‘ಇಹದ ಸ್ವರ’, ‘ಕೆಬ್ಬೆ ನೆಲ’, ‘ದಾರಿನೆಂಟ ಮತ್ತು ಬಿಡಿ ಹರಳು’ ಎಂಬ ಕವಿತಾ ಸಂಕಲನಗಳನ್ನೂ ‘ಆನೆಘಟ್ಟ’ ಎಂಬ ಕಥಾಸಂಕಲನವನ್ನೂ, ‘ಇನ್ನೊಂದು ಸಭಾಪರ್ವ’ ಎಂಬ ನಾಟಕವನ್ನೂ, ‘ಮಿ, ಛತ್ರಪತಿ’ ಎಂಬ ನಗೆಬರಹವನ್ನೂ ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್‌ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.

Ondu Hu Hechige Edutini Kannada Notes second puc

2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes
2nd PUC ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್‌ | Ondu Hu Hechige Edutini Kannada Notes

ಟಿಪ್ಪಣಿ:

  1. ಸಸೇಮಿರ:
    ಸಸೇಮಿರ ಎಂಬ ಪದವು ತುಮಕೂರು ಮುಂತಾದ ಪ್ರದೇಶದಲ್ಲಿ ಬಳಕೆಯಾಗುತ್ತಿದೆ. ‘ಸ್ವಲ್ಪವೂ ಬರದು’, ‘ಏನೂ ತಿಳಿದಿಲ್ಲ’ ಎಂಬರ್ಥದಲ್ಲಿ ಬಳಕೆಯಾಗುವ ಈ ಪದದ ಮೂಲ ತೆಲುಗು, ಬಳಕೆಯಿಂದ ದೂರ ಸರಿಯುತ್ತಿರುವ ಇಂತಹ ಪದಗಳನ್ನು ಕವಯಿತ್ರಿ ವಿಶೇಷವಾಗಿದೆ ಬಳಸಿರುವುದು
  2. ಕಡುಬಿನ ಸೋರೆ:
    ಸೋರೆ ಎಂದರೆ ಅಡುಗೆ ಮಾಡಲು, ಮಾಡಿದ ಅಡುಗೆ ಎತ್ತಿಡುವುದಕ್ಕೆ, ಕೆಲವೊಮ್ಮೆ ಕಾಳುಕಡಿ ತ್ತಿಡುವುದಕ್ಕೆ ಅಡುಗೆ ಮನೆಯಲ್ಲಿ ಬಳಸುವ ಮಣ್ಣಿನ ಪಾತ್ರೆ ಕುಡಿಕೆ, ಗಡಿಗೆ, ಮೊಗೆ, ಹರುವಿ, ಗುಡಾಣ, ವಾಡೆ ಇತ್ಯಾದಿಗಳ ಹಾಗೆ ಸೋರೆ ಕೂಡಾ ಮನೆಬಳಕೆಯ ಮಣ್ಣಿನ ಪಾತ್ರೆ, ಈಗಲೂ ಕೆಲವು ಗ್ರಾಮಗಳಲ್ಲಿ ಇವುಗಳ ಬಳಕೆಯುಂಟು.
    ಹಿಟ್ಟು ಮಾಡಲು ಬಳಸುವ ಲಾಗಾಯ್ತಿನ ಸೋರೆಗೆ ಹಿಟ್ಟಿನ ಸೋರೆ, ಎಸರು ಅಂದರೆ ಸಾರಿಗೆ ಬಳಸಿದರೆ ಎಸರಿನ ಸೋರೆ, ಮಜ್ಜಿಗೆ ಕಡೆಯಲು ಪಳಗಿಸಿದರೆ ಮಜ್ಜಿಗೆ ಸೋರೆ ಹಾಗೆ ಕಡುಬು ಎತ್ತಿಡಲು ಮೀಸಲಿಟ್ಟಿದ್ದು ಕಡುಬಿನ ಸೋರೆ.
  3. ಗುಟ್ಟೇಮಲ್ಲಪ್ಪ:
    ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ
    ‘ಗುಟ್ಟೇಮಲ್ಲಪ್ಪ’ ದೇವಾಲಯವಿದೆ. ಗ್ರಾಮದೈವದ ಉಲ್ಲೇಖವನ್ನು ಮುದುಕಿಯ
    ಮೂಲಕ ಮಾಡಿರುವ ಕವಯತ್ರಿ ಪ್ರಾದೇಶಿಕ ಸೊಬಗನ್ನು ಕವಿತೆಯಲ್ಲಿ
    ಮೂಡಿಸಿದ್ದಾರೆ.

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ವಿಭಕ್ತಿ ಪ್ರತ್ಯಯಗಳು ಕನ್ನಡ

ಕನ್ನಡ ಕಾಗುಣಿತ

ಕನ್ನಡ ಸಮಾಸಗಳು

ಕನ್ನಡ ಪತ್ರ ಲೇಖನಗಳು

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *