10th Kannada Kemmane Meesevothene Poem Notes | 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಕನ್ನಡ ಪ್ರಶ್ನೋತ್ತರಗಳು

ಕೆಮ್ಮನೆ ಮೀಸೆವೊತ್ತೆನೇ Notes 10ನೆಯ ತರಗತಿ | Kemmane Misevottane Questions and Answers Free For Students

Kemmane Misevottane , 10th Standard Kemmane Meesevothene Notes question answer, text book pdf download 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ , kemmane meesevottene summary in kannada

Kemmane Misevottane Questions and Answers

ಈ ಲೇಖನದಲ್ಲಿ 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.

ಲೇಖಕರ ಪರಿಚಯ Kemmane Misevottane Kavi Parichaya

10ನೆಯ ತರಗತಿ ಪದ್ಯ-8 ಕೆಮ್ಮನೆ ಮೀಸೆವೊತ್ತೆನೆ

ಕವಿ : ಪಂಪ
  • ಕಾಲ : ಕ್ರಿ.ಶ. 941
  • ಸ್ಥಳ : ವೆಂಗಿ ಮಂಡಲದ ವೆಂಗಿಪಳು ಅಗ್ರಹಾರ
  • ಕೃತಿಗಳು : ಆದಿಪುರಾಣ , ವಿಕ್ರಮಾರ್ಜುನ ವಿಜಯಂ
  • ಬಿರುದು : ಸರಸ್ವತೀ ಮಣಿಹಾರ , ಸಂಸಾರ ಸಾರೋದಯ , ಕವಿತಾಗುಣಾರ್ಣವ
  • ವಿಶೇಷ : ಚಾಲುಕ್ಯರ ಅರಿಕೇಸರಿಯ ಆಸ್ಥಾನಕವಿ
  • ಆಕರಗ್ರಂಥ : ವಿಕ್ರಮಾರ್ಜುನ ವಿ
  • ಜಯ ( ಪಂಪಭಾರತ )

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ Kemmane Misevottane Notes

ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?

ದ್ರೋಣನಿಗೆ ಬಡತನವುಂಟಾಗಿದ್ದರಿಂದ ಪರಶುರಾಮರಲ್ಲಿಗೆ ಬಂದನು .

ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ?

ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು .

ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು

ಪರಶುರಾಮನು ದ್ರೋಣನಿಗೆ ವರುಣ , ವಾಯು , ಅಗ್ನಿ , ಇಂದ್ರಾದಿ ಅಸ್ತ್ರಗಳನ್ನು ಕೊಟ್ಟನು .

Kemmane Misevottane kseeb solutions for class 10 kannada poem 8

ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು ?

ದ್ರೋಣನೆಂಬ ಬ್ರಾಹ್ಮಣನು ತನಗೆ ಪರಿಚಯವಿಲ್ಲ . ಅವನನ್ನು ಹೊರಗೆ ತಳ್ಳು ಎಂದು ದ್ರುಪದನು ಪಡಿಯರನಿಗೆ ಅಂದರೆ ದ್ವಾರಪಾಲಕನಿಗೆ ಹೇಳಿ ಕಳುಹಿಸಿದನು .

ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. Kemmane Misevottane 3-4 Vakya

ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಭ್ಯವನ್ನು ಕೊಡಲು ಕಾರಣವೇನು ?

ಪರಶುರಾಮನು ತನ್ನ ಪದಾರ್ಥಗಳನ್ನು ಬೇಡಿದವರಿಗೆ ಕೊಟ್ಟಿದ್ದನು . ಭೂಮಂಡಲವನ್ನು ಗುರುಗಳಿಗೆ ಕೊಟ್ಟಿದ್ದನು . ಆತನ ಬಳಿ ಒಂದಡಕೆಯೂ ಇರಲಿಲ್ಲ ಚಿನ್ನದ ಪಾತ್ರೆಗಳು ಇಲ್ಲದ್ದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟನು .

ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು ?

ದುಪ್ರದನು ದ್ರೋಣರಿಗೆ “ ನಿನ್ನನ್ನು ನಾನು ತಿಳಿದಿಲ್ಲ , ನೀನು ನನಗೆ ಅಪರಿಚಿತನು . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೋ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೆ ? ಎಂದು ಹೇಳಿದನು .

ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು ?

ದುಪ್ರದನ ಮಾತಿಗೆ ದ್ರೋಣನು ಪ್ರತ್ಯುತ್ತರವಾಗಿ “ ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ . ಈ ಸಭಾ ಮಂಡಲದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸುತ್ತೇನೆ ಎಂದನು .

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . Kemmane Misevottane 8-10 vkyagalu

ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ ?

ದ್ರೋಣನು ಬಡವನಾದುದರಿಂದ ಸಹಾಯ ಪಡೆಯಲು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ರಾಜ್ಯಭಾರ ಮಾಡುತ್ತಿದ್ದ ಛತ್ರಾವತಿಗೆ ಬರುತ್ತಾನೆ , ದ್ರೋಣನು ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ಹೀಗೆಂದನು “ ನಿಮ್ಮ ಜೊತೆಯಲ್ಲಾಡಿದ ಸ್ನೇಹಿತರಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಸು ” ಎಂದನು . ದ್ವಾರಪಾಲಕರು ಮಹಾರಾಜ ದ್ರುಪದನಿಗೆ ಆ ಸುದ್ದಿಯನ್ನು ಮುಟ್ಟಿಸಿದನು .

ಆಗ ದುಪ್ರದನು ಆಶ್ಚರ್ಯವನ್ನು ವ್ಯಕ್ತಪಡಿಸಿ ಅವನನ್ನು ಹೊರಗೆ ತಳ್ಳು ಎಂದು ಆಜ್ಞಾಪಿಸಿದನು . ದ್ವಾರಪಾಲಕನ ಮೂಲಕ ಈ ಸುದ್ದಿ ಕೇಳಿ ಬಲವಂತದಿಂದ ಅರಮನೆಯ ಒಳಕ್ಕೆ ಪ್ರವೇಶಿಸಿ ದ್ರುಪದನನಿಗೆ ಪ್ರಶ್ನಿಸಿದನು ತಾವಿಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿದನು . ಆದರೆ ದ್ರುಪದನನು ತನಗೆ ಅದಾವುದೂ ನೆನಪಿಲ್ಲ ನೀನು ನಾಚಿಕೆಗೆಟ್ಟವನು ಎಂದು ಹೀಯಾಳಿಸಿದನು ಆಗ ದ್ರೋಣನು ಕೋಪಗೊಂಡು ನನ್ನ ಜೊತೆಯಲ್ಲಿ ನೀನು ವಿದ್ಯಾಭ್ಯಾಸ ಮಾಡಿರುವೆ ಎಂದು ನಿನ್ನನ್ನು ಕೊಲತ್ತಾರೆ . ಆದರೆ ನನ್ನ ಶಿಷ್ಯರಿಂದ ನೀನು ಗಾಬರಿಯಾಗುವಂತೆ ಕಟ್ಟಿಸುತ್ತೇನೆ . ಇಲ್ಲದಿದ್ದರೆ ನಾನು ಮೀಸೆ ಹೊತ್ತಿರುವುದೇ ವ್ಯರ್ಥ ಎಂದನು .

ದ್ರೋಣನೂ ದ್ರುಪದನ ವಿರುದ್ಧ ಶಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ .

ದ್ರೋಣ ಹಾಗೂ ದ್ರುಪದ ಇಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರೂ ಕೆಲವು ವರ್ಷಗಳ ನಂತರ ದ್ರೋಣನು ಬಡತನ ಅನುಭವಿಸಬೇಕಾಯಿತು ತನ್ನ ಮಿತ್ರನಾದ ದ್ರುಪದನ ಬಳಿ ಸಹಾಯ ಪಡೆಯಲು ಛತ್ರಾವತಿಗೆ ಬಂದನು . ದ್ರುಪದನು ಈ ವಿಷಯ ಕೇಳಿ ಅಹಂಕಾರವನ್ನು ಪ್ರದರ್ಶಿಸುತ್ತಾನೆ . ದ್ರೋಣನನ್ನು ಹೊರಗೆ ತಳ್ಳುವಂತೆ ಆಜ್ಞಾಪಿಸುತ್ತಾನೆ .

ಅಧಿಕಾರದ ಮದದಿಂದ ಹೀಗೆ ಮಾಡುತ್ತಿರುವುದೆಂದು ದ್ರೋಣನಿಗೆ ತಿಳಿಯುತ್ತದೆ . ತನ್ನನ್ನು ಸಭಾ ಮಧ್ಯದಲ್ಲಿ ಕೆಟ್ಟ ರೀತಿಯಲ್ಲಿ ಅವಮಾನಿಸಿದ್ದರಿಂದ ಕೋಪಗೊಂಡು ದುಪದನ ವಿರುದ್ಧ ಶಪಥಮಾಡುತ್ತಾನೆ . ತನ್ನ ಶಿಷ್ಯರಿಂದಲೇ ಸೋಲುಂಟಾಗುವಂತೆ ಮಾಡುತ್ತೇನೆಂದು ಹೇಳುತ್ತಾನೆ .

ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ . Kemmane Misevottane Sandarbanusara svarasyavannu bareyiri
“ ಈಗಳೊಂದಡಕೆಯುಮಿಲ್ಲ ಕೈಯೊಳ್ ”

ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ಪರಶುರಾಮನು ದ್ರೋಣನಿಗೆ ಹೇಳಿದನು ಬಡತನದಿಂದ ಕೂಡಿದ್ದ ದ್ರೋಣನು ಪರಶುರಾಮನ ಬಳಿ ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ .

ಪರಶುರಾಮನು ತನ್ನೆಲ್ಲಾ ಆಸ್ತಿಯನ್ನು ಬೇರೆಯವರಿಗೆ ಕೊಟ್ಟನಂತರ ತನ್ನ ಬಳಿ ಏನು ಇಲ್ಲ ಎನ್ನುವಾಗ ಒಂದಡರೆಯೂ ಇಲ್ಲ ಎನ್ನುತ್ತಾನೆ . ದ್ರೋಣನಿಗೆ ಏನೂ ಕೊಡಲಾಗುತ್ತಿಲ್ಲವಲ್ಲ ಎಂಬ ಕಳಕಳಿಯ ಸ್ವಾರಸ್ಯ ಈ ಮಾತಿನಲ್ಲಿ ಕಾಣಬಹುದು.

“ ವಿದ್ಯಾಧನಮೆ ಧನಮಪ್ಪುದು ”

ವಿಕ್ರಮಾರ್ಜುನ ವಿಜಯಂ ‘ ಎಂಬ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರೋಣನು ಪರಶುರಾಮನಿಗೆ ಹೇಳುತ್ತಾನೆ . ಪರಶುರಾಮನು ತನ್ನ ಬಳಿ ಬೇಡಲು ಬಂದ ದ್ರೋಣನಿಗೆ ಬಿಲ್ಲು ಹಾಗೂ ದಿವ್ಯಾಸ್ತ್ರಗಳಲ್ಲಿ ಯಾವುದನ್ನು ಆರಿಸಿಕೊಳ್ಳುವೆ ಎಂದು ಕೇಳಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ವಿದ್ಯೆಯೇ ನಿಜವಾದ ಆಸ್ತಿ ಎಂಬ ಸ್ವಾರಸ್ಯಕರವಾದ ಮಾತುಗಳನ್ನು ಇಲ್ಲಿ ಕಾಣಬಹುದಾಗಿದೆ .

“ ಎಂತು ನಾಣಿಲಿಗರಪ್ಪರೆ ಮಾನಸರ್ ”

ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರುಪದನು ದ್ರೋಣನಿಗೆ ಹೇಳುತ್ತಾನೆ . ದ್ರೋಣನು ದ್ರುಪದನ ಬಳಿ ಬಂದು ನನ್ನ ಪರಿಚಯ ನಿನ್ನಗಿಲ್ಲವೆ ಎಂದಾಗ ಈ ಮಾತು ಹೇಳಲಾಗಿದೆ . ಎಷ್ಟೇ ಕಷ್ಟ ಬಂದರು ಮತ್ತೊಬ್ಬರ ಬಳಿ ಅಂಗಲಾಚಿ ಬೇಡಬಾರದು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದು .

Kemmane Misevottane SSLC Notes

“ ಜಲಕ್ಕನೀಗಳರಟಿದೆಂ ಸಿರಿ ಕಡಟ್ಟಿತೆಂಬುದಂ “

ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದೋಣನು ದ್ರುಪದನಿಗೆ ಹೇಳಿದನು ದ್ರುಪದನು ಅಹಂಕಾರದಿಂದ ಮಾತನಾಡಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಅಲ್ಪನಿಗೆ ಐಶ್ವರ್ಯಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತೆ ಎಂಬ ಸ್ವಾರಸ್ಯವನ್ನಿಲ್ಲಿ ಕಾಣಬಹುದು .

“ ನೊಳವಿಂಗೆ ತಪ್ಪೆ ವರಂ ?

ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರೋಣನು ದ್ರುಪದನಿಗೆ ಹೇಳಿದನು . ದ್ರುಪದನ ಯೋಗ್ಯತೆಯ ಬಗ್ಗೆ ಹೇಳುವಾಗ ಈ ಮಾತುಗಳನ್ನು ಹೇಳಲಾಗಿದೆ . ‘ ನೊಣಕ್ಕೆ ಕಸವೇ ಶ್ರೇಷ್ಠವಾದುದು ” ಎಂಬ ಗಾದೆಯನ್ನು ದ್ರುಪದನಿಗೆ ಹೋಲಿಸಿ ಅವನ ಕೀಳು ಸ್ವಾಭಾವವನ್ನು ತಿಳಿಸುವ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ .

ಭಾಷಾ ಚಟುವಟಿಕೆ Kemmane Misevottane bhasha chatuvatike

ಕೊಟ್ಟಿರುವ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿ

ದ್ರವ್ಯಾರ್ಥಿ “=ದ್ರವ್ಯ+ಅರ್ಥಿ=ಸವರ್ಣರ್ಘರ್ಗಸಂಧಿ
ವಲ್ಕಲಾವೃತ=ವಲ್ಕಲ+ಆವೃತ್ತ”=ಸವರ್ಣಧೀರ್ಘಸಂಧಿ
ನಿಮ್ಮರಸ = ನಿಮ್ಮ+ಅರಸ=ಗುಣಸಂಧಿ
ಮದೋನ್ಮತ್ತ = ಮದ + ಉನ್ನತ್ತ = ಗುಣಸಂಧಿ
ಕಳ್ಳುಡಿ + ಕುಡಿ = ಆದೇಶಸಂಧಿ

ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ , ಸಮಾಸ ಹೆಸರಿಸಿ .

ನಾಣಲಿ= ನಾಣು + ಇಲಿ ( ನಾಚಿಕೆ ಇಲ್ಲದವನು )
ನಾಣಲಿ ದಿವ್ಯಶರಾಳಿ ದಿವ್ಯವಾದ + ಶರಾಳಿ
ಮಹೀಪತಿ = ಮಹೀಯ + ಪತಿ = ಕಳುಡಿದ
ಕಳನ್ನು + ಕುಡಿದ ತತ್ಪುರುಷ ಸಮಾಸ ಕ್ರಿಯಾಸಮಾಸ

ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ .

ಉ . ನೊಳವಿಂಗೆ ಕುಪ್ಪೆ ವರವೆಂಬವೊಲಾಂಬರವುಂಟೆ ನಿನ್ನದೊಂದಳವು ?

ಉಪಮೇಯ : ” ನಿನ್ನದೊಂದಳವು ( ದ್ರುಪದನ ಯೋಗ್ಯತೆ )

ಉಪಮಾನ : ನೋವಿಂಗೆ ಕುಪ್ಪೆ ವರ

ಉಪಮಾವಾಚಕ : ಎಂಬವೊಲ್

ಸಮಾನಧರ್ಮ : ಸ್ಪಷ್ಟವಾಗಿಲ್ಲ

ಸಮನ್ವಯ : ನಿನ್ನದೊಂದೊಳವು ( ದ್ರುಪದನ ಯೋಗ್ಯತೆ ) ಎಂಬ ಉಪಮೇಯವನ್ನು ನೊಳವಿಂಗೆ ಕುಪ್ಪೆವರ ( ನೊಣಕ್ಕೆ ಕಸವೇ ಶ್ರೇಷ್ಠ ) ಎ೦ಬ ಉಪಮಾನಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ .

kemmane meesevottene summary in kannada

ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರಹಾಕಿ , ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರಿಸಿ ಬರೆಯಿರಿ .
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿ .
  1. ಅಂತೆಂಬನಾರ್ಗೆ ಪಿರಿದುಂ ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ ಳಂತೆನಗೆ ಕೆಳೆಯನೇ ನೂಂ ಕಂತಪ್ಪನನರಿಯೆನೆಂದು ಸಭೆಯೊಳ್ ನುಡಿದಂ
  2. ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆಗಳೊಂ ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತ ಪಾರಗನೆಂತು ಸಂತಸಂ ಬಡಿಸುವೆ ನಿನ್ನಿದೊಂದು ಧರ್ನುವಿರ್ದುದು ದಿವ್ಯಶರಾಳಿಯಿರ್ದುದಿ ಬ್ಲೊಡಮೆ ಸಮಂತು ಪೇಳ್ವರೊಳಾವುದನೀವುದೊ ಕುಂಭಸಂಭವ
ಪದಗಳ ಅರ್ಥ

ಅಡಸು – ಉಂಟಾಗು
ಅನಾಕುಳಂ-ನಿರಾಯಾಸವಾಗಿ
ಅರ್ಥ್ಯ – ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರು

ಅರ್ಥಿ- ಬೇಡುವವನು
ಅಳವು -ಪರಾಕ್ರಮ
ಎರೆದಂ – ಬೇಡುವವನು
ಏಳಿಸಿದ -ತಿರಸ್ಕರಿಸಿದ
ಒಡವೆ -ಐಶ್ವರ್ಯ,ಆಸ್ತಿ
ಕಡುಸಿಗ್ಗು -ತೀವ್ರ ನಾಚಿಕೆ
ಕಳುಡಿದವರಂದಮ್-ಮದ್ಯಕುಡಿದವರರೀತಿ
ಕುಪ್ಪೆ -ಕಸಡತಿಪ್ಪೆ
ತಡವಪ್ಪುದು -ತೋಲುವುದು
ಪಡಿಯ-ದ್ವಾರಪಾಲಕ, ಸೇವಕ
ಪೊಲ್-ಪಟ್ಟಣ
ಬೆಳಗಿಂಗೆ -ಉತ್ಸಾಹಕ್ಕೆ
ಮದಿರಾ -ಸುರಾಪಾನ
ತೊದಲುವುದು-ರೀತಿಯಲ್ಲಿ
ಅಲೆದಾಡಿ -ಸುತ್ತಾಡಿ
ದ್ವಿಜವಂಶಜಂ- ಬ್ರಾಹ್ಮಣ
ನೊಂಕು -ನೂಕು
ಮಾಟೆಯೊಳ್ -ರೀತಿಯಲ್ಲಿ
ಮೇಗಿಲ್ಲದೆ -ಉತ್ತಮತನವಿಲ್ಲದೆ
ಮುಕಂ -ವಕ್ರಚೇಷ್ಟೆಯಂ
ಶ್ರುತಪಾರಗ -ಶಾಸ್ತ್ರಪಾರಂಗತ
ಸಮಂತು -ಚೆನ್ನಾಗ
ದಿವ್ಯಶರಾಳಿ – ಶ್ರೇಷ್ಠ
ಬಾಣಗಳ -ಸಮೂಹ
ನಾಣಿಲಿ -ನಾಚಿಕೆಯಿಲ್ಲದವನು
ನೊಳವಿಂಗ-ನೊಣಕ್ಕೆ
ಸೇವಕ ( ಪ್ರತೀಹಾರಿ ( ತೃ ) > ಪಡಿಯ ( ತೃ )
ಪೌರಂದರ – ಇಂದ್ರ
ಮೇಗಿಲ್ಲದೆ ಉತ್ತಮತನವಿಲ್ಲದೆ
ಶ್ರುತಪಾರಗಶಾಸ್ತ್ರಪಾರಂಗತ
ಸಮಂತು -ಚೆನ್ನಾಗಿ
ಸಾರ್ವುದು- ಬರುವುದು
ಅವನೀತಳ – ಭೂಮಂಡಲ
ಆಂಬರಂ – ನನ್ನವರೆಗೂ
ಮದ್ಯ-ಕುಡಿದವರರೀತಿಕೊಲ

ಒಡಗೊಂಡು- ಜೊತೆಗೂಡಿ
ಕನಕಪಾತ್ರೆ – ಚಿನ್ನದ ಪಾತ್ರೆ
ಭಾರ್ಗವ -ಮಹೀಪತಿ
ಹೊರಕ್ಕೆ ತಳ್ಳಿರಿ – ಕೊಲ್ಲುವುದಕ್ಕೆ
ಶಿಷ್ಯರಿಂದ ವಿಶದವಾಗಿ ರಾಜ
ಮೃತ್ಪಾತ್ರ – ಮಣ್ಣಿನ ಪಾತ್ರೆ
ಮೊಲೆಯಂ – ಭಂಧವ್ಯವನ್ನು
ವರಂ – ಶ್ರೇಷ್ಟ

ಸಂದೆಯ ( ತೃ ) < ಸಂದೇಹ ( ತ್ಸ)
ಸಾರ್ತರ ಒದಗಿ -ಬರಲು

FAQ

ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?

ದ್ರೋಣನಿಗೆ ಬಡತನವುಂಟಾಗಿದ್ದರಿಂದ ಪರಶುರಾಮರಲ್ಲಿಗೆ ಬಂದನು

ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು

ಪರಶುರಾಮನು ದ್ರೋಣನಿಗೆ ವರುಣ , ವಾಯು , ಅಗ್ನಿ , ಇಂದ್ರಾದಿ ಅಸ್ತ್ರಗಳನ್ನು ಕೊಟ್ಟನು

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *